ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಧಾನಿ ಮೋದಿ ನೇತೃತ್ವದ 2ನೇ ಅವಧಿ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ್ದು, ಈ ಬಾರಿ ಭಾರತೀಯ ರೈಲ್ವೆ ಇಲಾಖೆ ಬಹುದೊಡ್ಡ ಗಿಫ್ಟ್ ನೀಡಿದೆ. ಹಣಕಾಸು ಸಚಿವರು 2023ರ ಬಜೆಟ್ನಲ್ಲಿ( Budget 2023) ರೈಲ್ವೆ ಇಲಾಖೆಗೆ (Railway Department) 2.4 ಲಕ್ಷ ಕೋಟಿ ರೂಪಾಯಿಗಳ ಅನುದಾನವನ್ನು ಘೋಷಿಸಿದ್ದಾರೆ. ಇದು ಇದುವರೆಗಿನ ಬಜೆಟ್ಗಳಲ್ಲೇ ರೈಲ್ವೆ ಇಲಾಖೆಗೆ ನೀಡಿರುವ ದಾಖಲೆಯ ಅನುದಾನವಾಗಿದೆ. ಇದು ಕಳೆದ ವರ್ಷಕ್ಕೆ 4 ಪಟ್ಟು ಹಾಗೂ 2013-14ರ ಕಾಂಗ್ರೆಸ್ ಸರ್ಕಾರದ ಬಜೆಟ್ಗೆ ಹೋಲಿಸಿದರೆ 9 ಪಟ್ಟು ಹೆಚ್ಚಾಗಿದೆ ಎಂದು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ತಿಳಿಸಿದ್ದಾರೆ.
ವಿವಿದ ಯೋಜನೆಗಳಿಗೆ 75 ಸಾವಿರ ಕೋಟಿ ರೂ
ಈ ಬಾರಿಯ ಬಜೆಟ್ನಲ್ಲಿ ರೈಲ್ವೆ ಇಲಾಖೆಗೆ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆಯಿತ್ತು. ಅದರಂತಯೇ ಭರ್ಜರಿ ಅನುದಾನ ಸಿಕ್ಕಿದೆ. ರೈಲ್ವೆಯ ಈ ಅನುದಾನದಲ್ಲಿ 100 ಹೊಸ ಯೋಜನೆಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಈ ಯೋಜನೆಗಳಿಗೆ 75 ಕೋಟಿ ರೂ. ಯನ್ನು ಮೀಸಲಿಡಲಾಗಿದೆ. ಪ್ರಯಾಣಿಕರ ಪ್ರಯಾಣ ಸುಲಭಗೊಳಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.
2023ರ ಬಜೆಟ್ನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಎಲೆಕ್ಟ್ರಿಕ್ ರೈಲ್ವೆ ವ್ಯವಸ್ಥೆಗೆ ಮಹತ್ವ
ರೈಲ್ವೆಯಲ್ಲಿ ಹೆಚ್ಚಿನ ಖಾಸಗಿ ಹೂಡಿಕೆಗೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಭಾರತೀಯ ರೈಲ್ವೆ, ಜಗತ್ತಿನ ಅತಿ ದೊಡ್ಡ ಎಲೆಕ್ಟ್ರಿಕ್ ರೈಲ್ವೆ ವ್ಯವಸ್ಥೆಯಾಗಿ ಬೆಳೆಯುವತ್ತ ಸಾಗುತ್ತಿದೆ. 2022-23ರಲ್ಲಿ 1,973 ಕಿಮೀ ಮಾರ್ಗದ ವಿದ್ಯುದೀಕರಣ ಸಾಧಿಸಲಾಗಿದೆ. 2021-22ರ ಅವಧಿಗೆ ಹೋಲಿಸಿದರೆ ಇದು ಶೇ 41ರಷ್ಟು ಅಧಿಕವಾಗಿದೆ. ಇದರ ಜತೆಗೆ 1,161 ಮತ್ತು 296 ಕಿ.ಮೀ. ಡಬಲ್ ಲೈನ್ ಮತ್ತು ಸೈಡಿಂಗ್‌ಗಳ ವಿದ್ಯುದೀಕರಣವನ್ನು ಈವರೆಗೆ ಮಾಡಲಾಗಿದೆ.
ಹೆಚ್ಚಿನ ವಂದೇ ಭಾರತ್ ರೈಲುಗಳ ಆರಂಭ ಸಾಧ್ಯತೆ
ಭಾರತೀಯ ರೈಲ್ವೆ ಆಗಸ್ಟ್ 2023 ರ ವೇಳೆಗೆ 75 ವಂದೇ ಭಾರತ್ ರೈಲುಗಳನ್ನು ಆರಂಭಿಸಲು ಚಿಂತನೆ ನಡೆಸಿದೆ. ಏತನ್ಮಧ್ಯೆ, 200 ವಂದೇ ಭಾರತ್ ಸ್ಲೀಪರ್ ರೈಲುಗಳ ತಯಾರಿಕೆಗೆ ಶೀಘ್ರದಲ್ಲೇ ಟೆಂಡರ್ ನೀಡುವ ಸಾಧ್ಯತೆಯಿದೆ. ವಿಶ್ವದಲ್ಲೇ ಉತ್ತಮ ಸೌಲಭ್ಯವುಳ್ಳ ರೈಲುಗಳಲ್ಲಿ ಒಂದಾಗಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಭಾರತೀಯ ರೈಲ್ವೆ ಜಾಲದಲ್ಲಿ ಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳ ಜಾಗವನ್ನು ನಿಧಾನವಾಗಿ ಆವರಿಸಿಕೊಳ್ಳುತ್ತಿವೆ. ಇನ್ನೂ ಸ್ಲೀಪರ್ ವಂದೇ ಭಾರತ್ ಆವೃತ್ತಿಗಳು ಮುಂಬರುವ ದಿನಗಳಲ್ಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳ ಸ್ಥಾನವನ್ನು ತುಂಬುತ್ತವೆ ಎನ್ನಲಾಗಿದೆ.
ರೈಲ್ವೆ ಹಳಿಗಳ ನವೀಕರಣಕ್ಕೆ ಒತ್ತು
2023 ರ ರೈಲ್ವೆ ಬಜೆಟ್ ನಂತರ 400 ರಿಂದ 500 ಸೆಮಿ-ಹೈ ಸ್ಪೀಡ್ ವಂದೇ ಭಾರತ್ ರೈಲುಗಳನ್ನು ಇಲಾಖೆ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ. ಜೊತೆಗೆ ವಂದೇ ಭಾರತ್ ರೈಲುಗಳ ಸಾಮರ್ಥ್ಯಕ್ಕೆ ತಕ್ಕಂತ ರೈಲ್ವೆ ಹಳಿಗಳನ್ನು 160 ಕಿಮೀ ವೇಗದ ಸಾಮರ್ಥ್ಯಕ್ಕೆ ನವೀಕರಿಸುವ ಅಗತ್ಯವೆ ಎಂದು ರೈಲ್ವೇ ತಜ್ಞರ ಸಲಹೆಯಾಗಿದೆ.
ಹಿಂದೆ ರೈಲ್ವೆ ಇಲಾಖೆಗೆ ನೀಡಿದ್ದ ಅನುಧಾನ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ