• Home
  • »
  • News
  • »
  • business
  • »
  • Business Idea: ಈ ಫ್ರಾಂಚೈಸಿ ಬ್ಯುಸಿನೆಸ್​ಗಿಂತ ಬೆಸ್ಟ್‌ ಐಡಿಯಾ ಬೇರೊಂದಿಲ್ಲ, ಕಡಿಮೆ ಹೂಡಿಕೆ-ಅಧಿಕ ಲಾಭ!

Business Idea: ಈ ಫ್ರಾಂಚೈಸಿ ಬ್ಯುಸಿನೆಸ್​ಗಿಂತ ಬೆಸ್ಟ್‌ ಐಡಿಯಾ ಬೇರೊಂದಿಲ್ಲ, ಕಡಿಮೆ ಹೂಡಿಕೆ-ಅಧಿಕ ಲಾಭ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೀವೂ ಸಹ ನಿಮ್ಮದೇ ಆದ ಬಿಸಿನೆಸ್ ಆರಂಭಿಸಬೇಕು ಆದರೆ ಕಡಿಮೆ ಹೂಡಿಕೆ (investment) ಇರಬೇಕು ಅಂತಾ ಯೋಚನೆ ಮಾಡುತ್ತಿದ್ದಾರೆ ಅಮೂಲ್‌ ಫ್ರಾಂಚೈಸಿ (Franchise) ಬಿಸಿನೆಸ್‌ಗಿಂತ ಬೆಸ್ಟ್‌ ಐಡಿಯಾ ಬೇರೊಂದಿಲ್ಲ ನೋಡಿ.

  • Trending Desk
  • 4-MIN READ
  • Last Updated :
  • Share this:

ಸಣ್ಣದೋ ದೊಡ್ಡದೋ ತಮ್ಮದೇ ಆದ ಸ್ವಂತ ಉದ್ಯಮ (Own Business) ಆರಂಭಿಸಲು ಪ್ರಸ್ತುತ ಹೆಚ್ಚಿನವರು ಒಲವು ತೋರುತ್ತಿದ್ದಾರೆ. ಕೆಲವರಿಗೆ ಉದ್ಯಮ ಆರಂಭಿಸಲು ಒಲವಿದ್ದರೂ ಹೂಡಿಕೆ ಬಗ್ಗೆ ಚಿಂತಿಸುತ್ತಾರೆ.ತಮ್ಮ ಬಳಿ ಇರುವ ಅಲ್ಪ ಮೊತ್ತ (Small Investment) ದಲ್ಲೇ ಏನಾದರೂ ಮಾಡಬೇಕು ಅಂತಾ ಯೋಚಿಸಿರುತ್ತಾರೆ. ನೀವೂ ಸಹ ನಿಮ್ಮದೇ ಆದ ಬಿಸಿನೆಸ್ ಆರಂಭಿಸಬೇಕು ಆದರೆ ಕಡಿಮೆ ಹೂಡಿಕೆ (investment) ಇರಬೇಕು ಅಂತಾ ಯೋಚನೆ ಮಾಡುತ್ತಿದ್ದಾರೆ ಅಮೂಲ್‌ ಫ್ರಾಂಚೈಸಿ (Franchise) ಬಿಸಿನೆಸ್‌ಗಿಂತ ಬೆಸ್ಟ್‌ ಐಡಿಯಾ ಬೇರೊಂದಿಲ್ಲ ನೋಡಿ.


ಅಮೂಲ್‌ ಫ್ರಾಂಚೈಸಿ ಉದ್ಯಮ


ಅಮೂಲ್‌ ಫ್ರಾಂಚೈಸಿ ಬಿಸಿನೆಸ್‌ನಲ್ಲಿ ನೀವು ಸಣ್ಣ ಪ್ರಮಾಣದ ಹೂಡಿಕೆಯಿಂದ ಕೈತುಂಬಾ ಲಾಭ ಗಳಿಸಬಹುದು. ನೀವು ವ್ಯಾಪಾರವನ್ನು ಸ್ಥಾಪಿಸಲು ಬಯಸಿದರೆ ಮತ್ತು ಕನಿಷ್ಠ ಸಮಯ ಮತ್ತು ಕೆಲಸದೊಂದಿಗೆ ಕಾರ್ಯನಿರ್ವಹಿಸಲು ಬಯಸಿದರೆ ಪ್ರಸಿದ್ಧ ಬ್ರ್ಯಾಂಡ್‌ನ ಫ್ರಾಂಚೈಸಿ ಅನ್ನು ತೆರೆಯುವ ಬಗ್ಗೆ ನಾವು ಶಿಫಾರಸ್ಸು ಮಾಡುತ್ತೇವೆ.


ಭಾರತವು ವೈವಿಧ್ಯಮಯ ಡೈರಿ ಉತ್ಪನ್ನ ಬ್ರಾಂಡ್‌ಗಳನ್ನು ಹೊಂದಿದೆ. ಆದಾಗ್ಯೂ, ಅಮೂಲ್ ಅತ್ಯಂತ ಪ್ರಸಿದ್ಧವಾಗಿದೆ. ಹಾಲೋತ್ಪನ್ನಗಳ ಕಂಪನಿಯಾಗಿರುವ ಅಮೂಲ್ ಜೊತೆಗೂಡಿ ಅದರ ಫ್ರಾಂಚೈಸಿ ತೆರೆಯುವ ಮೂಲಕ ನೀವು ಪ್ರತಿ ತಿಂಗಳಿಗೆ ಬಂಪರ್ ಲಾಭವನ್ನು ಗಳಿಕೆ ಮಾಡಬಹುದು. ಅಮೂಲ್ ಫ್ರಾಂಚೈಸಿ ತೆರೆಯುವ ಪ್ರಕ್ರಿಯೆ ತುಂಬಾ ಸುಲಭವಾಗಿದೆ. ಹಾಗಾದರೆ ನಾವಿಲ್ಲಿ ಅಮೂಲ್ ಫ್ರಾಂಚೈಸಿ ತೆರೆಯುವುದು ಹೇಗೆ? ಹೂಡಿಕೆ ಎಷ್ಟು ಮಾಡಬೇಕು? ಉತ್ತಮ ಲಾಭ ಪಡೆಯುವುದು ಹೇಗೆ? ಎಂಬುದನ್ನು ತಿಳಿದುಕೊಳ್ಳೋಣ.


ಹೂಡಿಕೆ ಮತ್ತು ಆದಾಯ


ಅಮೂಲ್ ಫ್ರಾಂಚೈಸಿ ತೆರೆಯಲು ಅಗತ್ಯವಾದ ಮುಂಗಡ ವೆಚ್ಚವು ಪ್ರದೇಶದಿಂದ ಪ್ರದೇಶಕ್ಕೆ ಗಮನಾರ್ಹವಾಗಿ ಬದಲಾಗುತ್ತದೆ. ಅಮೂಲ್‌ನ ಫ್ರಾಂಚೈಸಿಯನ್ನು ತೆಗೆದುಕೊಳ್ಳುವ ವೆಚ್ಚವೂ ತುಂಬಾ ಹೆಚ್ಚಿಲ್ಲ, 2 ಲಕ್ಷ ಹೂಡಿಕೆ ಮಾಡಿದರೆ ನೀವು ಗರಿಷ್ಠ ಲಾಭ ಪಡೆಯಬಹುದು.


ಮೊದಲಿಗೆ ಡೈರಿ ವ್ಯಾಪಾರವನ್ನು ಪ್ರಾರಂಭಿಸಲು ನೀವು ಕನಿಷ್ಠ 25,000 ರೂ ಹೆಚ್ಚುವರಿಯಾಗಿ ಹೂಡಿಕೆ ಮಾಡಿರಬೇಕು ಅಂದರೆ ಮರುಪಾವತಿಸಲಾಗದ ಬ್ರ್ಯಾಂಡ್ ಭದ್ರತೆಯಾಗಿ ಪಾವತಿಸಬೇಕಾಗುತ್ತದೆ. ನಂತರ ಅಂಗಡಿ ಮತ್ತು ಅದರ ಪೀಠೋಪಕರಣಗಳ ಬಾಡಿಗೆಗೆ ಸುಮಾರು 1.5 ಲಕ್ಷ ತಗುಲಬಹುದು.


ಇದನ್ನೂ ಓದಿ: ಉಚಿತ ಎಲ್​ಐಸಿ ಕ್ರೆಡಿಟ್​ ಕಾರ್ಡ್​, 5 ಲಕ್ಷ ಪ್ರಯೋಜನ! ಹೀಗ್​ ಅಪ್ಲೈ ಮಾಡಿ


ಹೀಗೆ ಸುಮಾರು 2 ಲಕ್ಷ ಹೂಡಿಕೆ ಮಾಡುವ ಮೂಲಕ ನೀವು ಈ ಉದ್ಯಮವನ್ನು ಆರಂಭಿಸಬಹುದು. ವ್ಯವಹಾರದ ಪ್ರಾರಂಭದಲ್ಲಿಯೇ ಉತ್ತಮ ಲಾಭವನ್ನು ಗಳಿಸಬಹುದು. ಫ್ರಾಂಚೈಸಿ ಮೂಲಕ ಪ್ರತಿ ತಿಂಗಳು ಸುಮಾರು 5 ರಿಂದ 10 ಲಕ್ಷ ರೂಪಾಯಿ ಮಾರಾಟ ಮಾಡಬಹುದು.


ಅಮೂಲ್ ಫ್ರಾಂಚೈಸಿ ಅನ್ನು ಹೇಗೆ ತೆಗೆದುಕೊಳ್ಳುವುದು?


ಅಮೂಲ್ ಎರಡು ರೀತಿಯ ಫ್ರಾಂಚೈಸಿಗಳನ್ನು ನೀಡುತ್ತಿದೆ. ಮೊದಲ ಅಮೂಲ್ ಔಟ್ಲೆಟ್, ಅಮೂಲ್ ರೈಲ್ವೇ ಪಾರ್ಲರ್ ಅಥವಾ ಅಮೂಲ್ ಕಿಯೋಸ್ಕ್ ಫ್ರಾಂಚೈಸಿ ಮತ್ತು ಎರಡನೆಯದಾಗಿ ಅಮೂಲ್ ಐಸ್ ಕ್ರೀಮ್ ಸ್ಕೂಪಿಂಗ್ ಪಾರ್ಲರ್ನ ಫ್ರಾಂಚೈಸಿ.


ಈ ಫ್ರಾಂಚೈಸಿಗಳನ್ನು ಪಡೆಯಲು ನೀವು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ( www.amul.com ) ನೀಡಿ ಮತ್ತು ಅಮೂಲ್ ಫ್ರಾಂಚೈಸಿ ವ್ಯಾಪಾರ ಅವಕಾಶ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನಿಮಗೆ ಉದ್ಯಮ ಆರಂಭದ ಬಗೆಗಿನ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಪಡೆಯಬಹುದು.


ಅಮೂಲ್ ಫ್ರಾಂಚೈಸಿ ಆರಂಭಿಸಲು ಎಷ್ಟು ಸ್ಥಳ ಬೇಕು?


ಅಮೂಲ್ ಔಟ್‌ಲೆಟ್ ಅನ್ನು ಆರಂಭಿಸಲು ಅಂಗಡಿಯು 100 ರಿಂದ 300 ಚದರ ಅಡಿ ಗಾತ್ರದಲ್ಲಿರಬೇಕು. ಸಾರ್ವಜನಿಕ ಸಾರಿಗೆ ಕೇಂದ್ರಗಳು, ಮಾಲ್‌ಗಳು, ಆಸ್ಪತ್ರೆಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಂತಹ ಕಾರ್ಯನಿರತ ಸೈಟ್‌ಗಳಲ್ಲಿ ಫ್ರಾಂಚೈಸಿಯನ್ನು ಆರಂಭಿಸಿದರೆ ಹೆಚ್ಚಿನ ಲಾಭ ಪಡೆಯಬಹುದು.


ಇದನ್ನೂ ಓದಿ: ನಿಮ್ಮ ಕಂಪನಿ ದಿವಾಳಿಯಾದ್ರೆ ಗ್ರಾಚ್ಯುಟಿ ಸಿಗುತ್ತಾ? ಎಲ್ಲಾ ಉದ್ಯೋಗಿಗಳು ಈ ಬಗ್ಗೆ ತಿಳಿದುಕೊಳ್ಳಿ!


ಯಾವಾಗಲೂ ನೀವು ಆಯ್ಕೆ ಮಾಡಿಕೊಳ್ಳುವ ಸ್ಥಳವು ನಿಮ್ಮ ಉದ್ಯಮದ ಲಾಭವನ್ನು ಅವಲಂಬಿಸಿರುತ್ತದೆ ಎಂಬುವುದನ್ನು ನೀವಿಲ್ಲಿ ಮರೆಯಬಾರದು.


ಸಾಲ ಸೌಲಭ್ಯವೂ ಲಭ್ಯವಿದೆ


ಮಾಲೀಕರು ಹಣಕಾಸಿನ ಸಮಸ್ಯೆಗಳನ್ನು ಹೊಂದಿದ್ದರೆ ಸಾಲಕ್ಕಾಗಿ ವಿನಂತಿಸಬಹುದು. ಅಮೂಲ್ ಕಚೇರಿಯು ಹೊಸದಾಗಿ ರಚಿಸಲಾದ ವ್ಯಾಪಾರಕ್ಕೆ ಸಾಲವನ್ನು ಪಡೆಯಲು ಸಹಾಯ ಮಾಡುತ್ತದೆ.

Published by:ವಾಸುದೇವ್ ಎಂ
First published: