• Home
  • »
  • News
  • »
  • business
  • »
  • Business Idea: ಹವ್ಯಾಸದಿಂದ ಸಣ್ಣ ಉದ್ಯಮವಾಗಿ ಬೆಳೆದ ಬಬಲ್‌ ಟ್ರೋವ್​, ಈ ಹ್ಯಾಂಡ್‌ಮೇಡ್‌ ಸೋಪ್​ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್!

Business Idea: ಹವ್ಯಾಸದಿಂದ ಸಣ್ಣ ಉದ್ಯಮವಾಗಿ ಬೆಳೆದ ಬಬಲ್‌ ಟ್ರೋವ್​, ಈ ಹ್ಯಾಂಡ್‌ಮೇಡ್‌ ಸೋಪ್​ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್!

ಸಹಾರಾ, ಪಾಯಲ್​

ಸಹಾರಾ, ಪಾಯಲ್​

ಸಹಾರಾ ಅಗರ್‌ವಾಲ್‌ ಹಾಗೂ ಪಾಯಲ್‌ ಅಗರ್‌ವಾಲ್‌ ಜೋಡಿ ಇಂಥದ್ದೊಂದು ಸಣ್ಣ ಉದ್ದಿಮೆ ನಡೆಸುತ್ತಿದೆ. ಇವರು ಹ್ಯಾಂಡ್‌ಮೇಡ್‌ ಸೋಪ್ ಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ.

  • Share this:

ಇಂದಿನ ಕಾಲದಲ್ಲಿ ಸಾಕಷ್ಟು ಜನರು ಸ್ನಾನಕ್ಕಾಗಿ ಶವರ್‌ ಜೆಲ್‌ಗಳು (Shower Gel) , ಬಾಡಿ ವಾಶ್‌ (Body Wash) ಗಳನ್ನು ಉಪಯೋಗಿಸುತ್ತಾರೆ. ಇದು ಬಳಸಲು ಸುಲಭ ಹಾಗೆಯೇ ಸ್ಟೋರ್‌ (Store) ಮಾಡುವುದು ಕೂಡ ಸುಲಭ. ಜೊತೆಗೆ ಸ್ವಚ್ಛವಾಗಿಯೂ ಇರುತ್ತದೆ ಅನ್ನೋ ಕಾರಣಕ್ಕೆ ಇದನ್ನು ಹೆಚ್ಚಿನ ಜನರು ಉಪಯೋಗಿಸುತ್ತಾರೆ. ಆದ್ರೆ ಇಲ್ಲೊಬ್ಬರು ಯುವ ಉದ್ಯಮಿ (Businessmen) ಇಂದಿಗೂ ಸೋಪ್‌ (Soap) ಗಳನ್ನು ಬಳಸುವುದೇ ಬೆಸ್ಟ್‌ ಎನ್ನುತ್ತಾರೆ. ಅಲ್ಲದೇ ಸ್ವತಃ ಸೋಪ್‌ ಗಳನ್ನು ತಯಾರಿಸಿ ಸಣ್ಣ ಸ್ವಂತ ಉದ್ದಿಮೆಯನ್ನೂ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಸಹಾರಾ ಅಗರ್‌ವಾಲ್‌ ಹಾಗೂ ಪಾಯಲ್‌ ಅಗರ್‌ವಾಲ್‌ ಜೋಡಿ ಇಂಥದ್ದೊಂದು ಸಣ್ಣ ಉದ್ದಿಮೆ ನಡೆಸುತ್ತಿದೆ. ಇವರು ಹ್ಯಾಂಡ್‌ಮೇಡ್‌ ಸೋಪ್ ಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ.


ಮುಖ್ಯವಾಗಿ ಸಲ್ಫೇಟ್‌ ಹಾಗೂ ಪ್ಯಾರಾಬೆನ್‌ ಮುಕ್ತವಾಗಿರೋ ಉತ್ಪನ್ನಗಳನ್ನೇ ತಯಾರಿಸುತ್ತಾರೆ. ಅಲ್ಲದೇ ಚರ್ಮದ ಪೋಷಣೆಗಾಗಿ ತೈಲಗಳನ್ನು ಉತ್ಪನ್ನದಲ್ಲಿ ಸೇರಿಸುತ್ತಾರೆ. ಅಂದಹಾಗೆ ಸಹಾರಾ ಹಾಗೂ ಪಾಯಲ್‌ ಗೆ ಈ ಸಣ್ಣ ಉದ್ಯಮ ಆರಂಭಿಸಲು ಸ್ಪೂರ್ತಿಯಾಗಿದ್ದು ಶಾರ್ಕ್‌ ಟ್ಯಾಂಕ್‌ ಅನ್ನೋ ರಿಯಾಲಿಟಿ ಶೋ.


ನೈಸರ್ಗಿಕವಾಗಿ ತಯಾರಿಸಲಾಗುವ ಹ್ಯಾಂಡ್‌ಮೇಡ್‌ ಸೋಪ್‌


“ನಾನು ರಾಸಾಯನಿಕಗಳ ಬಳಕೆಯನ್ನು ನಿಲ್ಲಿಸಿ ನೈಸರ್ಗಿಕವಾಗಿ ಸೋಪ್‌ಗಳನ್ನು ತಯಾರಿಸಲು ನಿರ್ಧರಿಸಿದೆ. ಇದಕ್ಕಾಗಿ ಸಾಕಷ್ಟು ರಿಸರ್ಚ್‌ ಮಾಡಿದ್ದೇನೆ. ಅಲ್ದೇ ಆನ್‌ಲೈನ್‌ ಕ್ಲಾಸ್‌ ಗಳನ್ನೂ ತೆಗೆದುಕೊಂಡಿದ್ದೇನೆ.


ಕೆಲವೊಂದು ಟೆಕ್ನಿಕ್‌ ಹಾಗೂ ಮೂಲಭೂತ ಅಂಶಗಳನ್ನು ಕಲಿತ ನಂತರ ನಾನು ಅದನ್ನು ನನ್ನ ಖುಷಿಯಾಗಿ ಮಾಡಲು ಆರಂಭಿಸಿದೆ. ಬೇರೆ ಬೇರೆ ಬಗೆಯ ಚರ್ಮಕ್ಕಾಗಿ ಬಳಸುವ ಪದಾರ್ಥಗಳನ್ನು ಅರ್ಥಮಾಡಿಕೊಂಡು ನನ್ನದೇ ಆದ ಸ್ವಂತ ಪ್ರಯೋಗ ಮಾಡಲು ಶುರುಮಾಡಿದೆ. ನಂತರ ಶೀಘ್ರವೇ ನನ್ನ ಬಬಲ್‌ ಟ್ರೋವ್‌ ಹುಟ್ಟಿತು” ಎಂಬುದಾಗಿ ಸಹಾರಾ ಹೇಳುತ್ತಾರೆ.


ಬಬಲ್ ಟ್ರೋವ್ ಉತ್ಪನ್ನಗಳು


ಬಬಲ್ ಟ್ರೋವ್ ಬಾತ್ ಸಾಲ್ಟ್‌ಗಳು, ಉಬ್ಟಾನ್‌ಗಳು, ಬಾತ್ ಬಾಂಬ್‌, ಪೇಡಿ ಬಾಂಬ್‌, ಬಾಡಿ ಸ್ಕ್ರಬ್‌ ಸೇರಿದಂತೆ ಇನ್ನೂ ಹೆಚ್ಚಿನ ಉತ್ಪನ್ನಗಳನ್ನು ಹೊಂದಿವೆ. ಇವುಗಳ ತಯಾರಿಕೆಯಲ್ಲಿ ಶಿಯಾ ಬೆಣ್ಣೆ, ತೆಂಗಿನ ಎಣ್ಣೆ, ವಿಟಮಿನ್‌ಗಳು, ಶ್ರೀಗಂಧ, ಅರಿಶಿನ, ಕೇಸರಿ, ಮೇಕೆ ಹಾಲು ಮುಂತಾದವುಗಳನ್ನು ಉಪಯೋಗಿಸಲಾಗುತ್ತದೆ.ಅಲ್ದೇ ಸೂಪರ್‌ಮ್ಯಾನ್, ಬ್ಯಾಟ್‌ಮ್ಯಾನ್, ಡೋನಟ್‌ಗಳು, ಯುನಿಕಾರ್ನ್‌ಗಳು ಮತ್ತು ಕಾಫಿ ಬೀಜಗಳಂತಹ ಚಮತ್ಕಾರಿ ಸಾಬೂನುಗಳನ್ನು ಸಹ ತಯಾರಿಸಲಾಗುತ್ತದೆ.


ಇದನ್ನೂ ಓದಿ: ಬಿಪಿ ಇದ್ದವ್ರಿಗೆ ಈ ಪುಡಿ ರಾಮಬಾಣ, ಇದನ್ನು ಮನೆಯಲ್ಲೇ ಮಾಡಿ ಕೈ ತುಂಬಾ ಹಣ ಗಳಿಸಿ!


ಈ ಸಾಬೂನುಗಳು ಬೆಲೆ ರೂ. 120 ಮತ್ತು ರೂ. 170ಗಳಾಗಿವೆ. ಆದರೆ ಸುಗಂಧ ದ್ರವ್ಯಗಳಿಂದ ತುಂಬಿರುವ ಪ್ರೀಮಿಯಂ ಸುಗಂಧ ದ್ರವ್ಯದ ಸಾಬೂನುಗಳು ರೂ. 250 ಕ್ಕೆ ಮಾರಾಟ ಮಾಡಲಾಗುತ್ತದೆ. ಇನ್ನು, ಅವರ ಉತ್ತಮ-ಮಾರಾಟದ ಉತ್ಪನ್ನಗಳು ಬಾತ್ ಬಾಂಬ್‌ಗಳು ಮತ್ತು ಥೀಮ್-ಆಧಾರಿತ ಹ್ಯಾಂಪರ್‌ಗಳಾಗಿವೆ. ಅವರ ಪೆಡಿಕ್ಯೂರ್‌ ಬಾಂಬ್‌ ಗಳನ್ನು ಉಪಯೋಗಿಸೋದ್ರ ಮೂಲಕ ಹಿತವಾದ ಪಾದಗಳ ಅನುಭವ ಪಡೆಯಬಹುದು. ಜೊತೆಗೆ ಕೇಸರಿ ಜೆಲ್ ಮಕ್ಕಳಿಗೂ ಸುರಕ್ಷಿತವಾಗಿದೆ ಎಂದು ಸಹಾರಾ ಹೇಳುತ್ತಾರೆ.


ಕಸ್ಟಮೈಸ್‌ ಗಿಫ್ಟ್‌ ಹ್ಯಾಂಪರ್‌!


ಇನ್ನು, ಬೇಬಿ ಶವರ್‌ಗಳು, ಬರ್ತ್‌ಡೇ ರಿಟರ್ನ್ ಗುಡೀಸ್ ಮತ್ತು ಬ್ರೈಡಲ್ ಶವರ್‌ಗಳಂತಹ ವಿಶೇಷ ಸಂದರ್ಭಗಳಲ್ಲಿ ನಾವು ಕೈಯಿಂದ ಮಾಡಿದ ಗಿಫ್ಟ್ ಹ್ಯಾಂಪರ್‌ಗಳನ್ನು ಕಸ್ಟಮೈಸ್ ಮಾಡುತ್ತೇವೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿಶೇಷವಾಗಿ ತಯಾರಿಸಿಕೊಡುವುದಾಗಿ ಸಹರಾ ಹೇಳುತ್ತಾರೆ. ಅಲ್ಲದೇ ಮಕ್ಕಳು ಮತ್ತು ವಯಸ್ಕರಿಗೆ ಸಾಬೂನು ತಯಾರಿಕೆಯ ಕಾರ್ಯಾಗಾರಗಳನ್ನು ಸಹ ನಡೆಸುತ್ತಾರೆ.


ಗ್ರಾಹಕರು ತಮ್ಮ ಚರ್ಮದ ಪ್ರಕಾರವನ್ನು ಆಧರಿಸಿ ಸಾಬೂನುಗಳನ್ನು ಸೂಚಿಸುತ್ತಾರೆ. "ಅವರು ಒಣ ಚರ್ಮವನ್ನು ಹೊಂದಿದ್ದರೆ, ನಾವು ಕೋಕೋ ಬೆಣ್ಣೆ ಅಥವಾ ಶಿಯಾ ಬೆಣ್ಣೆಯನ್ನು ಶಿಫಾರಸು ಮಾಡುತ್ತೇವೆ.ಎಣ್ಣೆಯುಕ್ತ ಅಥವಾ ಸಾಮಾನ್ಯ ಚರ್ಮಕ್ಕಾಗಿ, ನಾವು ಗ್ಲಿಸರಿನ್, ಅಲೋವೆರಾ ಅಥವಾ ಮೇಕೆ ಹಾಲಿನ ಸೋಪ್‌ ಬಳಸಲು ಶಿಫಾರಸು ಮಾಡುತ್ತೇವೆ" ಎಂದು ಸಹಾರಾ ವಿವರಿಸುತ್ತಾರೆ.


ಇದನ್ನೂ ಓದಿ: ಪೇಪರ್‌ ಪ್ಲೇಟ್‌ ತಯಾರಿಸಿ ಲಕ್ಷಾಂತರ ಆದಾಯ: ಹಲವರಿಗೆ ಕೆಲಸ ಕೊಟ್ಟ ಒಡಿಶಾ ಮಹಿಳೆಯ ಸಾಧನೆಯೇ ಸ್ಫೂರ್ತಿದಾಯಕ!


ವ್ಯವಹಾರದ ಸಾಮಾಜಿಕ ಮಾಧ್ಯಮದ ಹಿಂದಿರುವ ವ್ಯಕ್ತಿ ಅನ್ಹೇ ಅಗರ್ವಾಲ್ ಎನ್ನುವ ಸಹಾರಾ, ಕುಟುಂಬದ ಸಹಕಾರದಿಂದಲೇ ನಾನು ಯಶಸ್ಸು ಸಾಧಿಸಲು ಸಾಧ್ಯವಾಯಿತು ಎನ್ನುತ್ತಾರೆ.

Published by:ವಾಸುದೇವ್ ಎಂ
First published: