• Home
  • »
  • News
  • »
  • business
  • »
  • Business Idea: ಕರ್ನಾಟಕದೆಲ್ಲೆಡೆ ಖರ್ಜೂರದ ಸಿಹಿ ಹಂಚುತ್ತಿರುವ ಆದರ್ಶ ರೈತನ ಯಶಸ್ಸಿನ ಕಥೆಯಿದು!

Business Idea: ಕರ್ನಾಟಕದೆಲ್ಲೆಡೆ ಖರ್ಜೂರದ ಸಿಹಿ ಹಂಚುತ್ತಿರುವ ಆದರ್ಶ ರೈತನ ಯಶಸ್ಸಿನ ಕಥೆಯಿದು!

ಆದರ್ಶ ರೈತ ಚೆನ್ನಪ್ಪ

ಆದರ್ಶ ರೈತ ಚೆನ್ನಪ್ಪ

ದಿವಾಕರ್ ಚೆನ್ನಪ್ಪ ಅವರು ಎಲ್ಲರಂತೆ, ಮಧ್ಯಪ್ರಾಚ್ಯದಿಂದ ಆಮದು ಮಾಡಿಕೊಳ್ಳುವ ಖರ್ಜೂರಗಳು ಉತ್ತಮವೆಂದು ಅನಿಸಿಕೆ ಹೊಂದಿದ್ದರು. ನಿಜಾಮುದ್ದೀನ್ ಅವರ ಮಾತುಗಳಿಂದ ಪ್ರೇರಿತರಾದ ಚೆನ್ನಪ್ಪ ಅವರು ತಮಿಳುನಾಡಿನ ನಿಜಾಮುದ್ದೀನ್ ಅವರ ಜಮೀನಿಗೆ ಭೇಟಿ ನೀಡಿ, ಅಲ್ಲಿನ ಖರ್ಜೂರ ಬೆಳೆಯ ಯಶಸ್ಸನ್ನು ನೋಡಿ ಆಶ್ಚರ್ಯಚಕಿತರಾದರು.

ಮುಂದೆ ಓದಿ ...
  • Share this:

ಬೆಂಗಳೂರು: 'ಸಣ್ಣ ಬೀಜಗಳಿಂದಲೇ ಮುಂದೆ ದೊಡ್ಡ ಮರವಾಗುವುದು' ಎಂಬುದು ಆಫ್ರಿಕಾ (Africa) ದೇಶದ ಪ್ರಸಿದ್ಧ ಗಾದೆಯಾಗಿದೆ. ಇದರರ್ಥ ಮೊದಲು ಯಾವ ಕೆಲಸ (Job) ವನ್ನೆ ಆಗಲಿ, ಅದನ್ನು ಯಾರೇ ಆರಂಭಿಸಿರಲಿ ಅದು ಚಿಕ್ಕದಾಗಿಯೇ ಇರುತ್ತದೆ. ಅವರ ಪರಿಶ್ರಮ, ಬುದ್ಧಿವಂತಿಕೆ ಮತ್ತು ಸಮಯ (Time) ಜಾರಿದಂತೆ ಆ ಕೆಲಸ ಉನ್ನತ ಸ್ಥಾನವನ್ನು ಪಡೆಯುತ್ತದೆ.ಬಹುತೇಕ ಎಲ್ಲಾ ದೊಡ್ಡ ಸಾಧಕರು ಇದೇ ರೀತಿ ತಮ್ಮ ಕೆಲಸ ಅಥವಾ ಸಾಧನೆ (Achievement) ಯನ್ನು ಪ್ರಾರಂಭಿಸುತ್ತಾರೆ ಎಂಬುದು ಸಾರ್ವತ್ರಿಕ ಸತ್ಯ ಎಂದು ಎಲ್ಲರೂ ಆಗಾಗ ಪುನರುಚ್ಚರಿಸುತ್ತಾರೆ.


ಚಿಕ್ಕಬಳ್ಳಾಪುರದ ರೈತ ಸಾಧಕ


ಈಗ ಕರ್ನಾಟಕ (Karnataka) ದ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗೌರಿಬಿದನೂರಿನ ರೈತರೊಬ್ಬರು ಇದಕ್ಕೆ ಸಾಕ್ಷಿಯೆಂಬಂತೆ ಸಾಧನೆ ಮಾಡಿದ್ದಾರೆ. ಎರಡು ದಶಕಗಳ ಹಿಂದೆ, ದಕ್ಷಿಣ ಭಾರತದಲ್ಲಿ ಖರ್ಜೂರ ಬೆಳೆಯುವ ಸಾಮರ್ಥ್ಯದ ಬಗ್ಗೆ ಧರ್ಮಪುರಿ ಮೂಲದ ರೈತ ನಿಜಾಮುದ್ದೀನ್ ಅವರು ಬೆಂಗಳೂರಿನಲ್ಲಿ ನಡೆದ ಜಿಕೆವಿಕೆ ಕೃಷಿ ಮೇಳದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ಮೇಳದಲ್ಲಿ ಭಾಗವಹಿಸಿದ್ದ 44 ವರ್ಷದ ರೈತ ದಿವಾಕರ್ ಚೆನ್ನಪ್ಪ ಅವರ ಮಾತಿನಿಂದ ಸಾಕಷ್ಟು ಪ್ರೇರಣೆ ಪಡೆದಿದ್ದರು.


ಖರ್ಜೂರ ಬೆಳೆದು ಯಶಸ್ಸು ಕಂಡ ರೈತ!


ಅಲ್ಲಿಯವರೆಗೆ, ದಿವಾಕರ್ ಚೆನ್ನಪ್ಪ ಅವರು ಎಲ್ಲರಂತೆ, ಮಧ್ಯಪ್ರಾಚ್ಯದಿಂದ ಆಮದು ಮಾಡಿಕೊಳ್ಳುವ ಖರ್ಜೂರಗಳು ಉತ್ತಮವೆಂದು ಅನಿಸಿಕೆ ಹೊಂದಿದ್ದರು. ನಿಜಾಮುದ್ದೀನ್ ಅವರ ಮಾತುಗಳಿಂದ ಪ್ರೇರಿತರಾದ ಚೆನ್ನಪ್ಪ ಅವರು ತಮಿಳುನಾಡಿನ ನಿಜಾಮುದ್ದೀನ್ ಅವರ ಜಮೀನಿಗೆ ಭೇಟಿ ನೀಡಿ, ಅಲ್ಲಿನ ಖರ್ಜೂರ ಬೆಳೆಯ ಯಶಸ್ಸನ್ನು ನೋಡಿ ಆಶ್ಚರ್ಯಚಕಿತರಾದರು.


“ಆಗ ನಾನು ಅಂಗಾಂಶ ಕೃಷಿ ಮಾಡಿದ 150 ಖರ್ಜೂರದ ಬೀಜಗಳನ್ನು ತಂದು ಗೌರಿಬಿದನೂರಿನ ಮುದಗನಕುಂಟೆಯಲ್ಲಿ ನನ್ನ ಎರಡು ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿದೆ. ಇಲ್ಲಿನ ಹವಾಮಾನ ಮತ್ತು ಮಣ್ಣಿನ ಪರಿಸ್ಥಿತಿಗಳು ಖರ್ಜೂರ ಬೆಳೆಯನ್ನು ಬೆಳೆಯುವುದಕ್ಕೆ ತುಂಬಾ ಹೋಲುತ್ತವೆ" ಎಂದು ದಿವಾಕರ್ ಚೆನ್ನಪ್ಪ ಹೇಳಿದರು.


ವರ್ಪಕ್ಕೆ 5 ಟನ್ ಖರ್ಜೂರ ಬೆಳೆಯುವ ಸಿಹಿಗಾರ


"ನನ್ನ ಮೊದಲ ಬೆಳೆಯನ್ನು ಪಡೆಯಲು ನನಗೆ ಸತತವಾಗಿ ನಾಲ್ಕು ವರ್ಷಗಳಷ್ಟು ಸಮಯ ಹಿಡಿಯಿತು. ಆರಂಭಿಕ ಕೊಯ್ಲು ಸುಮಾರು 800-1,000 ಕೆಜಿ ಇತ್ತು. ಆದರೆ ಈಗ ನಾನು ವಾರ್ಷಿಕವಾಗಿ 5 ಟನ್‌ಗಳಷ್ಟು ಖರ್ಜೂರಗಳನ್ನು ಬೆಳೆಯುತ್ತಿದ್ದೇನೆ" ಎಂದು ಅವರು ಸುದ್ದಿ ಮಾಧ್ಯಮ ದಿ ನ್ಯೂ ಸಂಡೇ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.


ಚೆನ್ನಪ್ಪ ಅವರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಅಥವಾ ಅಂಗಡಿಗಳಲ್ಲಿ ಮಾರುವುದಿಲ್ಲ. ಬದಲಾಗಿ, ಅವರು ಆಗಸ್ಟ್ ಮತ್ತು ಸೆಪ್ಟೆಂಬರ್ ನಡುವೆ ಎರಡು ಬಾರಿ ಸುಗ್ಗಿ ಹಬ್ಬಗಳನ್ನು ನಡೆಸುತ್ತಾರೆ. ಇದಕ್ಕೆ ಆಸಕ್ತಿ ಇರುವ ರೈತರಿಗೆ ಆಹ್ವಾನವನ್ನು ಸಹ ನೀಡುತ್ತಾರೆ .ಇವರು ಆರ್ಡರ್‌ಗಳ ಪ್ರಮಾಣವನ್ನು ಆಧರಿಸಿ ಬೆಂಗಳೂರಿನಲ್ಲಿರುವ ಗ್ರಾಹಕರ ಮನೆಗೂ ಖರ್ಜೂರವನ್ನು ತಲುಪಿಸುವ ಕೆಲಸ ಮಾಡುತ್ತಾರೆ.


ಇದನ್ನೂ ಓದಿ: ಈ ಆರೋಗ್ಯಕರ ಪದಾರ್ಥ ಬೆಳೆಯಿರಿ, ತಿಂಗಳಿಗೆ ಲಕ್ಷ ಲಕ್ಷ ಗಳಿಸಿ!


ಇವರು ಖರ್ಜೂರದ ಅಂಗಾಂಶದಲ್ಲಿ ಬೆಳೆಸಿದ ಸಸ್ಯವನ್ನು ಖರೀದಿಸುವಾಗ ಉತ್ತಮ ಗುಣಮಟ್ಟದ ಔಷಧಗಳು ಮತ್ತು ರಸಗೊಬ್ಬರಗಳನ್ನು ಬಳಸಲು ನಿಜಾಮುದ್ದೀನ್ ಹೇಳಿದರು.


ಸಾವಯವ ಕೃಷಿ ಪದ್ಧತಿಯೇ ಇವರ ಜೀವಾಳ


ಆದರೆ ಚೆನ್ನಪ್ಪ ತನ್ನ ಪ್ರವೃತ್ತಿಯನ್ನು ನಂಬಿ ಸಾವಯವ ಔಷಧಗಳನ್ನು ಸ್ವಂತವಾಗಿ ಉತ್ಪಾದಿಸಲು ಪ್ರಾರಂಭಿಸಿದನು ಮತ್ತು ಅದು ಸಮೃದ್ಧ ಲಾಭಾಂಶವನ್ನು ಈಗ ನೀಡಿದೆ ಎಂದು ಚೆನ್ನಪ್ಪ ಅವರೇ ಹೇಳುತ್ತಾರೆ.ಅವರು ಬೇವು, ಬೆಳ್ಳುಳ್ಳಿ ಮತ್ತು ಇತರ ಗಿಡಮೂಲಿಕೆಗಳಂತಹ ಸಾವಯವ ದ್ರಾವಣಗಳನ್ನು ಮಾತ್ರ ಖರ್ಜೂರದ ಬೆಳೆಗೆ ಸಿಂಪಡಿಸುತ್ತಾರೆ.ಇವರು ಧೂಳು ತೆಗೆಯುವ ವಿಧಾನದ ಮೂಲಕ ಸಸ್ಯಗಳನ್ನು ಪರಾಗಸ್ಪರ್ಶ ಕ್ರಿಯೆಗೆ ಒಳಗಾಗುವಾಗೆ ಮಾಡುತ್ತಾರೆ. ಇದು ಈಗ ಕೃಷಿಯಲ್ಲಿ ಅತ್ಯಂತ ಬೇಡಿಕೆ ಇರುವ ಕೆಲಸ ಎಂದರೆ ಅತಿಶೋಕ್ತಿಯಲ್ಲ.‘


ಕೈ ತುಂಬಾ ಆದಾಯ ಕೂಡ ಸಿಗುತ್ತಿದೆ!


ಈ ಪ್ರಕ್ರಿಯೆ ಮುಗಿದ ನಂತರ, ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಖರ್ಜೂರ ಹಣ್ಣುಗಳನ್ನು ನಿರೀಕ್ಷಿಸಬಹುದು ಮತ್ತು ಅವು ಕೊಯ್ಲಿಗೆ ಸಿದ್ಧವಾಗಿರುತ್ತವೆ.“ನಾನು ಸುಗ್ಗಿಯ ಹಬ್ಬಗಳಲ್ಲಿ ನನ್ನ ಕೃಷಿ ಭೂಮಿಗೆ ಭೇಟಿ ನೀಡಲು ಜನರನ್ನು ಸಂಪರ್ಕಿಸುತ್ತೇನೆ. ಸುಮಾರು 300 ರಿಂದ 400 ಜನರು ಬಂದು ಖರ್ಜೂರವನ್ನು ಖರೀದಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ ಕೆ.ಜಿ.ಗೆ 310 ರೂ.ಗೆ ಖರ್ಜೂರವನ್ನು ಮಾರುತ್ತೆನೆ " ಎನ್ನುತ್ತಾರೆ ಚೆನ್ನಪ್ಪ.


ಇದನ್ನೂ ಓದಿ: ಹೂಡಿಕೆ ಕಮ್ಮಿ-ಲಾಭ ಹೆವ್ವಿ! ಜನಸಾಮಾನ್ಯರಿಗೆ ಹೇಳಿ ಮಾಡಿಸಿದ ಬ್ಯುಸಿನೆಸ್​ ಇದು


ಒಂದು ವೇಳೆ, ನಾನು ಬೆಂಗಳೂರಿನಿಂದ ಬಲ್ಕ್ ಡೆಲಿವರಿ ಆರ್ಡರ್‌ಗಳನ್ನು ಪಡೆದರೆ, ನಾನು ಕೆ.ಜಿ.ಗೆ 350 ರೂಪಾಯಿಗಳನ್ನು ತೆಗೆದುಕೊಳ್ಳುತ್ತೇನೆ. ನಾನು ಗೇಟೆಡ್ ಸಮುದಾಯಗಳು ಅಥವಾ ದೊಡ್ಡ ದೊಡ್ಡ ಅಪಾರ್ಟ್ಮೆಂಟ್ ಖರ್ಜೂರಗಳನ್ನು ತಲುಪಿಸುತ್ತೇನೆ. ನಾನು ಮಧ್ಯವರ್ತಿಗಳ ಮೇಲೆ ಅವಲಂಬಿತವಾಗಿಲ್ಲ ಏಕೆಂದರೆ ನಾನು ಕೆ.ಜಿ.ಗೆ ಕೇವಲ 180 ರೂಪಾಯಿಗಳಷ್ಟು ಮಾತ್ರ ಲಾಭ ಗಳಿಸುತ್ತೇನೆ. ಮಧ್ಯವರ್ತಿಗಳು ಏನೂ ಮಾಡದೆ ಅದೇ ಮೊತ್ತವನ್ನು ಕೇಳುತ್ತಾರೆ. ಆಗ ನಮಗೆ ನಷ್ಟವಾಗುತ್ತದೆ"ಎಂದು ಚೆನ್ನಪ್ಪ ಹೇಳಿದರು.

Published by:ವಾಸುದೇವ್ ಎಂ
First published: