Business Idea: ನಿಮ್​ ಹತ್ರ 25 ಸಾವಿರ ಇದ್ರೆ ಇಲ್ಲಿ ಹೂಡಿಕೆ ಮಾಡಿ, 3 ಲಕ್ಷದವರೆಗೂ ಲಾಭ ಬರುತ್ತೆ ಗುರೂ!

ಕೇವಲ  25000 ರೂಪಾಯಿ ಹೂಡಿಕೆ ಮಾಡಿದ್ರೆ  ತಿಂಗಳಿಗೆ 3 ಲಕ್ಷ ರೂಪಾಯಿವರೆಗೆ ಆದಾಯ ಬರುತ್ತಿದೆ. ಈ ಉದ್ಯಮವನ್ನು ದೊಡ್ಡ ಮಟ್ಟದಲ್ಲಿ ಆರಂಭಿಸಬೇಕಾದರೆ ಕೇಂದ್ರ ಸರ್ಕಾರದಿಂದ ಶೇಕಡಾ 50ರಷ್ಟು ಸಹಾಯಧನವೂ ದೊರೆಯುತ್ತದೆ.

ಮುತ್ತು ಕೃಷಿ

ಮುತ್ತು ಕೃಷಿ

  • Share this:
ಕೊರೋನಾ (Corona) ಬಂದಾಗಿನಿಂದಲೂ ಯಾವ ಬ್ಯುಸಿನೆಸ್ (Business) ​ಗಳು ಕೂಡ ಹೆಚ್ಚಾಗಿ ಲಾಭ (Profit) ಕಂಡಿಲ್ಲ. ಸೋತು ಸುಣ್ಣವಾಗಿ ಅದೆಷ್ಟೋ ಬ್ಯುಸಿನೆಸ್​ ಮಾಡುತ್ತಿದ್ದವರು ಮನೆ ಸೇರಿಕೊಂಡಿದ್ದಾರೆ. ಕೆಲವರು ಹೊಸ ಹೊಸ ವ್ಯಾಪಾರ ತೆರೆದು ಕೈ ಸುಟ್ಟುಕೊಂಡಿದ್ದಾರೆ. ಯಾವ ರೀತಿಯ ಬ್ಯುಸಿನೆಸ್​ ಮಾಡಿದರೆ ಒಳಿತು ಎಂಬುದನ್ನು ತಿಳಿಯದೇ ಹಲವರು ಅಖಾಡಕ್ಕೆ ಇಳಿಯುತ್ತಿದ್ದಾರೆ. ಇದರಿಂದ ಸಕ್ಸಸ್​ ರೇಟ್ (Success Rate) ​ಗಿಂತ ಫೇಲ್ಯೂರ್​ ರೇಟ್ (Failure Rate)​ ಹೆಚ್ಚಿದೆ. ಒಂದು ಉದ್ಯೋಮ ಆರಂಭ ಮಾಡುವ ಮುನ್ನ ಸಾವಿರ ಕಡೆಯಿಂದಲೂ ಯೋಚಿಸಿರಬೇಕು. ಎಷ್ಟು ಹೂಡಿಕೆ ಮಾಡುತ್ತಿದ್ದೇವೆ, ಈ ಹಣದಿಂದ ಎಷ್ಟು ಲಾಭ ಗಳಿಸಬಹುದು ಎಂಬುಂದರ ಬಗ್ಗೆ ಅರಿವಿರಬೇಕು. ನಿಮ್ಮ ಬಳಿ ದೊಡ್ಡ ಉದ್ಯೋಮ ಆರಂಭ ಮಾಡಲು ಹಣ (Money) ವಿಲ್ಲವಾ? ಕಡಿಮೆ ಇನ್ವೆಸ್ಟ್ (Invest)​ ಮಾಡಿ ಹೆಚ್ಚಿನ ಲಾಭ ಮಾಡುವ ಬ್ಯುಸಿನೆಸ್​ ಬಗ್ಗೆ ಯೋಚಿಸುತ್ತಿದ್ದೀರಾ? ನಿಮಗಾಗಿ ನೋಡಿ ಇಲ್ಲಿದೆ ಸುವರ್ಣಾವಾಕಾಶ.

25000 ಸಾವಿರ ಹೂಡಿಕೆ ಮಾಡಿದ್ರೆ ಸಾಕು!

ಕೇವಲ  25000 ರೂಪಾಯಿ ಹೂಡಿಕೆ ಮಾಡಿದ್ರೆ  ತಿಂಗಳಿಗೆ 3 ಲಕ್ಷ ರೂಪಾಯಿವರೆಗೆ ಆದಾಯ ಬರುತ್ತಿದೆ. ಈ ಉದ್ಯಮವನ್ನು ದೊಡ್ಡ ಮಟ್ಟದಲ್ಲಿ ಆರಂಭಿಸಬೇಕಾದರೆ ಕೇಂದ್ರ ಸರ್ಕಾರದಿಂದ ಶೇಕಡಾ 50ರಷ್ಟು ಸಹಾಯಧನವೂ ದೊರೆಯುತ್ತದೆ. ಇನ್ಯಾಕೆ ತಡ ಅದ್ಯಾವ ಬ್ಯುಸಿನೆಸ್​ ಅಂತ ನೋಡೋಣ ಬನ್ನಿ. ಹೌದು, ಕಡಿಮೆ ಬಂಡವಾಳ ಹೂಡಿ ಹೆಚ್ಚಿನ ಲಾಭ ಮಾಡುವ ಬ್ಯುಸಿನೆಸ್​ ಅಂದರೆ ಅದುವೇ  ಮುತ್ತಿನ ಕೃಷಿ. ಮುತ್ತಿನ ಕೃಷಿ ಬಹಳ ಆಸಕ್ತಿದಾಯಕ ವ್ಯವಹಾರವಾಗಿದೆ. ನಗರ ಪ್ರದೇಶಗಳಲ್ಲಿ ಇದರ ಬಗ್ಗೆ ತುಂಬಾ ಜನರಿಗೆ ತಿಳಿದಿಲ್ಲ.

ಮುತ್ತಿನ ಬ್ಯುಸಿನೆಸ್​ ಶುರು ಮಾಡಿ ಹೆಚ್ಚಿನ ಲಾಭ ಗಳಿಸಿ!

ಇತ್ತೀಚಿನ ವರ್ಷಗಳಲ್ಲಿ ಇದರತ್ತ ಗಮನ ಹೆಚ್ಚಿದೆ. ಗುಜರಾತ್  ಪ್ರದೇಶಗಳಲ್ಲಿ ಇದರ ಕೃಷಿಯಿಂದಾಗಿ ಅನೇಕ ರೈತರು ಲಕ್ಷಪತಿಗಳಾಗಿದ್ದಾರೆ. ಅದೇ ಸಮಯದಲ್ಲಿ, ಒಡಿಶಾ ಮತ್ತು ಬೆಂಗಳೂರಿನಲ್ಲೂ ಇದು ಉತ್ತಮ ವ್ಯಾಪ್ತಿಯನ್ನು ಹೊಂದಿದೆ. ಕಡಿಮೆ ಸಿಬ್ಬಂದಿ ಮತ್ತು ಹೆಚ್ಚಿನ ಲಾಭವು ಲಾಭದಾಯಕವೆಂದು ತೋರುತ್ತದೆ. ಈ ಹಿಂದೆ, ಭುವನೇಶ್ವರದ (ಒಡಿಶಾ) ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಫ್ರೆಶ್ ವಾಟರ್ ಅಕ್ವಾಕಲ್ಚರ್‌ನಲ್ಲಿ ಮುತ್ತು ಕೃಷಿ ತರಬೇತಿಯನ್ನು ನೀಡಲಾಗುತ್ತಿತ್ತು, ಆದರೆ ಈಗ ಅನೇಕ ಇತರ ಸಂಸ್ಥೆಗಳು ಪ್ರಾಂತ್ಯದಲ್ಲಿ ತರಬೇತಿಯನ್ನು ನೀಡುತ್ತವೆ ಮತ್ತು ನಿಮ್ಮ ಸಮೀಪದಲ್ಲಿ ಪರ್ಲ್ ಫಾರ್ಮಿಂಗ್ ಸೆಂಟರ್ ಇರುವ ಉತ್ತಮ ಅವಕಾಶವಿದೆ.

ಇದನ್ನೂ ಓದಿ: ಒಂದೇ ಒಂದು ಲೋಗೋ ಮಾಡಿಕೊಡಿ, ಒಂದೂವರೆ ಲಕ್ಷ ಹಣ ನಿಮ್ಮದಾಗಿಸಿಕೊಳ್ಳಿ!

ಮುತ್ತು ಕೃಷಿ ಶುರು ಮಾಡೋಕೆ ಏನ್​ ಮಾಡ್ಬೇಕು?

ಮುತ್ತಿನ ಕೃಷಿ ಶುರು ಮಾಡಲು ಮೊದಲು ಒಂದು ಕೊಳದ ಅವಶ್ಯಕತೆ ಇದೆ. ಇದರಲ್ಲಿ ಸಿಂಪಿ ಮುಖ್ಯ ಪಾತ್ರ ವಹಿಸುತ್ತದೆ.ಮುತ್ತು ಕೃಷಿಗೆ ರಾಜ್ಯ ಮಟ್ಟದಲ್ಲೂ ತರಬೇತಿ ನೀಡಲಾಗುತ್ತದೆ. ಕೊಳವಿಲ್ಲದಿದ್ದರೆ ಅದನ್ನು ಕೂಡ ವ್ಯವಸ್ಥೆ ಮಾಡಲಾಗುತ್ತದೆ. ನಿಮ್ಮ ಹೂಡಿಕೆಯ ಮೇಲೆ ನೀವು ಸರ್ಕಾರದಿಂದ ಶೇಕಡಾ 50ರಷ್ಟು ಸಬ್ಸಿಡಿ ಪಡೆಯಬಹುದು. ದಕ್ಷಿಣ ಭಾರತ ಮತ್ತು ಬಿಹಾರದ ದರ್ಭಾಂಗದ ಸಿಂಪಿಗಳ ಗುಣಮಟ್ಟ ತುಂಬಾ ಉತ್ತಮವಾಗಿದೆ. ಮಣಿಗಳನ್ನು ಕನಿಷ್ಠ 10 x 10 ಅಡಿ ಅಥವಾ ಅದಕ್ಕಿಂತ ಹೆಚ್ಚಿನ ಕೊಳದಲ್ಲಿ ನೆಡಬಹುದು.

ಇದನ್ನೂ ಓದಿ: ಕಿಂಗ್‌ಫಿಶರ್‌ ಟವರ್ಸ್‌ ಐಷಾರಾಮಿ ಅಪಾರ್ಟ್‌ಮೆಂಟ್‌ ಖರೀದಿಸಿದ ಕೆಜೆ ಜಾರ್ಜ್‌ ಪುತ್ರ; ಬೆಲೆ ಎಷ್ಟು ಗೊತ್ತಾ?

ಒಂದು ಸಿಂಪಿ ತಯಾರಿಸಲು ಸುಮಾರು 25 ರಿಂದ 35 ರೂಪಾಯಿ ಖರ್ಚಾಗುತ್ತದೆ.  ಒಂದು ಸಿಂಪಿಯಿಂದ 2 ಮುತ್ತುಗಳನ್ನು ತಯಾರಿಸಲಾಗುತ್ತದೆ. ಒಂದು ಮುತ್ತಿನ ಬೆಲೆ ಸುಮಾರು 120 ರೂಪಾಯಿ. ಗುಣಮಟ್ಟ ಉತ್ತಮವಾಗಿದ್ದರೆ ನೀವು 200 ರೂಪಾಯಿಗಳವರೆಗೆ ಮಾರಾಟ ಮಾಡಬಹುದು. ನೀವೇನಾದರೂ ಒಂದು ಎಕರೆಯಲ್ಲಿ 25 ಸಾವಿರ ಸಿಂಪಿ ಮಾಡ್ತೀನಿ ಎಂದರೆ 8 ಲಕ್ಷ ಖರ್ಚಾಗುತ್ತೆ. ಈ ರೀತಿ ಮಾಡಿದ್ರೆ  ಒಬ್ಬರು ವಾರ್ಷಿಕವಾಗಿ 30 ಲಕ್ಷ ರೂಪಾಯಿಗಳವರೆಗೆ ಹಣ ಗಳಿಸಬಹುದು.
Published by:Vasudeva M
First published: