• Home
 • »
 • News
 • »
 • business
 • »
 • Budget 2023: ಕೇಂದ್ರ ಸರ್ಕಾರದಿಂದ 35 ವಸ್ತುಗಳ ಕಸ್ಟಮ್ಸ್ ಸುಂಕ ಹೆಚ್ಚಳದ ಸಾಧ್ಯತೆ!

Budget 2023: ಕೇಂದ್ರ ಸರ್ಕಾರದಿಂದ 35 ವಸ್ತುಗಳ ಕಸ್ಟಮ್ಸ್ ಸುಂಕ ಹೆಚ್ಚಳದ ಸಾಧ್ಯತೆ!

ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್

ಬೇರೆ ಬೇರೆ ಸಚಿವಾಲಯಗಳ ವಿವರಗಳ ಆಧಾರದ ಮೇಲೆ ಆಮದು ರಫ್ತು ತೆರಿಗೆಗೆ ಒಳಪಡುವ ವಸ್ತುಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 • Trending Desk
 • 4-MIN READ
 • Last Updated :
 • Share this:

  ಫೆಬ್ರವರಿ 1 ರಂದು ಘೋಷಿಸಲಾಗುವ ಬಜೆಟ್‌ನಲ್ಲಿ (Budget 2023)  ಕಸ್ಟಮ್ಸ್ ಸುಂಕ ಹೆಚ್ಚಳಕ್ಕೆ ಒಳಗಾಗಲಿರುವ 35 ಕ್ಕೂ ಹೆಚ್ಚು ವಸ್ತುಗಳ ಪಟ್ಟಿಯನ್ನು ಸರಕಾರ ರಚಿಸಿದೆ ಹಾಗೂ ಬಜೆಟ್‌ನಲ್ಲಿ ಈ ವಸ್ತುಗಳನ್ನು ಘೋಷಿಸಲಾಗುತ್ತದೆ. ಕಸ್ಟಮ್ಸ್ ಸುಂಕ (Custom Tax) ಎಂಬುದು ಸರಕುಗಳ ಆಮದು ಮತ್ತು ರಫ್ತುಗಳ ಮೇಲೆ ವಿಧಿಸಲಾದ ತೆರಿಗೆಯಾಗಿದೆ. ಖಾಸಗಿ ಜೆಟ್‌ಗಳು, ಹೆಲಿಕಾಪ್ಟರ್‌ಗಳು, ಅತ್ಯಾಧುನಿಕ ಎಲೆಕ್ಟ್ರಾನಿಕ್ ವಸ್ತುಗಳು, ಪ್ಲಾಸ್ಟಿಕ್ ವಸ್ತುಗಳು, ಆಭರಣಗಳು, ಹೈ-ಗ್ಲಾಸ್ ಪೇಪರ್ ಮತ್ತು ವಿಟಮಿನ್‌ಗಳು ಸರಕಾರ ರಚಿಸಿರುವ ಪಟ್ಟಿಯಲ್ಲಿವೆ.


  ಬೇರೆ ಬೇರೆ ಸಚಿವಾಲಯಗಳ ವಿವರಗಳ ಆಧಾರದ ಮೇಲೆ ಆಮದು ರಫ್ತು ತೆರಿಗೆಗೆ ಒಳಪಡುವ ವಸ್ತುಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಸರಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪಟ್ಟಿಯನ್ನು ರಚಿಸಿರುವ ಮುಖ್ಯ ಉದ್ದೇಶ ಆಮದುಗಳನ್ನು ಕಡಿತಗೊಳಿಸುವುದಾಗಿದೆ ಹಾಗೂ ಸ್ಥಳೀಯ ಉತ್ಪಾದನೆಗಳಿಗೆ ಉತ್ತೇಜನವನ್ನು ನೀಡುವ ಗುರಿಯನ್ನು ಹೊಂದಿದೆ ಎಂದು ಮಾಹಿತಿ ನೀಡಿದ್ದಾರೆ.


  ವಿವಿಧ ಸಚಿವಾಲಯಗಳಿಗೆ ನಿರ್ದೇಶನ
  ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯವು ಡಿಸೆಂಬರ್‌ನಲ್ಲಿ ವಿವಿಧ ಸಚಿವಾಲಯಗಳಿಗೆ ಅಗತ್ಯವಿರದ ಹಾಗೂ ಅನಿವಾರ್ಯವಲ್ಲದ ವಸ್ತುಗಳ ಪಟ್ಟಿಯನ್ನು ಸಿದ್ಧಪಡಿಸುವಂತೆ ಸೂಚಿಸಿತ್ತು ಹಾಗೂ ಆಮದು ಸುಂಕ ಹೆಚ್ಚಿಸುವ ಮೂಲಕ ಆಮದುಗಳನ್ನು ಕಡಿತಗೊಳಿಸುವ ಇರಾದೆ ಹೊಂದಿದೆ ಎಂಬುದು ತಿಳಿದುಬಂದಿದೆ.


  ಭಾರತದ ಚಾಲ್ತಿ ಖಾತೆ ಕೊರತೆಯು (ಸಿಎಡಿ) ಹಿಂದಿನ ತ್ರೈಮಾಸಿಕದಲ್ಲಿ ಜಿಡಿಪಿಯ 2.2% ರಿಂದ ಸೆಪ್ಟೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಜಿಡಿಪಿಯ 4.4% ಆಗುವ ಮೂಲಕ ಒಂಭತ್ತು ವರ್ಷಗಳಲ್ಲಿ ಗರಿಷ್ಠ ಮಟ್ಟಕ್ಕೆ ಏರಿದೆ.


  tax relief in the central budget and tds deduction clarity change in taxation ach
  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್


  ಆರ್ಥಿಕತೆಗಳಲ್ಲಿನ ಬೇಡಿಕೆ ಕುಗ್ಗುತ್ತಿರುವ ಹಿನ್ನಲೆಯಲ್ಲಿ ಆರ್ಥಿಕ ವರ್ಷ 2024 ರಲ್ಲಿ ರಫ್ತುಗಳು ಕುಂಠಿತಗೊಳ್ಳಲಿದೆ. ಅಂತೆಯೇ ಮುಂದಿನ ಹಣಕಾಸು ವರ್ಷದಲ್ಲಿ CAD ಪ್ರಮಾಣವು GDP ಯ 3.2-3.4% ಇರಬಹುದೆಂದು ಆರ್ಥಿಕ ತಜ್ಞರು ಅವಲೋಕಿಸಿದ್ದಾರೆ.


  ರಫ್ತುಗಳನ್ನು ಮೀರಿಸಿರುವ ಸ್ಥಳೀಯ ಉತ್ಪನ್ನಗಳ ಬೇಡಿಕೆ
  ಸ್ಥಳೀಯ ಉತ್ಪನ್ನಗಳ ಬೇಡಿಕೆಯು ರಫ್ತುಗಳನ್ನು ಮೀರಿಸಿದ್ದು ಸರಕುಗಳ ವ್ಯಾಪಾರ ಕೊರತೆಯು ತಿಂಗಳಿಗೆ $25 ಶತಕೋಟಿಯಲ್ಲಿ ಉಳಿಯಬಹುದು ಹಾಗೂ ಇದರಲ್ಲಿ GDP ಯ 3.2-3.4% ಪ್ರಮಾಣವು CAD ಆಗಿರುತ್ತದೆ ಎಂದು ಕ್ರೆಡಿಟ್ ರೇಟಿಂಗ್ ಏಜೆನ್ಸಿ ICRA ಮುಖ್ಯ ಅರ್ಥಶಾಸ್ತ್ರಜ್ಞ ಅದಿತಿ ನಾಯರ್ ತಿಳಿಸಿದ್ದಾರೆ.


  ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ
  ವರದಿಯ ಪ್ರಕಾರ ಸ್ಥಳೀಯ ಉತ್ಪಾದನೆಗಳನ್ನು ಉತ್ತೇಜಿಸುವ ಸುಲವಾಗಿ ಅಗತ್ಯವಿಲ್ಲದ ಹಾಗೂ ಅನಿವಾರ್ಯವಲ್ಲದ ಸರಕುಗಳ ಆಮದಿಗೆ ತಡೆಯೊಡ್ಡಲು ಪ್ರಸ್ತುತ ಸರ್ಕಾರ ಉತ್ಸಾಹಿತವಾಗಿದೆ.


  ನವದೆಹಲಿಯು ಕಳೆದ ಕೆಲವು ವರ್ಷಗಳಿಂದ 2014 ರಲ್ಲಿ ಪ್ರಾರಂಭವಾದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಬೆಂಬಲಿಸಲು ಹಲವಾರು ಸರಕುಗಳ ಮೇಲೆ ಕಸ್ಟಮ್ಸ್ ಸುಂಕಗಳನ್ನು ಹೆಚ್ಚಿಸಿದೆ ಮತ್ತು ತರುವಾಯ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು 'ಆತ್ಮನಿರ್ಭರ್ ಭಾರತ್' ಯೋಜನೆಯನ್ನು ಬೆಂಬಲಿಸಿದೆ.


  ಆಮದು ಸುಂಕ ಹೆಚ್ಚಳ
  ಕಳೆದ ವರ್ಷ, ಸರ್ಕಾರವು ಆರ್ಥಿಕ ವರ್ಷ 2022-23ರ ಬಜೆಟ್‌ನಲ್ಲಿ ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸಲು ಅನುಕರಣೆ ಆಭರಣಗಳು, ಛತ್ರಿಗಳು ಮತ್ತು ಇಯರ್‌ಫೋನ್‌ಗಳು ಸೇರಿದಂತೆ ಹಲವಾರು ವಸ್ತುಗಳ ಮೇಲೆ ಆಮದು ಸುಂಕವನ್ನು ಹೆಚ್ಚಿಸಿತ್ತು.


  ಇದನ್ನೂ ಓದಿ: Budget 2023: ಬಜೆಟ್‌ ಮಂಡನೆಗೂ ಮುನ್ನ ನಡೆಯುವ ಪೂರ್ವ ಸಿದ್ಧತೆಗಳೇನು ಗೊತ್ತಾ? ಇಲ್ಲಿದೆ ನೋಡಿ ಡಿಟೇಲ್ಸ್


  ಹಳದಿ ಲೋಹದ ಆಮದನ್ನು ಕಡಿಮೆ ಮಾಡಲು 2022 ರಲ್ಲಿ ಚಿನ್ನದ ಆಮದು ಸುಂಕಗಳನ್ನು ಹೆಚ್ಚಿಸಲಾಯಿತು. ಅಗತ್ಯವಿಲ್ಲದ ಅಗ್ಗದ ಆಮದುಗಳನ್ನು ತಡೆಯಲು ಸರ್ಕಾರವು ಗುಣಮಟ್ಟ ನಿಯಂತ್ರಣ ಆದೇಶಗಳನ್ನು ಸಹ ಹೊರಡಿಸಿದೆ. ದೇಶದಲ್ಲಿ ಈಗಾಗಲೇ ಉತ್ಪಾದನೆಯಾಗುತ್ತಿರುವ ಸರಕುಗಳನ್ನು ಪರಿಗಣಿಸಲಾಗುತ್ತಿದೆ ಎಂದು ಸರಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.


  ಸ್ವದೇಶಿ ಆಟಿಕೆಗಳಿಗೆ ಪ್ರಾಶಸ್ತ್ಯ
  ಆಮದು ಸುಂಕಗಳ ಹೆಚ್ಚಳ ಸೇರಿದಂತೆ ವಿವಿಧ ಯೋಜನೆಗಳು ದೇಶಕ್ಕೆ ಆಟಿಕೆಗಳ ಆಮದನ್ನು 70% ದಷ್ಟು ಕಡಿಮೆ ಮಾಡಲು ಸಹಾಯಕವಾಗಿವೆ. ಇದು 2014-2015ರಲ್ಲಿ ₹797 ಕೋಟಿಯಿಂದ 2021-2022ರಲ್ಲಿ ₹2,706 ಕೋಟಿಗೆ ಅಂದರೆ 240% ರಷ್ಟು ಹೆಚ್ಚುವರಿ ಆಟಿಕೆಗಳ ರಫ್ತಿಗೆ ಸಹಾಯ ಮಾಡಿದೆ ಎಂದು ವರದಿಯಾಗಿದೆ.


  ಇದನ್ನೂ ಓದಿ: 7th Pay Commission: ಕೇಂದ್ರ ಸರ್ಕಾರಿ ನೌಕರರೇ ಅಲರ್ಟ್, ಮಾ.31ರ ನಂತರ ಈ ಸೌಲಭ್ಯ ಕಡಿತ ಸಾಧ್ಯತೆ


  ಚೀನಾದಿಂದ ಆಗಮಿಸುತ್ತಿರುವ ಅಸುರಕ್ಷಿತ ಆಟಿಕೆಗಳ ಆಮದನ್ನು ಕಡಿತಗೊಳಿಸಲು ಮತ್ತು ದೇಶೀಯ ಉತ್ಪನ್ನಗಳ ಅಭಿವೃದ್ಧಿಗಾಗಿ ಭಾರತ ಸರಕಾರವು ದೇಶದ ಆಟಿಕೆ ಉದ್ಯಮದಲ್ಲಿ 3,500 ಕೋಟಿ ರೂಪಾಯಿ ಹೂಡಿಕೆ ಮಾಡಲು ಯೋಜಿಸಿದೆ ಎಂಬುದು ವರದಿಗಳಿಂದ ತಿಳಿದುಬಂದಿದೆ.

  Published by:ಗುರುಗಣೇಶ ಡಬ್ಗುಳಿ
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು