• Home
  • »
  • News
  • »
  • business
  • »
  • Business Idea: ಕೇವಲ 2 ಲಕ್ಷದಿಂದ ಈ ಬ್ಯುಸಿನೆಸ್​ ಆರಂಭಿಸಿ, ತಿಂಗಳಿಗೆ 1 ಲಕ್ಷ ಆದಾಯ ಗಳಿಸಿ!

Business Idea: ಕೇವಲ 2 ಲಕ್ಷದಿಂದ ಈ ಬ್ಯುಸಿನೆಸ್​ ಆರಂಭಿಸಿ, ತಿಂಗಳಿಗೆ 1 ಲಕ್ಷ ಆದಾಯ ಗಳಿಸಿ!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ನೀವು ಹೊಸ ವ್ಯವಹಾರ (New Business) ವನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದ್ದರೆ, ಮೊದಲು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುವುದು ಅವಶ್ಯಕ. ಕಡಿಮೆ ಹಣವನ್ನು ಹೂಡಿಕೆ ಮಾಡುವ ಮೂಲಕ ನೀವು ಉತ್ತಮ ಹಣವನ್ನು ಗಳಿಸಬಹುದು.  ಬೂದಿ ಇಟ್ಟಿಗೆಗಳ ವ್ಯಾಪಾರ ಮಾಡಿ ಹೆಚ್ಚಿನ ಲಾಭವನ್ನು ಗಳಿಸಬಹುದು.

ಮುಂದೆ ಓದಿ ...
  • Share this:

ನಿಮ್ಮ ದಿನನಿತ್ಯದ ಕೆಲಸದಿಂದ ಬೇಸತ್ತು ಯಾವುದಾದರೊಂದು ವ್ಯಾಪಾರ (Business) ವನ್ನು ಪ್ರಾರಂಭಿಸಲು ಬಯಸುತ್ತಿದ್ದೀರಾ? ಆದರೆ ಹೂಡಿಕೆ (Invest) ಮಾಡಲು ನಿಮ್ಮ ಬಳಿ ಹೆಚ್ಚು ಹಣವಿಲ್ವಾ? ಚಿಂತಿಸಬೇಡಿ ಕಡಿಮೆ ಹಣದಲ್ಲಿ ವ್ಯಾಪಾರ ಮಾಡಬಹುದು ಬ್ಯುಸಿನೆಸ್​ (Best Business) ಬಗ್ಗೆ ನಾವು ನಿಮಗೆ ಹೇಳುತ್ತೇವೆ. ಈ ವ್ಯಾಪಾರವನ್ನು ಪ್ರಾರಂಭಿಸಲು ನಿಮ್ಮ ಮನೆಯವರನ್ನು ಸಹ ನೀವು ಕೇಳಬಹುದು. ಕೊರೋನಾ (Corona) ಕಾಲದಲ್ಲಿ ವ್ಯಾಪಾರದ ಮಹತ್ವ ದ್ವಿಗುಣಗೊಂಡಿದೆ. ನೀವು ಹೊಸ ವ್ಯವಹಾರ (New Business) ವನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದ್ದರೆ, ಮೊದಲು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯುವುದು ಅವಶ್ಯಕ. ಕಡಿಮೆ ಹಣವನ್ನು ಹೂಡಿಕೆ ಮಾಡುವ ಮೂಲಕ ನೀವು ಉತ್ತಮ ಹಣವನ್ನು ಗಳಿಸಬಹುದು.  ಬೂದಿ ಇಟ್ಟಿಗೆಗಳ ವ್ಯಾಪಾರ ಮಾಡಿ ಹೆಚ್ಚಿನ ಲಾಭವನ್ನು ಗಳಿಸಬಹುದು.


ಇಟ್ಟಿಗೆಗಳ ಬೇಡಿಕೆ ಹೆಚ್ಚುತ್ತಿದೆ!


ಹಾರುಬೂದಿಯಿಂದ ತಯಾರಿಸಿದ ಇಟ್ಟಿಗೆಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಮುಂಬರುವ ಅವಧಿಯಲ್ಲಿ ಅದರ ಬೇಡಿಕೆಯು ಭಾರೀ ಪ್ರಮಾಣದಲ್ಲಿ ಹೆಚ್ಚಾಗಲಿದೆ. ಕ್ಷಿಪ್ರ ನಗರೀಕರಣದ ಯುಗದಲ್ಲಿ, ಬಿಲ್ಡರ್‌ಗಳು ಈಗ ಹಾರುಬೂದಿ ಇಟ್ಟಿಗೆಗಳನ್ನು ಹೆಚ್ಚು ಹೆಚ್ಚು ಬಳಸುತ್ತಿದ್ದಾರೆ. ಇದಕ್ಕಾಗಿ 100 ಗಜ ಭೂಮಿಯೊಂದಿಗೆ ಕನಿಷ್ಠ 2 ಲಕ್ಷ ರೂಪಾಯಿ ಹೂಡಿಕೆ ಅಗತ್ಯವಿದೆ. ಈ ವ್ಯವಹಾರದ ಮೂಲಕ ನೀವು ಕನಿಷ್ಟ ರೂ. 1 ಲಕ್ಷದವರೆಗೆ ಗಳಿಸಬಹುದು.


1 ಲಕ್ಷ ಲಾಭ ಗಳಿಸಬಹುದು!


ಈ ಇಟ್ಟಿಗೆಗಳನ್ನು ವಿದ್ಯುತ್ ಸ್ಥಾವರಗಳಿಂದ ಬೂದಿ, ಸಿಮೆಂಟ್ ಮತ್ತು ಕಲ್ಲಿನ ಧೂಳಿನ ಮಿಶ್ರಣದಿಂದ ತಯಾರಿಸಲಾಗುತ್ತದೆ. ಹಸ್ತಚಾಲಿತ ಇಟ್ಟಿಗೆ ತಯಾರಿಕೆ ಯಂತ್ರವನ್ನು 100 ಗಜ ಜಾಗದಲ್ಲಿ ಅನುಕೂಲಕರವಾಗಿ ಹೊಂದಿಸಬಹುದು. ಆದ್ದರಿಂದ, ಈ ವ್ಯವಹಾರವನ್ನು ಪ್ರಾರಂಭಿಸಲು ನಿಮಗೆ ಹೆಚ್ಚಿನ ಸ್ಥಳಾವಕಾಶದ ಅಗತ್ಯವಿಲ್ಲ. ಯಂತ್ರವನ್ನು ಚಲಾಯಿಸಲು 5 ರಿಂದ 6 ಜನರು ಅಗತ್ಯವಿದೆ.


ಇದನ್ನೂ ಓದಿ: ಉದ್ಯೋಗ ತೊರೆದು ಥಾಯ್ ಪೇರಳೆ ಬೆಳೆಸಿ ಯಶಸ್ಸು ಕಂಡ ಎಂಬಿಎ ಪದವೀಧರ! ಈಗ ಈತನ ಆದಾಯ ಎಷ್ಟು ಕೋಟಿ ಗೊತ್ತಾ?


ದಿನಕ್ಕೆ 3 ಸಾವಿರ ಇಟ್ಟಿಗೆ ತಯಾರಿಸಬಹುದು!


ದಿನಕ್ಕೆ ಸುಮಾರು 3 ಸಾವಿರ ಇಟ್ಟಿಗೆಗಳನ್ನು ತಯಾರಿಸಲಾಗುತ್ತದೆ. ನೀವು ಹೆಚ್ಚು ಹೂಡಿಕೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದರೆ, ನೀವು ಸ್ವಯಂಚಾಲಿತ ಯಂತ್ರವನ್ನು ಸಹ ಸ್ಥಾಪಿಸಬಹುದು. ಈ ಯಂತ್ರದ ಬೆಲೆ 10 ರಿಂದ 12 ಲಕ್ಷ ರೂಪಾಯಿ. ಕಚ್ಚಾವಸ್ತು ಬೆರೆಸುವುದರಿಂದ ಹಿಡಿದು ಇಟ್ಟಿಗೆ ತಯಾರಿಸುವವರೆಗೆ ಯಂತ್ರದ ಮೂಲಕವೇ ಕೆಲಸ ನಡೆಯುತ್ತದೆ. ಈ ಯಂತ್ರ ನೀವು ತೆಗೆದುಕೊಂಡರೆ ಹೆಚ್ಚಿನ ಇಟ್ಟಿಗೆಗಳನ್ನು ಮಾಡಬಹದು. ಇದರಿಂದ ಹೆಚ್ಚಿನ ಲಾಭವನ್ನು ಕೂಡ ಗಳಿಸಬಹುದು.


ಸ್ವಯಂಚಾಲಿತ ಯಂತ್ರವು ಒಂದು ಗಂಟೆಯಲ್ಲಿ ಸಾವಿರ ಇಟ್ಟಿಗೆಗಳನ್ನು ಮಾಡುತ್ತದೆ. ಈ ರೀತಿಯಾಗಿ ನೀವು ಒಂದು ತಿಂಗಳಲ್ಲಿ 3 ರಿಂದ 4 ಲಕ್ಷ ಇಟ್ಟಿಗೆಗಳನ್ನು ಸುಲಭವಾಗಿ ಮಾಡಬಹುದು. ಉತ್ತರಾಖಂಡ, ಹಿಮಾಚಲ ಪ್ರದೇಶದಂತಹ ರಾಜ್ಯಗಳು ಮಣ್ಣಿನ ಕೊರತೆಯಿಂದ ಇಟ್ಟಿಗೆ ತಯಾರಿಸುತ್ತಿಲ್ಲ.


ಇದನ್ನೂ ಓದಿ: ಕಾರ್ಪೊರೇಟ್​​ ಕೆಲ್ಸ ಬಿಟ್ಟು, ಲಕ್ಷ ಲಕ್ಷ ದುಡಿಯುತ್ತಿದ್ದಾರೆ ಬೆಂಗಳೂರು ಹುಡುಗಿ!


ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್‌ನಿಂದ ಇಲ್ಲಿಗೆ ಇಟ್ಟಿಗೆಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಬೂದಿ, ಸಿಮೆಂಟ್ ಮತ್ತು ಕಲ್ಲಿನ ಪುಡಿಯಿಂದ ಮಾಡಿದ ಇಟ್ಟಿಗೆಗಳನ್ನು ಆ ಪ್ರದೇಶಗಳಲ್ಲಿ ಮಾರಾಟ ಮಾಡುವ ಸಾಧ್ಯತೆಯಿದೆ. ಹಸ್ತಚಾಲಿತ ಯಂತ್ರವನ್ನು ಸ್ಥಾಪಿಸುವ ಮೂಲಕವೂ ನೀವು ತಿಂಗಳಿಗೆ 30 ಸಾವಿರ ಇಟ್ಟಿಗೆಗಳನ್ನು ಮಾಡಬಹುದು.


( ಇದು ಕೇವಲ ಮಾಹಿತಿಯನ್ನು ಒದಗಿಸುವ ಲೇಖನವಾಗಿದೆ. ಎಲ್ಲೇ ಹೂಡಿಕೆ ಮಾಡುವ ಮುನ್ನ ತಜ್ಞರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಮಾಡಿ. ಈ ವಿಚಾರಕ್ಕೆ ಸಂಬಂಧಿಸಿದಂತೆ ನ್ಯೂಸ್​ 18 ಕನ್ನಡ ಜವಾಬ್ದಾರನಾಗುವುದಿಲ್ಲ.)

Published by:ವಾಸುದೇವ್ ಎಂ
First published: