Budget 2023: ಧೂಮಪಾನಿಗಳಿಗೆ ಕಹಿ ಸುದ್ದಿ, ಸಿಗರೇಟ್​ ರೇಟ್ ಹೆಚ್ಚಾಗೋದು ಪಕ್ಕಾ!

ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ

ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ

ಕೇಂದ್ರ ಸರ್ಕಾರ ಬಜೆಟ್​ನಲ್ಲಿ (Budget 2023) ತಂಬಾಕು ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು ಏರಿಕೆ ಮಾಡಿದೆ.

  • News18 Kannada
  • 5-MIN READ
  • Last Updated :
  • Delhi, India
  • Share this:

ದೆಹಲಿ: ಕೇಂದ್ರ ಸರ್ಕಾರ (Central Government Budget 2023) ಧೂಮಪಾನಿಗಳಿಗೆ ಕಹಿ ಸುದ್ದಿ ನೀಡಿದೆ. ಇನ್ಮೇಲೆ ಸಿಗರೇಟ್ ದರ ಹೆಚ್ಚಳವಾಗಲಿದೆ. ಕೇಂದ್ರ ಸರ್ಕಾರ ಸಿಗರೇಟ್ ಮೇಲಿನ ತೆರಿಗೆ ಶೇಕಡಾ 16ರಷ್ಟು ಏರಿಕೆ ಮಾಡಿದೆ. ಕೇಂದ್ರ ಸರ್ಕಾರ ಬಜೆಟ್​ನಲ್ಲಿ (Budget 2023) ತಂಬಾಕು ಉತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು ಏರಿಕೆ ಮಾಡಿದೆ. ಇದು ಸಿಗರೇಟ್ ಬೆಲೆಯ ಮೇಲೆ ಪರಿಣಾಮ ಬೀರಲಿದ್ದು ಧೂಮಪಾನಿಗಳು (Cigarette Price) ಜೇಬು ಮುಟ್ಟಿ ನೋಡಿಕೊಳ್ಳುವಂತೆ ಮಾಡುವುದು ಖಚಿತವಾಗಿದೆ.


ಈ ವಸ್ತುಗಳ ಮೇಲಿನ ಸುಂಕ ಇಳಿಕೆ
ಜವಳಿ ಮತ್ತು ಕೃಷಿ ಹೊರತುಪಡಿಸಿ ಇತರ ಸರಕುಗಳ ಮೇಲಿನ ಮೂಲ ಕಸ್ಟಮ್ ಸುಂಕದ ದರಗಳನ್ನು 21% ರಿಂದ 13% ಕ್ಕೆ ಇಳಿಕೆ ಮಾಡಲಾಗಿದೆ. ಆಟಿಕೆಗಳು, ಬೈಸಿಕಲ್‌ಗಳು, ಆಟೋಮೊಬೈಲ್‌ಗಳು ಸೇರಿದಂತೆ ಕೆಲವು ವಸ್ತುಗಳ ಮೇಲಿನ ಮೂಲ ಕಸ್ಟಮ್ ಸುಂಕಗಳು, ಸೆಸ್‌ಗಳು ಮತ್ತು ಸರ್‌ಚಾರ್ಜ್‌ಗಳಲ್ಲಿ ಸಣ್ಣ ಬದಲಾವಣೆಗಳಾಗಲಿದೆ.


ಬಜೆಟ್​ನ ಕ್ಷಣ ಕ್ಷಣದ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ




ಷೇರುಪೇಟೆಯಲ್ಲಿ ಚೇತರಿಕೆ
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಬಜೆಟ್ ಮಂಡಿಸುತ್ತಿದ್ದಂತೆ ಷೇರುಪೇಟೆಯಲ್ಲಿ ಚೇತರಿಕೆ ಕಂಡುಬಂದಿದೆ. ಬುಧವಾರ ಬೆಳಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 516.35 ಪಾಯಿಂಟ್​ನಲ್ಲಿ ಶೇಕಡಾ 0.87 ರಷ್ಟು ಹೆಚ್ಚಾಗಿ 60,066.25 ಕ್ಕೆ ವಹಿವಾಟು ನಡೆಸುತ್ತಿದೆ. ಎನ್‌ಎಸ್‌ಇ ನಿಫ್ಟಿ 137.35 ಪಾಯಿಂಟ್‌ಗಳಲ್ಲಿ ಶೇಕಡಾ 0.78 ರಷ್ಟು ಏರಿಕೆಯಾಗಿ 17,799.50 ಪಾಯಿಂಟ್‌ಗಳಿಗೆ ತಲುಪಿದೆ.


ಚಿನ್ನ-ಬೆಳ್ಳಿ ದರ ಏರಿತಾ? ಇಳಿಯಿತಾ?
ದೇಶದ ಚಿನ್ನಪ್ರಿಯರಿಗೆ ಬಜೆಟ್ (Budget)​ ನಲ್ಲಿ ಶಾಕ್ ನೀಡಲಾಗಿದ್ದು , ಚಿನ್ನ(Gold) , ಬೆಳ್ಳಿ (Silver), ವಜ್ರ (Diamond) ಬೆಲೆ ಏರಿಕೆಯಾಗಲಿದೆ. ಲಿಥೀಯಂ ಬ್ಯಾಟರಿ ಮೇಲಿನ ಸುಂಕ ಕಡಿತ ಮಾಡಲಾಗಿದೆ, ಬಂಗಾರ, ಬೆಳ್ಳಿ, ವಜ್ರ ದುಬಾರಿಯಾಗಲಿದ್ದು . ಸಿಗರೇಟ್, ಪ್ಯಾಟಿನಂ, ರೆಡಿಮೆಡ್ ಬಟ್ಟೆ (Readymade Cloths) ಗಳು ಮತ್ತಷ್ಟು ದುಬಾರಿಯಾಗಲಿದೆ. ಬ್ಲೆಂಡೆಡ್ ಸಿಎನ್ ಜಿಗೆ ಕಸ್ಟಮ್ಸ್ ಸುಂಕ ರದ್ದು.ರೆಡಿಮೇಟ್ ಬಟ್ಟೆ ಬೆಲೆ ಏರಿಕೆ, ಅಡುಗೆ ಮನೆಯ ಎಲೆಕ್ಟ್ರಿಕ್ ಚಿಮಣಿಗಳ ಬೆಲೆ ಇಳಿಕೆ.ವಿದೇಶಿ ವಾಹನಗಳ ಆಮದು ದುಬಾರಿಯಾಗಲಿದೆ. ನಿರ್ಮಲಾ ಸೀತಾರಾಮನ್ ಅವರೇ ಈ ವಿಚಾರವನ್ನು ಹೇಳಿದ್ದಾರೆ.


ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ ಬಜೆಟ್ ಮಂಡಿಸಿದರು. ಭಾರತದ ಆರ್ಥಿಕತೆ ಉತ್ತಮ ರೀತಿಯಲ್ಲಿ ಬೆಳೆಯುತ್ತಿದೆ ಎಂದು ಮಾಹಿತಿ ನೀಡಿದ ಅವರು ವಿವಿಧ ಪ್ರಮುಖ ವಿಷಯಗಳ ಬಗ್ಗೆಯೂ ವಿವರಿಸಿದರು.


ಇದನ್ನೂ ಓದಿ: Budget 2023 LIVE: ಮಧ್ಯಮವರ್ಗದವರಿಗೆ ಬಜೆಟ್‌ನಲ್ಲಿ ಗುಡ್ ನ್ಯೂಸ್, ತೆರಿಗೆ ಹೊರೆ ಇಳಿಸಿದ ನಿರ್ಮಲಾ ಸೀತಾರಾಮನ್!


ಒಂದು ಕಡೆ, ಬಜೆಟ್ 2023 ರಲ್ಲಿ, ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂನಿಂದ ಮಾಡಿದ ಆಮದು ಮಾಡಿದ ಆಭರಣಗಳು ದುಬಾರಿ ಎಂದು ಘೋಷಿಸಲಾಯಿತು. ಮತ್ತೊಂದೆಡೆ, ಭಾರತೀಯ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದೆ. ಇಂದು (ಗುರುವಾರ), ಫೆಬ್ರವರಿ 1 ರ ಬೆಳಗ್ಗೆ ಚಿನ್ನದ ದರದಲ್ಲಿ ಏರಿಕೆಯಾಗಿದೆ. ಇದೇ ವೇಳೆ ಬೆಳ್ಳಿ ದರದಲ್ಲಿ ಏರಿಕೆ ಕಂಡುಬಂದಿದೆ. 24 ಕ್ಯಾರೆಟ್ ನ 10 ಗ್ರಾಂ ಶುದ್ಧ ಚಿನ್ನ 57 ಸಾವಿರ ಮೀರಿ ತಯಾರಾಗಿದ್ದರೆ, 999 ಶುದ್ಧ ಬೆಳ್ಳಿಯ ಬೆಲೆ ಕೆಜಿಗೆ 58 ಸಾವಿರ ರೂಪಾಯಿ ಮೀರಿದೆ.


7 ಲಕ್ಷದವರೆಗೂ ಟ್ಯಾಕ್ಸ್​ ಇಲ್ಲ!
7 ಲಕ್ಷ ರೂ ಆದಾಯದರೆಗೂ ತೆರಿಗೆ ವಿನಾಯಿತಿಯನ್ನು ನಿರ್ಮಲಾ ಸೀತಾರಾಮನ್​ ಘೋಷಿಸಿದ್ದಾರೆ. ನಿರೀಕ್ಷೆಯಂತೆ ಮಧ್ಯಮ ವರ್ಗದರವಿಗೆ ಹೆಚ್ಚಿನ ತೆರಿಗೆ ಘೋಷಿಸಿದ ನಿರಾಳವಾಗುವಂತೆ ಮಾಡಿದೆ. ಹೊಸ ಆದಾಯ ತೆರಿಗೆ ಪದ್ಧತಿಯಡಿ 7 ಲಕ್ಷ ಆದಾಯದವರೆಗೂ ತೆರಿಗೆ ಕಟ್ಟುವ ಅಗತ್ಯವಿರೋಲ್ಲ.


ಇದನ್ನೂ ಓದಿ: Budget 2023 LIVE: ಬಜೆಟ್​ ಮೂಲಕ ಕರ್ನಾಟಕದ ಮೇಲೆ ಬಿಜೆಪಿ ಕಣ್ಣು


ವರ್ಷಕ್ಕೆ ₹ 3 ಲಕ್ಷದವರೆಗೆ ಯಾವುದೇ ತೆರಿಗೆ ಇರುವುದಿಲ್ಲ. ₹ 6ರಿಂದ 9 ಲಕ್ಷದವರೆಗೆ ಶೇ 10. ₹ 12ರಿಂದ 15 ಲಕ್ಷಕ್ಕೆ ಶೇ 15. ₹ 15 ಲಕ್ಷಕ್ಕೂ ಹೆಚ್ಚು ಇದ್ದರೆ ಶೇ 30ರಷ್ಟು ತೆರಿಗೆ ವಿಧಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು. 15 ಲಕ್ಷ ರೂ. ಆದಾಯಕ್ಕಿಂತೆ ಹೆಚ್ಚಿಗೆ ಇರೋರಿಗೆ ಹೊಸ ತೆರಿಗೆ ಪದ್ಧತಿಯಂತೆ ಶೇ.15ರಷ್ಟು ತೆರಿಗೆ ಕಟ್ಟಬೇಕಾಗಿದ್ದು, 3 ಲಕ್ಷ ರೂಪಾಯಿ ಆದಾಯ ಇರೋರು ತೆರಿಗೆ ಕಟ್ಟುವ ಅಗತ್ಯವಿಲ್ಲ. 7 ಲಕ್ಷದವರೆಗೂ ತೆರಿಗೆ ಮಿತಿ ಇದೆ.

Published by:ಗುರುಗಣೇಶ ಡಬ್ಗುಳಿ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು