• Home
  • »
  • News
  • »
  • business
  • »
  • BSNL 4G: ಬಿಎಸ್​ಎನ್​ಎಲ್ 4ಜಿ ಬರಲಿದೆ ದಾರಿಬಿಡಿ! 1.12 ಲಕ್ಷ ಟವರ್ ಎಲ್ಲೆಲ್ಲಿ ಶುರುವಾಗುತ್ತೆ?

BSNL 4G: ಬಿಎಸ್​ಎನ್​ಎಲ್ 4ಜಿ ಬರಲಿದೆ ದಾರಿಬಿಡಿ! 1.12 ಲಕ್ಷ ಟವರ್ ಎಲ್ಲೆಲ್ಲಿ ಶುರುವಾಗುತ್ತೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈ ಸ್ಥಳೀಯ 4G ನೆಟ್‌ವರ್ಕ್ ಅನ್ನು ತರುವ ಯೋಜನೆಯಡಿಯಲ್ಲಿ  BSNL ಭಾರತದಾದ್ಯಂತ 1.12 ಲಕ್ಷಕ್ಕೂ ಹೆಚ್ಚು ಟವರ್‌ಗಳನ್ನು ಸ್ಥಾಪಿಸುತ್ತದೆ.

  • Share this:

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೇಡ್ ಇನ್ ಇಂಡಿಯಾ (Made In India) ಉಪಕ್ರಮದ ಭಾಗವಾಗಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಶೀಘ್ರದಲ್ಲೇ ಸ್ಥಳೀಯ 4G ನೆಟ್‌ವರ್ಕ್‌ಗಳೊಂದಿಗೆ ಬರಲಿದೆ. ಕೇಂದ್ರ ಸಚಿವ ಸಂಪುಟ ತನ್ನ ಎರಡು ಸಾವಿರಕ್ಕೂ ಹೆಚ್ಚು ಟವರ್​ಗಳಿಗೆ ಅನುಮೋದನೆ ನೀಡಿದೆ. ಈ ಮಾಹಿತಿಯನ್ನು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ (IT) ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ಅವರು ಶುಕ್ರವಾರ (ಏಪ್ರಿಲ್ 29, 2022) ನೀಡಿದ್ದಾರೆ. ಮುಂಬರುವ ಕೆಲವು ವಾರಗಳಲ್ಲಿ BSNL ಸ್ವದೇಶಿ 4G ನೆಟ್‌ವರ್ಕ್ ಅನ್ನು ಪ್ರಾರಂಭಿಸಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದಕ್ಕಾಗಿ ಭಾರತದಾದ್ಯಂತ 2,343 ನಿವೇಶನಗಳನ್ನು ಗುರುತಿಸಲಾಗಿದ್ದು, ಈ ಕಾಮಗಾರಿಗೆ ಸಂಪುಟ ಅನುಮತಿ ನೀಡಿದೆ.


ಈ 4G ಟೆಲಿಕಾಂ ನೆಟ್‌ವರ್ಕ್ ಅನ್ನು ಸ್ವತಃ ಭಾರತೀಯ ಎಂಜಿನಿಯರ್‌ಗಳು ಮತ್ತು ವಿಜ್ಞಾನಿಗಳು ಅಭಿವೃದ್ಧಿಪಡಿಸುತ್ತಿದ್ದಾರೆ. ಈ ಸ್ಥಳೀಯ 4G ನೆಟ್‌ವರ್ಕ್ ಅನ್ನು ತರುವ ಯೋಜನೆಯಡಿಯಲ್ಲಿ  BSNL ಭಾರತದಾದ್ಯಂತ 1.12 ಲಕ್ಷಕ್ಕೂ ಹೆಚ್ಚು ಟವರ್‌ಗಳನ್ನು ಸ್ಥಾಪಿಸುತ್ತದೆ.


1.12 ಲಕ್ಷ ಟವರ್‌ಗಳನ್ನು ಸ್ಥಾಪನೆ
ಈ ಯೋಜನೆಗಾಗಿ ಸರ್ಕಾರ 45,000 ಕೋಟಿ ರೂ. ವಿನಿಯೋಗಿಸಿದೆ. ಸ್ಥಳೀಯ 4G ಟೆಲಿಕಾಂ ನೆಟ್‌ವರ್ಕ್ ಶೀಘ್ರದಲ್ಲೇ ಭಾರತದಾದ್ಯಂತ ಸೇವೆ ಒದಗಿಸಲಿದೆ. BSNL ದೇಶಾದ್ಯಂತ ಸುಮಾರು 1.12 ಲಕ್ಷ ಟವರ್‌ಗಳನ್ನು ಸ್ಥಾಪಿಸಲು ಯೋಜಿಸುತ್ತಿದೆ ಎಂದು ಕೇಂದ್ರ ಸಚಿವರು ಲೋಕಸಭೆಗೆ ತಿಳಿಸಿದ್ದಾರೆ.


ಇದನ್ನೂ ಓದಿ: Rat Snake Poison: ಕೇರೆ ಹಾವಿಗೆ ಬಾಲದಲ್ಲಿ ವಿಷ ಇದೆಯೇ? ನಾಗರ ಹಾವಿಗೂ ಕೇರೆ ಹಾವಿಗೂ ಏನು ಸಂಬಂಧ?


ಅಂದಹಾಗೆ ಭಾರತದ ಸ್ಥಳೀಯ 4G ಮೊಬೈಲ್ ನೆಟ್‌ವರ್ಕ್ ಕಡಿಮೆ ಸಮಯದಲ್ಲಿ ಸಿದ್ಧವಾಗಿದೆ ಎಂದು ದೂರಸಂಪರ್ಕ ಸಚಿವರು ಕಳೆದ ತಿಂಗಳು ಹೇಳಿದ್ದರು. ಇದರೊಂದಿಗೆ 2022 ರ ಅಂತ್ಯದ ವೇಳೆಗೆ 5G ನೆಟ್‌ವರ್ಕ್ ಸಿದ್ಧವಾಗಲಿದೆ ಎಂದು ಅವರು ಮಾಹಿತಿ ನೀಡಿದರು.


ಪ್ರಪಂಚದಾದ್ಯಂತ ಮೆಚ್ಚುಗೆ
ಈಕುರಿತು ಮಾಹಿತಿ ನೀಡಿದ ಅಶ್ವಿನಿ ವೈಷ್ಣವ್, “4G ದೂರಸಂಪರ್ಕ ಜಾಲವು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಭಾರತದಲ್ಲಿ ಭಾರತೀಯ ಎಂಜಿನಿಯರ್‌ಗಳು ಮತ್ತು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. 4G ನೆಟ್‌ವರ್ಕ್‌ನ ನಮ್ಮ ಅಭಿವೃದ್ಧಿಯು ಪ್ರಪಂಚದಾದ್ಯಂತ ಮೆಚ್ಚುಗೆ ಪಡೆಯುತ್ತಿದೆ. ಸಂಪೂರ್ಣ ದೂರಸಂಪರ್ಕ ಸಾಧನಗಳೊಂದಿಗೆ ಕೋರ್ ನೆಟ್‌ವರ್ಕ್, ರೇಡಿಯೋ ನೆಟ್‌ವರ್ಕ್ ಅನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.


7,93,551 ಬಿಟಿಎಸ್‌ಗಳು ಆಪ್ಟಿಕಲ್ ಫೈಬರ್​ಗಳು
ಟೆಲಿಕಾಂ ಸೇವಾ ಪೂರೈಕೆದಾರರು ಮೊಬೈಲ್ ಟವರ್‌ಗಳಲ್ಲಿ ಸ್ಥಾಪಿಸಲಾದ ತಮ್ಮ ಬೇಸ್ ಟ್ರಾನ್ಸ್‌ಸಿವರ್ ಸ್ಟೇಷನ್‌ಗಳನ್ನು (ಬಿಟಿಎಸ್) ಫೈಬರ್ ಆಗಿ ಪರಿವರ್ತಿಸುತ್ತಾರೆ. ಫೆಬ್ರವರಿ 1, 2022 ರ ಹೊತ್ತಿಗೆ ದೇಶದಲ್ಲಿ 7,93,551 ಬಿಟಿಎಸ್‌ಗಳು ಆಪ್ಟಿಕಲ್ ಫೈಬರ್‌ನೊಂದಿಗೆ ಸಂಪರ್ಕ ಹೊಂದಿವೆ ಎಂದು ವೈಷ್ಣವ್ ಹೇಳಿದ್ದಾರೆ.


ಭಾರತ ಎಲೈಟ್ ಕ್ಲಬ್​ಗೆ ಸೇರಲಿದೆ
5G ಗೆ ಅಪ್‌ಗ್ರೇಡ್ ಮಾಡಬಹುದಾದ ದೇಶೀಯವಾಗಿ ಅಭಿವೃದ್ಧಿಪಡಿಸಿದ 4G ತಂತ್ರಜ್ಞಾನದೊಂದಿಗೆ ಹೊರಬಂದಿರುವುದರಿಂದ ಜಗತ್ತು ಭಾರತವನ್ನು ಗಂಭೀರವಾಗಿ ನೋಡುತ್ತಿದೆ ಎಂದು ಅವರು ಹೇಳಿದರು. ಇದು ರಾಷ್ಟ್ರವನ್ನು ವಿಶ್ವಾದ್ಯಂತ ತಂತ್ರಜ್ಞಾನದ ಬೆಳವಣಿಗೆಗಳಲ್ಲಿ ಪ್ರಾಬಲ್ಯ ಹೊಂದಿರುವ ದೇಶಗಳ ಎಲೈಟ್ ಕ್ಲಬ್‌ಗೆ ಕೊಂಡೊಯ್ಯುತ್ತದೆ ಎನ್ನಲಾಗಿದೆ.


ಇದನ್ನೂ ಓದಿ:Top Salary Courses: ಪಿಯು ಆದ್ಮೇಲೆ ಮುಂದೇನು? ಭರ್ಜರಿ ಸಂಬಳ ಬರೋ ಕೋರ್ಸ್​ ಇಲ್ಲಿದೆ!


ಟೆಲಿಕಾಂ ಟವರ್‌ಗಳ ಫೈಬರೀಕರಣದಲ್ಲಿ ಪ್ರಮುಖ ಅಡಚಣೆಯೆಂದರೆ ಹೆಚ್ಚಿನ ಶುಲ್ಕಗಳು, ಸಂಕೀರ್ಣ ಪ್ರಕ್ರಿಯೆಗಳು ಮತ್ತು ಭಾರತೀಯ ಟೆಲಿಗ್ರಾಫ್ ರೈಟ್ ಆಫ್ ವೇ ನಿಯಮಗಳೊಂದಿಗೆ ರಾಜ್ಯಗಳ ROW ನೀತಿಯನ್ನು ಹೊಂದಿಕೆಯಾಗದೇ ಇರುವುದು. ಈಕುರಿತು TSPಗಳು ವರದಿ ಮಾಡಿರುವಂತ ಕಾರಣ ರೈಟ್ ಆಫ್ ವೇ (ROW) ಅನುಮತಿಗಳನ್ನು ಪಡೆಯುವಲ್ಲಿ ವಿಳಂಬವಾಗಿದೆ. 2016ರಲ್ಲಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದು ಸಚಿವರು ತಿಳಿಸಿದರು.

Published by:ಗುರುಗಣೇಶ ಡಬ್ಗುಳಿ
First published: