Business Idea: ಮೇಕೆ ಸಾಕಿದ್ರೆ ಬರೀ ಮಾಂಸದಿಂದಷ್ಟೇ ಅಲ್ಲ ದುಡ್ಡು! ಹಾಲಿಗೂ ಸಿಕ್ಕಾಪಟ್ಟೆ ಡಿಮ್ಯಾಂಡ್​

ಮೇಕೆ ಹಾಲು ನಮಗೆ ಶಕ್ತಿ ನೀಡುವುದಲ್ಲದೆ, ನಮ್ಮ ಆರೋಗ್ಯವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.  ಆದರೆ, ಹಸು, ಎಮ್ಮೆ ಹಾಲಿನ ದರಕ್ಕಿಂತ ಈ ಮೇಕೆ ಹಾಲು ಕೊಂಚ ದುಬಾರಿ.

ಮೇಕೆ

ಮೇಕೆ

  • Share this:
ಪ್ರತಿದಿನ ಒಂದು ಲೋಟ ಹಾಲು (One Glass Milk) ಕುಡಿಯುವುದರಿಂದ ನಿಮ್ಮ ಮೂಳೆಗಳು (Bones) ಬಲಗೊಳ್ಳುತ್ತೆ ಎಂದು ವೈದ್ಯರು (Doctor) ಹೇಳುವುದನ್ನು ಕೇಳಿದ್ದೇವೆ. ನಮ್ಮ ದೇಹದ ಬೆಳವಣಿಗೆಗೆ ಬೇಕಾದ ಪ್ರೋಟೀನ್ (Proteins)​, ಕಾರ್ಬೋಹೈಡ್ರೆಟ್(Carbohydrate) ​, ಖನಿಜಗಳು ಮತ್ತು ಕೊಬ್ಬುಗಳು ನಾವು ಕುಡಿಯುವ ಹಾಲಿನಲ್ಲಿ ಸಿಗುತ್ತೆ. ಹಾಲಿನಿಂದ ಸಾಕಷ್ಟು ಪ್ರಯೋಜನಗಳಿವೆ. ಹಸು (Cow), ಎಮ್ಮೆ (Buffalos), ಕತ್ತೆ (Donkey) ಹಾಲುಗಳನ್ನು ಕುಡಿಯುವುದನ್ನು ನಾವು ನೋಡಿದ್ದೇವೆ. ಆದರೆ, ಇತ್ತೀಚಿನ ಅಧ್ಯಯನದ ಪ್ರಕಾರ ಆಡಿನ ಹಾಲಿನಲ್ಲಿ ನಾವು ಪ್ರತಿದಿನ ಕುಡಿಯುವ ಹಸುವಿನ ಹಾಲು ಮತ್ತು ಎಮ್ಮೆಯ ಹಾಲಿಗಿಂತ ಹೆಚ್ಚಿನ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳಿವೆ.

ಮೇಕೆ ಹಾಲು ಸಿಕ್ಕಾಪಟ್ಟೆ ಕಾಸ್ಟ್ಲಿ ಯಾಕೆ ಗೊತ್ತಾ?

ಮೇಕೆ ಹಾಲು ನಮಗೆ ಶಕ್ತಿ ನೀಡುವುದಲ್ಲದೆ, ನಮ್ಮ ಆರೋಗ್ಯವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.  ಆದರೆ, ಹಸು, ಎಮ್ಮೆ ಹಾಲಿನ ದರಕ್ಕಿಂತ ಈ ಮೇಕೆ ಹಾಲು ಕೊಂಚ ದುಬಾರಿ. ಅದಕ್ಕೂ ಒಂದು ಕಾರಣವಿದೆ. ಅದೇನು ಎಂಬುದನ್ನು ನಾವು ನಿಮಗೆ ಇಂದು ತಿಳಿಸುತ್ತೇವೆ. ನೀವೂ ಕೂಡ ಯಾವುದಾದರೂ ಬ್ಯುಸಿನೆಸ್​ ಆರಂಭಿಸಿ ದುಡ್ಡು ಮಾಡಬೇಕೆಂಬ ಆಸೆ ಹೊಂದಿದ್ದರೆ, ನೀವು ಕೂಡ ಆಡು ಫಾರ್ಮ್ ಮಾಡಿ ಹೆಚ್ಚಿನ ಆದಾಯ ಗಳಿಸಬಹುದು.

ದಿನಕ್ಕೆ 1 ಲೋಟ ಆಡಿನ ಹಾಲು ಕುಡಿದರೆ ಸಾಕು!

ಆಡಿನ ಹಾಲಿನಲ್ಲಿ ಹಸುವಿನ ಹಾಲಿಗಿಂತ ಹೆಚ್ಚು ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಇದ್ದು ಮೂಳೆಗಳ ಬಲವನ್ನು ಹೆಚ್ಚಿಸುತ್ತದೆ. ಆದ್ದರಿಂದ ಪ್ರತಿದಿನ ಆಡಿನ ಹಾಲನ್ನು ಕುಡಿದರೆ ವಯಸ್ಸಾದ ನಂತರ ಬರುವ ಕೀಲು ನೋವು, ಸಂಧಿವಾತ, ಸಂಧಿವಾತದಿಂದ ದೂರವಿರಬಹುದು.

ಇದನ್ನೂ ಓದಿ: ನಾನ್​ ವೆಜ್​ ಪ್ರೇಮಿಗಳ ಫೇವರೇಟ್ ಫುಡ್​​ ಇದು! ಈ ಉದ್ಯಮ ಆರಂಭಿಸಿ, ಲಕ್ಷ ಲಕ್ಷ ಗಳಿಸಿ

ಕುರಿ ಹಾಗೂ ಮೇಕೆ ಸಾಕಾಣಿಕೆ ಮಾಡಿ!

ಇಷ್ಟೆಲ್ಲಾ ಪ್ರಯೋಜನ ಇರುವ ಕುರಿ ಹಾಗೂ ಮೇಕೆಗಳನ್ನು ನೀವು ಸಾಕಾಣಿಕೆ ಮಾಡಿದರೆ ಹೆಚ್ಚಿನ ಲಾಭವನ್ನು ಕೂಡ ಪಡೆಯಬಹುದು. ಅದು ಹೇಗೆ ಎಂದು ಹೇಳುತ್ತೇವೆ ನೋಡಿ.  ಭಾರತದಲ್ಲಿ ಮೇಕೆ ಸಾಕಣೆ ಹೆಚ್ಚು ಜನಪ್ರಿಯವಾಗುತ್ತಿದೆ. ತಾಂತ್ರಿಕ ಅಭಿವೃದ್ಧಿ ಮತ್ತು ಸುಧಾರಿತ ನಿರ್ವಹಣಾ ಅಭ್ಯಾಸಗಳು ಉದ್ಯಮದಿಂದ ಆದಾಯವನ್ನು ಹೆಚ್ಚಿಸಬಹುದು. ಆದಾಗ್ಯೂ, ಮೇಕೆ ಸಾಕಾಣಿಕೆ ಕೇಂದ್ರವನ್ನು ಪ್ರಾರಂಭಿಸುವುದು ಕಡಿಮೆ ಅವಧಿಯಲ್ಲಿ ಉತ್ತಮ ಲಾಭವನ್ನು ಖಚಿತಪಡಿಸಿಕೊಳ್ಳಲು ಅತ್ಯಂತ ಅವಿಭಾಜ್ಯ ಅಂಶವಾಗಿದೆ.

ನಿಮ್ಮ ಉದ್ಯಮಕ್ಕೆ ಸರ್ಕಾರದಿಂದ ಸಹಾಯ!

ಕುರಿ ಖರೀದಿಸಲು ಹಣವಿಲ್ಲವೆಂದು ಚಿಂತೆ ಮಾಡಬೇಡಿ. ಸರ್ಕಾರ ಕುರಿ ಮತ್ತು ಮೇಕೆ ಸಾಕಾಣಿಕೆ, ಮಾಡುವರಿಗೆ ಧನ ಸಹಾಯ(Subsidy) ಸಹ ಒದಗಿಸಿಕೊಡುತ್ತದೆ.ಕುರಿಗಳ ಪ್ರಾಮುಖ್ಯತೆಯನ್ನು ಗುರುತಿಸಿ, ತೀ ಕುರಿ ಅಭಿವೃದ್ಧಿ ಯೋಜನೆಗಳು ಸೇರಿದಂತೆ ಹಲವಾರು ಅಭಿವೃದ್ಧಿ ಚಟುವಟಿಕೆಗಳನ್ನು Jammu and Kashmir ನಲ್ಲಿ ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ ಬ್ಯಾಂಕ್‌ಗಳಿಂದ ಹಣಕಾಸಿನ ನೆರವು, ಹಾಗೆಯೇ ಇತರ ಪ್ರೋತ್ಸಾಹ ಮತ್ತು ಸಬ್ಸಿಡಿಗಳು (Subsidy) ಲಭ್ಯವಿದೆ.

ಇದನ್ನೂ ಓದಿ: ಈ ಬೆಳೆಗೆ ಜಸ್ಟ್​ 2 ಲಕ್ಷ ಖರ್ಚು! 1 ಕೋಟಿವರೆಗೂ ಲಾಭ ಸಿಗುತ್ತೆ, ಇನ್ಯಾಕೆ ತಡ ಶುರು ಮಾಡಿ

ಮರೆಯದೇ ವ್ಯಾಕ್ಸಿನ್​ ಹಾಕಿಸಿ!

ಮೂರು ತಿಂಗಳ ವಯಸ್ಸಿನ ನಂತರ ಕುರಿಮರಿಗಳು ಹಾಗೂ ಮೇಕೆ ಮರಿಗಳಿಗೆ ಮೊದಲ ಬಾರಿಗೆ ಲಸಿಕೆ ಹಾಕಬೇಕು. ಪೋಷಕಾಂಶವನ್ನು ಸೇವಿಸುವಾಗ ಔಷಧವು ಶ್ವಾಸಕೋಶವನ್ನು ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕು. ನೆಮಟೋಡ್ ಲಸಿಕೆಯನ್ನು ಚುಚ್ಚುಮದ್ದಿನ 10-15 ದಿನಗಳಲ್ಲಿ ನೀಡಬೇಕು. ಎರಡನೇ ಡೋಸ್ ಅನ್ನು ಲಸಿಕೆ ಹಾಕಿದ 15 ದಿನಗಳ ನಂತರ ನೀಡಲಾಗುತ್ತದೆ. ಹೀಗೆ ಮಾಡಿದರೆ, ಮೇಕೆಗಳಲ್ಲಿ ಹಾಲಿನ ಉತ್ಪತ್ತಿ ಹೆಚ್ಚಾಗುತ್ತೆ. ಆಡು ಮರಿಗಳು ದೊಡ್ಡದಾಗಿ ಮಾರಾಟ ಆಗುವವರೆಗೂ ಅದರ ಹಾಲಿನಿಂದ ಸಂಪಾದನೆ ಮಾಡಬಹದು. ದೊಡ್ಡದಾದ ಮೇಲೆ ಅದನ್ನು ಮಾರಾಟ ಮಾಡಿ ಹೆಚ್ಚಿನ ಲಾಭ ಗಳಿಸಬಹುದು.
Published by:Vasudeva M
First published: