• Home
  • »
  • News
  • »
  • business
  • »
  • Small Business Idea: ಈ ಬ್ಯುಸಿನೆಸ್​ ಶುರು ಮಾಡೋದು ತುಂಬಾ ಸಿಂಪಲ್​! ಸುಮ್ನಿದ್ರೂ ವರ್ಷಕ್ಕೆ 3 ಲಕ್ಷ ಪ್ರಾಫಿಟ್​ ಸಿಗುತ್ತೆ

Small Business Idea: ಈ ಬ್ಯುಸಿನೆಸ್​ ಶುರು ಮಾಡೋದು ತುಂಬಾ ಸಿಂಪಲ್​! ಸುಮ್ನಿದ್ರೂ ವರ್ಷಕ್ಕೆ 3 ಲಕ್ಷ ಪ್ರಾಫಿಟ್​ ಸಿಗುತ್ತೆ

ಸಾಬೂನ ತಯಾರಿಕೆ ಮತ್ತು ಮಾರಾಟ ವ್ಯವಹಾರದಲ್ಲಿ ನೀವು ಶೇ.15ರಷ್ಟು ಮಾರ್ಜಿನ್ ಲಾಭ ಪಡೆಯಬಹುದು. ಆದ್ದರಿಂದ ನಿಗಧಿತ ಲಾಭ ಸಿಗುತ್ತದೆ. (ಸಾಂದರ್ಭಿಕ ಚಿತ್ರ)

ಸಾಬೂನ ತಯಾರಿಕೆ ಮತ್ತು ಮಾರಾಟ ವ್ಯವಹಾರದಲ್ಲಿ ನೀವು ಶೇ.15ರಷ್ಟು ಮಾರ್ಜಿನ್ ಲಾಭ ಪಡೆಯಬಹುದು. ಆದ್ದರಿಂದ ನಿಗಧಿತ ಲಾಭ ಸಿಗುತ್ತದೆ. (ಸಾಂದರ್ಭಿಕ ಚಿತ್ರ)

ನಮ್ಮ ದೇಶದಲ್ಲಿ  ಮಂಡಕ್ಕಿ, ಕಡಲೆಪುರಿಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಹಳ್ಳಿಗಳಿಂದ ಪಟ್ಟಣ ಮತ್ತು ನಗರಗಳಲ್ಲಿರುವ ಜನರು ಮಂಡಕ್ಕಿ ತಿನ್ನುತ್ತಾರೆ. ಇದರಿಂದ ಭೇಲ್ ಪುರಿಯಂತಹ ಖಾದ್ಯಗಳನ್ನು ಮಾಡುತ್ತಾರೆ.

  • Share this:

ಹಣ (Money) ಎಂದರೆ ಹೆಣ ಕೂಡ ಎದ್ದು ಕೂರುತ್ತೆ ಅಂತಾರೆ. ದುಡ್ಡು ಮಾಡುವುದಕ್ಕೆ ಸಾವಿರಾರು ದಾರಿಗಳಿವೆ. ಆದರೆ ಯಾವತ್ತೂ ಒಳ್ಳೆಯ ದಾರಿಯಲ್ಲಿ ಮಾಡಿದ ಹಣವೇ ಕೊನೆವರೆಗೂ ಇರುತ್ತೆ. ಹೀಗೆ ಕೊರೋನಾ (Corona) ಬಂದು ಹೋದಮೇಲೆ ಅದೆಷ್ಟೋ ಮಂದಿ ಹಣ ಇಲ್ಲದೆ ಪರದಾಡುತ್ತಿದ್ದಾರೆ. ದೊಡ್ಡ ದೊಡ್ಡವರ ಉದ್ಯೋಗಳೇ ನೆಲಕಚ್ಚಿವೆ.  ಏನಾದರೂ ಬ್ಯುಸಿನೆಸ್ (Business)​​ ಮಾಡೋಣ ಎಂದು ಕೊಂಡರೇ ಎಲ್ಲಿ ಲಾಸ್ (Loss)​ ಆಗುತ್ತೋ ಅನ್ನುವ ಭಯದಲ್ಲಿದ್ದಾರೆ. ಇನ್ನು ಕೆಲವರಿಗೆ ದುಡ್ಡು ಇದ್ದರೂ ತಲೆಯಲ್ಲಿ ಐಡಿಯಾ(Idea) ಇರೋದಿಲ್ಲ. ಇನ್ನೂ ಕೆಲವರಿಗೆ ಕಡಿಮೆ ಹೂಡಿಕೆ (Invest) ಮಾಡಿ ಹೆಚ್ಚು ಲಾಭಗಳಿಸುವ ಆಸೆಯನ್ನು ಹೊಂದಿರುತ್ತಾರೆ. ಇಂಥವರು ಈ ಬ್ಯುಸಿನೆಸ್​ ಶುರು ಮಾಡಿ ಒಳ್ಳೆಯ ಆದಾಯ ಪಡೆದುಕೊಳ್ಳಬಹುದು.


ವರ್ಷ ಪೂರ್ತಿ ಕಡಲೆಪುರಿಗೆ ಡಿಮ್ಯಾಂಡ್​!


ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಉದ್ಯೋಗಕ್ಕಿಂತ ಹೆಚ್ಚಾಗಿ ತಮ್ಮ ಸ್ವಂತ ವ್ಯವಹಾರದತ್ತ ಗಮನ ಹರಿಸುತ್ತಿದ್ದಾರೆ. ಸಂಬಳಕ್ಕೆ ಹೋಲಿಸಿದರೆ ಕಡಿಮೆ ಹಣ ಬಂದರೂ ನೆಮ್ಮದಿಯಿಂದ ಬದುಕಲು ಬಯಸುತ್ತಾರೆ. ಅದಕ್ಕಾಗಿಯೇ ಅದು ತನ್ನದೇ ಆದ ವ್ಯವಹಾರವನ್ನು ಮಾಡುವ ನಿರೀಕ್ಷೆಯಿದೆ. ನೀವು ಅದೇ ರೀತಿ ಯೋಚಿಸುತ್ತಿದ್ದೀರಾ? ಹಾಗಿದ್ದರೆ ಇದು ಬೆಸ್ಟ್​ ಆಯ್ಕೆ ಎನ್ನಬಹುದು. ನಮ್ಮ ದೇಶದಲ್ಲಿ  ಮಂಡಕ್ಕಿ, ಕಡಲೆಪುರಿಯನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಹಳ್ಳಿಗಳಿಂದ ಪಟ್ಟಣ ಮತ್ತು ನಗರಗಳಲ್ಲಿರುವ ಜನರು ಮಂಡಕ್ಕಿ ತಿನ್ನುತ್ತಾರೆ. ಇದರಿಂದ ಭೇಲ್ ಪುರಿಯಂತಹ ಖಾದ್ಯಗಳನ್ನು ಮಾಡುತ್ತಾರೆ. ಕೆಲವು ಪ್ರದೇಶಗಳಲ್ಲಿ ಇದನ್ನು ದೇವರಿಗೆ ನೈವೇದ್ಯವಾಗಿಯೂ ನೀಡಲಾಗುತ್ತದೆ. ಹಾಗಾಗಿ ವರ್ಷವಿಡೀ ಬೇಡಿಕೆ ಇರುತ್ತದೆ.


ಕಡಿಮೆ ಹೂಡಿಕೆ, ಹೆಚ್ಚಿನ ಲಾಭ!


ಕಡಲೆಪುರಿ ಸಣ್ಣ ರಸ್ತೆ ಬದಿಯ ಅಂಗಡಿಗಳಲ್ಲಿ ಮತ್ತು ದೊಡ್ಡ ಮಾಲ್‌ಗಳಲ್ಲಿ ಸುಲಭವಾಗಿ ಲಭ್ಯವಿವೆ. ಚಿಲ್ಲರೆ ಅಂಗಡಿಗಳಲ್ಲಿ ಪ್ಯಾಕೇಜಿಂಗ್‌ನಲ್ಲಿ ಲಭ್ಯವಿದೆ. ಇಕಾಮರ್ಸ್ ಸೈಟ್‌ಗಳಲ್ಲಿಯೂ ಮಾರಾಟ ಮಾಡಲಾಗುತ್ತದೆ. ನೀವೂ ಈ ಉದ್ಯಮ ಆರಂಭಿಸಿದರೆ. ಒಳ್ಳೆ ಲಾಭ ಬರುತ್ತದೆ. ನೀವು ಕಡಿಮೆ ಹೂಡಿಕೆಯಲ್ಲಿ ಕಡಲೆಪುರಿ ತಯಾರಿಸಲು ಪ್ರಾರಂಭಿಸಬಹುದು ಮತ್ತು ದೊಡ್ಡ ಆದಾಯವನ್ನು ಪಡೆಯಬಹುದು. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಗ್ರಾಮೋದ್ಯೋಗ ಉದ್ಯೋಗ ಯೋಜನೆಯಡಿ ಮಂಡಕ್ಕಿ  ಉತ್ಪಾದನಾ ಘಟಕವನ್ನು ಸ್ಥಾಪಿಸಲು ಯೋಜನೆಯನ್ನು ಸಿದ್ಧಪಡಿಸಿದೆ.


ಇದನ್ನೂ ಓದಿ: ಏನೇ ಮಾಡಿದ್ರೂ ದುಡ್ಡು ಸೇವ್​ ಮಾಡೋಕೆ ಆಗ್ತಿಲ್ವಾ? ಈ ಟಿಪ್ಸ್​ ಫಾಲೋ ಮಾಡಿ, ಆಮೇಲೆ ನೀವೇ ಸೂಪರ್​ ಅಂತೀರಾ!


ಸರ್ಕಾರದಿಂದಲೇ ಸಿಗುತ್ತೆ ಬಂಡವಾಳ!


ಯೋಜನಾ ವರದಿ ಪ್ರಕಾರ  ಕಡಲೆಪುರಿ ತಯಾರಿಕಾ ಘಟಕ ಸ್ಥಾಪನೆಗೆ ಒಟ್ಟು 3.55 ಲಕ್ಷ ರೂಪಾಯಿ ಬೇಕಾಗುತ್ತದೆ. ಈ ವ್ಯವಹಾರವನ್ನು ಪ್ರಾರಂಭಿಸಲು ನಿಮ್ಮ ಬಳಿ ಹಣವಿಲ್ಲದಿದ್ದರೆ, ನೀವು PM ಮುದ್ರಾ ಸಾಲ ಯೋಜನೆಯ ಮೂಲಕ ಸಾಲವನ್ನು ತೆಗೆದುಕೊಳ್ಳಬಹುದು. ಯೋಜನಾ ವರದಿಯನ್ನು ಆಧರಿಸಿ, ನೀವು ಬ್ಯಾಂಕ್​ನಿಂದ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ಸಿದ್ಧಪಡಿಸಿದ ಪ್ರಾಜೆಕ್ಟ್ ಪ್ರೊಫೈಲ್ ವರದಿಯ ಪ್ರಕಾರ,  ಮಂಡಕ್ಕಿ ತಯಾರಿಕಾ ಉದ್ಯಮವನ್ನು ಪ್ರಾರಂಭಿಸಲು ನೀವು ನಿಮ್ಮ ಸ್ವಂತ ಭೂಮಿಯನ್ನು ಹೊಂದಿರಬೇಕು.


ಮುದ್ರಾ ಯೋಜನೆಯಡಿ ಸಾಲ ಪಡೆಯಿರಿ!


ಯಂತ್ರಗಳಿಗೆ ಒಂದು ಲಕ್ಷ ಬೇಕು. ಇನ್ನೂ ಕಚ್ಚಾ ವಸ್ತುಗಳಿಗೆ 50 ಸಾವಿರ ಖರ್ಚಾಗುತ್ತದೆ. ಒಟ್ಟು ರೂ.3,50,000 ಹೂಡಿಕೆಯ ಅಗತ್ಯವಿದೆ. ನಿಮ್ಮ ಬಳಿ ಅಷ್ಟು ಹಣವಿಲ್ಲದಿದ್ದರೆ.. ಮುದ್ರಾ ಯೋಜನೆಯಡಿ ಸಾಲವನ್ನೂ ಪಡೆಯಬಹುದು. ನಿಮ್ಮ ಯೋಜನಾ ವರದಿಯನ್ನು ಆಧರಿಸಿ ನೀವು ಬ್ಯಾಂಕ್ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.


ಇದನ್ನೂ ಓದಿ: ಮಗಳ ಭವಿಷ್ಯಕ್ಕಾಗಿ ಹಣ ಎಲ್ಲಿ ಹೂಡಿಕೆ ಮಾಡಬೇಕೆಂಬ ಗೊಂದಲ ಇದೆಯಾ? ಇಲ್ಲಿದೆ ಉತ್ತರ


ನೀವು ವರ್ಷಕ್ಕೆ 200 ಕ್ವಿಂಟಾಲ್ ಕಡಲೆಪುರಿ ಉತ್ಪಾದಿಸುತ್ತೀರಿ ಎಂದರೆ, ಕೆಜಿಗೆ 30 ರೂಪಾಯಿ ಲೆಕ್ಕ ಹಾಕಿದರೂ ಒಟ್ಟು 6,00,000 ಬರುತ್ತೆ. ಇದರಲ್ಲಿ ಕಚ್ಚಾವಸ್ತು ಮತ್ತಿತರ ವೆಚ್ಚ 3 ಲಕ್ಷ ರೂಪಾಯಿ ಆಗುತ್ತೆ. ಇನ್ನೂ ರೂ. 3 ಲಕ್ಷ ಉಳಿಯುತ್ತದೆ. ನೀವು ದೊಡ್ಡ ಮೊತ್ತದಿಂದ ಪ್ರಾರಂಭಿಸಿ ಉತ್ತಮ ಮಾರ್ಕೆಟಿಂಗ್ ಮಾಡಿದರೆ, ನಿಮಗೆ ಹೆಚ್ಚಿನ ಲಾಭ ಸಿಗುತ್ತದೆ.

Published by:Vasudeva M
First published: