• Home
  • »
  • News
  • »
  • business
  • »
  • Business Idea: ಒಮ್ಮೆ 5 ಲಕ್ಷ ಹೂಡಿಕೆ ಮಾಡಿ, ಮನೆಯಲ್ಲೇ ಕುಳಿತು ತಿಂಗಳಿಗೆ 70 ಸಾವಿರ ಗಳಿಸಿ!

Business Idea: ಒಮ್ಮೆ 5 ಲಕ್ಷ ಹೂಡಿಕೆ ಮಾಡಿ, ಮನೆಯಲ್ಲೇ ಕುಳಿತು ತಿಂಗಳಿಗೆ 70 ಸಾವಿರ ಗಳಿಸಿ!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಎಸ್​​ಬಿಐ ಎಟಿಎಮ್​  ಫ್ರಾಂಚೈಸ್ (SBI ATM Franchise) ತೆಗೆದುಕೊಳ್ಳುವ ಮೂಲಕ ತಿಂಗಳಿಗೆ 60 ಸಾವಿರದಿಂದ 70 ಸಾವಿರ ಹಣ ಗಳಿಸಬಹುದು.

  • Share this:

ನಿಮಗೆ ತಿಂಗಳ ಸಂಬಳ (Monthly Salary) ತೆಗೆದುಕೊಂಡು ಜೀವನ ನಡೆಸೆಕೋ ಕಷ್ಟ ಆಗ್ತಿದ್ಯಾ?  ಏನಾದರೂ ಹೊಸ ಬ್ಯುಸಿನೆಸ್ (Business) ಮಾಡಿ ಕೈ ತುಂಬಾ ಹಣ ಮಾಡ್ಬೇಕಾ? ಹಾಗಿದ್ದರೆ ಇಲ್ಲಿದೆ ನೋಡಿ ಒಂದು ಸೂಪರ್​ ಡೂಪರ್​ ಐಡಿಯಾ. ಸ್ವಲ್ಪ ದುಬಾರಿಯಾದ್ರೂ ಈ ಬ್ಯುಸಿನೆಸ್​ ಆರಂಭಿಸಿ ನೀವು ಕೈ ತುಂಬಾ ಹಣ (Money) ಗಳಿಸಹಬಹುದು. ಈ ಬ್ಯುಸಿನೆಸ್​ ಆರಂಭಿಸೋಕೆ 5 ಲಕ್ಷ ಹೂಡಿಕೆಯ ಅಗತ್ಯವಿದೆ. ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ (SBI) ಭಾರತದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಅತ್ಯುತ್ತಮ ಅವಕಾಶವನ್ನು ನೀಡುತ್ತಿದೆ. ಎಸ್​​ಬಿಐ ಎಟಿಎಮ್​  ಫ್ರಾಂಚೈಸ್ (SBI ATM Franchise) ತೆಗೆದುಕೊಳ್ಳುವ ಮೂಲಕ ತಿಂಗಳಿಗೆ 60 ಸಾವಿರದಿಂದ 70 ಸಾವಿರ ಹಣ ಗಳಿಸಬಹುದು.


ಒಮ್ಮೆ ಹೂಡಿಕೆ ಮಾಡಿದ್ರೆ ಸಾಕು!


ಒಮ್ಮೆ ಹೂಡಿಕೆ ಮಾಡಿ. ಮನೆಯಲ್ಲೇ ಕುಳಿತು ಪ್ರತಿ ತಿಂಗಳು ಆದಾಯ ಗಳಿಸಬಹುದು. ಬ್ಯಾಂಕುಗಳು ಎಟಿಎಂಗಳು ಸ್ಥಾಪನೆಯ ಜವಾಬ್ದಾರಿಗಳನ್ನು ಕೆಲವು ಸಂಸ್ಥೆಗಳಿಗೆ ವಹಿಸಲಾಗಿದೆ. ಆ ಸಂಸ್ಥೆಗಳು ವಿವಿಧ ಪ್ರದೇಶಗಳಲ್ಲಿ ಎಟಿಎಂಗಳನ್ನು ಸ್ಥಾಪಿಸುತ್ತವೆ. ಈ ಎಟಿಎಂಗಳನ್ನು ಸ್ಥಾಪಿಸಲು ಫ್ರಾಂಚೈಸಿಯನ್ನು ತೆಗೆದುಕೊಳ್ಳಬಹುದು. Tata IndyCash, Muthoot ATM, India One ATM ನಂತಹ ಕಂಪನಿಗಳು ATM ಫ್ರಾಂಚೈಸಿಗಳನ್ನು ಒದಗಿಸುತ್ತವೆ.


ಈ ಫ್ರಾಂಚೈಸಿಯನ್ನು ಯಾರು ಬೇಕಾದರೂ ತೆಗೆದುಕೊಳ್ಳಬಹುದು. ನೀವು ಕೂಡ ಎಸ್.ಬಿ.ಐ  ಫ್ರಾಂಚೈಸ್ ತೆಗೆದುಕೊಳ್ಳಲು ಬಯಸಿದರೆ, ನೀವು ಅರ್ಜಿ ಸಲ್ಲಿಸಬೇಕು. ಆದರೆ ATM ಫ್ರಾಂಚೈಸ್ ತೆಗೆದುಕೊಳ್ಳುವ ಮೊದಲು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.


ಇದನ್ನೂ ಓದಿ: ನಾರಾಯಣ ಮೂರ್ತಿ ಪುತ್ರ ರೋಹನ್ ಅವರ ಮಹತ್ವಾಕಾಂಕ್ಷಿ ಬ್ಯುಸಿನೆಸ್​ ಪ್ಲಾನ್​ ಇದು!


ಎಟಿಎಂ ಫ್ರಾಂಚೈಸಿಗೆ ಇವು ಕಡ್ಡಾಯ!


ಎಟಿಎಂ ಸ್ಥಾಪಿಸಲು 50 ರಿಂದ 80 ಚದರ ಅಡಿ ಜಾಗದ ಅಗತ್ಯವಿದೆ. ನೀವು ಎಟಿಎಂ ಸ್ಥಾಪಿಸಲು ಉದ್ದೇಶಿಸಿರುವ ಪ್ರದೇಶದ 100 ಮೀಟರ್‌ಗಳ ಒಳಗೆ ಎಟಿಎಂಗಳು ಇರಬಾರದು. ಎಟಿಎಂ ಸಾರ್ವಜನಿಕರಿಗೆ ಸುಲಭವಾಗಿ ಕಾಣುವ ಪ್ರದೇಶದಲ್ಲಿರಬೇಕು. 24 ಗಂಟೆ ವಿದ್ಯುತ್ ಪೂರೈಕೆಯಾಗಬೇಕು. 1kW ವಿದ್ಯುತ್ ಸಂಪರ್ಕ ಕಡ್ಡಾಯವಾಗಿದೆ. ಕಾಂಕ್ರೀಟ್ ಛಾವಣಿ ಅತ್ಯಗತ್ಯ. ವಿ-ಸ್ಯಾಟ್ ಸ್ಥಾಪಿಸಲು ಸೊಸೈಟಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯಬೇಕು.


ATM ಫ್ರ್ಯಾಂಚೈಸ್‌ಗೆ ಅಗತ್ಯವಿರುವ ದಾಖಲೆಗಳು


1. ID ಪುರಾವೆ -ಆಧಾರ್ ಕಾರ್ಡ್,PAN ಕಾರ್ಡ್, ಮತದಾರರ ಚೀಟಿ


2. ವಿಳಾಸ ಪುರಾವೆ - ರೇಷನ್ ಕಾರ್ಡ್, ವಿದ್ಯುತ್ ಬಿಲ್


3. ಬ್ಯಾಂಕ್ ಖಾತೆ, ಪಾಸ್‌ಬುಕ್


4. ಫೋಟೋಗ್ರಾಫ್, ಇ-ಮೇಲ್ ಐಡಿ, ಫೋನ್ ಸಂಖ್ಯೆ


5. ಇತರ ದಾಖಲೆಗಳು


6.ಜಿಎಸ್​ಟಿ ಸಂಖ್ಯೆ


7. ಹಣಕಾಸಿನ ದಾಖಲೆಗಳು


ATM ಫ್ರ್ಯಾಂಚೈಸ್‌ಗಾಗಿ ಅರ್ಜಿ ಸಲ್ಲಿಸಬೇಕಾದ ವೆಬ್‌ಸೈಟ್‌ಗಳು


ಟಾಟಾ ಇಂಡಿಕ್ಯಾಶ್- www.indicash.co.in


ಮುತ್ತೂಟ್ ಎಟಿಎಂ- www.muthootatm.com/suggest-atm.html


ಇಂಡಿಯಾ ಒನ್ ಎಟಿಎಂ- india1atm.in/rent-your-space


ಎಟಿಎಂ ಫ್ರಾಂಚೈಸಿಯಿಂದ ಬರುವ ಆದಾಯವೆಷ್ಟು?


ಟಾಟಾ ಇಂಡಿಕ್ಯಾಶ್ ಎಸ್‌ಬಿಐ ಎಟಿಎಂ ಫ್ರಾಂಚೈಸಿಗಳನ್ನು ನೀಡುವ ಅತಿದೊಡ್ಡ ಕಂಪನಿಯಾಗಿದೆ. ರೂ.2,00,000 ಭದ್ರತಾ ಠೇವಣಿ ಪಾವತಿಸಿ ATM ಫ್ರಾಂಚೈಸಿಯನ್ನು ತೆಗೆದುಕೊಳ್ಳಬಹುದು. ಈ ಭದ್ರತಾ ಠೇವಣಿ ಮರುಪಾವತಿಸಬಹುದಾಗಿದೆ. ಇದಲ್ಲದೇ ರೂ.3,00,000 ಬಂಡವಾಳದ ಅಗತ್ಯವಿದೆ. ಒಟ್ಟು ಹೂಡಿಕೆ ರೂ.5,00,000 ಆಗಿರುತ್ತದೆ.


ಇದನ್ನೂ ಓದಿ: ಕಡಿಮೆ ಸಮಯದಲ್ಲಿ ಕೋಟ್ಯಧಿಪತಿಯಾಗ್ಬೇಕಾ? ಈ 15X15X15 ಸೂತ್ರ ಫಾಲೋ ಮಾಡಿ!


ಈ ಎಟಿಎಂನಲ್ಲಿ ನೀವು ಪ್ರತಿ ನಗದು ವ್ಯವಹಾರಕ್ಕೆ ರೂ.8 ಮತ್ತು ನಗದುರಹಿತ ವ್ಯವಹಾರಕ್ಕೆ ರೂ.2 ಕಮಿಷನ್ ಪಡೆಯುತ್ತೀರಿ. ಉದಾಹರಣೆಗೆ, ದಿನಕ್ಕೆ 500 ವಹಿವಾಟುಗಳಿವೆ ಎಂದು ಭಾವಿಸೋಣ. 250 ನಗದು ವಹಿವಾಟು ಹಾಗೂ 250 ನಗದುರಹಿತ ವಹಿವಾಟು ನಡೆದರೆ ದಿನಕ್ಕೆ 2500 ರೂ.ನಂತೆ 75 ಸಾವಿರ ರೂ.ವರೆಗೆ ಕಮಿಷನ್ ಸಿಗಲಿದೆ. ಕಡಿಮೆ ವಹಿವಾಟು ಎಂದರೆ ಕಡಿಮೆ ಕಮಿಷನ್. ಆದರೆ ಜನನಿಬಿಡ ಪ್ರದೇಶದಲ್ಲಿ ಎಟಿಎಂ ಅಳವಡಿಸಿದರೆ ವಹಿವಾಟು ಹೆಚ್ಚು.

Published by:ವಾಸುದೇವ್ ಎಂ
First published: