• Home
  • »
  • News
  • »
  • business
  • »
  • Best Business Idea: ಬ್ಯುಸಿನೆಸ್ ಐಡಿಯಾ! 7 ಲಕ್ಷ ಹೂಡಿಕೆ ತಿಂಗಳಿಗೆ ರೂ 5 ಲಕ್ಷಕ್ಕಿಂತ ಹೆಚ್ಚು ಆದಾಯ!

Best Business Idea: ಬ್ಯುಸಿನೆಸ್ ಐಡಿಯಾ! 7 ಲಕ್ಷ ಹೂಡಿಕೆ ತಿಂಗಳಿಗೆ ರೂ 5 ಲಕ್ಷಕ್ಕಿಂತ ಹೆಚ್ಚು ಆದಾಯ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೀವು ಸಣ್ಣ ಹೂಡಿಕೆಯೊಂದಿಗೆ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ಸರ್ಕಾರಿ ಪ್ರಾಯೋಜಿತ ಯೋಜನೆಯು ನಿಮ್ಮ ವ್ಯಾಪಾರ ಕನಸುಗಳನ್ನು ನನಸಾಗಿಸಲು ಸಹಾಯ ಮಾಡುತ್ತದೆ.

  • Share this:

ಉದ್ಯಮ ರಂಗದಲ್ಲಿ ಆಸಕ್ತರಾಗಿದ್ದು ಒಬ್ಬ ಯಶಸ್ವಿ ಉದ್ಯಮದಾರನಾಗಬೇಕೆಂಬ ಬಯಕೆ ನಿಮ್ಮದಾಗಿದ್ದರೆ ಸೂಕ್ತ ಉದ್ಯಮದ ಕಲ್ಪನೆಗಳು ಹಾಗೂ ವ್ಯವಹಾರ ಜ್ಞಾನವನ್ನು (Business Knowledge) ನೀವು ಹೊಂದಿರುವುದು ಅವಶ್ಯಕವಾಗಿದೆ. ಸಾಕಷ್ಟು ವ್ಯಾಪಾರ ಆಯ್ಕೆಗಳು ಇಂದಿನ ದಿನಗಳಲ್ಲಿ ಲಭ್ಯವಿದೆ ಅಂತೆಯೇ ಸರಕಾರ (Government)  ಕೂಡ ಉದ್ಯಮಿಗಳಾಗಲು ಜನರನ್ನು ಪ್ರೋತ್ಸಾಹಿಸುತ್ತಿದೆ. ಇದಕ್ಕಾಗಿ ಸ್ಟಾರ್ಟಪ್‌ಗಳನ್ನು (Startup) ಉನ್ನತೀಕರಿಸಲು ಹಲವಾರು ಯೋಜನೆಗಳನ್ನು ಸ್ಥಾಪಿಸಿದೆ. ನೀವು ಸಣ್ಣ ಹೂಡಿಕೆಯೊಂದಿಗೆ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ಸರ್ಕಾರಿ ಪ್ರಾಯೋಜಿತ ಯೋಜನೆಯು ನಿಮ್ಮ ವ್ಯಾಪಾರ ಕನಸುಗಳನ್ನು ನನಸಾಗಿಸಲು ಸಹಾಯ ಮಾಡುತ್ತದೆ.


ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತ ಸರ್ಕಾರದ ಘಟಕವಾಗಿರುವ ಸಾಮಾನ್ಯ ಸೇವಾ ಕೇಂದ್ರಗಳು (CSC) ಉದ್ಯಮಿಯಾಗುವ ಕನಸು ಹೊತ್ತವರಿಗೆ ಹಾಗೂ ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ಗುರಿ ಹೊಂದಿದವರಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿದೆ.


ಥಿಯೇಟರ್ ಮಾಲೀಕರಾಗಲು ಅರ್ಜಿ ಆಹ್ವಾನ
ಸಣ್ಣ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ಮಿನಿ ಥಿಯೇಟರ್/ಸಿನಿಮಾ ಹಾಲ್‌ನ ಮಾಲೀಕರಾಗಬೇಕೆಂಬ ಆಸೆಯುಳ್ಳವರಿಗೆ ಸಿಎಸ್‌ಸಿ ಆಹ್ವಾನ ನೀಡಿದ್ದು, ಉಚಿತ ಫಾರ್ಮ್ ಅನ್ನು ತುಂಬುವ ಮೂಲಕ ಯಶಸ್ವಿ ಉದ್ಯಮದಾರನಾಗಬೇಕೆಂಬ ಕನಸನ್ನು ಈಡೇರಿಸಿಕೊಳ್ಳಬಹುದಾಗಿದೆ.


ಚಿತ್ರಮಂದಿರದ ಮಾಲೀಕರಾಗಿ!
CSC ತಿಳಿಸಿರುವಂತೆ ಒಬ್ಬ ವ್ಯಕ್ತಿ ಒಮ್ಮೆಗೆ ಸುಮಾರು ರೂ 7.5 ಲಕ್ಷ ಹೂಡಿಕೆ ಮಾಡಬಹುದು.  ಚಿತ್ರಮಂದಿರದ ಮಾಲೀಕರಾಗುವ ಮೂಲಕ ತಿಂಗಳಿಗೆ ರೂ 5 ಲಕ್ಷದವರೆಗೆ ಆದಾಯ ಗಳಿಸಬಹುದು ಎಂದಾಗಿದೆ.


ರೂ 21,000 ಡಿಪಾಸಿಟ್ ಮಾಡುವ ಮೂಲಕ ಬುಕಿಂಗ್ ಕೂಡ ಮಾಡಿಕೊಳ್ಳಬಹುದಾಗಿದ್ದು, ಸಿನಿಮಾ ಹಾಲ್‌ಗಾಗಿ ಪರವಾನಗಿ ದೊರೆಯದೇ ಇದ್ದಲ್ಲಿ ರೂ 21,000 ವನ್ನು ಮರಳಿ ಪಾವತಿಸಲಾಗುತ್ತದೆ ಎಂದು ಸಿಎಸ್‌ಸಿ ಹೇಳಿದೆ.


ಅರ್ಜಿಯಲ್ಲಿರುವ ವಿವರಗಳು
ಅರ್ಜಿಯಲ್ಲಿ ತಿಳಿಸಿರುವ ಮಾಹಿತಿಯನ್ವಯ, ಸಿನಿಮಾ ಹಾಲ್‌ನ ಮಾಲೀಕರಾಗಬೇಕೆಂದು ಬಯಸಿದಲ್ಲಿ ಚಿತ್ರಮಂದಿರ ಸಂಕೀರ್ಣದ ಸ್ಥಾಪನೆಗೆ ನೀವು ಸುಮಾರು 1000 - 2000 ಚದರ ಅಡಿ (ಚ. ಅಡಿ) ಜಾಗವನ್ನು ಹೊಂದಿರಬೇಕು.


ಈ ಸ್ಥಳ ನಿಮ್ಮ ಸ್ವಂತದ್ದು ಹಾಗೂ ಬಾಡಿಗೆ ಜಾಗವಾದರೂ ತೊಂದರೆಯಿಲ್ಲ. ಕಟ್ಟಡದ ಸೀಲಿಂಗ್ ಎತ್ತರ ಸುಮಾರು 15 ಅಡಿ ಇರಬೇಕು ಎಂದು ಸೂಚಿಸಲಾಗಿದೆ. ಈ ಕುರಿತು ತನ್ನ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಸ್‌ಸಿ, ಸಿನಿಮಾ ಮಂದಿರದ ಪ್ರಸ್ತಾವಿತ ಸ್ಥಳ, ಸಿನಿಮಾ ಮಂದಿರವನ್ನು ಎಲ್ಲಿ ನಿರ್ಮಿಸಬೇಕೆಂದು ಬಯಸಿರುವಿರಿ ಮೊದಲಾದ ವಿವರಗಳನ್ನು ಭರ್ತಿಮಾಡಲು ಅರ್ಜಿದಾರರಲ್ಲಿ ವಿನಂತಿಸಿದೆ.


ಇದನ್ನೂ ಓದಿ: Explained: ಭಾರತದ ರಾಷ್ಟ್ರೀಯ ಲಾಂಛನ ಪತ್ತೆಹಚ್ಚಿದ್ದು ಜರ್ಮನ್ ಮೂಲದ ಎಂಜಿನಿಯರ್! ಕುತೂಹಲ ಹುಟ್ಟಿಸುತ್ತೆ ವಿವರ


ಟ್ವೀಟ್‌ನಲ್ಲಿರುವ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಫಾರ್ಮ್ ಅನ್ನು ಭರ್ತಿ ಮಾಡಬಹುದು. ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಎಲ್ಲಾ ಸಂಬಂಧಿತ ವಿವರಗಳನ್ನು ಸಲ್ಲಿಸಿದರೆ, ಸಂಬಂಧಿತ CSC ಅರ್ಜಿದಾರರನ್ನು ಸಂಪರ್ಕಿಸುತ್ತದೆ ಕನಸಿನ ಉದ್ಯಮವನ್ನು ಸ್ಥಾಪಿಸುವ ನಿಮ್ಮ ಆಸೆಗೆ ಒತ್ತಾಸೆಯಾಗಿ ನಿಲ್ಲುತ್ತಾರೆ ಹಾಗೂ ಗುರಿ ಮುಟ್ಟುವಲ್ಲಿ ನೆರವಾಗುತ್ತಾರೆ.


ಸಿನಿಮಾ ಮಂದಿರದ ಜೊತೆ ಇನ್ನಷ್ಟು ಆದಾಯ ಗಳಿಸುವ ಅವಕಾಶ
ಸಿನಿಮಾ ಮಂದಿರದ ಅಕ್ಕಪಕ್ಕದಲ್ಲಿ ಫುಡ್ ಕೋರ್ಟ್, ಫನ್ ಝೋನ್ ಹಾಗೂ ಇತರ ವ್ಯಾಪಾರ ಮಳಿಗೆಗಳನ್ನು ಸ್ಥಾಪಿಸುವ ಮೂಲಕ ಮತ್ತಷ್ಟು ಆದಾಯ ಗಳಿಸಬಹುದು ಎಂದು ಸಿಎಸ್‌ಸಿ ಸೂಚಿಸಿದೆ.


ನಗರಗಳಲ್ಲಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರ ಬಿಡುಗಡೆಯಾದ ಅದೇ ದಿನ ಯಾವುದೇ ಚಲನಚಿತ್ರವನ್ನು ಬಿಡುಗಡೆ ಮಾಡಲು ಗ್ರಾಮೀಣ ಚಿತ್ರಮಂದಿರಗಳ ಮಾಲೀಕರಿಗೆ ಅವಕಾಶ ನೀಡಲಾಗುವುದು ಎಂದು ಸಿಎಸ್‌ಸಿ ತಿಳಿಸಿದೆ.


ಇದನ್ನೂ ಓದಿ: Petrol Diesel Price Today: ವಾರಾಂತ್ಯದಲ್ಲಿ ಪೆಟ್ರೋಲ್ ಬೆಲೆ ಹೇಗಿದೆ? ಇಲ್ಲಿದೆ ಉತ್ತರ


ಅರ್ಹ ವ್ಯಕ್ತಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಮತ್ತು ಇನ್ನಿತರ ಬ್ಯಾಂಕ್‌ಗಳಿಂದ ಸಾಲವನ್ನು ಪಡೆಯಬಹುದು. ಸಾಲ ಪಡೆಯಲು ಅರ್ಹರಾಗಿದ್ದರೆ, ವ್ಯಾಪಾರ ಸಾಲವನ್ನು ಪಡೆಯಬಹುದು ಮತ್ತು ಉದ್ಯಮಕ್ಕೆ ಕಡಿಮೆ ಮೊತ್ತದ ಅಗತ್ಯವಿದ್ದರೆ, ಮುದ್ರಾ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಬಹುದು.

Published by:ಗುರುಗಣೇಶ ಡಬ್ಗುಳಿ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು