Budget 2023: ಕರ್ನಾಟಕಕ್ಕೆ ಬಂಪರ್, ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಘೋಷಣೆ!

ಭದ್ರಾ ಮೇಲ್ದಂಡೆ ಯೋಜನೆ

ಭದ್ರಾ ಮೇಲ್ದಂಡೆ ಯೋಜನೆ

Union Budget 2023: ಹೌದು ಭದ್ರಾ ಜಲಾಶಯದಿಂದ ಬಯಲುಸೀಮೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿ ಘೋಚಿಸಲಾಗಿದೆ.

  • News18 Kannada
  • 2-MIN READ
  • Last Updated :
  • Bangalore [Bangalore], India
  • Share this:

ನವದೆಹಲಿ(ಫೆ.01): ಭದ್ರಾ ಮೇಲ್ದಂಡೆ ಯೋಜನೆಗೆ (Upper Bhadra Project) ರಾಷ್ಟ್ರೀಯ ಸ್ಥಾನಮಾನ ಲಭಿಸಿದೆ. ನಿರೀಕ್ಷೆಯಂತೆ ಕೇಂದ್ರ ಬಜೆಟ್‌ನಲ್ಲಿ ಬಂಪರ್ ಅನುದಾನ ಘೋಷಿಸಲಾಗಿದೆ. ಹೌದು ಭದ್ರಾ ಜಲಾಶಯದಿಂದ ಬಯಲುಸೀಮೆಗೆ ನೀರಾವರಿ ಸೌಲಭ್ಯ ಕಲ್ಪಿಸುವ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂಪಾಯಿ ಘೋಷಿಸಲಾಗಿದೆ. 2023ರ ವಿಧಾನಸಭೆ ಚುನಾವಣೆ (Karnataka Assembly Elections) ಸಮೀಪಿಸುತ್ತಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರ ರಾಜ್ಯಕ್ಕೆ ನಾನಾ ಕೊಡುಗೆಗಳನ್ನು ನೀಡುವ ನಿರೀಕ್ಷೆ ಇತ್ತು. ಅದರಂತೆ ಮೊದಲ ಹೆಜ್ಜೆಯಾಗಿ ಭದ್ರಾ ಮೇಲ್ದಂಡೆ ಯೋಜನೆಗೆ ಸರ್ಕಾರ ಅನುದಾನ ಘೋಷಿಸಿದೆ. ಈ ಮೂಲಕ ಕರ್ನಾಟಕದ ಬರಪೀಡಿತ ಪ್ರದೇಶಕ್ಕೆ ನೀರಾವರಿ ವ್ಯವಸ್ಥೆ ಲಭ್ಯವಾಗಲಿದೆ.


ಬಜೆಟ್​ ಸಂಬಂಧಿತ ಕ್ಷಣ ಕ್ಷಣದ ಮಾಹಿತಿಯ ಲೈವ್​ ಬ್ಲಾಗ್​: ನಿರ್ಮಲಾ ಆಯವ್ಯಯದ ಮೇಲೆ ಎಲ್ಲರ ಕಣ್ಣು


ಭದ್ರಾ ಯೋಜನೆಗೆ ರಾಜ್ಯದಿಂದ ಅನುದಾನ


2000ನೇ ಇಸವಿಯಲ್ಲಿ ಘೋಷಿಸಲಾದ ಈ ಯೋಜನೆ ಸದ್ಯ ಪ್ರಗತಿ ಹಂತದಲ್ಲಿದೆ.  2003ರಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿತು. 2008ರಲ್ಲಿ ಯೋಜನೆಗೆ ಚಾಲನೆ ನೀಡಲಾಯಿತು. ಭೂಸ್ವಾಧೀನ ಪ್ರಕ್ರಿಯೆಗಾಗಿ ಅರಣ್ಯ ಇಲಾಖೆ ಅನುಮತಿ ಪಡೆದುಕೊಳ್ಳುವುದರಿಂದ ಈ ಯೋಜನೆ ಮತ್ತಷ್ಟು ವಿಳಂಬಗೊಂಡಿತ್ತು. ಅಲ್ಲದೇ ಇದಕ್ಕೆ ತಗುಲುವ ವೆಚ್ಚವೂ ಹೆಚ್ಚಳವಾಗುತ್ತಿದ್ದ ಕಾರಣ ಈ ಆಮೆಗತಿಯಲ್ಲಿ ಸಾಗಿತ್ತು. ಆದರೀಗ ಈ ಯೋಜನೆಗೆ ರಾಷ್ಟ್ರೀಯ ಸ್ಥಾನಮಾನ ಲಭಿಸಿರುವುದರಿಂದ ಶೀಘ್ರದಲ್ಲೇ ಈ ಭಾಗದ ಜನರ ನೀರಾವರಿ ಸಮಸ್ಯೆಗೆ ಪರಿಹಾರ ಸಿಗಲಿದೆ.



ಧನ್ಯವಾದ ಸಲ್ಲಿಸಿದ ಸಿಎಂ ಬೊಮ್ಮಾಯಿ


ಇನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಬಜೆಟ್​ನಲ್ಲಿ ಅನುದಾನ ಘೋಷಿಸಿದ ಬೆನ್ನಲ್ಲೇ ಸಿಎಂ ಬೊಮ್ಮಾಯಿ ಟ್ವೀಟ್​ ಮಾಡುವ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಬೊಮ್ಮಾಯಿ ಈ ಸಾಲಿನ ಕೇಂದ್ರ ಬಜೆಟ್ ನಲ್ಲಿ ರಾಜ್ಯದ ಪ್ರಮುಖ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಗೆ ರೂ 5300 ಕೋಟಿ ಅನುದಾನ ಘೋಷಿಸಿದ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಸಮಸ್ತ ಕರ್ನಾಟಕದ ಪರವಾಗಿ ಧನ್ಯವಾದಗಳು ಎಂದು ಬರೆದಿದ್ದಾರೆ. 


ಇದನ್ನೂ ಓದಿ: Budget 2023: ಬಡವರಿಗೆ ಸರ್ಕಾರದ ಗಿಫ್ಟ್​, ಉಚಿತ ಆಹಾರ ಧಾನ್ಯಕ್ಕೆ 2 ಲಕ್ಷ ಕೋಟಿ ಮೀಸಲು, ಸಂಪೂರ್ಣ ವೆಚ್ಚ ಇನ್ನು ಕೇಂದ್ರದ್ದೇ!




ರಕ್ಷಣಾ ವಲಯಕ್ಕೆ 5.94 ಲಕ್ಷ ಕೋಟಿ ರೂಪಾಯಿ ಅನುದಾನ


ಈ ಬಾರಿ ಬಜೆಟ್‌ನಲ್ಲಿ ರಕ್ಷಣಾ ವಲಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. 2022 ರ ಬಜೆಟ್‌ನಲ್ಲಿ, ರಕ್ಷಣಾ ವಲಯಕ್ಕೆ ಒಟ್ಟು 5.25 ಲಕ್ಷ ಕೋಟಿ ರೂಪಾಯಿಗಳನ್ನು ನೀಡಲಾಗಿತ್ತು. ಇದು ಸಂಪೂರ್ಣ ಬಜೆಟ್‌ನ ಒಟ್ಟು ಶೇಕಡಾ 13.31 ರಷ್ಟಾಗಿತ್ತು. ಇದೀಗ ಈ ಬಾರಿ ರಕ್ಷಣಾ ಬಜೆಟ್ ಗಾತ್ರವನ್ನು ಹೆಚ್ಚಿಸಲಾಗಿದೆ. ಈ ಬಾರಿ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಒಟ್ಟು 5.94 ಲಕ್ಷ ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಇದು ಇದು ಕಳೆದ ವರ್ಷ ಬಜೆಟ್‌ನಲ್ಲಿ ನೀಡಿದ ಶೇಕಡಾ 16ರಷ್ಟು ಹೆಚ್ಚಿನ ಅನುದಾನವಾಗಿದೆ.

Published by:Precilla Olivia Dias
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು