• ಹೋಂ
 • »
 • ನ್ಯೂಸ್
 • »
 • ಬ್ಯುಸಿನೆಸ್
 • »
 • Budget 2023: ಬಜೆಟ್​ ದಿನಸಿ ಅಂಗಡಿ ರಸೀದಿಯಂತಿದೆ ಎಂದು ಸುಬ್ರಮಣಿಯನ್ ಸ್ವಾಮಿ ಟೀಕೆ, ಎಲೆಕ್ಷನ್ ಬಜೆಟ್​ ಎಂದ ಖರ್ಗೆ!

Budget 2023: ಬಜೆಟ್​ ದಿನಸಿ ಅಂಗಡಿ ರಸೀದಿಯಂತಿದೆ ಎಂದು ಸುಬ್ರಮಣಿಯನ್ ಸ್ವಾಮಿ ಟೀಕೆ, ಎಲೆಕ್ಷನ್ ಬಜೆಟ್​ ಎಂದ ಖರ್ಗೆ!

2023ರ ಬಜೆಟ್​ ಕುರಿತು ಪ್ರತಿಕ್ರಿಯೆ

2023ರ ಬಜೆಟ್​ ಕುರಿತು ಪ್ರತಿಕ್ರಿಯೆ

ಬಜೆಟ್​ ಕುರಿತು ಟ್ವೀಟ್ ಮಾಡಿರುವ ಸುಬ್ರಹ್ಮಣಿಯನ್ ಸ್ವಾಮಿ, ಇಂದು ಮಂಡನೆಯಾಗಿರುವುದು ಬಜೆಟ್ ​ನಂತಿದಿಯೇ? ಇದು ಕಿರಾಣಿ ಅಂಗಡಿ ಮಾಲೀಕನ ಬಿಲ್ ​ನಂತಿದೆ. ಒಂದು ಯೋಗ್ಯವಾದ ಬಜೆಟ್ ತನ್ನ ಉದ್ದೇಶಗಳೇನು ಎಂಬುದನ್ನು ಬಹಿರಂಗಪಡಿಸಬೇಕು. ಅದು ಜಿಡಿಪಿ ಬೆಳವಣಿಗೆ ದರವಾಗಿದ್ದರೆ, ಹೂಡಿಕೆಯ ಮಟ್ಟ ಮತ್ತು ರಿಟರ್ನ್ ದರ, ಆದ್ಯತೆಗಳು, ಆರ್ಥಿಕ ತಂತ್ರಗಾರಿಕೆ ಮತ್ತು ಸಂಪನ್ಮೂಲ ಕ್ರೋಢೀಕರಣವನ್ನು ಬಹಿರಂಗಪಡಿಸಬೇಕು " ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ಆಯವ್ಯಯವನ್ನು​ ಟೀಕಿಸಿದ್ದಾರೆ.

ಮುಂದೆ ಓದಿ ...
 • Share this:

  ನವದೆಹಲಿ: ಬುಧವಾರ ಕೇಂದ್ರ ಹಣಕಾಸು ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman)​ ಅವರು 2023-24 ರ ಸಾಲಿನ ಬಜೆಟ್​ (Budget) ಮಂಡಿಸಿದ್ದಾರೆ. ಆದರೆ ಈ ಬಜೆಟ್​ ಸ್ವಪಕ್ಷದವರಿಂದಲೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಿಜೆಪಿ ಹಿರಿಯ ನಾಯಕ ಸುಬ್ರಹ್ಮಣಿಯನ್ ಸ್ವಾಮಿ (Subramanian Swamy) ಕೇಂದ್ರದ ಈ ವರ್ಷದ ಬಜೆಟ್ ​ಅನ್ನು ದಿನಸಿ ಅಂಗಡಿ ಬಿಲ್​ಗೆ ಹೋಲಿಕೆ ಮಾಡಿ ಟೀಕಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಮುಂಬರುವ ಎರಡು ಮೂರು ರಾಜ್ಯಗಳ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್​ ಮಂಡನೆ ಮಾಡಿದಂತಿದೆ ಎಂದು ಟೀಕಿಸಿದ್ದಾರೆ.


  ಬಜೆಟ್ ಅಲ್ಲ ಕಿರಾಣಿ ಅಂಗಡಿ ಮಾಲಿಕನ ಬಿಲ್


  ಬಜೆಟ್​ ಕುರಿತು ಟ್ವೀಟ್ ಮಾಡಿರುವ ಸುಬ್ರಹ್ಮಣಿಯನ್ ಸ್ವಾಮಿ, ಇಂದು ಮಂಡನೆಯಾಗಿರುವುದು ಬಜೆಟ್​ನಂತಿದಿಯೇ? ಇದು ಕಿರಾಣಿ ಅಂಗಡಿ ಮಾಲೀಕನ ಬಿಲ್ ​ನಂತಿದೆ. ಒಂದು ಯೋಗ್ಯವಾದ ಬಜೆಟ್ ತನ್ನ ಉದ್ದೇಶಗಳೇನು ಎಂಬುದನ್ನು ಬಹಿರಂಗಪಡಿಸಬೇಕು. ಅದು ಜಿಡಿಪಿ ಬೆಳವಣಿಗೆ ದರವಾಗಿದ್ದರೆ, ಹೂಡಿಕೆಯ ಮಟ್ಟ ಮತ್ತು ರಿಟರ್ನ್ ದರ, ಆದ್ಯತೆಗಳು, ಆರ್ಥಿಕ ತಂತ್ರಗಾರಿಕೆ ಮತ್ತು ಸಂಪನ್ಮೂಲ ಕ್ರೋಢೀಕರಣವನ್ನು ಬಹಿರಂಗಪಡಿಸಬೇಕು " ಎಂದು ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ಬಜೆಟ್​ ಟೀಕಿಸಿದ್ದಾರೆ.


  ಬಜೆಟ್​ ಅಲ್ಲ, ಚುನಾವಣಾ ಪ್ರಚಾರದ ಭಾಷಣ


  ಬಜೆಟ್​ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಕರ್ನಾಟಕ ಸೇರಿದಂತೆ ಮುಂಬರುವ ಎರಡು ಮೂರು ರಾಜ್ಯಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ಈ ಬಜೆಟ್​ನಲ್ಲಿ ಬಡವರಿಗೆ ಯಾವುದೇ ಕೊಡುಗೆ ನೀಡಿಲ್ಲ. ಹಣದುಬ್ಬರವನ್ನು ನಿಯಂತ್ರಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದಿರುವ ಖರ್ಗೆ, ಇಂದಿನ ಬಜೆಟ್​ ಚುನಾವಣಾ ಪ್ರಚಾರದ ಭಾಷಣದಂತಿತ್ತು. ಉದ್ಯೋಗ ಸೃಷ್ಟಿ , ನರೇಗಾ ಸೇರಿದಂತೆ ಯಾವುದೇ ವಿಷಯಗಳತ್ತಲೂ ಗಮನ ಹರಿಸಿಲ್ಲ ಎಂದು ಕಿಡಿಕಾರಿದ್ದಾರೆ.


  ಇದನ್ನೂ ಓದಿ: Budget 2023: ಇದು 'ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್' ಬಜೆಟ್! ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯ

   ಜನ ವಿರೋಧಿ ಬಜೆಟ್ ಎಂದ ದೀದಿ


  ಬಜೆಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇದೊಂದು ಜನ ವಿರೋಧಿ ಬಜೆಟ್. ಕೇಂದ್ರ ಬಜೆಟ್‌ನಿಂದ ಬಡಜನರಿಗೆ ಯಾವುದೇ ಲಾಭವಿಲ್ಲ. ಆದಾಯ ತೆರಿಗೆ ವಿನಾಯಿತಿ ಮಿತಿ ಏರಿಕೆ ಮಾಡಿದೆ. ಆದರೆ ಈ ಏರಿಕೆಯಿಂದ ಯಾರಿಗೂ ಯಾವುದೇ ಲಾಭವಿಲ್ಲ. ಅಲ್ಲದೆ ಈ ಬಜೆಟ್‌ನಲ್ಲಿ ಯಾವುದೇ ದೂರದೃಷ್ಟಿ ಇಲ್ಲ. ಹೀಗಾಗಿ ಇದು ಜನ ವಿರೋಧಿ ಹಾಗೂ ಬಡವರ ವಿರೋಧಿ ಬಜೆಟ್ ಆಗಿದೆ ಎಂದು ಮಮತಾ ಬ್ಯಾನರ್ಜಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
  ಹಣದುಬ್ಬರ ಹೆಚ್ಚಿಸಲಿದೆ ಎಂದ ಕೇಜ್ರಿವಾಲ್


  ಕೇಂದ್ರ ಸರ್ಕಾರದ ಬಜೆಟ್ ಹಣದುಬ್ಬರ ನಿಯಂತ್ರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ನಿರುದ್ಯೋಗ ಸಮಸ್ಯೆಗೆ ಯಾವುದೇ ಪರಿಹಾರ ನೀಡಿಲ್ಲ. ಇಷ್ಟೇ ಅಲ್ಲ ಶಿಕ್ಷಣ ಮೀಸಲಿಟ್ಟಿದ್ದ ಬಜೆಟ್ ಗಾತ್ರವನ್ನು ಶೇಕಡಾ 2.64ರಿಂದ 2.5ಕ್ಕೆ ಇಳಿಸಲಾಗಿದೆ. ಹೀಗಾಗಿ ಈ ಬಜೆಟ್‌ನಿಂದ ಯಾವುದೇ ಪ್ರಯೋಜನವಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.


  ಘೋಷಣೆಯೇ ಆಯ್ತು ಅನುಷ್ಠಾನ ಯಾವಾಗ?


  ಈ ಬಜೆಟ್ ದೇಶದ ಜ್ವಲಂತ ಸಮಸ್ಯೆಗಳಾದ ನಿರುದ್ಯೋಗ, ಬೆಲೆ ಏರಿಕೆಯ ಬಗ್ಗೆ ದೇಶದ ನಿಜವಾದ ಭಾವನೆಯನ್ನು ತಿಳಿಸುತ್ತಿಲ್ಲ. ಇದು ಈ ಹಿಂದೆ ಮಾಡಲಾದ ಅಲಂಕಾರಿಕ ಪ್ರಕಟಣೆಗಳನ್ನು ಮಾತ್ರ ಹೊಂದಿದೆ. ಆದರೆ ಅನುಷ್ಠಾನ ಯಾವಾಗ ಮಾಡುತ್ತಾರೆ? ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಿಂದ ಕೇವಲ ವಿಮಾ ಕಂಪನಿಗಳಿಗೆ ಲಾಭವಾಗಿದೆತ, ರೈತರಿಗೆ ಅಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಕಿಡಿಕಾರಿದ್ದಾರೆ.  ಕೆಲವು ರಾಜ್ಯಗಳಿಗೆ ಸೀಮಿತವಾದ ಬಜೆಟ್


  ಬಿಆರ್​ಎಸ್​ ನಾಯಕಿ ಕವಿತಾ ಕಲ್ವಕುಂಟ್ಲ ಬಜೆಟ್​ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈ ಬಜೆಟ್​ ಮೋದಿ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದು ಕೆಲವು ರಾಜ್ಯಗಳ ಬಜೆಟ್‌ನಂತೆ ಕಾಣುತ್ತಿದೆ. ನಾವು 10 ಲಕ್ಷ ರೂಪಾಯಿಗಳವರೆಗೆ ತೆರಿಗೆ ರಿಯಾಯಿತಿಯನ್ನು ನಿರೀಕ್ಷಿಸಿದ್ದೆವು. ತೆಲಂಗಾಣದಲ್ಲಿ ನಾವು ಜನರಿಗೆ ಉತ್ತಮ ಸಂಬಳ ನೀಡುತ್ತೇವೆ. ಆದ್ದರಿಂದ ಈಗ ಜಾರಿಯಾಗಿರುವ ರಿಯಾಯಿತಿ ನಮಗೆ ಪ್ರಯೋಜನವಿಲ್ಲ. ಅಲ್ಲದೆ ಕೇಂದ್ರವು ಚುನಾವಣೆ ನಡೆಯುವ ರಾಜ್ಯಗಳಲ್ಲಿ ಅಥವಾ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ಘೋಷಿಸಿದೆ. ಇನ್ನೂ ಮೂಲಸೌಕರ್ಯಕ್ಕಾಗಿ ಎಂದು 10,000 ಕೋಟಿ ರೂ.ಗಳನ್ನು ಘೋಷಿಸಿದ್ದಾರೆ, ಯಾವ ಮೂಲಸೌಕರ್ಯ ಎಂಬುದರ ಬಗ್ಗೆ ಸ್ಪಷ್ಟತೆ ನೀಡಿಲ್ಲ ಎಂದು ಬಿಆರ್​ಎಸ್​ ಪಕ್ಷದ ನಾಯಕಿ ಕವಿತಾ ಕಲ್ವಕುಂಟ್ಲ ಟೀಕಿಸಿದ್ದಾರೆ.

  Published by:Rajesha B
  First published: