Union Budget 2022: ಕೊರೊನಾ ಛಾಯೆಯಲ್ಲಿ ಇಂದಿನಿಂದ ಬಜೆಟ್ ಅಧಿವೇಶನ; ಪೆಗಾಸಸ್, MSP ಹಲವು ವಿಷಯಗಳ ಚರ್ಚೆ ಸಾಧ್ಯತೆ

ಕೊರೊನಾ ಮೂರನೇ ಅಲೆ(Corona Third Wave)ಯಿಂದಾಗಿ ಹಲವು ನಿರ್ಬಂಧಗಳೊಂದಿಗೆ ಸಂಸತ್ತಿನ ಬಜೆಟ್ ಅಧಿವೇಶನ (Budget Session)ಇಂದಿನಿಂದ ರಾಷ್ಟ್ರಪತಿ(President)ಗಳ ಭಾಷಣದೊಂದಿಗೆ ಪ್ರಾರಂಭವಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೊನಾ ಮೂರನೇ ಅಲೆ(Corona Third Wave)ಯಿಂದಾಗಿ ಹಲವು ನಿರ್ಬಂಧಗಳೊಂದಿಗೆ ಸಂಸತ್ತಿನ ಬಜೆಟ್ ಅಧಿವೇಶನ (Budget Session)ಇಂದಿನಿಂದ ರಾಷ್ಟ್ರಪತಿ(President)ಗಳ ಭಾಷಣದೊಂದಿಗೆ ಪ್ರಾರಂಭವಾಗಲಿದೆ. ಮಂಗಳವಾರ ಸಾಮಾನ್ಯ ಬಜೆಟ್ ಮಂಡನೆಯಾಗಲಿದೆ. ಮೊದಲ ಎರಡು ದಿನಗಳನ್ನು ಹೊರತುಪಡಿಸಿ, ಸಂಸತ್ತಿನ ಉಭಯ ಸದನಗಳ ಕಲಾಪಗಳು ಎರಡು ಪಾಳಿಗಳಲ್ಲಿ ನಡೆಯುತ್ತವೆ. ರಾಷ್ಟ್ರಪತಿಗಳು ಸೋಮವಾರ ಸಂಸತ್ ಭವನದ ಅನೆಕ್ಸ್‌ ನಲ್ಲಿ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮರುದಿನದಿಂದ ಲೋಕಸಭೆ(Loksabh)ಯ ಕಲಾಪಗಳು ಸಂಜೆ 4 ರಿಂದ ರಾತ್ರಿ 9 ರವರೆಗೆ ಮತ್ತು ರಾಜ್ಯಸಭೆ(Rajyasabha)ಯು ಬೆಳಗ್ಗೆ 9 ರಿಂದ ಪ್ರಾರಂಭವಾಗಲಿದೆ. ಸೋಮವಾರ ಮಧ್ಯಾಹ್ನ 2.30ಕ್ಕೆ ರಾಜ್ಯಸಭೆ ಕಲಾಪ ಆರಂಭವಾಗಲಿದೆ. ಇಂದು ಉಭಯ ಸದನಗಳಲ್ಲಿ ಆರ್ಥಿಕ ಸಮೀಕ್ಷೆ (Economic survey) ಮಂಡನೆಯಾಗಲಿದೆ.

ಎಲ್ಲರ ಕಣ್ಣು ಸಾಮಾನ್ಯ ಬಜೆಟ್ ಮೇಲೆ

ಅಧಿವೇಶನದಲ್ಲಿ ಮುಖ್ಯವಾಗಿ ಮಂಗಳವಾರ ಮಂಡನೆಯಾಗಲಿರುವ ಸಾಮಾನ್ಯ ಬಜೆಟ್ ಮೇಲೆ ಕಣ್ಣಿಟ್ಟಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಬೆಳಗ್ಗೆ 11 ಗಂಟೆಗೆ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ಆರ್ಥಿಕತೆಯ ಮೇಲೆ ಕೊರೊನಾ ನೆರಳಿನ ನಡುವೆ ಮಂಡಿಸುತ್ತಿರುವ ಸತತ ಎರಡನೇ ಬಜೆಟ್ ಇದಾಗಿದೆ.

ಕೊರೊನಾದಿಂದ ಆರ್ಥಿಕತೆ ಎದುರಿಸುತ್ತಿರುವ ಸವಾಲುಗಳನ್ನು ಹಣಕಾಸು ಸಚಿವರು ನಿಭಾಯಿಸಬೇಕಿದೆ. ಮಧ್ಯಮ ಮತ್ತು ಬಡ ವರ್ಗದವರಿಗೆ ಪರಿಹಾರ ನೀಡಬೇಕು. ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವುದರಿಂದ. ಇಂತಹ ಪರಿಸ್ಥಿತಿಯಲ್ಲಿ ಈ ರಾಜ್ಯಗಳಿಗೆ ರಾಜಕೀಯ ಸಂದೇಶ ನೀಡುವ ಸವಾಲು ಕೂಡ ಹಣಕಾಸು ಸಚಿವರ ಮುಂದಿದೆ.

ಇದನ್ನೂ ಓದಿ: Pegasus ಬೇಹುಗಾರಿಕೆ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಕೆ

ಪೆಗಾಸಸ್, ಎಂಎಸ್‌ಪಿ

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಿಂದಾಗಿ ಪ್ರತಿಪಕ್ಷಗಳು ಹಲವು ವಿಷಯಗಳಲ್ಲಿ ಸರ್ಕಾರವನ್ನು ಸುತ್ತುವರಿಯಲು ಪ್ರಯತ್ನಿಸುತ್ತವೆ. ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಪೆಗಾಸಸ್ ಪ್ರಕರಣದಲ್ಲಿ ಹೊಸ ಬಹಿರಂಗಪಡಿಸುವಿಕೆಯ ಮೇಲೆ ಸರ್ಕಾರವನ್ನು ಸುತ್ತುವರಿಯಲು ಪ್ಲಾನ್ ಮಾಡಿಕೊಂಡಿವೆ.

ಇದಲ್ಲದೇ ರೈತರ ಧರಣಿ ವೇಳೆ ದಾಖಲಾದ ಪ್ರಕರಣಗಳು ವಾಪಸ್ಸು ಪಡೆಯದಿರೋದು, ಎಂಎಸ್‌ಪಿ ಮೇಲೆ ಕಾನೂನು ಖಾತರಿ ಹಾಗೂ ಸಮಿತಿ ರಚನೆ ಸೇರಿದಂತೆ ಇತರೆ ವಿಷಯಗಳ ಕುರಿತು ಆರ್‌ಆರ್‌ಬಿ-ಎನ್‌ಟಿಪಿಸಿ ಪರೀಕ್ಷಾ ಫಲಿತಾಂಶ ಕುರಿತು ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಹಣದುಬ್ಬರ ವಿಷಯಗಳನ್ನು  ಮುಂದಿಟ್ಟಕೊಂಡು ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ವಿಪಕ್ಷಗಳು ತಂತ್ರ ರಚಿಸಿವೆ.

ಸಂಸತ್ತಿನಲ್ಲಿ ಕೊರೊನಾ ಅವಾಂತರ

ಸಂಸತ್ತು ಕೂಡ ಕೊರೊನಾ ಮೂರನೇ ಅಲೆಯ ಹಿಡಿತದಲ್ಲಿದೆ. ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ಅವರು ಕೊರೊನಾ ಸೋಂಕು ತಗುಲಿದ ಪರಿಣಾಮ ಐಸೋಲೇಶನ್ ನಲ್ಲಿದ್ದಾರೆ. ಇದಲ್ಲದೆ, ಸಂಸತ್ತಿನ 875 ನೌಕರರು ಮತ್ತು ಅಧಿಕಾರಿಗಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಕಾರಣಕ್ಕಾಗಿ, ಅಧಿವೇಶನದಲ್ಲಿ ಸಾಮಾಜಿಕ ಅಂತರದ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ.

ರಾಜ್ಯಸಭೆಯಲ್ಲಿ 29 ಸಭೆಗಳು

ಇಂದಿನಿಂದ ಆರಂಭವಾಗುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಒಟ್ಟು 29 ಅಧಿವೇಶನಗಳು ನಡೆಯಲಿವೆ. ರಾಜ್ಯಸಭಾ ಸೆಕ್ರೆಟರಿಯೇಟ್‌ನಿಂದ ಬಿಡುಗಡೆಯಾದ ಹೇಳಿಕೆಯಲ್ಲಿ, ಬಜೆಟ್ ಅಧಿವೇಶನದ ಮೊದಲ ಭಾಗದಲ್ಲಿ ಜನವರಿ 31 ರಿಂದ ಫೆಬ್ರವರಿ 11 ರ ನಡುವೆ 10 ಅಧಿವೇಶನಗಳು ನಡೆಯಲಿವೆ ಎಂದು ಹೇಳಲಾಗಿದೆ. ‘

ಈ ಸಭೆಗಳು 40 ಗಂಟೆಗಳ ಕಾಲ ನಡೆಯಲಿವೆ. ಎರಡನೇ ಭಾಗವು ಮಾರ್ಚ್ 14 ರಿಂದ ಏಪ್ರಿಲ್ 8 ರವರೆಗೆ 95 ಗಂಟೆಗಳ ಅವಧಿಯೊಂದಿಗೆ 19 ಸಿಟ್ಟಿಂಗ್‌ ಗಳನ್ನು ಹೊಂದಿರುತ್ತದೆ. ಈ ಮೂಲಕ ಬಜೆಟ್ ಅಧಿವೇಶನದ ಎರಡೂ ಭಾಗಗಳಲ್ಲಿ ಒಟ್ಟು 135 ಗಂಟೆಗಳ ಕಾಲ ರಾಜ್ಯಸಭೆಯಲ್ಲಿ ಕಲಾಪ ನಡೆಯಲಿದೆ.

ಇದನ್ನೂ ಓದಿ:  Union Budget 2022: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಟೀಂನಲ್ಲಿರೋ ಸದಸ್ಯರ ಮಾಹಿತಿ ಇಲ್ಲಿದೆ

ಎರಡನೇ ಭಾಗದಲ್ಲಿ ಶೇ.70ರಷ್ಟು ಸಮಯವನ್ನು ಸಭೆಗಳಿಗೆ ಮೀಸಲಿಡಲಾಗಿದೆ. ರಾಜ್ಯಸಭೆಯಲ್ಲಿ 29 ಸಭೆಗಳ ಪೈಕಿ 27 ಅಧಿವೇಶನಗಳಲ್ಲಿ ಪತ್ರಿಕೆಗಳು ಮತ್ತು ವರದಿಗಳನ್ನು ಮಂಡಿಸುವುದರ ಜೊತೆಗೆ ಸಾರ್ವಜನಿಕ ಪ್ರಾಮುಖ್ಯತೆಯ ಸಮಸ್ಯೆಗಳನ್ನು ಎತ್ತುವುದಕ್ಕಾಗಿ ಪ್ರತಿ ದಿನ 30 ನಿಮಿಷಗಳಿಗೆ ರಾಜ್ಯಸಭೆಯ ಶೂನ್ಯ ಸಮಯವನ್ನು ಕಡಿಮೆ ಮಾಡಲಾಗಿದೆ.

ಅಧಿವೇಶನದಲ್ಲಿ 6 ದಿನಗಳಲ್ಲಿ ಒಟ್ಟು 15 ಗಂಟೆಗಳ ಕಾಲ ಅನಧಿಕೃತ ಸದಸ್ಯರ ವ್ಯವಹಾರಕ್ಕೆ ಮೀಸಲಿಡಲಾಗಿದೆ. ಸದನದ ಎರಡನೇ ಭಾಗದ ಮೊದಲ ವಾರದಲ್ಲಿ ಶುಕ್ರವಾರ ರಜೆ ಇರುವುದರಿಂದ ಖಾಸಗಿ ಸದಸ್ಯರ ಮಸೂದೆಗಳನ್ನು ಗುರುವಾರ ಕೈಗೆತ್ತಿಕೊಳ್ಳಲಾಗುವುದು.

ಫೆಬ್ರವರಿ 1 ರಂದು ಕೇಂದ್ರ ಬಜೆಟ್ 2022 ಅನ್ನು ಅನುಮೋದಿಸಲು ಸಭೆ

ಸಂಸತ್ ಅಧಿವೇಶನ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ರಾಜ್ಯಸಭಾ ಅಧ್ಯಕ್ಷ ಮತ್ತು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಸೋಮವಾರ ಸದನಗಳಲ್ಲಿ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಲಿದ್ದಾರೆ.

ಸೋಮವಾರ ವ್ಯವಹಾರ ಸಲಹಾ ಸಮಿತಿ ಸಭೆಯೂ ನಡೆಯಲಿದೆ. ಅದೇ ಸಮಯದಲ್ಲಿ, ಕೇಂದ್ರ ಬಜೆಟ್ 2022 ಅನ್ನು ಅನುಮೋದಿಸಲು ಫೆಬ್ರವರಿ 1 ರಂದು ಬೆಳಿಗ್ಗೆ 10:10 ಕ್ಕೆ ಕೇಂದ್ರ ಸಚಿವ ಸಂಪುಟದ ಸಭೆ ನಡೆಯಲಿದೆ.
Published by:Mahmadrafik K
First published: