ದೊಡ್ಡ ದೊಡ್ಡ ಐಟಿ ಕಂಪನಿಗಳು (IT Companies) ತಮ್ಮ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿರುವ(ಲೇ-ಆಫ್) ಸುದ್ದಿಗಳೇ ಹರಿದಾಡುತ್ತಿವೆ. ಈ ಉದ್ಯೋಗ ಕಡಿತಗಳಿಗೆ ಅನೇಕ ರೀತಿಯ ಕಾರಣಗಳಿವೆ ಅಂತ ಕಂಪನಿಗಳು ಹೇಳುತ್ತಿವೆ. ಒಟ್ಟಿನಲ್ಲಿ ಇದರಿಂದ ತೊಂದರೆಯಾಗುವುದು ಮಾತ್ರ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ (Employees) ಅಂತ ಹೇಳಬಹುದು. ಈ ಲೇ-ಆಫ್‌ನಿಂದ ನಗರಗಳಲ್ಲಿ ಬಾಡಿಗೆಗೆ ಮನೆಯನ್ನು (Rent House) ಹುಡುಕುವುದು ಹೆಚ್ಚು ಕಷ್ಟಕರವಾಗುತ್ತಿದೆ, ಮನೆ ಖರೀದಿದಾರರು ಸಾಂಕ್ರಾಮಿಕ ರೋಗದ ನಂತರದ ಬಾಡಿಗೆ ಹೆಚ್ಚಳದ ಜೊತೆಗೆ ಮನೆ ಮಾಲೀಕರು (House Owners) ಕೆಲವು ಅಸಾಮಾನ್ಯ ಬೇಡಿಕೆಗಳನ್ನು ಎದುರಿಸುತ್ತಿದ್ದಾರೆ ಎಂದು ಹಲವರು ಹೇಳಿಕೊಳ್ಳುತ್ತಿದ್ದಾರೆ.
ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕೋದೆ ಟೆನ್ಶನ್!
ಗೂಗಲ್ ಮತ್ತು ಮೈಕ್ರೋಸಾಫ್ಟ್ನಂತಹ ಪ್ರಮುಖ ಟೆಕ್ ಕಂಪನಿಗಳಲ್ಲಿ ಭಾರೀ ಲೇ-ಆಫ್ ನಡೆದು ಹೋಗಿದೆ. ಕಳೆದ ಮೂರು ತಿಂಗಳಿನಿಂದ ಸುಮಾರು 2 ಲಕ್ಷ ಐಟಿ ಉದ್ಯೋಗಿಗಳು ಜಾಗತಿಕವಾಗಿ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ.
ಇತ್ತೀಚೆಗೆ, ಅಮೆಜಾನ್ ಕನಿಷ್ಠ 9000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಪ್ರಕಟಿಸಿದೆ. ಹೀಗೆ ಒಂದರ ಹಿಂದೆ ಒಂದು ಉದ್ಯೋಗಿಗಳ ವಜಾಗೊಳಿಸುವಿಕೆ ನಿಲ್ಲದಂತೆ ನಡೆಯುತ್ತಿದೆ. ಕಂಪನಿಗಳು ಅವುಗಳ ಅನುಕೂಲಕ್ಕೆ ಉದ್ಯೋಗಿಗಳನ್ನು ನಡು ನೀರಲ್ಲಿ ಕೈಬಿಡುತ್ತಿದ್ದರೆ, ಈ ಎಲ್ಲದರ ನೇರ ಪರಿಣಾಮವನ್ನು ಉದ್ಯೋಗಿಗಳೇ ಎದುರಿಸುತ್ತಿದ್ದಾರೆ.
ಬಾಡಿಗೆ ಮನೆ ಸಿಕ್ರೂ, ರೂಲ್ಸ್ ಮಾತ್ರ ಜಾಸ್ತಿ!
ಕೆಲಸ ಕಳೆದುಕೊಂಡ ಮೇಲೆ ಬಾಡಿಗೆ ಮನೆಯನ್ನು ಕಡಿಮೆ ಹಣ ಇರುವ ಸ್ಥಳದಲ್ಲೇ ನೋಡುವ ಕಷ್ಟದ ಬಗ್ಗೆ ಹಲವರು ಈಗಾಗ್ಲೇ ತಮ್ಮ ಕಥೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕಳೆದ ತಿಂಗಳು, ಬೆಂಗಳೂರಿನಲ್ಲಿ ಆಡ್-ಟೆಕ್ (ಜಾಹೀರಾತು ತಂತ್ರಜ್ಞಾನ) ಸ್ಟಾರ್ಟಪ್ ಸಂಸ್ಥಾಪಕ ಗೌರಬ್ ಅವರು ಎಚ್‌ಎಸ್‌ಆರ್ ಲೇಔಟ್‌ನಿಂದ ಜೆಪಿ ನಗರದ ಗೇಟೆಡ್ ಅಪಾರ್ಟ್‌ಮೆಂಟ್‌ಗೆ ತೆರಳಲು ಯೋಜಿಸಿದ್ದರು.
ಇದನ್ನೂ ಓದಿ: ಬಾಡಿಗೆ ಮನೆಗಳಲ್ಲಿ ವಾಸಿಸುವರಿಗೆ ಮಾರ್ಗಸೂಚಿ!
ಅವರ ಆಡ್-ಟೆಕ್ ಸ್ಟಾರ್ಟ್‌ಅಪ್ ಕೋಟಿಗಟ್ಟಲೆ ವಹಿವಾಟು ನಡೆಸಿ ಹೆಸರು ಗಳಿಸಿದ್ದರೂ ಸಹ, "ಉದ್ಯೋಗಿಗಳ ಸಂಖ್ಯೆ ಮತ್ತು ಆದಾಯ" ಸೇರಿದಂತೆ ಮನೆ ಮಾಲೀಕರು ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಲು ವಿಫಲವಾದ ಕಾರಣ ಅವರು ಜೆಪಿ ನಗರದ ಗೇಟೆಡ್ ಅಪಾರ್ಟ್‌ಮೆಂಟ್‌ಗೆ ತೆರಳಲು ಸಾಧ್ಯವಾಗಲಿಲ್ಲ. "ಕಳೆದ ಆರು ತಿಂಗಳಲ್ಲಿ ನನ್ನ ಹಲವಾರು ಸ್ನೇಹಿತರು ಇಂತಹ ಸಮಸ್ಯೆಯನ್ನು ಎದುರಿಸಿದ್ದಾರೆ." ಎಂದು ಅವರು ತಿಳಿಸಿದ್ದಾರೆ.
ಶಿಫ್ಟಿಂಗ್ ಪ್ರಾಬ್ಲಂ ಹೆಚ್ಚು!
ಬೆಂಗಳೂರಿನಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಶಿಫ್ಟ್ ಆಗುವುದು ತುಂಬಾ ಕಷ್ಟ. ಉದಾಹರಣೆಗೆ ನೀವು, ನಿಮ್ಮ ಸಂಗಾತಿ ಅಥವಾ ನಿಮ್ಮ ಸ್ನೇಹಿತನೊಂದಿಗೆ ಇದ್ದರೆ, ನಿಮ್ಮಿಬ್ಬರ ನಡುವೆ ಯಾರಾದರೂ ಕೆಲಸ ಕಳೆದುಕೊಂಡರೆ. ಒಬ್ಬ ವ್ಯಕ್ತಿಯಿಂದ ಬಾಡಿಗೆ ಪಾವತಿಸುವುದು ಕಷ್ಟ. ಅಂತಹ ಪರಿಸ್ಥಿತಿಯಲ್ಲಿ ನೀವು ಸ್ಥಳಾಂತರಗೊಳ್ಳಲು ಬೇರೆ ಸ್ಥಳವನ್ನು ಹುಡಕಬೇಕು.
ಕನಿಷ್ಠ ಇದು 3 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಹಾಗೂ ನಿಮ್ಮ ಹಳೆಯ ಮನೆಯನ್ನು ಖಾಲಿ ಮಾಡುವ ಮೊದಲು ನೀವು ಹಳೆಯ ಮಾಲೀಕರಿಗೆ ಒಂದು ತಿಂಗಳ ಮುಂಗಡವಾಗಿ ಸೂಚನೆಯನ್ನು ನೀಡಬೇಕು ಎಂಬುದು ಅನೇಕ ನಿವಾಸಿಗಳ ಅಭಿಪ್ರಾಯವಾಗಿದೆ.
ಬೇಡಿಕೆ ಹೆಚ್ಚುತ್ತಿದೆ!
ಬನ್ನೇರುಘಟ್ಟ ರಸ್ತೆ ಮತ್ತು ಹಳೆಯ ವಿಮಾನ ನಿಲ್ದಾಣ ರಸ್ತೆಯಂತಹ ಬೆಳೆಯುತ್ತಿರುವ ಉಪನಗರಗಳಲ್ಲಿ ಇಂದು 2 ಬಿಹೆಚ್‌ಕೆ ಅಪಾರ್ಟ್ಮೆಂಟ್ ಬಾಡಿಗೆ 20,000-25000 ರೂಪಾಯಿಗಳು.ಇದು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ ಎಂದಿದ್ದಾರೆ.
ಮುಂದುವರಿದ ಜಾಗತಿಕ ತಲೆಬಿಸಿಗಳು, ಹೆಚ್ಚಿದ ಪೂರೈಕೆಯೊಂದಿಗೆ, ಸರ್ಜಾಪುರ ಮತ್ತು ವೈಟ್‌ಫೀಲ್ಡ್‌ನಂತಹ ಐಟಿ ಕಾರಿಡಾರ್‌ಗಳಲ್ಲಿ ಬಾಡಿಗೆಗಳನ್ನು ಸಮತಟ್ಟಾಗಿಸಿದೆ, ಹೆಚ್ಚಿನ ಅಪಾರ್ಟ್ಮೆಂಟ್ ಮಾಲೀಕರು 5-10% ರಿಯಾಯಿತಿಗಳನ್ನು ನೀಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ