• Home
 • »
 • News
 • »
 • business
 • »
 • Union Budget 2023: ಈ ಬಾರಿಯ ಬಜೆಟ್‌ನಲ್ಲಿ ಭಾರತದ ಜಿಡಿಪಿ ದರ ಕೇವಲ ಈ ಹಿಂದೆ ನಿರೀಕ್ಷಿಸಿದ ಪ್ರಮಾಣಕ್ಕಿಂತ ಬಲು ಕಡಿಮೆಯಾಗಬಹುದಂತೆ..!

Union Budget 2023: ಈ ಬಾರಿಯ ಬಜೆಟ್‌ನಲ್ಲಿ ಭಾರತದ ಜಿಡಿಪಿ ದರ ಕೇವಲ ಈ ಹಿಂದೆ ನಿರೀಕ್ಷಿಸಿದ ಪ್ರಮಾಣಕ್ಕಿಂತ ಬಲು ಕಡಿಮೆಯಾಗಬಹುದಂತೆ..!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಈ ಔಪಚಾರಿಕ ಜಿಡಿಪಿ ದರವು ಹಣದುಬ್ಬರವನ್ನು ಸಹ ಒಳಗೊಂಡಿದ್ದು ತೆರಿಗೆ ಸಂಗ್ರಹದ ಲೆಕ್ಕಾಚಾರಕ್ಕೆ ಇದನ್ನು ಬೆಂಚ್ ಮಾರ್ಕ್ ಅನ್ನಾಗಿ ಪರಿಗಣಿಸಲಾಗುತ್ತದೆ. ಈ ಮಧ್ಯೆ, ಅಮೆರಿಕ ಸಂಭಾವ್ಯ ಆರ್ಥಿಕ ಹಿಂಜರಿತಕ್ಕೆ ತಳ್ಳಲ್ಪಡುತ್ತಿರುವುದರಿಂದ ಬಾಹ್ಯವಾಗಿ ರಫ್ತಿಗೆ ಬೇಡಿಕೆಯು ಕುಸಿದಿದ್ದು, ಇದರ ಫಲಶೃತಿಯಾಗಿ ಭಾರತದ ಈ ಸಾಲಿನ ಜಿಡಿಪಿ ದರ ಹಿಂದೆ ನಿರೀಕ್ಷಿಸಿದ್ದಕ್ಕಿಂತ ಕಡಿಮೆಯಾಗುವ ಸಾಧ್ಯತೆಯಿದೆ.

ಮುಂದೆ ಓದಿ ...
 • Trending Desk
 • 3-MIN READ
 • Last Updated :
 • Delhi, India
 • Share this:

  ನವದೆಹಲಿ:  2023ನೇ ಸಾಲಿನ ಕೇಂದ್ರ ಬಜೆಟ್ (Union Budget 2023) ಮಂಡನೆ ಸನ್ನಿಹಿತವಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Sitharaman )​ ಮಂಡಿಸುವ ಬಜೆಟ್​ ಎಲ್ಲರ ನಿರೀಕ್ಷೆಗೆ ಸಮಾಧಾನ ತರುತ್ತದೆಯೇ ಗೊತ್ತಿಲ್ಲ. ಏಕೆಂದರೆ, ಮುಂದಿನ ವಾರದಲ್ಲಿ ನಡೆಯಲಿರುವ ವಾರ್ಷಿಕ ಬಜೆಟ್ ಮಂಡನೆಯಲ್ಲಿ, ಭಾರತವು ತನ್ನ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್ (GDP) ದರವನ್ನು 11% ರಷ್ಟು ದಾಖಲಿಸಲಿದೆ. ಇದು ಈ ಹಿಂದೆ 23-24 ರಲ್ಲಿ ನಿರೀಕ್ಷಿಸಲಾಗಿದ್ದ ದರಕ್ಕಿಂತ ಕಡಿಮೆಯಾಗಿದ್ದು ದುರ್ಬಲಗೊಂಡ ರಫ್ತಿನಿಂದಾಗಿಯೇ ಜಿಡಿಪಿ ಕಡಿಮೆಯಾಗಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.


  ಈ ಔಪಚಾರಿಕ ಜಿಡಿಪಿ ದರವು ಹಣದುಬ್ಬರವನ್ನು ಸಹ ಒಳಗೊಂಡಿದ್ದು ತೆರಿಗೆ ಸಂಗ್ರಹದ ಲೆಕ್ಕಾಚಾರಕ್ಕೆ ಇದನ್ನು ಬೆಂಚ್ ಮಾರ್ಕ್ ಅನ್ನಾಗಿ ಪರಿಗಣಿಸಲಾಗುತ್ತದೆ. ಈ ಮಧ್ಯೆ, ಅಮೆರಿಕ ಸಂಭಾವ್ಯ ಆರ್ಥಿಕ ಹಿಂಜರಿತಕ್ಕೆ ತಳ್ಳಲ್ಪಡುತ್ತಿರುವುದರಿಂದ ಬಾಹ್ಯವಾಗಿ ರಫ್ತಿಗೆ ಬೇಡಿಕೆಯು ಕುಸಿದಿದ್ದು, ಇದರ ಫಲಶೃತಿಯಾಗಿ ಭಾರತದ ಈ ಸಾಲಿನ ಜಿಡಿಪಿ ದರ ಹಿಂದೆ ನಿರೀಕ್ಷಿಸಿದ್ದಕ್ಕಿಂತ ಕಡಿಮೆಯಾಗುವ ಸಾಧ್ಯತೆಯಿದೆ.


  ಪ್ರಸಕ್ತ ವರ್ಷಕ್ಕಿಂತ ಕಡಿಮೆ


  ಆದಾಗ್ಯೂ, ಪ್ರಸ್ತುತ ಆರ್ಥಿಕ ವರ್ಷವು ಮುಕ್ತಾಯವಾಗುವವರೆಗೆ ಅಂದರೆ ಮಾರ್ಚ್ 31ರ ತನಕ ಭಾರತವು 15.4% ರಷ್ಟು ಜಿಡಿಪಿ ದರ ನಿರೀಕ್ಷಿಸುತ್ತಿದೆ. ಆದರೆ ಈ ಬಜೆಟ್ ನಲ್ಲಿ ದಾಖಲಾಗಲಿರುವ 10.6%-11% ರಷ್ಟಿನ ಜಿಡಿಪಿ ದರವು ತೆರಿಗೆ ಸಂಗ್ರಹ ದರದ ಮೇಲೆ ಪರಿಣಾಮ ಬೀರಲಿದ್ದು, ಅದು 23-24ರ ಅವಧಿಯಲ್ಲಿ ಸುಮಾರು 8% ರಷ್ಟು ಆಗಿರಬಹುದು ಹಾಗೂ ಇದು ಪ್ರಸ್ತುತ ಆರ್ಥಿಕ ವರ್ಷದ ದರವಾದ 14.5% ಕ್ಕಿಂತಲೂ ಕಡಿಮೆಯಾಗಿರುವುದಾಗಿ IDFC ಫಸ್ಟ್ ಬ್ಯಾಂಕ್ ನ ಆರ್ಥಿಕ ತಜ್ಞರಾದ ಗೌರ ಸೇನ್ ಗುಪ್ತಾ ಹೇಳುತ್ತಾರೆ.


  ಇದನ್ನೂ ಓದಿ: Halwa Ceremony: ಕೇಂದ್ರ ಬಜೆಟ್​ಗೂ ಮುನ್ನ ನಡೆಯುತ್ತೆ ಸಾಂಪ್ರದಾಯಿಕ ಹಲ್ವಾ ಸಮಾರಂಭ, ಮಾಹಿತಿ ತಿಳಿಯಿರಿ


  ಅಮೆರಿಕಾದಲ್ಲಿ ಆರ್ಥಿಕ ಹಿಂಜರಿತ


  ಅಧಿಕಾರಿಯೊಬ್ಬರು ಹೇಳಿದ ಪ್ರಕಾರ, ಈ ಹೆಚ್ಚಿದ ದೊಡ್ಡ ಮೊತ್ತದ ಅಂದಾಜುಗಳಿಗೆ ಮುಖ್ಯ ಕಾರಣವಾಗಿರುವುದು ಯುಎಸ್ ಫೆಡರಲ್ ರಿಸರ್ವ್ ಬಡ್ಡಿದರದಲ್ಲಾಗಿರುವ ಹೆಚ್ಚಳ ಎಂದಾಗಿದೆ. ಇದರಿಂದ ಅಮೆರಿಕದ ಆರ್ಥಿಕ ಕ್ಷೇತ್ರವು ಆರ್ಥಿಕ ಹಿಂಜರಿತಕ್ಕೆ ತಳ್ಳಲ್ಪಡಬಹುದು. ಇದರ ನೇರ ಪರಿಣಾಮ ಭಾರತದ ರಫ್ತಿನ ಮೇಲಾಗುತ್ತದೆ.


  ರಫ್ತುಗಳಲ್ಲಿನ ಕುಸಿತ ಮತ್ತು ದೇಶೀಯ ಬಳಕೆಯನ್ನು ಬೆಂಬಲಿಸಲು ಮುಂದುವರಿದ ಆಮದುಗಳ ನಿರಂತರ ಪ್ರಕ್ರಿಯೆಯಿಂದ, ಚಾಲ್ತಿ ಖಾತೆ ಕೊರತೆ (ಸಿಎಡಿ) ವಿಸ್ತಾರಗೊಳ್ಳಲು ಕಾರಣವಾಗುತ್ತದೆ ಎಂದು ಅಧಿಕಾರಿಯೋರ್ವರು ತಿಳಿಸುತ್ತಾರೆ.
  6.0%-6.5% ಎಂದು ನಿರೀಕ್ಷಿಸಲಾಗಿತ್ತು


  ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಸಿಎಡಿಯ ಜಿಡಿಪಿ ದರವು 4.4% ಆಗಿತ್ತು, ಅದರ ಹಿಂದಿನ ತ್ರೈಮಾಸಿಕದಲ್ಲಿ 2.2% ರಷ್ಟಿತ್ತು. ಕೇವಲ ಒಂದು ವರ್ಷದಲ್ಲಿ ಇದು 1.3% ಗಿಂತಲೂ ಹೆಚ್ಚಾಗಿದೆ. ಏಕೆಂದರೆ ಏರುತ್ತಿರುವ ಸರಕು ಬೆಲೆಗಳು ಮತ್ತು ದುರ್ಬಲಗೊಳ್ಳುತ್ತಿರುವ ರೂಪಾಯಿ ವ್ಯಾಪಾರದ ಅಂತರವನ್ನು ಹೆಚ್ಚಿಸಿದೆ ಎಂದಾಗಿದೆ. 2022-23ನೇ ಸಾಲಿನ ಆರ್ಥಿಕ ಸಮೀಕ್ಷೆಯಲ್ಲಿ ನಿಜವಾದ ಜಿಡಿಪಿ ಬೆಳವಣಿಗೆಯನ್ನು 6.0%-6.5% ಎಂದು ನಿರೀಕ್ಷಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಅದೇ ರೀತಿ ಮತ್ತೊಬ್ಬ ಅಧಿಕಾರಿಯು ಇದು 7% ಕ್ಕಿಂತ ಕಡಿಮೆ ಇರುವುದಾಗಿ ಅಂದಾಜಿಸಲಾಗಿತ್ತು ಎಂದು ಹೇಳಿದ್ದಾರೆ.


  ಫೆಬ್ರವರಿ 1ಕ್ಕೆ ಬಜೆಟ್​ ಮಂಡನೆ


  ಆರ್ಥಿಕ ಸಮೀಕ್ಷೆ ಎಂಬುದು, ಕಳೆದ ಒಂದು ವರ್ಷದಲ್ಲಿ ದೇಶದ ಆರ್ಥಿಕತೆಯು ಹೇಗೆ ಕಾರ್ಯನಿರ್ವಹಿಸಿತು ಎಂಬುದರ ಬಗ್ಗೆ ಅವಲೋಕನವನ್ನು ಒಳಗೊಂಡಿದ್ದು ಮುಂದಿನ ಬಜೆಟ್ ಮಂಡಿಸುವ ಹಿಂದಿನ ದಿನವಷ್ಟೇ ಹೊರಬರುತ್ತದೆ. ಈ ಬಾರಿ ಮುಂದಿನ ವಾರ ಫೆಬ್ರವರಿ 1 ರಂದು ಬಜೆಟ್ ಮಂಡನೆಯಾಗಲಿದೆ.


  ಪ್ರಸಕ್ತ ವರ್ಷದ ವಿತ್ತೀಯ ಕೊರತೆಯ ಗುರಿಯನ್ನು 6.4% ಕ್ಕೆ ನಿಗದಿ


  ಮುಂಬರುವ 2024ರ ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿ ತನ್ನ ವಿತ್ತೀಯ ಕೊರತೆಯನ್ನು ನಿಯಂತ್ರಿಸಲು ಯಾವುದೇ ಜನಪ್ರಿಯ ಯೋಜನೆಗಳನ್ನು ಘೋಷಿಸದಂತೆ ಸಮೀಕ್ಷೆಯು ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನೂ ನೀಡಿದರೆ ಅಚ್ಚರಿ ಪಡಬೇಕಾಗಿಲ್ಲ. 2025- 26 ರ ವೇಳೆಗೆ ಜಿಡಿಪಿಯ 4.5% ರಷ್ಟು ಆದ ವಿತ್ತೀಯ ಕೊರತೆಯನ್ನು ಸಾಧಿಸುವ ಗುರಿಯನ್ನು ಭಾರತ ಹೊಂದಿದೆ. ಈ ನಡುವೆ ಪ್ರಸಕ್ತ ವರ್ಷದ ವಿತ್ತೀಯ ಕೊರತೆಯ ಗುರಿಯನ್ನು 6.4% ಕ್ಕೆ ನಿಗದಿಪಡಿಸಲಾಗಿದೆ.


  ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಲಹೆ


  ಕೋವಿಡ್ -19ರ ಸಾಂಕ್ರಾಮಿಕದ ನಂತರ ಭಾರತದ ಆರ್ಥಿಕ ವ್ಯವಸ್ಥೆ ಈಗ ಚೇತರಿಕೆ   ಕಾಣುತ್ತಿದೆ. ಈ ದೆಸೆಯಲ್ಲಿ ರಷ್ಯಾ – ಉಕ್ರೇನ್ ತಮ್ಮ ಆರ್ಥಿಕ ಬಿಕ್ಕಟ್ಟನ್ನು ದ್ವಿಗುಣವಾಗುವಂತೆ ಮಾಡಿಕೊಂಡಿವೆ. ಇದರ ಪರಿಣಾಮವಾಗಿ ಆ ದೇಶದ ಕೇಂದ್ರ ಬ್ಯಾಂಕ್ ಸಾಂಕ್ರಾಮಿಕ ಸಮಯದಲ್ಲಿ ಅದು ಅಳವಡಿಸಿಕೊಂಡ ಅತ್ಯಂತ ಸಡಿಲವಾದ ಹಣಕಾಸು ನೀತಿಯನ್ನು ಹಿಮ್ಮೆಟ್ಟಿಸಲು ಪ್ರಯತ್ನ ಪಡುತ್ತಿದೆ.


  ಆದರೂ, ಭಾರತವು ವಿಶ್ವ ರಾಷ್ಟ್ರಗಳ ಸಾಲಿನಲ್ಲಿ ತನ್ನ ಆರ್ಥಿಕ ಕ್ಷೇತ್ರವನ್ನು ಮತ್ತೊಮ್ಮೆ ಬೆಳಗಿಸುವ ಪ್ರಯತ್ನದಲ್ಲಿದೆ. ಸೇವಾ ರಫ್ತಿನಲ್ಲಿ ತನ್ನ ಅಸ್ತಿತ್ವವನ್ನು ಹತೋಟಿಗೆ ತರುವುದು ಮಾತ್ರವಲ್ಲದೆ, ಅದರ ವ್ಯಾಪ್ತಿಯನ್ನು ಉದ್ಯೋಗ, ಗರಿಷ್ಠ ಉತ್ಪಾದನಾ ಹಾಗೂ ರಫ್ತಿನ ಕ್ಷೇತ್ರದವರೆಗೆ ವಿಸ್ತರಿಸಬೇಕಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐ ಎಂ ಎಫ್) ಭಾರತಕ್ಕೆ ಸಲಹೆ ನೀಡಿದೆ.

  Published by:Rajesha B
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು