Business Idea: ಈ ಬ್ಯುಸಿನೆಸ್​ಗೆ ಇನ್ವೆಸ್ಟ್​​ಮೆಂಟ್ ಬೇಡ! ಆದ್ರೂ ತಿಂಗಳಿಗೆ ಲಕ್ಷ ಲಕ್ಷ ದುಡ್ಡು ಮಾಡ್ಬಹುದು, ಹೇಗೆ ಅಂತ ನೋಡಿ

ನೀವು ಕಡಿಮೆ ಹೂಡಿಕೆಯೊಂದಿಗೆ ಮಾಡಬಹುದಾದ ವ್ಯವಹಾರಗಳನ್ನು ಹುಡುಕುತ್ತಿದ್ದೀರಾ? ಹಾಗಿದ್ದರೆ, ನಿಮಗಾಗಿ ನ್ಯೂಸ್​ 18 ಕನ್ನಡ ಪ್ರತಿ ದಿನ ಹಲವಾರು ಬ್ಯುಸಿನೆಸ್​ ಐಡಿಯಾಗಳನ್ನು ನಿಮ್ಮ ಮುಂದೆ ತೆರೆದಿಡುತ್ತಿದೆ.

ನೀವು ಕಡಿಮೆ ಹೂಡಿಕೆಯೊಂದಿಗೆ ಮಾಡಬಹುದಾದ ವ್ಯವಹಾರಗಳನ್ನು ಹುಡುಕುತ್ತಿದ್ದೀರಾ? ಹಾಗಿದ್ದರೆ, ನಿಮಗಾಗಿ ನ್ಯೂಸ್​ 18 ಕನ್ನಡ ಪ್ರತಿ ದಿನ ಹಲವಾರು ಬ್ಯುಸಿನೆಸ್​ ಐಡಿಯಾಗಳನ್ನು ನಿಮ್ಮ ಮುಂದೆ ತೆರೆದಿಡುತ್ತಿದೆ.

ನೀವು ಕಡಿಮೆ ಹೂಡಿಕೆಯೊಂದಿಗೆ ಮಾಡಬಹುದಾದ ವ್ಯವಹಾರಗಳನ್ನು ಹುಡುಕುತ್ತಿದ್ದೀರಾ? ಹಾಗಿದ್ದರೆ, ನಿಮಗಾಗಿ ನ್ಯೂಸ್​ 18 ಕನ್ನಡ ಪ್ರತಿ ದಿನ ಹಲವಾರು ಬ್ಯುಸಿನೆಸ್​ ಐಡಿಯಾಗಳನ್ನು ನಿಮ್ಮ ಮುಂದೆ ತೆರೆದಿಡುತ್ತಿದೆ.

  • Share this:
ಯಾವುದೇ ಬ್ಯುಸಿನೆಸ್ (Business) ಶುರು ಮಾಡುವ ನೂರು ಬಾರಿ ಯೋಚನೆ ಮಾಡುವುದು ಕಾಮನ್. ಯಾಕೆಂದರೆ ಬಂಡವಾಳ ಮತ್ತೆ ವಾಪಸ್​ ಬರುತ್ತಾ ಅನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತೆ. ಬ್ಯುಸಿನೆಸ್​ ಮಾಡಲು ಯಾವ ಸಮಯ (Time) ಉತ್ತಮ ಎಂದು ತಿಳಿದುಕೊಂಡು ಶುರು ಮಾಡಿದರೆ ಡಬಲ್​ ಪ್ರಾಫಿಟ್ (Double Profit) ಬರೋದು ಕೂಡ ಕನ್ಫರ್ಮ್. ನೀವು ಕೆಲಸ ಮಾಡುವ ಆಸಕ್ತಿಯನ್ನು ಕಳೆದುಕೊಂಡಿದ್ದೀರಾ? ನಿಮ್ಮ ಸ್ವಂತ ವ್ಯವಹಾರ (Own Business) ವನ್ನು ಪ್ರಾರಂಭಿಸಲು ಬಯಸುವಿರಾ? ನೀವು ಕಡಿಮೆ ಹೂಡಿಕೆಯೊಂದಿಗೆ ಮಾಡಬಹುದಾದ ವ್ಯವಹಾರಗಳನ್ನು ಹುಡುಕುತ್ತಿದ್ದೀರಾ? ಹಾಗಿದ್ದರೆ, ನಿಮಗಾಗಿ ನ್ಯೂಸ್​ 18 ಕನ್ನಡ ಪ್ರತಿ ದಿನ ಹಲವಾರು ಬ್ಯುಸಿನೆಸ್​ ಐಡಿಯಾಗಳನ್ನು ನಿಮ್ಮ ಮುಂದೆ ತೆರೆದಿಡುತ್ತಿದೆ.

ಗ್ಲಾಸ್​ ಕಲೆಕ್ಟ್​ ಬ್ಯುಸಿನೆಸ್​ ಮಾಡಿ ಹಣ ಮಾಡಿ!

ಯಾವ ವ್ಯಾಪಾರ ಆದರೂ ಹಣಕ್ಕಾಗಿ ಮಾಡಲಾಗುತ್ತದೆ. ಕೆಲವರು ತಮ್ಮ ಲಾಭದ ಜೊತೆಗೆ ಸಮಾಜಕ್ಕೂ ಪ್ರಯೋಜನವನ್ನು ಬಯಸುತ್ತಾರೆ. ಸಮಾಜಕ್ಕೂ ಉಪಯೋಗವಾಗುವ ರೀತಿಯಲ್ಲಿ ಈ ವ್ಯಾಪರವನ್ನು ನೀವು ಆರಿಸಿಕೊಳ್ಳಬಹುದು. ಇದರ ಹೆಸರು ಗ್ಲಾಸ್ ರೀಸೈಕ್ಲಿಂಗ್ ಬಿಸಿನೆಸ್. ಇದನ್ನು ಸರವಾಗಿ ಮರುಬಳಕೆ ವ್ಯವಹಾರ ಎಂದು ಕರೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಗಾಜಿನ ಬಳಕೆ ತುಂಬಾ ಹೆಚ್ಚಾಗಿದೆ. ಗಾಜಿನ ಬಾಟಲಿಗಳು, ಗಾಜಿನ ಚಿಪ್ಪುಗಳು, ಗಾಜಿನ ಶೋ ಕೇಸ್​​ಗಳು, ಗಾಜಿನ ಟೇಬಲ್​ಗಳು ಇತ್ಯಾದಿಗಳಲ್ಲಿ ಗಾಜಿನ ಬಳಕೆ ಹೆಚ್ಚಾಗಿದೆ. ಇದರೊಂದಿಗೆ, ಗಾಜಿನ ತ್ಯಾಜ್ಯವೂ ಹೆಚ್ಚುತ್ತಿದೆ. ಯಾವ ಮದ್ಯದಂಗಡಿಗೆ ಹೋದರೂ ಮದ್ಯದ ಬಾಟಲಿಗಳೆಲ್ಲ ಗ್ಲಾಸ್. ಅವು ಒಡೆದರೆ, ಎಲ್ಲಾ ತ್ಯಾಜ್ಯವನ್ನು ಹೊರಹಾಕಲಾಗುತ್ತದೆ.

ಹೂಡಿಕೆ ತುಮಬಾ ಕಮ್ಮಿ, ಹೆಚ್ಚಿನ ಆದಾಯ!

ಈ ವ್ಯಾಪಾರವು ಅಂತಹ ತ್ಯಾಜ್ಯವನ್ನು ಸಂಗ್ರಹಿಸಿ ಮರುಬಳಕೆ ಮಾಡುತ್ತದೆ ಮತ್ತು ಮರುಬಳಕೆಗೆ ಉಪಯುಕ್ತವಾಗಿದೆ. ಈ ವ್ಯವಹಾರವನ್ನು ಸರಿಯಾಗಿ ಮಾಡುವುದರಿಂದ ಉತ್ತಮ ಲಾಭವನ್ನು ಪಡೆಯಬಹುದು. ಮೊದಲು ಗಾಜನ್ನು ಸಂಗ್ರಹಿಸಿ. ಅದಕ್ಕಾಗಿ ನೀವು ಹಳೆಯ ಸರಕುಗಳನ್ನು ಖರೀದಿಸುವವರೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು ಮತ್ತು ಅವುಗಳನ್ನು ಸಂಗ್ರಹಿಸಬಹುದು. ಅದರ ಹೊರತಾಗಿ, ಮರುಬಳಕೆ ಘಟಕವನ್ನು ಪ್ರಾರಂಭಿಸಿ. ಸ್ಥಳೀಯ ಪುರಸಭೆ ಕಚೇರಿಗೆ ಪ್ರತಿದಿನ ಕಸ ಬರುತ್ತಿದೆ. ಇದು ಬಹಳಷ್ಟು ಗಾಜಿನ ತ್ಯಾಜ್ಯವನ್ನು ಹೊಂದಿರುತ್ತದೆ.

ಇದನ್ನೂ ಓದಿ: ಆಧಾರ್​ ಕಾರ್ಡ್ ಇದ್ರೆ 5 ಲಕ್ಷ ಸಾಲ ಕೊಡುತ್ತಂತೆ ಸರ್ಕಾರ! ಸಿಕ್ಕಾಪಟ್ಟೆ ವೈರಲ್​ ಆಗ್ತಿರೋ ಸುದ್ದಿ ಸತ್ಯನಾ?

ಮರುಬಳಕೆ ಘಟಕಕ್ಕೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ!

ಕೇಳಿದರೆ ಕಡಿಮೆ ದರದಲ್ಲಿ ಕೊಡುತ್ತಾರೆ. ಅದರ ಮೂಲಕ ಗಾಜನ್ನು ಸಂಗ್ರಹಿಸಬಹುದು. ಇದನ್ನು ಕಡಿಮೆ ಬೆಲೆಗೆ ಸಂಗ್ರಹಿಸಿ ಮರುಬಳಕೆ ಘಟಕಕ್ಕೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು. ಈ ಎಲ್ಲಾ ಗಾಜಿನ ತ್ಯಾಜ್ಯವು ಅಲ್ಲಿ ಪುಡಿಯಾಗಿ ಬದಲಾಗುತ್ತದೆ. ನಂತರ ಅದು ನೀರಿನಂತೆ ಕುದಿಯುತ್ತದೆ. ಆ ಕಚ್ಚಾ ವಸ್ತುವಿನಿಂದ ಹೊಸ ಗಾಜಿನ ವಸ್ತುಗಳನ್ನು ತಯಾರಿಸಬಹುದು. ಈ ಕಾರಣದಿಂದಾಗಿ, ನಿಮ್ಮ ಸ್ವಂತ ಲಾಭದ ಜೊತೆಗೆ ಪರಿಸರಕ್ಕೆ ಒಳ್ಳೆಯದನ್ನು ಮಾಡಿದ ವ್ಯಕ್ತಿಯಾಗಿ ನೀವು ನಿಲ್ಲುತ್ತೀರಿ.

ಇದನ್ನೂ ಓದಿ: 200 ರೂಪಾಯಿಗೆ 28 ಲಕ್ಷ; ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದವರ ಜೀವನ ಸೇಫ್

ಮಾರುಕಟ್ಟೆಯಲ್ಲಿ ಅನೇಕ ಗಾಜಿನ ಕರಗುವ ಯಂತ್ರಗಳಿವೆ. ಅವುಗಳ ಮೂಲಕ ನೀವೇ ಮರುಬಳಕೆ ಘಟಕವನ್ನು ಸ್ಥಾಪಿಸಬಹುದು. ಮರುಬಳಕೆಯ ಗಾಜಿನ ಕಚ್ಚಾ ವಸ್ತು, ಹೊಸ ಗಾಜಿನ ಪಾತ್ರೆಗಳನ್ನು ತಯಾರಿಸಲು, ರಸ್ತೆಗಳನ್ನು ನಿರ್ಮಿಸಲು, ಫೈಬರ್ ಗ್ಲಾಸ್ ಉದ್ಯಮಕ್ಕೆ ಮಾರಾಟ ಮಾಡಲು, ಪ್ರತಿಫಲಿತ ಬಣ್ಣಗಳಿಗಾಗಿ ಪೇಂಟ್ ಉದ್ಯಮಕ್ಕೆ ಮಾರಾಟ ಮಾಡಲು, ಮನೆ ನಿರ್ಮಾಣದಲ್ಲಿ ಬಳಸಲು ಬಳಸಬಹುದು.

ಇದಕ್ಕಾಗಿ ಮುದ್ರಾ ಯೋಜನೆಯಿಂದ ಸಾಲ ಸೌಲಭ್ಯ ಪಡೆಯಬಹುದು. ಈ ಸಾಲ ಸೌಲಭ್ಯವು ರೂ.50 ಸಾವಿರದಿಂದ ರೂ.10 ಲಕ್ಷದವರೆಗೆ ಲಭ್ಯವಿದೆ. ಈ ಹಣದಿಂದ ನೀವು ವ್ಯವಹಾರವನ್ನು ಪ್ರಾರಂಭಿಸಬಹುದು.
Published by:Vasudeva M
First published: