ಕೊರೋನಾ (Corona) ಬಂದಾಗಿನಿಂದಲೂ ಯಾವ ಬ್ಯುಸಿನೆಸ್ (Business) ಗಳು ಕೂಡ ಹೆಚ್ಚಾಗಿ ಲಾಭ (Profit) ಕಂಡಿಲ್ಲ. ಸೋತು ಸುಣ್ಣವಾಗಿ ಅದೆಷ್ಟೋ ಬ್ಯುಸಿನೆಸ್ ಮಾಡುತ್ತಿದ್ದವರು ಮನೆ ಸೇರಿಕೊಂಡಿದ್ದಾರೆ. ಕೆಲವರು ಹೊಸ ಹೊಸ ವ್ಯಾಪಾರ ತೆರೆದು ಕೈ ಸುಟ್ಟುಕೊಂಡಿದ್ದಾರೆ. ಯಾವ ರೀತಿಯ ಬ್ಯುಸಿನೆಸ್ ಮಾಡಿದರೆ ಒಳಿತು ಎಂಬುದನ್ನು ತಿಳಿಯದೇ ಹಲವರು ಅಖಾಡಕ್ಕೆ ಇಳಿಯುತ್ತಿದ್ದಾರೆ. ಇದರಿಂದ ಸಕ್ಸಸ್ ರೇಟ್ (Success Rate) ಗಿಂತ ಫೇಲ್ಯೂರ್ ರೇಟ್ (Failure Rate) ಹೆಚ್ಚಿದೆ. ಒಂದು ಉದ್ಯಮ ಆರಂಭ ಮಾಡುವ ಮುನ್ನ ಸಾವಿರ ಕಡೆಯಿಂದಲೂ ಯೋಚಿಸಿರಬೇಕು. ಎಷ್ಟು ಹೂಡಿಕೆ (Invest) ಮಾಡುತ್ತಿದ್ದೇವೆ, ಈ ಹಣ (Money) ದಿಂದ ಎಷ್ಟು ಲಾಭ ಗಳಿಸಬಹುದು ಎಂಬುಂದರ ಬಗ್ಗೆ ಅರಿವಿರಬೇಕು. ಲಾಭ (Profit) ದಾಯಕ ಮತ್ತು ಯಾವಾಗಲೂ ಬೇಡಿಕೆಯಲ್ಲಿರುವ ವ್ಯವಹಾರವನ್ನು ಹುಡುಕುತ್ತಿದ್ದೀರಾ? ನಿಮಗಾಗಿ ಅಂತಾನೇ ಇಲ್ಲಿದೆ ನೋಡಿ ಒಂದು ಸೂಪರ್ ಐಡಿಯಾ (Super Idea) .
ಮೊಬೈಲ್ - ಲ್ಯಾಪ್ಟಾಪ್ ರಿಪೇರಿ ಶಾಪ್!
ಮೊಬೈಲ್-ಲ್ಯಾಪ್ಟಾಪ್ ರಿಪೇರಿ ಕೇಂದ್ರದ ವ್ಯವಹಾರವನ್ನು ಪ್ರಾರಂಭಿಸಿ. ಲ್ಯಾಪ್ಟಾಪ್ ಮತ್ತು ಮೊಬೈಲ್ಗಳು ಇಂದು ಅಗತ್ಯ ವಸ್ತುಗಳಾಗಿವೆ ಎಂದು ತಿಳಿದಿದೆ. ಇಂಟರ್ನೆಟ್ಗೆ ಸುಲಭ ಪ್ರವೇಶದಿಂದಾಗಿ ಆನ್ಲೈನ್ ಸೇವೆಗಳು ಭಾರತದಲ್ಲಿ ವೇಗವಾಗಿ ವಿಸ್ತರಿಸುತ್ತಿವೆ. ಈ ಕಾರಣದಿಂದಲೇ ಆಫೀಸ್ ನಲ್ಲಿ ಸಿಗುತ್ತಿದ್ದ ಲ್ಯಾಪ್ ಟಾಪ್ ಈಗ ಪ್ರತಿ ಮನೆಗೆ ಅನಿವಾರ್ಯವಾಗಿಬಿಟ್ಟಿದೆ. ಲ್ಯಾಪ್ಟಾಪ್ ಮತ್ತು ಮೊಬೈಲ್ಗಳ ಟ್ರೆಂಡ್ ಹೆಚ್ಚಾಗುತ್ತಿದ್ದಂತೆ, ಅವುಗಳನ್ನು ರಿಪೇರಿ ಮಾಡುವ ಬೇಡಿಕೆಯೂ ಹೆಚ್ಚುತ್ತಿದೆ.
ಮೊದಲು ಕೋರ್ಸ್ ಮಾಡುವುದು ಅಗತ್ಯ!
ಈ ವ್ಯಾಪಾರ ಪ್ರಾರಂಭಿಸುವ ಮೊದಲು, ನೀವು ಅವರ ಬಗ್ಗೆ ಎಲ್ಲಾ ಮಾಹಿತಿಯನ್ನು ಹೊಂದಿರಬೇಕು. ಅದಕ್ಕಾಗಿಯೇ ಮೊದಲು ನಿಮಗೆ ಲ್ಯಾಪ್ಟಾಪ್ ಬೇಕು. ಇದಕ್ಕಾಗಿ ಕೆಲವೊಂದು ಕೋರ್ಸ್ ಮಾಡುವುದು ಕಡ್ಡಾಯ. ಏನು ಗೊತ್ತಿಲ್ಲದೇ ಈ ಬ್ಯುಸಿನೆಶ್ ಶುರು ಮಾಡೋದು ತಪ್ಪು. ದೇಶದ ಅನೇಕ ಸಂಸ್ಥೆಗಳು ಈ ಕೋರ್ಸ್ ಅನ್ನು ನೀಡುತ್ತವೆ. ಇದಲ್ಲದೆ, ಲ್ಯಾಪ್ಟಾಪ್, ಮೊಬೈಲ್ ಆನ್ಲೈನ್ನಲ್ಲಿ ರಿಪೇರಿ ಮಾಡುವುದನ್ನು ಕಲಿಯುವ ಆಯ್ಕೆಯೂ ಇದೆ. ಆದರೆ, ಇನ್ಸ್ಟಿಟ್ಯೂಟ್ಗೆ ಹೋಗಿ ಕಲಿತರೆ ಉತ್ತಮ. ಕೋರ್ಸ್ ಮುಗಿದ ನಂತರ ಬೇರೆ ಕಡೆ ಇನ್ನೊಬ್ಬರ ಬಳಿ ಈ ಕೆಲಸ ಸ್ವಲ್ಪ ಸಮಯ ಮಾಡುವುದು ಒಳ್ಳೆಯದು.
ಇದನ್ನೂ ಓದಿ: Jio Recharge App ಡೌನ್ಲೌಡ್ ಮಾಡಿ, ಮನೆಯಲ್ಲೇ ಕೂತು ಸಿಂಪಲ್ಲಾಗಿ ಜೇಬು ತುಂಬಿಸಿಕೊಳ್ಳಿ!
ಲೋಕೇಶನ್ ಪ್ರ,ಮುಖ ಪಾತ್ರ ವಹಿಸುತ್ತದೆ!
ನೀವು ಲ್ಯಾಪ್ಟಾಪ್ ಮತ್ತು ಮೊಬೈಲ್ ರಿಪೇರಿಯನ್ನು ಕರಗತ ಮಾಡಿಕೊಂಡ ನಂತರ ನಿಮ್ಮ ಸ್ವಂತ ಮೊಬೈಲ್ ರಿಪೇರಿ ತೆರೆಯಿರಿ. ಲ್ಯಾಪ್ಟಾಪ್ ರಿಪೇರಿ ಮಾಡುವ ಕೇಂದ್ರಗಳನ್ನು ಜನರು ಸುಲಭವಾಗಿ ತಲುಪುವ ಸ್ಥಳದಲ್ಲಿ ತೆರೆಯಬೇಕು. ಮತ್ತು ಅದೇ ಏರಿಯಾದಲ್ಲಿ ಅಥವಾ ಅದೇ ರೋಡಿನಲ್ಲಿ ಈಗಾಗಲೇ ಹಲವಾರು ಕಂಪ್ಯೂಟರ್ ರಿಪೇರಿ ಕೇಂದ್ರಗಳು ಇರಬಾರದು. ನಿಮ್ಮ ಕೇಂದ್ರವನ್ನು ಪ್ರಚಾರ ಮಾಡಲು ನೀವು ಸಾಮಾಜಿಕ ಮಾಧ್ಯಮದ ಸಹಾಯವನ್ನು ತೆಗೆದುಕೊಳ್ಳಬಹುದು.
ಇದನ್ನೂ ಓದಿ: ಏರ್ಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್; 2 ಅತ್ಯುತ್ತಮ ಡೇಟಾ ಪ್ಲಾನ್ಗಳು ಲಭ್ಯ
ಅಗತ್ಯ ಉಪಕರಣಗಳನ್ನು ಹೊಂದಿರಬೇಕು
ಲ್ಯಾಪ್ಟಾಪ್ ಮತ್ತು ಮೊಬೈಲ್ ರಿಪೇರಿ ಕೇಂದ್ರವನ್ನು ಪ್ರಾರಂಭಿಸುವ ಮೊದಲು ನೀವು ಅಗತ್ಯ ಉಪಕರಣಗಳನ್ನು ಹೊಂದಿರಬೇಕು. ಮೊದಲು ಆ ಪಟ್ಟಿಯನ್ನು ಮಾಡಿ ಖರೀದಿಸಿ. ರಿಪೇರಿ ಸಮಯದಲ್ಲಿ ಬದಲಾಯಿಸಬೇಕಾದ ಸಾಧನಗಳಾದ ಸ್ಪೀಕರ್ಗಳು ಮತ್ತು ಸ್ಕ್ರೀನ್ಗಳನ್ನು ಕಾಲಕಾಲಕ್ಕೆ ಆರ್ಡರ್ ಮಾಡಬಹುದು.
2 ರಿಂದ 4 ಲಕ್ಷ ಇದ್ದರೆ ಸಾಕು!
ಮೊಬೈಲ್ ಹಾಗೂ ಕಂಪ್ಯೂಟರ್, ಲ್ಯಾಪ್ಟಾಪ್ ರೂ. 2 ರಿಂದ 4 ಲಕ್ಷದಿಂದ ಆರಂಭಿಸಬಹುದು. ಆರಂಭದಲ್ಲಿ, ಸಣ್ಣ ವಸ್ತುಗಳನ್ನು ಇರಿಸುವ ಮೂಲಕ ಕೆಲಸವನ್ನು ಮಾಡಬಹುದು. ಕೆಲಸ ಹೆಚ್ಚಾದಂತೆ ಹೂಡಿಕೆಯೂ ಹೆಚ್ಚಾಗಬಹುದು. ರಿಪೇರಿ ಮಾಡುವುದರ ಹೊರತಾಗಿ, ನಂತರ ನೀವು ಲ್ಯಾಪ್ಟಾಪ್ ಮತ್ತು ಮೊಬೈಲ್ಗಳನ್ನು ಮಾರಾಟ ಮಾಡಲು ಪ್ರಾರಂಭಿಸಬಹುದು. ಮೊಬೈಲ್ ಮತ್ತು ಲ್ಯಾಪ್ಟಾಪ್ ರಿಪೇರಿ ಶುಲ್ಕ ತುಂಬಾ ಹೆಚ್ಚಾಗಿದೆ. ಆದ್ದರಿಂದ ನೀವು ಈ ವ್ಯವಹಾರದಿಂದ ಉತ್ತಮ ಹಣವನ್ನು ಗಳಿಸಬಹುದು. ಆರಂಭದಲ್ಲಿ ಈ ವ್ಯವಹಾರದಿಂದ ದಿನಕ್ಕೆ ಸಾವಿರ ರೂಪಾಯಿಗಳನ್ನು ಸುಲಭವಾಗಿ ಉಳಿಸಬಹುದು. ನಿಮ್ಮ ವ್ಯಾಪಾರ ಚೆನ್ನಾಗಿ ಕ್ಲಿಕ್ ಮಾಡಿದರೆ.,ನಿಮ್ಮ ಆದಾಯವೂ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತದೆ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ