ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಲೋಕಸಭೆಯಲ್ಲಿ ಬಜೆಟ್ ಭಾಷಣ (Budget Speech) ಆರಂಭಿಸಿದ್ದಾರೆ. ಇದು ಅಮೃತಕಾಲದ ಮೊದಲ ಬಜೆಟ್. ಇದು ಹಿಂದಿನ ಬಜೆಟ್ಗಳ ದೃಢವಾದ ಅಡಿಪಾಯಗಳ ಮೇಲೆ ಸಿದ್ಧಗೊಂಡಿದೆ. ನಮ್ಮ ಯುವಕರು (Youths) , ಮಹಿಳೆಯರು (Womens) ಮತ್ತು ದಲಿತರ ಅಭಿವೃದ್ಧಿಗೆ ಬದ್ಧತೆ ತೋರುವ ಬಜೆಟ್ ಇದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಪ್ರಧಾನಿ ಆವಾಸ್ ಯೋಜನೆ ವೆಚ್ಚ ಶೇ 66ರಷ್ಟು ಹೆಚ್ಚಳವಾಗಿದ್ದು ₹79,000 ಕೋಟಿಗೆ ತಲುಪಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು. PMAY ಯೋಜನೆಯನ್ನು 2015 ರಲ್ಲಿ ಕೇಂದ್ರ ಸರ್ಕಾರವು ಘೋಷಿಸಿತು. ಇದು 2024 ರ ವೇಳೆಗೆ 'ಎಲ್ಲರಿಗೂ ವಸತಿ' ಅನ್ನು ಕಡಿಮೆ-ಆದಾಯದ ಗುಂಪು (LIG), ಆರ್ಥಿಕವಾಗಿ ದುರ್ಬಲ ವಿಭಾಗ (EWS) ಮತ್ತು ಮಧ್ಯಮ ಆದಾಯದ ಗುಂಪು (MIG 1 ಮತ್ತು 2) ಗೆ ತಲುಪಿಸುವ ಗುರಿಯನ್ನು ಹೊಂದಿದೆ.
ವಸತಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ!
ವಸತಿ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯವು ಈ ವರ್ಷದ ಬಜೆಟ್‌ನಲ್ಲಿ ₹ 79,000 ಕೋಟಿ ಅನುದಾನ ಘೋಷಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ವಸತಿ ಕ್ಷೇತ್ರಕ್ಕಾಗಿ ಮೀಸಲಿಟ್ಟಿರುವ ಹಣವು ಶೇ 66ರಷ್ಟು ಹೆಚ್ಚಾಗಿದೆ.
ಬಂಡವಾಳ ವೆಚ್ಚದ ಮೇಲೆ ಹೆಚ್ಚಿನ ಗಮನ!
ಬಂಡವಾಳ ವೆಚ್ಚದ ಮೇಲೆ ಸರ್ಕಾರ ಈ ಬಾರಿ ಕೂಡ ಹೆಚ್ಚಿನ ಗಮನ ಕೇಂದ್ರೀಕರಿಸಿದೆ. ಬಂಡವಾಳ ಹೂಡಿಕೆ ವೆಚ್ಚವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶೇ.33ರಷ್ಟು ಹೆಚ್ಚಳ ಮಾಡುವ ಮೂಲಕ 2023-24ನೇ ಸಾಲಿಗೆ 10ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದ್ದಾರೆ. 2022ನೇ ಸಾಲಿನ ಬಜೆಟ್‌ನಲ್ಲಿ ಕೂಡ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2023ನೇ ಆರ್ಥಿಕ ಸಾಲಿನಲ್ಲಿ ₹7.50 ಲಕ್ಷ ಕೋಟಿ ಬಂಡವಾಳ ವೆಚ್ಚ ಘೋಷಿಸಿದ್ದರು. 2022ನೇ ಆರ್ಥಿಕ ಸಾಲಿನಲ್ಲಿ ₹5.54 ಲಕ್ಷ ಕೋಟಿ ರೂ. ಬಂಡವಾಳ ವೆಚ್ಚ ಘೋಷಿಸಲಾಗಿತ್ತು.
ಇದನ್ನೂ ಓದಿ: ರೈಲ್ವೆ ಇಲಾಖೆಗೆ 9 ಪಟ್ಟು ಹೆಚ್ಚು ಅನುದಾನ, 2.40 ಲಕ್ಷ ಕೋಟಿ ಘೋಷಿಸಿದ ನಿರ್ಮಲಾ ಸೀತಾರಾಮನ್
ಎಲೆಕ್ಟ್ರಿಕ್ ರೈಲ್ವೆ ವ್ಯವಸ್ಥೆಗೆ ಮಹತ್ವ
ರೈಲ್ವೆಯಲ್ಲಿ ಹೆಚ್ಚಿನ ಖಾಸಗಿ ಹೂಡಿಕೆಗೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. ಭಾರತೀಯ ರೈಲ್ವೆ, ಜಗತ್ತಿನ ಅತಿ ದೊಡ್ಡ ಎಲೆಕ್ಟ್ರಿಕ್ ರೈಲ್ವೆ ವ್ಯವಸ್ಥೆಯಾಗಿ ಬೆಳೆಯುವತ್ತ ಸಾಗುತ್ತಿದೆ. 2022-23ರಲ್ಲಿ 1,973 ಕಿಮೀ ಮಾರ್ಗದ ವಿದ್ಯುದೀಕರಣ ಸಾಧಿಸಲಾಗಿದೆ. 2021-22ರ ಅವಧಿಗೆ ಹೋಲಿಸಿದರೆ ಇದು ಶೇ 41ರಷ್ಟು ಅಧಿಕವಾಗಿದೆ. ಇದರ ಜತೆಗೆ 1,161 ಮತ್ತು 296 ಕಿ.ಮೀ. ಡಬಲ್ ಲೈನ್ ಮತ್ತು ಸೈಡಿಂಗ್‌ಗಳ ವಿದ್ಯುದೀಕರಣವನ್ನು ಈವರೆಗೆ ಮಾಡಲಾಗಿದೆ.
ರೈಲ್ವೆ ಹಳಿಗಳ ನವೀಕರಣಕ್ಕೆ ಒತ್ತು
2023 ರ ರೈಲ್ವೆ ಬಜೆಟ್ ನಂತರ 400 ರಿಂದ 500 ಸೆಮಿ-ಹೈ ಸ್ಪೀಡ್ ವಂದೇ ಭಾರತ್ ರೈಲುಗಳನ್ನು ಇಲಾಖೆ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿದೆ. ಜೊತೆಗೆ ವಂದೇ ಭಾರತ್ ರೈಲುಗಳ ಸಾಮರ್ಥ್ಯಕ್ಕೆ ತಕ್ಕಂತ ರೈಲ್ವೆ ಹಳಿಗಳನ್ನು 160 ಕಿಮೀ ವೇಗದ ಸಾಮರ್ಥ್ಯಕ್ಕೆ ನವೀಕರಿಸುವ ಅಗತ್ಯವೆ ಎಂದು ರೈಲ್ವೇ ತಜ್ಞರ ಸಲಹೆಯಾಗಿದೆ.
ಹಿಂದೆ ರೈಲ್ವೆ ಇಲಾಖೆಗೆ ನೀಡಿದ್ದ ಅನುಧಾನ
2009ರಿಂದ 2014ರ ವರೆಗೆ 10, 623 ಕೋಟಿ ರೂಪಾಯಿ
2014-19ರವರೆಗೆ 24, 347 ಕೋಟಿ ರೂಪಾಯಿ
2022-23ರಲ್ಲಿ 77, 271 ಕೋಟಿ ರೂಪಾಯಿ
2023-24ರಲ್ಲಿ 2,40,000 ಕೋಟಿ ರೂಪಾಯಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ