• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Budget 2023: ಸರ್ಕಾರಕ್ಕೆ ಹಣ ಎಲ್ಲಿಂದ ಬರುತ್ತದೆ, ಎಲ್ಲೆಲ್ಲಿ ಖರ್ಚು ಮಾಡುತ್ತದೆ? ಇಲ್ಲಿದೆ ಒಂದೊಂದು ಪೈಸೆಯ ಲೆಕ್ಕಾಚಾರ!

Budget 2023: ಸರ್ಕಾರಕ್ಕೆ ಹಣ ಎಲ್ಲಿಂದ ಬರುತ್ತದೆ, ಎಲ್ಲೆಲ್ಲಿ ಖರ್ಚು ಮಾಡುತ್ತದೆ? ಇಲ್ಲಿದೆ ಒಂದೊಂದು ಪೈಸೆಯ ಲೆಕ್ಕಾಚಾರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸರ್ಕಾರ ಸಂಗ್ರಹಿಸುವ ಒಂದು ರೂಪಾಯಿಯಲ್ಲಿ 34 ಪೈಸೆ ಸಾಲವಾಗಿ ಬರುತ್ತದೆ ಮತ್ತು ಸಾಲದ ಬಡ್ಡಿಗೆ 20 ಪೈಸೆ ಖರ್ಚಾಗುತ್ತದೆ ಎಂಬ ವಿಚಾರ ನಿಮಗೆ ತಿಳಿದಿದೆಯಾ?

  • News18 Kannada
  • 3-MIN READ
  • Last Updated :
  • New Delhi, India
  • Share this:

    ನವದೆಹಲಿ(ಫೆ.01): ಮೋದಿ ಸರ್ಕಾರ (PM Modi Govt) ತನ್ನ ಎರಡನೇ ಅವಧಿಯ ಕೊನೆಯ ಪೂರ್ಣ ಬಜೆಟ್ ಅನ್ನು ಮಂಡಿಸಿದೆ. ಆದರೆ ಬಜೆಟ್‌ನಲ್ಲಿ (Union Budget 2023) ವಿವಿಧ ಯೋಜನೆಗಳಿಗೆ ಹಣ ಮೀಸಲಿಡುವ ಸರ್ಕಾರಕ್ಕೆ ಆ ಹಣ ಎಲ್ಲಿಂದ ಬರುತ್ತದೆ ಎಂಬ ವಿಚಾರ ನಿಮಗೆ ತಿಳಿದಿದೆಯೇ? ಸರ್ಕಾರ ಅತೀ ಹೆಚ್ಚು ಸಾಲ ಪಡೆದು ಖರ್ಚು ಮಾಡುತ್ತದೆ ಎಂಬ ವಿಚಾರ ನಿಜಕ್ಕೂ ಅಚ್ಚರಿ ಮುಡಿಸುವಂತಹುದ್ದು. ಉಳಿದ ಹಣವನ್ನು ಸರ್ಕಾರವು ನೇರ ಮತ್ತು ಪರೋಕ್ಷ ತೆರಿಗೆಗಳ ಆದಾಯದಿಂದ ಪಡೆಯುತ್ತದೆ.


    ಸರ್ಕಾರ ಎಲ್ಲಿಂದ ಹಣ ಸಂಗ್ರಹಿಸುತ್ತದೆ?


    ಉದಾಹರಣೆಗೆ 2023-24ರಲ್ಲಿ ಮೋದಿ ಸರಕಾರ ವ್ಯಯಿಸಲಿರುವ ಒಂದು ರೂಪಾಯಿ ಮೊತ್ತ ಎಲ್ಲಿಂದ ಬರುತ್ತದೆ ಎಂದು ನೋಡುವುದಾದರೆ, ಸರ್ಕಾರ ಒಂದು ರೂಪಾಯಿಗೆ 34 ಪೈಸೆ ಸಾಲ ಮಾಡುತ್ತದೆ. ಸರಕಾರದ ಜಿಎಸ್ ಟಿಯಿಂದ 17 ಪೈಸೆ ಸಿಗುತ್ತದೆ. ಕಾರ್ಪೊರೇಟ್ ತೆರಿಗೆ ಮೂಲಕ 15 ಪೈಸೆ ಪಡೆಯುತ್ತದೆ. 15 ಪೈಸೆ ಆದಾಯ ತೆರಿಗೆಯಲ್ಲಿ 4 ಪೈಸೆಯನ್ನು ದೇಶಕ್ಕೆ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಕಸ್ಟಮ್ ಸುಂಕದ ಮೂಲಕ ಪಡೆಯಲಾಗುತ್ತದೆ. ಪೆಟ್ರೋಲ್ ಡೀಸೆಲ್ ಮೇಲೆ ಅಬಕಾರಿ ಸುಂಕ ವಿಧಿಸಿ ಸರ್ಕಾರಕ್ಕೆ 7 ಪೈಸೆ ಸಿಗಲಿದೆ. 5 ಪೈಸೆ ತೆರಿಗೆಯೇತರ ಆದಾಯದ ಮೂಲಕ ಸಿಗಲಿದೆ. ಒಂದು ರೂಪಾಯಿಗೆ 2 ಪೈಸೆ ಸರ್ಕಾರವು ಸಾಲವಲ್ಲದ ಬಂಡವಾಳ ರಶೀದಿಗಳ ಮೂಲಕ ಸಂಗ್ರಹಿಸುತ್ತದೆ.


    ಇದನ್ನೂ ಓದಿ: Budget 2023: 2047ರ ವೇಳೆಗೆ ರಕ್ತಹೀನತೆಯನ್ನು ತೊಡೆದುಹಾಕಲು ಮಿಷನ್; ಬಜೆಟ್​ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಿಕ್ಕಿದ್ದೇನು?


    ಸರ್ಕಾರಕ್ಕೆ ಹಣ ಎಲ್ಲಿಂದ ಬರುತ್ತದೆ?


    ಸರ್ಕಾರ ಎಲ್ಲಿ ಖರ್ಚು ಮಾಡುತ್ತೆ?


    ಸರ್ಕಾರಕ್ಕೆ ಸಿಗುವ ಒಂದು ರೂಪಾಯಿಯಲ್ಲಿ 20 ಪೈಸೆಯನ್ನು ಸರ್ಕಾರ ತೆಗೆದುಕೊಂಡ ಸಾಲದ ಬಡ್ಡಿ ಮರುಪಾವತಿಗೆ ಖರ್ಚು ಮಾಡುತ್ತದೆ. 18 ಪೈಸೆಯನ್ನು ಸರ್ಕಾರವು ರಾಜ್ಯಗಳಿಗೆ ಪಾವತಿಸುತ್ತದೆ. ಅಲ್ಲದೇ ತೆರಿಗೆಗಳು ಮತ್ತು ಸುಂಕಗಳಲ್ಲಿ ತನ್ನ ಪಾಲಿನ ಮೂಲಕ ತನ್ನ ಖರ್ಚುಗಳನ್ನು ಅದು ಪೂರೈಸಬಹುದು. ಸರ್ಕಾರ ತನ್ನ ಯೋಜನೆಗಳಿಗೆ 17 ಪೈಸೆ ಖರ್ಚು ಮಾಡುತ್ತದೆ. ಹಣಕಾಸು ಆಯೋಗ ಮತ್ತು ವರ್ಗಾವಣೆಯ ಶಿಫಾರಸುಗಳ ಆಧಾರದ ಮೇಲೆ 9 ಪೈಸೆ ಹಣವನ್ನು ವರ್ಗಾಯಿಸುತ್ತದೆ. ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳಿಗೆ 17 ಪೈಸೆ ಖರ್ಚು ಮಾಡುತ್ತದೆ. ರಕ್ಷಣಾ ಕ್ಷೇತ್ರಕ್ಕೆ ಸಾಮಾನ್ಯ ಜನರಿಗೆ 8 ಪೈಸೆ ಸಬ್ಸಿಡಿ ನೀಡುವುದಕ್ಕೂ 7 ಪೈಸೆ ಖರ್ಚು ಮಾಡಲಾಗುತ್ತದೆ. ಸರ್ಕಾರವು ಪಿಂಚಣಿ ನೀಡಲು 4 ಪೈಸೆ ಮತ್ತು ಇತರ ರೀತಿಯ ವೆಚ್ಚಗಳಿಗೆ 8 ಪೈಸೆಗಳನ್ನು ಖರ್ಚು ಮಾಡುತ್ತದೆ.


    ಇದನ್ನೂ ಓದಿ: Budget 2023: ಈ ಬಾರಿ ಬಜೆಟ್‌ನಲ್ಲಿ ಕೃಷಿಕರಿಗೆ ಖುಷಿ, ಸ್ವಾವಲಂಬಿ ಮಹಿಳೆಯರಿಗೆ ಸಹಾಯ! ಅಮೃತಕಾಲದ ಬಜೆಟ್ ಅಂತ ಬಣ್ಣಿಸಿದ ಮೋದಿ


    ಸರ್ಕಾರ ಹಣ ಎಲ್ಲೆಲ್ಲಿ ವ್ಯಯಿಸುತ್ತದೆ?


    ಈ ಅಂಕಿ-ಅಂಶಗಳನ್ನು ಗಮನಿಸಿದರೆ, ಸರ್ಕಾರದ ಸ್ವಂತ ಆದಾಯದ ಬಹುಪಾಲು ಭಾಗವನ್ನು ತೆಗೆದುಕೊಂಡ ಸಾಲದ ಬಡ್ಡಿಯನ್ನು ಪಾವತಿಸಲು ಖರ್ಚು ಮಾಡುಉತ್ತದೆ ಎಂಬುದು ಸ್ಪಷ್ಟವಾಗಿದೆ.




    ವೆಚ್ಚ ಮತ್ತು ಆದಾಯದ ನಡುವಿನ ಅಂತರವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರವು ಮುಂದಿನ ಹಣಕಾಸು ವರ್ಷದಲ್ಲಿ ದಾಖಲೆಯ 15.4 ಲಕ್ಷ ಕೋಟಿ ರೂಪಾಯಿ ಸಾಲವನ್ನು ಪಡೆಯಲು ನಿರ್ಧರಿಸಿದೆ. ಮಾರ್ಚ್ 31, 2023 ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ತೆಗೆದುಕೊಂಡ ಒಟ್ಟು ಸಾಲವು 14.21 ಲಕ್ಷ ಕೋಟಿ ರೂ ಎಂಬುವುದು ಉಲ್ಲೇಖನೀಯ.

    Published by:Precilla Olivia Dias
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು