• Home
  • »
  • News
  • »
  • business
  • »
  • Income Tax: 73 ವರ್ಷ ಹಳೆಯ ಆದಾಯ ತೆರಿಗೆ ನಿಯಮ ಬದಲಾವಣೆ, ತೆರಿಗೆದಾರರಿಗೆ ಏನೆಲ್ಲ ಪ್ರಯೋಜನ?

Income Tax: 73 ವರ್ಷ ಹಳೆಯ ಆದಾಯ ತೆರಿಗೆ ನಿಯಮ ಬದಲಾವಣೆ, ತೆರಿಗೆದಾರರಿಗೆ ಏನೆಲ್ಲ ಪ್ರಯೋಜನ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಬಜೆಟ್​ಗೆ ಸಂಬಂಧಿಸಿದಂತೆ ಕಳೆದ ಕೆಲವು ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಹಲವಾರು ಬದಲಾವಣೆಗಳನ್ನು ಮಾಡಿದೆ.

  • Share this:

ಕೇಂದ್ರದಿಂದ ಇನ್ನು ಮೂರು ವಾರಗಳಲ್ಲಿ ಪ್ರಸಕ್ತ ಆರ್ಥಿಕ ವರ್ಷ 2023ರ ಬಜೆಟ್ ಮಂಡಿಸಲಾಗುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸ್ತುತ ಐದನೇ ಬಾರಿಗೆ ಆಯವ್ಯಯ ಪತ್ರವನ್ನು ಮಂಡಿಸಲಿದ್ದಾರೆ. ಮುಂದಿನ ವರ್ಷ ಅಂದರೆ 2024 ರಲ್ಲಿ ಲೋಕಸಭೆ ಚುನಾವಣೆ ಜರುಗಲಿದ್ದು ಪ್ರಸ್ತುತ ಸರ್ಕಾರದ ಪೂರ್ಣ ಪ್ರಮಾಣದ ಈ ವರ್ಷದ ಬಜೆಟ್ ಅನ್ನು ಮಂಡಿಸಲು ಇನ್ನೂ ಮೂರೇ ವಾರಗಳು ಬಾಕಿ ಇವೆ. ಹಾಗಾಗಿ ಈ ವರ್ಷದ ಬಜೆಟ್ ಕೇಂದ್ರ ಸರ್ಕಾರದ ಪಾಲಿಗೆ ಸಾಕಷ್ಟು ಮಹತ್ವವಾಗಿದೆ ಎಂದು ಹೇಳಬಹುದು. ಸರ್ವರಿಗೂ ಉಪಯುಕ್ತವಾಗುವಂತಹ ಅಂಶಗಳನ್ನು ಈ ಬಾರಿಯ ಬಜೆಟ್ ನಲ್ಲಿರಲಿದೆ ಎಂದು ನಿರೀಕ್ಷಿಸಲಾಗುತ್ತಿರುವುದು ಸಹಜವೇ ಆಗಿದೆ.


ಬಜೆಟ್​ಗೆ ಸಂಬಂಧಿಸಿದಂತೆ ಕಳೆದ ಕೆಲವು ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಹಲವಾರು ಬದಲಾವಣೆಗಳನ್ನು ಮಾಡಿದೆ. ಅದರಲ್ಲೂ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಬಹುಜನರು ಕೇಂದ್ರ ಈ ಬಾರಿ ಏನಾದರೂ ಮಹತ್ವದ ಬದಲಾವಣೆ ಮಾಡಲಿದೆಯೇ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ ಅಂದರೂ ತಪ್ಪಾಗಲಿಕ್ಕಿಲ್ಲ.


ಹಳೆಯ ತೆರಿಗೆ ರಚನೆಯಲ್ಲಿದೆ ವಿನಾಯಿತಿ ಪಡೆದುಕೊಳ್ಳುವ ಹಲವು ಮಾರ್ಗಗಳು
ಹಳೆಯ ತೆರಿಗೆ ಕ್ರಮದಲ್ಲಿ ತೆರಿಗೆಯಿಂದ ವಿನಾಯಿತಿ ಪಡೆಯಲು ಹಲವು ಮಾರ್ಗಗಳಿವೆ. ಅಷ್ಟಕ್ಕೂ 2020-21 ರಲ್ಲಿ ನಿರ್ಮಲಾ ಸೀತಾರಾಮನ್ ಅವರು ಎರಡು ಬಗೆಯ ಅಂದರೆ ಹಳೆಯ ತೆರಿಗೆ ಕ್ರಮ ಹಾಗೂ ಹೊಸ ತೆರಿಗೆ ಕ್ರಮ ಪ್ರಾರಂಭಿಸಿದ್ದರು. ತೆರಿಗೆದಾರರು ಇವೆರಡು ಪ್ರಕಾರಗಳಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗಿತ್ತು.


ಕಳೆದ ಶುಕ್ರವಾರದಂದು ಹೇಳಿಕೆ ನೀಡಿರುವ ಹಣಕಾಸು ಸಚಿವರು ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಜನರು 7-10 ಮಾರ್ಗಗಳ ಮೂಲಕ ಹಳೆಯ ತೆರಿಗೆ ಕ್ರಮದಲ್ಲಿ ತೆರಿಗೆ ವಿನಾಯಿತಿಯನ್ನು ಕ್ಲೈಮ್ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.


ಹೊಸ ತೆರಿಗೆ ಕ್ರಮ
ವಾಸ್ತವದಲ್ಲಿ 2020 ರಲ್ಲಿ ಸರ್ಕಾರವು ಹೊಸ ತೆರಿಗೆ ಕ್ರಮವನ್ನು ಪರಿಚಯಿಸಿದೆ. ಇದು ಈ ಮುಂಚೆ ಸ್ವಾತಂತ್ರ್ಯಾ ನಂತರದಿಂದ ನಡೆದುಕೊಂಡು ಬಂದಿದ್ದ ಹಳೆಯ ಅಥವಾ ಸಾಂಪ್ರದಾಯಿಕ ತೆರಿಗೆ ಕ್ರಮದಿಂದ ಭಿನ್ನವಾಗಿದೆ. ಸಾಂಪ್ರದಾಯಿಕ ತೆರಿಗೆ ವಿಧಾನದಲ್ಲಿ ತೆರಿಗೆದಾರರು 80C, 80D, HRA ಗಳ ಅಡಿಯಲ್ಲಿ ತೆರಿಗೆ ಕಡಿತಗಳನ್ನು ಕ್ಲೈಮ್ ಮಾಡಿಕೊಳ್ಳಬಹುದಾಗಿದೆ.


ಇದನ್ನೂ ಓದಿ: Hydroponics: ಮಣ್ಣಿಲ್ಲದೇ ಬರೀ ನೀರಿಂದಲೇ ಕೃಷಿ ಮಾಡಬಹುದಂತೆ! ಹೈಡ್ರೋಪೋನಿಕ್ಸ್ ಆಗ್ರಿಕಲ್ಚರ್‌ನಿಂದ ಕೋಟಿ ಆದಾಯ ಫಿಕ್ಸ್!


ಆದರೆ, ಹೊಸ ತೆರಿಗೆ ಕ್ರಮದಲ್ಲಿ ಈ ರೀತಿ ಯಾವುದೇ ಕಡಿತಗಳನ್ನು ಕ್ಲೈಮ್ ಮಾಡಿಕೊಳ್ಳಲು ಬರುವುದಿಲ್ಲ. ಆದರೆ ಸೀತಾರಾಮ್ ಹೇಳಿದಂತೆ ಈ ಹೊಸ ತೆರಿಗೆ ಕ್ರಮವು ಸರಳವಾಗಿದ್ದು ಇದರಲ್ಲಿ ತೆರಿಗೆಯ ಮೊತ್ತವು ಅಲ್ಪವಾಗಿರುತ್ತದೆ. ಈ ಸಂದರ್ಭದಲ್ಲಿ ಹಣಕಾಸು ಸಚಿವರು, ಏಳು ಹಂತಗಳನ್ನು ತರಬೇಕಾಗಿರುವುದರಿಂದ ಕಡಿಮೆ ಆದಾಯ ಹೊಂದಿರುವವರಿಗೆ ತೆರಿಗೆ ಅಲ್ಪವಾಗಿರುತ್ತದೆ ಎಂದು ಹೇಳಿದ್ದರು.


2.5 ಲಕ್ಷದವರೆಗೆ ವಾರ್ಷಿಕ ಆದಾಯ ತೆರಿಗೆ ಮುಕ್ತ
ಹೊಸ ತೆರಿಗೆ ಕ್ರಮದಲ್ಲಿ 2.5 ಲಕ್ಷದವರೆಗೆ ವಾರ್ಷಿಕ ಆದಾಯ ಹೊಂದಿರುವವರಿಗೆ ಯಾವುದೇ ತೆರಿಗೆ ಇಲ್ಲ. ತದನಂತರ 2.5-5 ಲಕ್ಷದವರೆಗೆ ಆದಾಯ ಹೊಂದಿರುವವರು 5 ಪ್ರತಿಶತ ತೆರಿಗೆ ಪಾವತಿಸಬೇಕಾಗಿರುತ್ತದೆ. ಅದರಂತೆ 5-7.5 ಲಕ್ಷ ಆದಾಯದವರು 10%, 7.5-10 ಲಕ್ಷ ಆದಾಯದವರು 15%, 10-12.5 ಲಕ್ಷ ಆದಾಯದವರು 20%, 12.5-15 ಲಕ್ಷ ಆದಾಯದವರು 25% ಹಾಗೂ 15 ಲಕ್ಷಕ್ಕೂ ಹೆಚ್ಚು ಆದಾಯ ಇರುವವರು 30% ತೆರಿಗೆ ಪಾವತಿಸಬೇಕು.


ಹಳೆಯ ತೆರಿಗೆ ಕ್ರಮ ಹೇಗಿದೆ
ಇದರಡಿಯಲ್ಲಿ 2.5 ಲಕ್ಷದವರೆಗೆ ವಾರ್ಷಿಕ ಆದಾಯ ಹೊಂದಿರುವವರಿಗೆ ಯಾವುದೇ ತೆರಿಗೆ ಇಲ್ಲ. ತದನಂತರ 2.5-5 ಲಕ್ಷದವರೆಗೆ ಆದಾಯ ಹೊಂದಿರುವವರು 5 ಪ್ರತಿಶತ ತೆರಿಗೆ ಪಾವತಿಸಬೇಕಾಗಿರುತ್ತದೆ. 5-10 ಲಕ್ಷ ಆದಾಯದವರು 20%, 10 ಲಕ್ಷಕ್ಕೂ ಹೆಚ್ಚು ಆದಾಯ ಇರುವವರು 30% ತೆರಿಗೆ ಪಾವತಿಸಬೇಕು.


ಇದನ್ನೂ ಓದಿ: ನೋಟುಗಳ ಮೇಲೆ ಬರೆದರೆ ಎಲ್ಲೂ ಬಳಸೋಕಾಗಲ್ವಾ? RBI ನೀಡಿದ ಉತ್ತರ ಇಲ್ಲಿದೆ


ಆದರೆ ಹಳೆಯ ತೆರಿಗೆ ನೀತಿಯ ಲಾಭಗಳನ್ನು ಈಗಲೂ ತೆಗೆದುಹಾಕಿಲ್ಲವಾದರೂ ಹೊಸ ವಿನಾಯಿತಿ-ಮುಕ್ತ ಹೊಸ ತೆರಿಗೆ ನೀತಿಯು ಉಪಸ್ಥಿತವಿರುವ ಹಳೆಯ ತೆರಿಗೆ ನೀತಿಗೆ ಒಂದು ಪರ್ಯಾಯ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ.


ಹಳೆಯ ತೆರಿಗೆ ನೀತಿಯ ಕಟ್ ಆಫ್


ವಾರ್ಷಿಕ ಆದಾಯ - 2.5 ಲಕ್ಷ
ತೆರಿಗೆ - ಇಲ್ಲ


ವಾರ್ಷಿಕ ಆದಾಯ - 2,50,001 ರಿಂದ 5 ಲಕ್ಷ
ತೆರಿಗೆ - 5%


ವಾರ್ಷಿಕ ಆದಾಯ - 5,00,001 ರಿಂದ 10 ಲಕ್ಷ
ತೆರಿಗೆ - 20%


ವಾರ್ಷಿಕ ಆದಾಯ - 10 ಲಕ್ಷಕ್ಕೂ ಹೆಚ್ಚು
ತೆರಿಗೆ - 30%


ಹೊಸ ತೆರಿಗೆ ನೀತಿಯ ಕಟ್ ಆಫ್


ವಾರ್ಷಿಕ ಆದಾಯ - 2.5 ಲಕ್ಷ
ತೆರಿಗೆ - ಇಲ್ಲ


ವಾರ್ಷಿಕ ಆದಾಯ - 2,50,001 ರಿಂದ 5 ಲಕ್ಷ
ತೆರಿಗೆ - 5%


ವಾರ್ಷಿಕ ಆದಾಯ - 5,00,001 ರಿಂದ 7.5 ಲಕ್ಷ
ತೆರಿಗೆ - 10%


ವಾರ್ಷಿಕ ಆದಾಯ - 7,50,001 ರಿಂದ 10 ಲಕ್ಷ
ತೆರಿಗೆ - 15%


ವಾರ್ಷಿಕ ಆದಾಯ - 10,00,001 ರಿಂದ 12.5 ಲಕ್ಷ
ತೆರಿಗೆ - 20%


ವಾರ್ಷಿಕ ಆದಾಯ - 12,50,001 ರಿಂದ 15 ಲಕ್ಷ
ತೆರಿಗೆ - 25%


ವಾರ್ಷಿಕ ಆದಾಯ - 15 ಲಕ್ಷಕ್ಕೂ ಹೆಚ್ಚು
ತೆರಿಗೆ - 30%

Published by:ಗುರುಗಣೇಶ ಡಬ್ಗುಳಿ
First published: