Business Idea: 1500 ಚದರ ಅಡಿ ಜಾಗ, ಇಬ್ಬರು ಕೆಲಸಗಾರರು ಇದ್ರೆ ಸಾಕು! ಈ ಬ್ಯುಸಿನೆಸ್​ ಶುರು ಮಾಡಿದ್ರೆ ದಿನಕ್ಕೆ 2 ಸಾವಿರ ಲಾಭನೇ ಸಿಗುತ್ತೆ

ವಾಹನಗಳಿಗೆ ಸಂಬಂಧಪಟ್ಟ ಯಾವುದೇ ಬ್ಯುಸಿನೆಸ್​ ಕೂಡ ಕ್ಲಿಕ್ ಆಗುತ್ತಿದೆ.  ಇದರಲ್ಲಿ ಕಾರ್​ ವಾಶಿಂಗ್​ ಸೆಂಟರ್ (Car Washing Center)​ ಕೂಡ ಒಂದು. ಕಡಿಮೆ ಹೂಡಿಕೆ (Invest) ಮಾಡಿ ಹೆಚ್ಚಿನ ಆದಾಯ ಗಳಿಸಬಹುದು. ಇದನ್ನು ಹೇಗೆ ಶುರು ಮಾಡಬೇಕು ಅನ್ನೋದರ ಬಗ್ಗೆ ಇಲ್ಲಿದೆ ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತ (India) ದಲ್ಲಿ ಆಟೋಮೊಬೈಲ್ (Automobile) ಉದ್ಯಮ ಉತ್ತಮವಾಗಿ ನಡೆಯುತ್ತಿದೆ. ದಿನದಿಂದ ದಿನಕ್ಕೆ ವಾಹನಗಳ (Vehicals) ಸಂಖ್ಯೆ ವಿಪರೀತವಾಗಿ ಹೆಚ್ಚುತ್ತಿದೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) ಪ್ರಕಾರ, 2021-22 ರ ಆರ್ಥಿಕ ವರ್ಷದಲ್ಲಿ ದೇಶದ ವಿವಿಧ ವಿಭಾಗಗಳಲ್ಲಿ 1,75,13,596 ವಾಹನಗಳನ್ನು ಮಾರಾಟ ಮಾಡಲಾಗಿದೆ. ಹೆಚ್ಚುತ್ತಿರುವ ಬೇಡಿಕೆ (Demand) , ವಾಹನಗಳ ಸಂಖ್ಯೆಯಿಂದಾಗಿ ಆಟೋ ಮೊಬೈಲ್​ ಉದ್ಯಮ ಉತ್ತಮವಾಗಿ ನಡೆಯುತ್ತಿದೆ. ಹೀಗಿರುವಾಗ ನೀವು ಈ ಬ್ಯುಸಿನೆಸ್ (Business)​ ಶುರು ಮಾಡಿದರೆ ಚೆನ್ನಾಗಿ ಆದಾಯ ಸಿಗುತ್ತೆ ಅನ್ನೋದು ಬ್ಯುಸಿನೆಸ್​ ತಜ್ಞರ ಅಭಿಪ್ರಾಯ. ವಾಹನಗಳಿಗೆ ಸಂಬಂಧಪಟ್ಟ ಯಾವುದೇ ಬ್ಯುಸಿನೆಸ್​ ಕೂಡ ಕ್ಲಿಕ್ ಆಗುತ್ತಿದೆ.  ಇದರಲ್ಲಿ ಕಾರ್​ ವಾಶಿಂಗ್​ ಸೆಂಟರ್ (Car Washing Center)​ ಕೂಡ ಒಂದು. ಕಡಿಮೆ ಹೂಡಿಕೆ (Invest) ಮಾಡಿ ಹೆಚ್ಚಿನ ಆದಾಯ ಗಳಿಸಬಹುದು. ಇದನ್ನು ಹೇಗೆ ಶುರು ಮಾಡಬೇಕು ಅನ್ನೋದರ ಬಗ್ಗೆ ಇಲ್ಲಿದೆ ನೋಡಿ.

ಕಾರ್​ ವಾಶಿಂಗ್​ ಸೆಂಟರ್ಸ್​​ಗೆ ಡಿಮ್ಯಾಂಡ್​!

ಇಂದು, ದೇಶದ ಪ್ರತಿಯೊಂದು ನಗರದಲ್ಲಿ ಕಾರುಗಳು ಮತ್ತು ಇತರ ವಾಹನಗಳನ್ನು ತೊಳೆಯುವುದರಿಂದ ಸಾಕಷ್ಟು ಹಣ ಗಳಿಸಬಹುದು ಎಂಬುದನ್ನು ನೀವು ಮರೆಯಬೇಡಿ. ಕಾರು ತೊಳೆಯುವ ವ್ಯಾಪರದಲ್ಲಿ ನೀವು ಶೇಕಡಾ 70 ಪ್ರತಿಶತದವರೆಗೆ ಆದಾಯವನ್ನು ಉಳಿಸಿಬಹುದು. ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ಸಾಕಷ್ಟು ಹಣ ಮತ್ತು ವಾಹನಗಳನ್ನು ಹೊಂದಿದ್ದಾರೆ. ಆದರೆ ಅವರ ವಾಹನಗಳನ್ನು ಸ್ವಚ್ಛಗೊಳಿಸಲು ಸಮಯವಿಲ್ಲ. ಅನೇಕ ಜನರು ತಮ್ಮ ಕಾರು ಅಥವಾ ಬೈಕುಗಳನ್ನು ವಾಶಿಂಗ್​ ಸೆಂಟರ್​ನಲ್ಲೇ ತೊಳೆಯಲು ಬಯಸುತ್ತಾರೆ. ನೀವೂ ಕೂಡ ಕಡಿಮೆ ವೆಚ್ಚದಲ್ಲಿ ಉದ್ಯಮ ಆರಂಭಿಸುವ ಯೋಜನೆ ಹಾಕಿಕೊಂಡರೆ, ಕಾರ್ ವಾಶ್ ಸೆಂಟರ್ ಆರಂಭಿಸಬಹುದು.

1500 ಚದರ ಅಡಿ ಜಾಗ, ಇಬ್ಬರು ಕೆಲಸಗಾರರು ಇದ್ರೆ ಸಾಕು!

ಕಾರು ತೊಳೆಯುವ ವ್ಯವಹಾರವನ್ನು ಪ್ರಾರಂಭಿಸಲು, ನಿಮಗೆ ಕನಿಷ್ಠ 1500 ಚದರ ಅಡಿ ಜಾಗ, ಕನಿಷ್ಠ ಇಬ್ಬರು ಕೆಲಸಗಾರರು, ನೀರು ಮತ್ತು ವಿದ್ಯುತ್ ಸಂಪರ್ಕವಿರುವ ಕೆಲವು ಯಂತ್ರಗಳು ಬೇಕಾಗುತ್ತವೆ. ಕಾರ್ ವಾಷಿಂಗ್ ಸ್ಟ್ಯಾಂಡ್ ನಿರ್ಮಿಸಲು, ಕಾರನ್ನು ನಿಲ್ಲಿಸಲು ಮತ್ತು ಭೇಟಿ ನೀಡುವ ಗ್ರಾಹಕರ ಆಸನ ಮತ್ತು ನೀರಿನ ಪಂಪ್‌ಗಳನ್ನು ಸ್ಥಾಪಿಸಲು ಸ್ಥಳಾವಕಾಶದ ಅಗತ್ಯವಿದೆ. ಕಾರು ಅಥವಾ ಇತರ ವಾಹನವನ್ನು ತೊಳೆಯಲು ನಿಮಗೆ ಕೆಲವು ಯಂತ್ರಗಳು ಬೇಕಾಗುತ್ತವೆ. ನಿಮಗೆ ಏರ್ ಕಂಪ್ರೆಸರ್, ಫೋಮ್ ಜೆಟ್ ಸಿಲಿಂಡರ್, ಹೆಚ್ಚಿನ ಒತ್ತಡದ ನೀರಿನ ಪಂಪ್ ಮತ್ತು ವ್ಯಾಕ್ಯೂಮ್ ಕ್ಲೀನರ್ ಅಗತ್ಯವಿರುತ್ತದೆ.

ಇದನ್ನೂ ಓದಿ: ನಿಮ್ಮೂರಲ್ಲಿ ಜನೌಷಧಿ ಕೇಂದ್ರ ಓಪನ್​ ಮಾಡಿ, ಸರ್ಕಾರದಿಂದಲೇ ಸಿಗುತ್ತೆ 5 ಲಕ್ಷ ಪ್ರೋತ್ಸಹ ಧನ!

ಈ ಯಂತ್ರಗಳು ತುಂಬಾ ದುಬಾರಿಯಲ್ಲ. ಈ ಎಲ್ಲಾ ಯಂತ್ರಗಳನ್ನು ಎರಡು ಲಕ್ಷ ರೂಪಾಯಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಸ್ಥಳವು ನಿಮ್ಮದಾಗಿದ್ದರೆ .. ನೀವು ಈ ವ್ಯವಹಾರವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಪ್ರಾರಂಭಿಸಬಹುದು.

70ರಷ್ಟು ಆದಾಯ ಉಳಿಸಬಹುದು!

ಕಾರ್ ವಾಷಿಂಗ್ ಸೆಂಟರ್ ವ್ಯವಹಾರದಲ್ಲಿ ಗಳಿಕೆಯು ತುಂಬಾ ಒಳ್ಳೆಯದು. ಏಕೆಂದರೆ ಕಾರು ಅಥವಾ ಇತರ ಯಾವುದೇ ವಾಹನವನ್ನು ತೊಳೆಯಲು ಬಳಸುವ ವಸ್ತುವು ತುಂಬಾ ಅಗ್ಗವಾಗಿದೆ. ಇದರಲ್ಲಿ ಕೂಲಿ ಕಾರ್ಮಿಕರಿಗೆ ನೀಡುವ ಕೂಲಿ, ವಿದ್ಯುತ್, ನೀರಿನ ಬಿಲ್ ಮಾತ್ರ ಖರ್ಚಾಗುತ್ತೆ. 70ರಷ್ಟು ಆದಾಯ ಈ ಕೆಲಸದಲ್ಲಿದೆ. ನಿಮ್ಮ ಗಳಿಕೆಯು ನೀವು ಎಷ್ಟು ಗ್ರಾಹಕರನ್ನು ಪಡೆಯುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಇದನ್ನೂ ಓದಿ: 1 ಲಕ್ಷಕ್ಕೆ ಸಿಕ್ತು 8 ಕೋಟಿ ಗುರೂ! ಅಂದು ಈ ಷೇರು ಖರೀದಿಸಿದ್ದವರು ಈಗ ಕೋಟ್ಯಾಧಿಪತಿಗಳು

ನಿತ್ಯ 20 ವಾಹನಗಳು ನಿಮ್ಮ ಕೇಂದ್ರಕ್ಕೆ ಬಂದರೆ ಕನಿಷ್ಠ 3000 ರಪಾಯಿ ಸಿಗುತ್ತೆ. ಎಲ್ಲಾ ಖರ್ಚು ಕಳೆದರೂ ,  ಪ್ರತಿದಿನ ಎರಡು ಸಾವಿರ ರೂಪಾಯಿ ಉಳಿಸಬಹುದು. ಈ ಮೂಲಕ ನೀವು ತಿಂಗಳಿಗೆ 60 ಸಾವಿರ ರೂಪಾಯಿಗಳನ್ನು ಸುಲಭವಾಗಿ ಗಳಿಸಬಹುದು. ನಿಮ್ಮ ಗ್ರಾಹಕರು ಹೆಚ್ಚಾದಂತೆ, ನಿಮ್ಮ ಆದಾಯವೂ ಹೆಚ್ಚಾಗುತ್ತದೆ
Published by:Vasudeva M
First published: