Business Idea: ನಾನ್​ ವೆಜ್​ ಪ್ರೇಮಿಗಳ ಫೇವರೇಟ್ ಫುಡ್​​ ಇದು! ಈ ಉದ್ಯಮ ಆರಂಭಿಸಿ, ಲಕ್ಷ ಲಕ್ಷ ಗಳಿಸಿ

ಸರ್ಕಾರದಿಂದ ಈ ರೀತಿಯ ವ್ಯಾಪಾರ ಆರಂಭಿಸಲು ಅನುದಾನ ಕೂಡ ಕೊಡುತ್ತವೆ. ಇವೆಲ್ಲದರ ಲಾಭ ಪಡೆದು ರೈತರು ಗ್ರಾಮೀಣ ಭಾಗದ ಸೀಗಡಿ ಉತ್ಪಾದನೆಯನ್ನು ತೆಗೆದುಕೊಂಡು ಈ ಉದ್ಯಮ ಆರಂಭಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕ ಲಾಭ ಪಡೆಯಲು ಸಾಧ್ಯ.

ಸಾಂದರ್ಭಿ ಚಿತ್ರ

ಸಾಂದರ್ಭಿ ಚಿತ್ರ

  • Share this:
ದುಡ್ಡು ಮಾಡುವುದಕ್ಕೆ ಸಾವಿರಾರು ದಾರಿಗಳಿವೆ. ಆದರೆ ಯಾವತ್ತೂ ಒಳ್ಳೆಯ ದಾರಿಯಲ್ಲಿ ಮಾಡಿದ ಹಣವೇ ಕೊನೆವರೆಗೂ ಇರುತ್ತೆ. ಹೀಗೆ ಕೊರೋನಾ (Corona) ಬಂದು ಹೋದಮೇಲೆ ಅದೆಷ್ಟೋ ಮಂದಿ ಹಣ ಇಲ್ಲದೆ ಪರದಾಡುತ್ತಿದ್ದಾರೆ. ದೊಡ್ಡ ದೊಡ್ಡವರ ಉದ್ಯೋಗಳೇ ನೆಲಕಚ್ಚಿವೆ.  ಏನಾದರೂ ಬ್ಯುಸಿನೆಸ್ (Business)​​ ಮಾಡೋಣ ಎಂದುಕೊಂಡರೆ ಎಲ್ಲಿ ಲಾಸ್ (Loss)​ ಆಗುತ್ತೋ ಅನ್ನುವ ಭಯದಲ್ಲಿದ್ದಾರೆ. ಇನ್ನು ಕೆಲವರಿಗೆ ದುಡ್ಡು ಇದ್ದರೂ ತಲೆಯಲ್ಲಿ ಐಡಿಯಾ(Idea) ಇರೋದಿಲ್ಲ. ಇನ್ನೂ ಕೆಲವರಿಗೆ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭಗಳಿಸುವ ಆಸೆಯನ್ನು ಹೊಂದಿರುತ್ತಾರೆ. ನೀವು ಇಲ್ಲಿ ಇಂದು ನಾವು ಹೇಳುತ್ತಿರುವ ಬ್ಯುಸಿನೆಸ್​ ಮಾಡಿ, ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದಿಸಬಹುದು.

ಕೃಷಿ ಜೊತೆ ಜಂಟಿ ಉದ್ಯಮ ಆರಂಭಿಸಿ!

ಕೃಷಿ ನಂಬಿದವರು ಎಂದಿಗೂ ಹಸಿದುಕೊಂಡು ಮಲಗುವುದಿಲ್ಲ. ಯಾಕೆಂದರೆ ಭೂಮಿ ತಾಯಿ ತನ್ನ ಮಕ್ಕಳನ್ನು ಹಸಿದು ಮಲಗಲು ಬಿಡುವುದಿಲ್ಲ. ಇದೀಗ ಎಲ್ಲ ಯುವಕರು ನಿಧಾನವಾಗಿ ಕೃಷಿಗಳತ್ತ ಗಮನ ಹರಿಸುತ್ತಿದ್ದಾರೆ. ಕೃಷಿ ಜೊತೆಗೆ ಜಂಟಿ ಉದ್ಯಮ ಮಾಡುವುದರಿಂದ ಹೆಚ್ಚಿನ ಲಾಭವನ್ನು ರೈತರು ಪಡೆಯಬಹುದು. ದೇಶದಲ್ಲಿ ಕೃಷಿ ಮೀನು ಸಾಕಾಣಿಕೆ ವ್ಯಾಪಾರ ಈಗ ದಿನದಿಂದ ದಿನಕ್ಕೆ ವೇಗ ಪಡೆಯುತ್ತಿದೆ. ನಮಗೆ ತಿಳಿದಿರುವಂತೆ, ಹಲವಾರು ರೀತಿಯ ಮೀನು ಸಾಕಣೆ ವಿಧಾನಗಳಿವೆ ಮತ್ತು ವಿವಿಧ ಜಾತಿಯ ಮೀನುಗಳನ್ನು ಸಾಕಾಣಿಕೆ ಮಾಡಲಾಗುತ್ತಿದೆ.

ಸಿಗಡಿ ಮೀನು ಉದ್ಯಮ ಆರಂಭಿಸಿ!

ಮೀನುಗಾರಿಕೆ ವ್ಯವಹಾರವನ್ನು ಉತ್ತೇಜಿಸಲು ಸರ್ಕಾರದ ಮಟ್ಟದಲ್ಲಿ ವಿವಿಧ ಯೋಜನೆಗಳಿವೆ. ಸರ್ಕಾರದಿಂದ ಈ ರೀತಿಯ ವ್ಯಾಪಾರ ಆರಂಭಿಸಲು ಅನುದಾನ ಕೂಡ ಕೊಡುತ್ತವೆ. ಇವೆಲ್ಲದರ ಲಾಭ ಪಡೆದು ರೈತರು ಗ್ರಾಮೀಣ ಭಾಗದ ಸೀಗಡಿ ಉತ್ಪಾದನೆಯನ್ನು ತೆಗೆದುಕೊಂಡು ಈ ಉದ್ಯಮ ಆರಂಭಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕ ಲಾಭ ಪಡೆಯಲು ಸಾಧ್ಯ. ಸಿಗಡಿ ಕೃಷಿ ಅಥವಾ ಸಾಕಣೆಗೆ ಸಮುದ್ರದ ಉಪ್ಪು ನೀರಿನ ಅಗತ್ಯವಿತ್ತು. ಆದರೆ ವರ್ಷಗಳಲ್ಲಿ ಕೆಲವು ತಾಂತ್ರಿಕ ಅಭಿವೃದ್ಧಿ ಮತ್ತು ಕೃಷಿ ಕ್ಷೇತ್ರದಲ್ಲಿ ಸಂಶೋಧನೆಗಳೊಂದಿಗೆ, ಈಗ ತಾಜಾ ನೀರಿನಲ್ಲಿಯೂ ಸೀಗಡಿಗಳನ್ನು ಸಾಕಲು ಸಾಧ್ಯವಿದೆ.

ಇದನ್ನೂ ಓದಿ: ಕಡಿಮೆ ವೆಚ್ಚ, ಹೆಚ್ಚು ಲಾಭ! ಹಬ್ಬದ ಸೀಸನ್​ಗೆ ಶುರು ಮಾಡೋ ಬೆಸ್ಟ್​ ಬ್ಯುಸಿನೆಸ್​ ಇದು

ಕೊಳದ ವ್ಯವಸ್ಥೆ ಮಾಡಿದ್ರೆ ಸಾಕು!

ಈಗೆಲ್ಲಾ ಟೆಕ್ನಾಲಜಿ ಮುಂದುವರೆದಿದೆ. ಮೊದಲು ಸಮುದ್ರ ನೀರಿನಲ್ಲಿ ಸಿಗಡಿ ಮೀನು ಬೆಳೆಯಲಾಗುತ್ತಿತ್ತು. ಆದರೆ, ಈಗ  ನೀವು ಸೀಗಡಿ ಸಾಕಣೆಯನ್ನು ಪ್ರಾರಂಭಿಸಲು ಬಯಸಿದರೆ,  ಸರಿಯಾದ ಕೊಳ ಮತ್ತು ಆ ಕೊಳದ ಸ್ಥಳವನ್ನು ಸೆಲೆಕ್ಟ್ ಮಾಡುವುದು. ಈಗ ಕೆರೆ ಮಾಡುವಾಗ ಮಣ್ಣು, ಕೋಳಿಮಣ್ಣಾಗಿರಬೇಕು. ಸದಾ ಕೆರೆಯಲ್ಲಿನ ನೀರು ಸ್ವಚ್ಛವಾಗಿರಬೇಕು. ಮಾಲಿನ್ಯ ಮುಕ್ತವಾಗಿರಬೇಕು. ಮಣ್ಣಿನ ವಿಷಯಕ್ಕೆ ಬಂದರೆ, ಕ್ಲೋರೈಡ್​​ಗಳು, ಸಲ್ಫೇಟ್​​ಗಳು ಮತ್ತು ಕಾರ್ಬೋನೇಟ್​​ಗಳಂತಹ ಹಾನಿಕಾರಕ ಅಂಶಗಳಿಂದ ಮುಕ್ತವಾಗಿರಬೇಕು.

ಇದನ್ನೂ ಓದಿ: ಪ್ರತಿ ಮನೆಯಲ್ಲೂ ಇದಕ್ಕಿದೆ ಡಿಮ್ಯಾಂಡ್​! ಈ ಬ್ಯುಸಿನೆಸ್​ ಮಾಡಿದ್ರೆ ಪಕ್ಕಾ ಕ್ಲಿಕ್​ ಆಗುತ್ತೆ ಗುರೂ

ಕೊಳಗಳಲ್ಲಿನ ನೀರಿನ ಪಿಹೆಚ್ ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶ. ಆ ನೀರಿನ ಪಿಹೆಚ್ ಮೌಲ್ಯವನ್ನು ಕಾಪಾಡಿಕೊಳ್ಳಲು ಸುಣ್ಣವನ್ನು ಬಳಸಬೇಕು. ಕೆರೆ ತುಂಬಿಸಲು ಹಾಗೂ ನೀರು ಹರಿಸಲು ಸೂಕ್ತ ವ್ಯವಸ್ಥೆ ಮಾಡುವುದೂ ಅಗತ್ಯ. ಇದಕ್ಕಾಗಿ ನರ್ಸರಿಯಲ್ಲಿ 20 ಸಾವಿರ ಮೀನಿನ ಬೀಜಗಳ ಅಗತ್ಯವಿದೆ. ಇದರ ಕೊಯ್ಲಿಗೆ ಏಪ್ರಿಲ್ ಮತ್ತು ಜುಲೈ ತಿಂಗಳುಗಳು ಸೂಕ್ತವಾಗಿದ್ದು, ಇದಕ್ಕಾಗಿ ಕೊಳದಲ್ಲಿನ ನರ್ಸರಿಯನ್ನು ಮೊದಲು ಸೀಗಡಿ ಸಾಕಣೆಗೆ ಸಿದ್ಧಪಡಿಸಲಾಗುತ್ತದೆ.

ಒಂದು ಎಕರೆ ನೀರಿಗೆ ಮೂರು ಲಕ್ಷ ಲಾಭ!

ನೀವು ಕೊಳಗಳಿಗೆ ಹಾಕುವ ಸೀಗಡಿಗಳಲ್ಲಿ ಕೇವಲ 50 ರಿಂದ 70 ಪ್ರತಿಶತದಷ್ಟು ಮಾತ್ರ ಬದುಕುಳಿಯುತ್ತದೆ. ಸುಮಾರು ಐದರಿಂದ ಆರು ತಿಂಗಳ ಅವಧಿಯ ನಂತರ ಸರಿಯಾಗಿ ಅಭಿವೃದ್ಧಿಯಾಗುತ್ತೆ.ಒಂದು ಎಕರೆ ನೀರಿಗೆ ಸುಲಭವಾಗಿ ಎರಡರಿಂದ ಮೂರು ಲಕ್ಷ ಲಾಭ ಸಿಗುತ್ತದೆ ಎಂಬುದು ಕೃಷಿ ತಜ್ಞರ ಅಭಿಪ್ರಾಯ.
Published by:Vasudeva M
First published: