• Home
  • »
  • News
  • »
  • business
  • »
  • Business Idea: ಬಾತುಕೋಳಿ ಸಾಕಾಣಿಕೆಯಿಂದ ಲಕ್ಷಾಂತರ ಗಳಿಸಿ, ಈ ಸರ್ಕಾರಿ ಬ್ಯಾಂಕ್‌ಗಳಲ್ಲಿ ಸಾಲ ಕೂಡ ಸಿಗುತ್ತೆ!

Business Idea: ಬಾತುಕೋಳಿ ಸಾಕಾಣಿಕೆಯಿಂದ ಲಕ್ಷಾಂತರ ಗಳಿಸಿ, ಈ ಸರ್ಕಾರಿ ಬ್ಯಾಂಕ್‌ಗಳಲ್ಲಿ ಸಾಲ ಕೂಡ ಸಿಗುತ್ತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೃಷಿಯ ಜೊತೆ ಜೊತೆಗೆ ಭಾರತದಲ್ಲಿ ರೈತರು ಪಶುಸಂಗೋಪನೆಯ (Animal Husbandry) ಮೂಲಕ ತಮ್ಮ ಜೀವನವನ್ನು ಮಾಡುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ರೈತರು ಹಸು (Cow) , ಎಮ್ಮೆ (Buffalo) , ಆಡು, ಕೋಳಿ (Chicken) , ಬಾತುಕೋಳಿ (Duck) ಸಾಕಣೆ ಮಾಡಿ ಉತ್ತಮ ಲಾಭ ಗಳಿಸುತ್ತಿದ್ದಾರೆ.

  • Share this:

ನಮ್ಮ ದೇಶ ಕೃಷಿ (Agriculture) ಆಧಾರಿತ ದೇಶ. ಇಲ್ಲಿ ಶೇ.60ರಷ್ಟು ಜನಸಂಖ್ಯೆ ಕೃಷಿಯನ್ನೇ ಅವಲಂಬಿಸಿ ಬದುಕುತ್ತಾರೆ. ಬಹುತೇಕ ಕುಟುಂಬಗಳು ಕೃಷಿಕರು. ಒಂದಾನೊಂದು ಕಾಲದಲ್ಲಿ ಬದುಕಲಾರದವನು ಕೃಷಿ  ಮಾಡಿದವನು ಎಂಬ ಮಾತಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕಂಪ್ಯೂಟರ್‌ (Computer) ಗಳ ಮುಂದೆ ಕುಳಿತೆ ಸಾಫ್ಟ್‌ವೇರ್ (Software) ಉದ್ಯೋಗ ಮಾಡುವವರೂ ಕೃಷಿಯತ್ತ ಹೋಗುತ್ತಿದ್ದಾರೆ. ವಿವಿಧ ಬೆಳೆಗಳನ್ನು ಬೆಳೆದು ಲಕ್ಷ ಕೋಟಿ (Crore) ಗಳಿಸುತ್ತಿದ್ದಾರೆ. ರೈತರಿಗೆ ಅಪಾರ ಆದಾಯ ತರುವ ಅನೇಕ ಬೆಳೆಗಳಿವೆ. ಕೃಷಿಯ ಜೊತೆ ಜೊತೆಗೆ ಭಾರತದಲ್ಲಿ ರೈತರು ಪಶುಸಂಗೋಪನೆಯ (Animal Husbandry) ಮೂಲಕ ತಮ್ಮ ಜೀವನವನ್ನು ಮಾಡುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ರೈತರು ಹಸು (Cow) , ಎಮ್ಮೆ (Buffalo) , ಆಡು, ಕೋಳಿ (Chicken) , ಬಾತುಕೋಳಿ (Duck) ಸಾಕಣೆ ಮಾಡಿ ಉತ್ತಮ ಲಾಭ ಗಳಿಸುತ್ತಿದ್ದಾರೆ.


ಬಾತುಕೋಳಿ ಸಾಕಾಣಿಕೆಯಲ್ಲಿದೆ ಹೆಚ್ಚಿನ ಲಾಭ!


ಕಳೆದ ಕೆಲವು ವರ್ಷಗಳಿಂದ ರೈತರು ಬಾತುಕೋಳಿ ಸಾಕಾಣಿಕೆಯಲ್ಲಿ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ವಾಸ್ತವವಾಗಿ, ಕೋಳಿ ಸಾಕಣೆಗೆ ಹೋಲಿಸಿದರೆ , ಬಾತುಕೋಳಿ ಸಾಕಣೆ ಕಡಿಮೆ ವೆಚ್ಚದೊಂದಿಗೆ ಹೆಚ್ಚು ಲಾಭದಾಯಕ ವ್ಯವಹಾರವಾಗಿದೆ. ಬಾತುಕೋಳಿ ಮೊಟ್ಟೆ ಮತ್ತು ಮಾಂಸ ಎರಡರಲ್ಲೂ ಹೆಚ್ಚಿನ ಪ್ರೋಟೀನ್ ಇರುತ್ತದೆ. ಮಾರುಕಟ್ಟೆಯಲ್ಲಿ ಇದರ ಬೇಡಿಕೆಯೂ ಹೆಚ್ಚುತ್ತಿದೆ. ಬೇಡಿಕೆಯೊಂದಿಗೆ ಇದರ ಬೆಲೆಯೂ ಹೆಚ್ಚುತ್ತಿದ್ದು, ಇದರಿಂದ ರೈತರ ಆದಾಯವೂ ಗಣನೀಯವಾಗಿ ಹೆಚ್ಚುತ್ತಿದೆ. ಹೀಗಾಗಿ ಬಾತುಕೊಳಿ ಸಾಕಾಣಿಕೆ ವ್ಯಾಪಾರವನ್ನು ನೀವು ಆರಂಭಿಸಿದರೆ, ನೀವೂ ಹೆಚ್ಚಿನ ಆದಾಯವನ್ನು ಗಳಿಸಬಹುದು.


ಕೊಳದ ಸುತ್ತಮುತ್ತು ಬಾತುಕೋಳಿ ಸಾಕಾಣಿಕೆ ಆರಂಭಿಸಿ!


ಬಾತುಕೋಳಿ ಸಾಕಣೆಯನ್ನು ಪ್ರಾರಂಭಿಸಲು ಶಾಂತವಾದ ಸ್ಥಳವನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ. ಕೊಳದ ಸುತ್ತಲಿನ ಪರಿಸ್ಥಿತಿಯು ಇದಕ್ಕೆ ತುಂಬಾ ಸೂಕ್ತವಾಗಿದೆ ಎಂದು ಹೇಳಲಾಗುತ್ತದೆ. ಬಾತುಕೋಳಿ ಸಾಕಣೆ ಪ್ರದೇಶದಲ್ಲಿ ಯಾವುದೇ ಕೊಳವಿಲ್ಲದಿದ್ದರೆ, ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ನೀವು ಕೊಳವನ್ನು ಸಿದ್ಧಪಡಿಸಬಹುದು. ನೀವು ಕೊಳವನ್ನು ನಿರ್ಮಿಸಲು ಬಯಸದಿದ್ದರೆ, ನೀವು ಟಿನ್ಶೆಡ್ ಸುತ್ತಲೂ ಎರಡರಿಂದ ಮೂರು ಅಡಿ ಆಳ ಮತ್ತು ಅಗಲವಾದ ಚಾನಲ್ ಅನ್ನು ರಚಿಸಬಹುದು, ಅದರಲ್ಲಿ ಬಾತುಕೋಳಿಗಳು ಈಜಬಹುದು ಮತ್ತು ಬೆಳೆಯಬಹುದು.


ಇದನ್ನೂ ಓದಿ: ರೈತರನ್ನ ಲಕ್ಷಾಧಿಪತಿಗಳನ್ನಾಗಿಸುವ ಹೂ ಇದು, ತಿಂಗಳಿಗೆ ಇಷ್ಟು ಲಾಭ ಮಿಸ್ಸೇ ಇಲ್ಲ!


ಬಾತುಕೋಳಿ ಸಾಕಾಣಿಕೆ ಹೇಗೆ ಮಾಡಬೇಕು?


ಬಾತುಕೋಳಿ ಸಾಕಾಣಿಕೆಗೆ ಮೇವು ಪ್ರಮುಖ ಸಮಸ್ಯೆಯಲ್ಲ . ಜಲವಾಸಿ ಕೀಟಗಳು, ಸಣ್ಣ ಮೀನುಗಳು, ಕಪ್ಪೆಗಳು ಇತ್ಯಾದಿಗಳನ್ನು ಬಾತುಕೋಳಿಗಳಿಗೆ ಆಹಾರವಾಗಿ ಸೇವಿಸುತ್ತವೆ. ಹೀಗಾಗಿ ಇದಕ್ಕೆ ನೀವು ಹೆಚ್ಚಿನ ಹಣವನ್ನು ಖರ್ಚು ಮಾಡಬೇಕೆಂದಿಲ್ಲ.


ಬಾತುಕೋಳಿ ಎಷ್ಟು ಮೊಟ್ಟೆಗಳನ್ನು ಇಡುತ್ತದೆ?


ಒಂದು ಬಾತುಕೋಳಿ ಒಂದು ಬಾರಿಗೆ ಸುಮಾರು 20 ಮೊಟ್ಟೆಗಳನ್ನು ಇಡುತ್ತದೆ. ಮತ್ತೊಂದೆಡೆ, ನಾವು ತೂಕದ ಬಗ್ಗೆ ಮಾತನಾಡಿದರೆ, ಪ್ರತಿ ಮೊಟ್ಟೆಯ ತೂಕವು ಸುಮಾರು 15 ರಿಂದ 20 ಗ್ರಾಂಗಳಷ್ಟಿರುತ್ತದೆ. ಮೊಟ್ಟೆಯ ಚಿಪ್ಪು ತುಂಬಾ ದಪ್ಪವಾಗಿರುತ್ತದೆ, ಆದ್ದರಿಂದ ಮುರಿಯುವ ಅಥವಾ ಯಾವುದೆ ಹಾನಿಯ ಭಯವಿರುವುದಿಲ್ಲ ಸುಲಭವಾಗಿ ಸಾಗಣೆ ಮಾಡಬಹುದು.


ಇದನ್ನೂ ಓದಿ: ರೆಪೊ ದರ ಹೆಚ್ಚಳದಿಂದ ಜನಸಾಮಾನ್ಯರಿಗೆ ಇಷ್ಟೆಲ್ಲಾ ಸಮಸ್ಯೆ, ಇದು ಲೆಕ್ಕಚಾರ!


ಡಕ್ ಪೌಲ್ಟ್ರಿ ಫಾರ್ಮ್ ತೆರೆಯಲು ಸರ್ಕಾರವು 25 ಪ್ರತಿಶತದವರೆಗೆ ಸಹಾಯಧನವನ್ನು ನೀಡುತ್ತದೆ . ಇದರೊಂದಿಗೆ ಎಸ್.ಸಿ ಮತ್ತು ಎಸ್ಟಿ ವರ್ಗಕ್ಕೆ ಸೇರಿದ ವ್ಯಕ್ತಿಗಳಿಗೆ ಸಹಾಯಧನದ ಮೊತ್ತವನ್ನು ಶೇಕಡಾ 35 ಕ್ಕೆ ನಿಗದಿಪಡಿಸಲಾಗಿದೆ. ಇದಲ್ಲದೇ ಸಾಲ ಕೂಡ ನೀಡಲಾಗುತ್ತಿದ್ದು,ಇದಲ್ಲದೇ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ (MUDRA) ಎಸ್‌ಬಿಐ ಬಾತುಕೋಳಿ ಸಾಕಾಣಿಕೆಗೆ ಸಾಲ ನೀಡಲಾಗುತ್ತದೆ. ಕೋಳಿ ಸಾಕಣೆಗೆ ಹೋಲಿಸಿದರೆ ಬಾತುಕೋಳಿ ಸಾಕಣೆಯು ಹೆಚ್ಚು ಆರ್ಥಿಕ ಮತ್ತು ಲಾಭದಾಯಕವಾಗಿದೆ.

Published by:ವಾಸುದೇವ್ ಎಂ
First published: