• Home
  • »
  • News
  • »
  • business
  • »
  • Business Idea: ಕೆಲಸದ ಜೊತೆ ಕೃಷಿ ಆರಂಭಿಸಿ ಗೆದ್ದ ರೈತ, ದುಡ್ಡು ಮಾಡೋದು ಹೇಗೆ ಅಂತ ಇವ್ರನ್ನು ನೋಡಿ ಕಲಿತುಕೊಳ್ಳಿ!

Business Idea: ಕೆಲಸದ ಜೊತೆ ಕೃಷಿ ಆರಂಭಿಸಿ ಗೆದ್ದ ರೈತ, ದುಡ್ಡು ಮಾಡೋದು ಹೇಗೆ ಅಂತ ಇವ್ರನ್ನು ನೋಡಿ ಕಲಿತುಕೊಳ್ಳಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರಿ (Bengaluru) ನಲ್ಲಿ ಸಿಸ್ಟಂ ಆರ್ಕಿಟೆಕ್ಟ್ (System Architect) ಆಗಿ ಕೆಲಸ ಮಾಡುತ್ತಿರುವ ಎಝೆಕಿಯೆಲ್ ಪೌಲೋಸ್, ಕೃಷಿ (Agriculture) ಕುಟುಂಬದಿಂದ ಬಂದವರು

  • Share this:

ವೃತ್ತಿಯಲ್ಲಿ ಎಂಜಿನಿಯರ್‌ (Engineer) ಆಗಿರುವ ಕೇರಳ (Kerala) ದ ಎಝೆಕಿಯೆಲ್ ಪೌಲೋಸ್ (Ezekiel Poulose) ಅವರು 4 ಎಕರೆ ಭೂಮಿಯಲ್ಲಿ ನೂರಾರು ಬಗೆಯ ಅಪರೂಪದ ಔಷಧೀಯ ಸಸ್ಯ (Medicinal Plant) ಗಳನ್ನು ಬೆಳೆದು ಸೈ ಎನಿಸಿಕೊಂಡಿದ್ದಾರೆ. ಹೌದು.. ಬೆಂಗಳೂರಿ (Bengaluru) ನಲ್ಲಿ ಸಿಸ್ಟಂ ಆರ್ಕಿಟೆಕ್ಟ್ (System Architect) ಆಗಿ ಕೆಲಸ ಮಾಡುತ್ತಿರುವ ಎಝೆಕಿಯೆಲ್ ಪೌಲೋಸ್, ಕೃಷಿ (Agriculture) ಕುಟುಂಬದಿಂದ ಬಂದವರು. ಅವರ ಪೂರ್ವಜರು ಕೃಷಿಕರಾಗಿದ್ದರು. ತಮಗೆ ಕೃಷಿಯಲ್ಲಿ ಅದರಲ್ಲೂ ಔಷಧೀಯ ಸಸ್ಯಗಳ ಕೃಷಿಯಲ್ಲಿ ಆಸಕ್ತಿ ಮೂಡಲು ತಮ್ಮ ತಂದೆಯೇ ಕಾರಣ ಎನ್ನುತ್ತಾರೆ ಪೌಲೋಸ್.


ಓದಿದ್ದು ಎಂಜಿನಿಯರ್​, ಆಗಿರೋದು ಬೇರೆ!


ನನ್ನ ತಂದೆ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದರು, ಆದರೆ ಕೃಷಿಯನ್ನು ತುಂಬಾ ಪ್ರೀತಿಸುತ್ತಿದ್ದರು. ಅವರು ಮೊದಲು ಔಷಧೀಯ ಸಸ್ಯಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು. ಹೀಗಾಗಿಯೇ ನನಗೂ ಆಸಕ್ತಿ ಮೂಡಿತು’ ಎಂದು ಪೌಲೋಸ್ ಹೇಳುತ್ತಾರೆ.


4 ಎಕರೆ ಜಮೀನಿನಲ್ಲಿ 500 ಪ್ರಬೇಧ!


ಪೌಲೋಸ್ ಅವರ ಮನೆಯ ಸಮೀಪವಿರುವ ನಾಲ್ಕು ಎಕರೆ ಜಮೀನಿನಲ್ಲಿ ಔಷಧೀಯ ಗಿಡಮೂಲಿಕೆಗಳ ಉದ್ಯಾನ ನಿರ್ಮಿಸಲಾಗಿದೆ. ಇಲ್ಲಿ ರುದ್ರಾಕ್ಷ, ಪಾರಿಜಾತ, ಕ್ಲಸ್ಟರ್ ಅಂಜೂರ, ಗುರ್ಮಾರ್, ಲಕ್ಷ್ಮಿ ತಾರು ಮತ್ತು ಬೆಟಾಡಿನ್ ಸಸ್ಯಗಳು ಸೇರಿದಂತೆ 500 ಪ್ರಭೇದಗಳಿವೆ. ಅವರ ತೋಟದಲ್ಲಿರುವ ಇತರ ಸಸ್ಯಗಳಲ್ಲಿ ಶ್ರೀಲಂಕಾದ ಶಿಂಶಾಪಾ ಕೂಡ ಸೇರಿವೆ.


ಸಸ್ಯಗಳ ಜೊತೆ ಮೀನು, ಕೋಳಿ ಸಾಕಾಣೆ!


ಔಷಧೀಯ ಸಸ್ಯಗಳ ಹೊರತಾಗಿ, ಬಾತುಕೋಳಿ, ಕಪ್ಪು ಕೋಳಿ ಮತ್ತು ಮೀನು ಸಾಕಣೆಯನ್ನೂ ಅವರು ಮಾಡುತ್ತಾರೆ. “ನಾನು ಒಂದೇ ಸ್ಥಳದಲ್ಲಿ ಜಾನುವಾರು, ಕೋಳಿ ಮತ್ತು ಮೀನುಗಳ ನಿರ್ವಹಣೆಯ ಸಮಗ್ರ ಕೃಷಿ ವಿಧಾನವನ್ನು ಅಭ್ಯಾಸ ಮಾಡುತ್ತಿದ್ದೇನೆ. ಒಬ್ಬರ ಮಲಮೂತ್ರ ಮತ್ತೊಬ್ಬರ ಆಹಾರವಾಗುತ್ತದೆ. ಉದಾಹರಣೆಗೆ, ಮೀನುಗಳನ್ನು 1,45,000 ಲೀಟರ್ ಟ್ಯಾಂಕ್‌ನಲ್ಲಿ ಇರಿಸಲಾಗುತ್ತದೆ. ಇದರಿಂದ ಕೆಸರು ಸಂಗ್ರಹಿಸಲಾಗುತ್ತದೆ ಬಾತುಕೋಳಿಗಳು ಮತ್ತು ಕಪ್ಪು ಕೋಳಿಗಳಿಗೆ ಆಹಾರವಾಗಿ ಬಳಸಲಾಗುತ್ತದೆ ” ಎಂದು ಅವರು ವಿವರಿಸುತ್ತಾರೆ.


ಇದನ್ನೂ ಓದಿ: ನಿಮ್ಗೆ ರುಚಿ ರುಚಿಯಾಗಿ ಅಡುಗೆ ಮಾಡೋಕೆ ಬರುತ್ತಾ? ಹಾಗಿದ್ರೆ ಇಲ್ಲಿದೆ ನೋಡಿ ಸುವರ್ಣಾವಕಾಶ!


ಅಲ್ಲದೇ, ಕೇರಳದ ಪೌಲೋಸ್ ಅವರ ಮನೆಯಲ್ಲಿ ಮಳೆನೀರು ಕೊಯ್ಲು ಮತ್ತು ಸೌರ ಫಲಕಗಳನ್ನು ಅಳವಡಿಸಲಾಗಿದೆ. ಇದು ಕುಟುಂಬದ ಸಂಪೂರ್ಣ ನೀರು ಮತ್ತು ವಿದ್ಯುತ್ ಅಗತ್ಯಗಳನ್ನು ನೋಡಿಕೊಳ್ಳುತ್ತದೆ.


ಇವರು ಔಷಧಿ ಮನುಷ್ಯ!


2007-2008ರ ಅವಧಿಯಲ್ಲಿ ಎಳೆಕಿಯೆಲ್ ತನ್ನ ಔಷಧೀಯ ಗಿಡಮೂಲಿಕೆಗಳ ಸಂಗ್ರಹವನ್ನು ಪ್ರಾರಂಭಿಸಿದರು. “ಈ ಹವ್ಯಾಸಕ್ಕೆ ಶ್ರಮ ಮತ್ತು ಹೆಚ್ಚಿನ ಹಣದ ಅಗತ್ಯವಿದೆ. ನನ್ನ ಕೆಲಸದ ಭಾಗವಾಗಿ ದೇಶ ಸುತ್ತುತ್ತಿದ್ದಾಗ ನಾನು, ಸಸ್ಯ ಸಂಗ್ರಹವನ್ನು ಗಂಭೀರವಾಗಿ ತೆಗೆದುಕೊಂಡೆ ಎನ್ನುತ್ತಾರೆ 39 ವರ್ಷ ವಯಸ್ಸಿನ ಎಝೆಕಿಯೆಲ್.‌


ಕರ್ನಾಟಕ ಹಾಗೂ ಉತ್ತರ ರಾಜ್ಯಗಳ ಎಳೆಕಿಯೆಲ್‌ ನ ಕೆಲ ಸ್ನೇಹಿತರು ಅಪರೂಪದ ಸಸ್ಯಗಳನ್ನು ಹುಡುಕಲು ಮತ್ತು ಅವುಗಳನ್ನು ಕಳುಹಿಸಲು ಸಹಾಯ ಮಾಡುತ್ತಾರೆ. "ಜನರು ಯಾವುದೇ ಸಸ್ಯ ಅಥವಾ ಔಷಧಿಗಳನ್ನು ಹುಡುಕಲು ನನ್ನ ತೋಟಕ್ಕೆ ಭೇಟಿ ನೀಡಿದಾಗ, ಲಭ್ಯತೆಯ ಆಧಾರದ ಮೇಲೆ ನಾನು ಅವುಗಳನ್ನು ಮಾರಾಟ ಮಾಡುತ್ತೇನೆ ಅಥವಾ ಉಚಿತವಾಗಿ ನೀಡುತ್ತೇನೆ" ಎಂದು ಅವರು ಹೇಳುತ್ತಾರೆ.


ಇದನ್ನೂ ಓದಿ: ಹಳ್ಳಿಗಳಲ್ಲಿ ಆಧಾರ್‌ ತಿದ್ದುಪಡಿ ಈಗ ಇನ್ನಷ್ಟು ಸುಲಭ!


ಅಂದಹಾಗೆ ಎಳೆಕಿಯೆಲ್‌, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರತಿ ವಾರಾಂತ್ಯದಲ್ಲಿ ಎರ್ನಾಕುಲಂನಲ್ಲಿರುವ ತಮ್ಮ ಮನೆಗೆ ಭೇಟಿ ನೀಡಿ ಗಿಡಗಳು ಚೆನ್ನಾಗಿವೆ ಎಂದು ಖಚಿತಪಡಿಸಿಕೊಳ್ಳುತ್ತಿದ್ದರು. ಲಾಕ್‌ಡೌನ್ ಬಳಿಕ ವರ್ಕ್‌ ಫ್ರಂ ಹೋಮ್‌ ನಿಂದಾಗಿ ಸಸ್ಯಗಳನ್ನು ನೋಡಿಕೊಳ್ಳಲು ಹೆಚ್ಚಿನ ಸಮಯ ಸಿಗುತ್ತಿದೆ ಎನ್ನುವ ಎಮ್ಮಕಿಯೆಲ್‌ ತಮ್ಮ ಕುಟುಂಬವೂ ಈ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ ಎನ್ನುತ್ತಾರೆ.


ಇಂತಹ ಸಸ್ಯಗಳ ಅಪರೂಪದ ತಳಿಗಳು ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಅವುಗಳನ್ನು ಸಂರಕ್ಷಿಸುವುದು ಅತ್ಯಗತ್ಯ ಎಂಬುದು ಅವರ ಅಭಿಪ್ರಾಯ.


ʼಹರ್ಬಲ್ ಹೋಮ್‌ಸ್ಟೇ’ ಕನಸು


ಇನ್ನು, ತಮ್ಮ ಪೂರ್ವಜರ ಮನೆ ಮತ್ತು ಅದರ ಸುತ್ತಲಿನ ಉದ್ಯಾನವನ್ನು ‘ಹರ್ಬಲ್ ಹೋಮ್‌ಸ್ಟೇ’ ಆಗಿ ಪರಿವರ್ತಿಸುವುದು ಎಳೆಕಿಯೆಲ್‌ ಅವರ ಕನಸು. "ನಾನು ಇದನ್ನು ನಗರ ಜೀವನದಿಂದ ಪರಿಪೂರ್ಣವಾದ ವಿರಾಮದ ಸ್ಥಳವನ್ನಾಗಿ ವಿನ್ಯಾಸಗೊಳಿಸಲು ಯೋಜಿಸುತ್ತಿದ್ದೇನೆ. ಈ ಎಲ್ಲಾ ಔಷಧೀಯ ಸಸ್ಯಗಳ ಉಪಸ್ಥಿತಿಯು ಒಂದು ರೀತಿಯ ದೇಹದಲ್ಲಿನ ಕೆಟ್ಟದ್ದನ್ನು ಹೊರಹಾಕಲು ಡಿಟಾಕ್ಸ್‌ ನಂತೆ ಕೆಲಸ ಮಾಡುತ್ತದೆ. ಇದು ಇಂದಿನ ದಿನಗಳಲ್ಲಿ ಹೆಚ್ಚು ಅಗತ್ಯವಿದೆ" ಎನ್ನುತ್ತಾರೆ ಎಝೆಕಿಯೆಲ್ ಪೌಲೋಸ್.


ಇನ್ನು, 1,000 ಔಷಧೀಯ ಸಸ್ಯಗಳ ಮ್ಯಾಜಿಕ್ ಸಂಖ್ಯೆಯನ್ನು ತಲುಪಲು ಹಾಗೂ ತನ್ನ ಉದ್ಯಾನವನ್ನು ಹಸಿರು ಧಾಮವಾಗಿ ವಿಸ್ತರಿಸುವ ಆಶಯ ಹೊಂದಿರುವುದಾಗಿ ಎಝೆಕಿಯೆಲ್ ಪೌಲೋಸ್ ಹೇಳಿಕೊಳ್ಳುತ್ತಾರೆ.

Published by:ವಾಸುದೇವ್ ಎಂ
First published: