ಬಹುನಿರೀಕ್ಷಿತ ಕೇಂದ್ರ ಬಜೆಟ್ (Budget 2023) ಮಂಡನೆಯಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಬುಧವಾರ ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ್ದು, ಇದು ಮಧ್ಯಮ ವರ್ಗದ ಜನರ ಹೊರೆಯನ್ನು ಬಹಳಷ್ಟು ಮಟ್ಟಿಗೆ ಇಳಿಸಿದೆ. ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಆರ್ಥಿಕ ಬೆಳವಣಿಗೆಯ ವ್ಯಾಪ್ತಿ ವಿಸ್ತರಣೆ, ಮೂಲಸೌಕರ್ಯ ಮತ್ತು ಉತ್ಪಾದನೆ ಮತ್ತು ಉದ್ಯೋಗ ಸೃಷ್ಟಿಯಂತಹ ಪ್ರಮುಖ ಕ್ಷೇತ್ರಗಳನ್ನು ಉತ್ತೇಜಿಸುವತ್ತ ಗಮನಹರಿಸುವುದಾಗಿ ಹೇಳಿದರು. ಇದೇ ವೇಳೆ ಆದಾಯ ತೆರಿಗೆ ಮಿತಿಯನ್ನು ಏಳು ಲಕ್ಷಕ್ಕೆ ಏರಿಸುವ ಘೋಷಣೆಯನ್ನೂ ಮಾಡಿದ್ದಾರೆ.
ಹಾಗಾದ್ರೆ ಇಂದಿನ ಬಜೆಟ್ನಲ್ಲಿ ಮಾಡಲಾದ ಪ್ರಮುಖ ಘೋಷಣೆಗಳು ಯಾವುದು? ಇಲ್ಲಿದೆ ನೋಡಿ ವಿವರ
-ರೈಲ್ವೆಗೆ 2.4 ಲಕ್ಷ ಕೋಟಿ ರೂಪಾಯಿಗಳು ಅನುದಾನ, ಇದು ಇದುವರೆಗಿನ ಅತಿ ಹೆಚ್ಚು ಹಂಚಿಕೆಯಾಗಿದೆ
-ಕೃಷಿ ಸಾಲದ ಗುರಿ 20 ಲಕ್ಷ ಕೋಟಿಗೆ ಏರಿಕೆ
-ಮೊಬಿಲಿಟಿ ಇನ್ಫ್ರಾದಡಿ 50 ಹೆಚ್ಚುವರಿ ವಿಮಾನ ನಿಲ್ದಾಣಗಳು, ಹೆಲಿಪೋರ್ಟ್‌ಗಳ ನಿರ್ಮಾಣ
-ಪ್ರವಾಸೋದ್ಯಮಕ್ಕಾಗಿ ಚಾಲೆಂಜ್ ಮೋಡ್ ಮೂಲಕ 50 ಸ್ಥಳಗಳನ್ನು ಆಯ್ಕೆ ಮಾಡಿ ಅಭಿವೃದ್ಧಿ.
ಬಜೆಟ್ ಸಂಬಂಧಿತ ಕ್ಷಣ ಕ್ಷಣದ ಮಾಹಿತಿಯ ಲೈವ್ ಬ್ಲಾಗ್: ನಿರ್ಮಲಾ ಆಯವ್ಯಯದ ಮೇಲೆ ಎಲ್ಲರ ಕಣ್ಣು
-ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವನ್ನು ಎರಡು ವರ್ಷಗಳವರೆಗೆ ಲಭ್ಯವಾಗುವಂತೆ ಮಾಡಲಾಗುತ್ತದೆ, 2 ಲಕ್ಷದವರೆಗಿನ ಠೇವಣಿಗಳನ್ನು ಶೇಕಡಾ 7.5 ಬಡ್ಡಿ.
-ಹಿರಿಯ ನಾಗರಿಕರ ಉಳಿತಾಯ ಯೋಜನೆ ಠೇವಣಿ ಮಿತಿ 15 ಲಕ್ಷದಿಂದ 30 ಲಕ್ಷಕ್ಕೆ ಏರಿಕೆ
-ಹೊಸ ತೆರಿಗೆ ಪದ್ಧತಿಯಲ್ಲಿ ಆದಾಯ ತೆರಿಗೆ ರಿಯಾಯಿತಿ ಮಿತಿಯನ್ನು 5 ಲಕ್ಷದಿಂದ 7 ಲಕ್ಷಕ್ಕೆ ಹೆಚ್ಚಿಸಲಾಗಿದೆ.
-ಕರ್ನಾಟಕದ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಅನುದಾನ ಘೋಷಣೆ.
-ಪ್ರಧಾನಿ ಆವಾಸ್ ಯೋಜನೆಗೆ ಶೇ 66ರಷ್ಟು ಹೆಚ್ಚಳವಾಗಿದ್ದು, 79,000 ಕೋಟಿ ರೂ. ಮಾಡಲಾಗಿದೆ.
-ಬಂಡವಾಳ ಹೂಡಿಕೆ ವೆಚ್ಚವನ್ನು 33 ಪ್ರತಿಶತದಿಂದ 10 ಲಕ್ಷ ಕೋಟಿಗೆ ಹೆಚ್ಚಿಳ, ಇದು 2024 ರ ಆರ್ಥಿಕ ವರ್ಷದಲ್ಲಿ GDP ಶೇಕಡಾ 3.3 ಆಗಿದೆ.
-ಕೇಂದ್ರದ ಪರಿಣಾಮಕಾರಿ ಬಂಡವಾಳ ವೆಚ್ಚ - 13.7 ಲಕ್ಷ ಕೋಟಿ ರೂ
-ಪ್ರಮುಖ ಸ್ಥಳಗಳಲ್ಲಿ 157 ಹೊಸ ನರ್ಸಿಂಗ್ ಕಾಲೇಜುಗಳು
-2047 ರ ವೇಳೆಗೆ ಸಿಕಲ್ ಸೆಲ್ ಅನೀಮಿಯ (ರಕ್ತಹೀನತೆ) ತೊಡೆದು ಹಾಕಲು ಯೋಜನೆ.
-ಮುಂದಿನ ಮೂರು ವರ್ಷಗಳಲ್ಲಿ ಆದಿವಾಸಿಗಳಿಗೆ ಸುರಕ್ಷಿತ ವಸತಿ, ನೈರ್ಮಲ್ಯ, ಕುಡಿಯುವ ನೀರು ಮತ್ತು ವಿದ್ಯುತ್ ಸೌಲಭ್ಯಕ್ಕಾಗಿ 15,000 ಕೋಟಿ ರೂ.
ಇದನ್ನೂ ಓದಿ: Budget 2023: ಜನ ಸಾಮಾನ್ಯರಿಗೆ ಬಿಗ್ ಶಾಕ್! ಬಜೆಟ್ ನಂತರ ಇವುಗಳ ಬೆಲೆ ಹೆಚ್ಚಾಗುತ್ತಾ?
-ಮ್ಯಾನ್‌ಹೋಲ್‌ನಿಂದ ಮಷಿನ್-ಹೋಲ್ ಮೋಡ್‌ಗೆ: ಎಲ್ಲಾ ನಗರಗಳು ಮತ್ತು ಪಟ್ಟಣಗಳು ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳ 100 ಪ್ರತಿಶತ ಪರಿವರ್ತನೆಗಾಗಿ ಸಕ್ರಿಯಗೊಳಿಸಲಾಗುತ್ತದೆ
-ಏಕಲವ್ಯ ಮಾದರಿ ವಸತಿ ಶಾಲೆಗಳು, ಇದಕ್ಕಾಗಿ 38,800 ಶಿಕ್ಷಕರ ನೇಮಕ.
-'ಮೇಕ್ AI ಇನ್ ಇಂಡಿಯಾ', 'ಮೇಕ್ AI ವರ್ಕ್ ಫಾರ್ ಇಂಡಿಯಾ': ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ AIಗಾಗಿ ಮೂರು ಉನ್ನತ ಕೇಂದ್ರಗಳನ್ನು ಸ್ಥಾಪನೆ.
-63,000 ಕ್ರೆಡಿಟ್ ಸೊಸೈಟಿಗಳ ಗಣಕೀಕರಣಕ್ಕೆ 2,516 ಕೋಟಿ ರೂ.
-ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ 5G ಸೇವೆಗಳನ್ನು ಬಳಸಿಕೊಂಡು ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲು 100 ಲ್ಯಾಬ್‌ಗಳ ಸ್ಥಾಪನೆ
-ನಿವ್ವಳ-ಶೂನ್ಯ ಹೊರಸೂಸುವಿಕೆ ಗುರಿಗಳಿಗೆ ಶಕ್ತಿ ಪರಿವರ್ತನೆಗಾಗಿ 35,000 ಕೋಟಿ ರೂ
-ಪಳೆಯುಳಿಕೆ ಇಂಧನದ ಮೇಲೆ ಕಡಿಮೆ ಅವಲಂಬನೆಗಾಗಿ ಹಸಿರು ಹೈಡ್ರೋಜನ್ ಮಿಷನ್
-4000 MWh ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆಗಳನ್ನು ಬೆಂಬಲಿಸಲಾಗುತ್ತದೆ
-ವ್ಯವಹಾರವನ್ನು ಸುಲಭಗೊಳಿಸಲು 39,000 ಅನುಸರಣೆಗಳನ್ನು ಕಡಿಮೆ ಮಾಡಲಾಗುತ್ತದೆ,
-30 ಸ್ಕಿಲ್ ಇಂಡಿಯಾ ಅಂತರಾಷ್ಟ್ರೀಯ ಕೇಂದ್ರಗಳ ಸ್ಥಾಪನೆ.
-ನೈಸರ್ಗಿಕ ಕೃಷಿ - ಒಂದು ಕೋಟಿ ರೈತರಿಗೆ ನೆರವು ಸಿಗಲಿದೆ.
ಒಟ್ಟಾರೆಯಾಗಿ ಈ ಬಾರಿಯ ಬಜೆಟ್ ಹಲವರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಅದರಲ್ಲೂ ಮಧ್ಯಮ ಶ್ರಮಿಕ ವರ್ಗದ ಜನರ ಹೊರೆಯನ್ನು ಕಡಿಮೆ ಮಾಡಿದ್ದು, ಇದೊಂದು ದೂರದೃಷ್ಟಿಯಿಂದ ರೂಪಿಸಲಾದ ಬಜೆಟ್ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ