• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Gud Chewing Gum: ಇದು ಪರಿಸರ ಸ್ನೇಹಿ ಚ್ಯೂಯಿಂಗ್‌ ಗಮ್:‌ ಸ್ಟಾರ್ಟ್‌ಅಪ್‌ನಿಂದ ತಿಂಗಳಿಗೆ 6 ಲಕ್ಷ ಆದಾಯ ಗಳಿಸುತ್ತಿದ್ದಾರೆ ಈ ಬೆಂಗಳೂರು ಬ್ರದರ್ಸ್‌

Gud Chewing Gum: ಇದು ಪರಿಸರ ಸ್ನೇಹಿ ಚ್ಯೂಯಿಂಗ್‌ ಗಮ್:‌ ಸ್ಟಾರ್ಟ್‌ಅಪ್‌ನಿಂದ ತಿಂಗಳಿಗೆ 6 ಲಕ್ಷ ಆದಾಯ ಗಳಿಸುತ್ತಿದ್ದಾರೆ ಈ ಬೆಂಗಳೂರು ಬ್ರದರ್ಸ್‌

ಮಯಾಂಕ್ ಮತ್ತು ಭುವನ್

ಮಯಾಂಕ್ ಮತ್ತು ಭುವನ್

ಬಹಳಷ್ಟು ಜನರಿಗೆ ಚೂಯಿಂಗ್ ಗಮ್ ತಿನ್ನುವ ಅಭ್ಯಾಸ ಇರುತ್ತದೆ. ಆದರೆ ನಿಮಗೆ ಗೊತ್ತಾ? ಈ ಚ್ಯೂಯಿಂಗಮ್‌ ಪ್ಲಾಸ್ಟಿಕ್‌ ಅಂಶವೂ ಇರುತ್ತದೆ. ಅದು ನಿಮ್ಮ ಆರೋಗ್ಯದ ಮೇಲೆ ಮಾತ್ರವಲ್ಲದೆ ಪರಿಸರದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

  • Share this:

ಬೆಂಗಳೂರನ್ನು (Bengaluru) ಸ್ಟಾರ್ಟ್‌ಅಪ್‌ಗಳ ನಗರ (Startup City) ಅಂತಾನೇ ಕರೆಯಲಾಗುತ್ತದೆ. ಇಲ್ಲಿ ಅನೇಕ ಸ್ಟಾರ್ಟ್‌ಅಪ್‌ಗಳು ಹುಟ್ಟಿಕೊಳ್ಳುತ್ತವೆ. ಅವುಗಳಲ್ಲಿ ಹೆಚ್ಚಿನವು ಯಶಸ್ವಿಯಾಗುತ್ತವೆ. ಅದರಲ್ಲೂ ಕ್ರಿಯೇಟಿವ್‌ (Creative) ಆಗಿರುವಂಥ, ಹೊಸತನವುಳ್ಳ, ಜನರನ್ನು ಆಕರ್ಷಿಸುವಂಥ ಜೊತೆಗೆ ದೊಡ್ಡ ಮಟ್ಟದ ಆದಾಯ (Income) ತಂದುಕೊಡುವಂಥ ಸಾಕಷ್ಟು ಸಾರ್ಟಪ್‌ಗಳನ್ನು ನಾವು ನೋಡಬಹುದು. ಅಂಥದ್ದೇ ಕ್ರಿಯೇಟಿವ್‌ ಆಗಿರುವಂಥ ಜೊತೆಗೆ ಆರೋಗ್ಯಕರ (Healthy) ಹಾಗೂ ಪರಿಸರಸ್ನೇಹಿ (Environmentally Friendly) ಹೊಸ ಸ್ಟಾರ್ಟಪ್‌ ಹುಟ್ಟಿಕೊಂಡಿದೆ. ಅದೇ ಗುಡ್‌ಗಮ್‌. ಅಂದಹಾಗೆ ಬೆಂಗಳೂರಿನ ಮಯಾಂಕ್ ಮತ್ತು ಭುವನ್ ಎಂಬ ಇಬ್ಬರು ಸಹೋದರರು ಈ ಸ್ಟಾರ್ಟಪ್‌ ಅನ್ನು ಹುಟ್ಟುಹಾಕಿದ್ದಾರೆ.


ಪ್ರತಿ ವರ್ಷ ಚ್ಯೂಯಿಂಗ್‌ ಗಮ್‌ ನಿಂದ 105 ಟನ್‌ ಪ್ಲಾಸ್ಟಿಕ್‌ ಕಸ !


ಬಹಳಷ್ಟು ಜನರಿಗೆ ಚೂಯಿಂಗ್ ಗಮ್  (Chewing Gum) ತಿನ್ನುವ ಅಭ್ಯಾಸ ಇರುತ್ತದೆ. ಆದರೆ ನಿಮಗೆ ಗೊತ್ತಾ? ಈ ಚ್ಯೂಯಿಂಗಮ್‌ ಪ್ಲಾಸ್ಟಿಕ್‌ ಅಂಶವೂ ಇರುತ್ತದೆ. ಅದು ನಿಮ್ಮ ಆರೋಗ್ಯದ ಮೇಲೆ ಮಾತ್ರವಲ್ಲದೆ ಪರಿಸರದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ.


ಅಂದಹಾಗೆ ಚೂಯಿಂಗ್ ಗಮ್ PVA (ಪಾಲಿವಿನೈಲ್ ಅಸಿಟೇಟ್) ಎಂಬ ವಸ್ತುವನ್ನು ಹೊಂದಿರುತ್ತದೆ. ಇದನ್ನು ಟೈರ್ ಮತ್ತು ಅಂಟು ತಯಾರಿಸಲು ಬಳಸಲಾಗುತ್ತದೆ. ರಿಸರ್ಚ್ ಗೇಟ್ ವರದಿ ಪ್ರಕಾರ, “ಪ್ರತಿ ವರ್ಷ, ಚೂಯಿಂಗ್ ಗಮ್ 105 ಟನ್‌ಗಳಿಗಿಂತ ಹೆಚ್ಚು ‘ಪ್ಲಾಸ್ಟಿಕ್’ ಕಸವನ್ನು ಉತ್ಪಾದಿಸುತ್ತದೆ. ಈ ತ್ಯಾಜ್ಯವನ್ನು ಸಂಗ್ರಹಿಸಲು ಅಥವಾ ಟ್ರ್ಯಾಕ್ ಮಾಡಲು ಕಷ್ಟವಾಗುತ್ತದೆ. ಅಲ್ಲದೇ ಸಾವಿರಾರು ವರ್ಷಗಳ ಕಾಲ ಭೂಮಿಯನ್ನು ಕಲುಷಿತಗೊಳಿಸುತ್ತದೆ.


ನೈಸರ್ಗಿಕ ಪದಾರ್ಥಗಳ ಚ್ಯೂಯಿಂಗ್‌ ಗಮ್‌


ಗಮ್ ತ್ಯಾಜ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬೆಂಗಳೂರಿನ ಈ ಸ್ಟಾರ್ಟಪ್ ಕೆಲಸ ಮಾಡಿದೆ. ಇದು "ಪ್ಲಾಸ್ಟಿಕ್ ಮುಕ್ತ, ಭೂಮಿಯಲ್ಲಿ ಕರಗುವಂತಹ ಮತ್ತು ಎಲ್ಲಾ ನೈಸರ್ಗಿಕ ಪದಾರ್ಥ ಹೊಂದಿರುವ ಚೂಯಿಂಗ್ ಗಮ್ಅನ್ನು ತಯಾರಿಸಿದೆ. 2022 ರಲ್ಲಿ ಮಯಾಂಕ್ ಬಿ ನಾಗೋರಿ ಮತ್ತು ಅವರ ಸಹೋದರ ಭುವನ್ ಸ್ಥಾಪಿಸಿದ ಗುಡ್ ಗಮ್, ಭೂಮಿಯನ್ನು ಮಾಲಿನ್ಯಗೊಳಿಸದಂತೆ 700 ಕೆಜಿ ಗಮ್ ಪ್ಲಾಸ್ಟಿಕ್ ಅನ್ನು ಉಳಿಸಿದೆ ಎಂದು ಹೇಳಲಾಗಿದೆ.


ಗುಡ್‌ಗಮ್‌


"ಇದು ತುಂಬಾ ಚಿಕ್ಕ ಸಮಸ್ಯೆ ಎಂದು ತೋರುತ್ತದಾದರೂ ಗಮ್‌ಗಳು ಪರಿಸರವನ್ನು ಹೆಚ್ಚಿನ ಪ್ರಮಾಣದಲ್ಲಿ ಕಲುಷಿತಗೊಳಿಸುತ್ತವೆ. ನಮ್ಮ ಚೂಯಿಂಗ್ ಗಮ್‌ನೊಂದಿಗೆ, ನಾವು ಅದನ್ನು ಕಡಿಮೆ ಮಾಡುತ್ತಿಲ್ಲ, ಆದರೆ ನಮ್ಮ ಗ್ರಾಹಕರಿಗೆ ನಿಯಮಿತ ಚೂಯಿಂಗ್ ಗಮ್‌ಗಳ ದುಷ್ಪರಿಣಾಮಗಳ ಬಗ್ಗೆ ಶಿಕ್ಷಣ ನೀಡುತ್ತಿದ್ದೇವೆ” ಎಂದು ಮಯಾಂಕ್ ಹೇಳುತ್ತಾರೆ.


“ನಾವು ಅತ್ಯಂತ ಕಡಿಮೆ ಪ್ಲಾಸ್ಟಿಕ ಬಳಸುತ್ತೇವೆ”


“ನಾವು ಮಕ್ಕಳಾಗಿದ್ದಾಗ ಸಾಕಷ್ಟು ಪರಿಸರದ ಬಗ್ಗೆ ಶಿಕ್ಷಣ ನೀಡಲಾಗಿದೆ. ನಾವು ಅತ್ಯಂತ ಕಡಿಮೆ ಪ್ಲಾಸ್ಟಿಕ್ ಬಳಸುತ್ತೇವೆ. ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ನಮಗೆ ಹೇಳಿಕೊಟ್ಟಿದ್ದಾರೆ. ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸುವುದನ್ನು ತಪ್ಪಿಸಲು ನಾವು ಯಾವಾಗಲೂ ನಮ್ಮೊಂದಿಗೆ ಬಾಟಲಿಗಳನ್ನು ತೆಗೆದುಕೊಂಡು ಹೋಗುತ್ತೇವೆ. ಅಲ್ಲದೇ 'ಯೂಸ್ ಅಂಡ್-ಥ್ರೋ' ಕ್ರೋಕರೀಸ್ ಅನ್ನು ನಾವು ಎಂದಿಗೂ ಬಳಸುವುದಿಲ್ಲ. ನಾವು ಪ್ರಯಾಣಿಸಿದಲ್ಲೆಲ್ಲಾ ನಮ್ಮ ಪ್ಲೇಟ್‌ಗಳನ್ನು ಕೊಂಡೊಯ್ಯುತ್ತೇವೆ ಎಂದು ಮಯಾಂಕ್‌ ವಿವರಿಸುತ್ತಾರೆ.


ಚ್ಯೂಯಿಂಗ್‌ ಗಮ್‌ ತ್ಯಜಿಸಲು ಕಾರಣವಾಗಿದ್ದು ಒಂದು ಲೇಖನ


"ಅಧ್ಯಯನ ಮಾಡುವಾಗ ಚ್ಯೂಯಿಂಗ್‌ ಗಮ್‌ ತಿನ್ನುವುದರಿಂದ ಹೆಚ್ಚಿನ ವಿಷಯಗಳನ್ನು ನೆನಪಿಟ್ಟು ಕೊಳ್ಳಬಹುದು ಎಂಬುದನ್ನು ಕೇಳಿದ್ದೆ. ಆದ್ದರಿಂದ ನಾನು ಪರೀಕ್ಷೆ ಸಮಯದಲ್ಲಿ ವಿಷಯಗಳನ್ನು ನೆನಪಿಟ್ಟುಕೊಳ್ಳುವ ಸಲುವಾಗಿ ಚ್ಯೂಯಿಂಗ್‌ಗಮ್‌ ಗಳನ್ನು ಅಗೆಯುತ್ತಿದ್ದೆ. ಉತ್ತಮ ಅಂಕ ಗಳಿಸೋಕೆ ನಾನು ಹಾಗೆ ಮಾಡುತ್ತಿದ್ದೆ.


ಆದರೆ 2010ರಲ್ಲಿ ನಾನು 10 ನೇ ತರಗತಿ ಬೋರ್ಡ್‌ ಎಕ್ಸಾಂಗಾಗಿ ತಯಾರಿ ನಡೆಸುತ್ತಿದ್ದ ವೇಳೆ ಒಂದು ಲೇಖನವನ್ನು ಓದಿದೆ. ಅದರಲ್ಲಿ ಚ್ಯೂಯಿಂಗಮ್‌ ಗಳಲ್ಲಿ ಪ್ಲಾಸ್ಟಿಕ್‌ ಅನ್ನು ಹೇಗೆ ಬಳಸಲಾಗುತ್ತದೆ ಎಂಬುದನ್ನು ವಿವರಿಸಲಾಗಿತ್ತು.” "ಆ ಲೇಖನ ಓದಿದ ನಂತರ ನಾನು ಚ್ಯೂಯಿಂಗ್‌ ತ್ಯಜಿಸಲು ನಿರ್ಧರಿಸಿದೆ. ವರ್ಷಗಳ ನಂತರ ನಾನು ಸಂಶೋಧನೆಯನ್ನು ಪ್ರಾರಂಭಿಸಿದ್ದು ಗುಡ್ ಗಮ್‌ಗಳನ್ನು ತಯಾರಿಸಲು ನಿರ್ಧರಿಸಿದೆ” ಎಂದು ಮಯಾಂಕ್‌ ವಿವರಿಸುತ್ತಾರೆ.


ಪ್ರಕೃತಿ ಸ್ನೇಹಿ ಜೀವನದತ್ತ ಒಂದು ಸಣ್ಣ ಹೆಜ್ಜೆ


ಮಯಾಂಕ್‌ ಸ್ನಾತಕೋತ್ತರ ಅಧ್ಯಯನ ಮಾಡುವಾಗ ಅಮೆರಿಕದಲ್ಲಿ ಜೈವಿಕ ವಿಘಟನೀಯ ಚೂಯಿಂಗ್ ಗಮ್ ತಯಾರಿಸುವ ಕಂಪನಿಯನ್ನು ನೋಡಿದರು. ಅದೇ ರೀತಿ ನಾನೂ ಕೂಡ ಏನಾದರೂ ಮಾಡಬೇಕು ಎಂಬುದಕ್ಕೆ ಸ್ಪೂರ್ತಿಯಾಯಿತು. ಅಲ್ಲದೇ ಆ ಸಮಯದಲ್ಲಿ ಭಾರತದಲ್ಲಿ ಅಂತಹ ತಯಾರಕರು ಯಾರೂ ಇರಲಿಲ್ಲ ಎಂಬುದಾಗಿ ಅವರು ಹೇಳುತ್ತಾರೆ.


ಈ ಮಧ್ಯೆ ತನ್ನ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ನಂತರ, ಮಾಯಾಂಕ್ ಆಹಾರ ವಿಜ್ಞಾನದಲ್ಲಿ ಮಹಿಳೆಯರಿಗೆ ಆರೋಗ್ಯ ಪಾನೀಯಗಳನ್ನು ತಯಾರಿಸುವ ಸ್ಟಾರ್ಟಪ್‌ನೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು. ಅಲ್ಲದೇ ಅವರು ಸ್ವಂತ ಉದ್ಯಮ ಪ್ರಾರಂಭಿಸುವ ಮೊದಲು ಅನೇಕ ಸ್ಟಾರ್ಟ್‌ಅಪ್‌ಗಳಿಗೆ ಸಲಹೆಗಾರನಾಗಿ ಕೆಲಸ ಮಾಡಿದ್ದರು.




“ಸಾಂಕ್ರಾಮಿಕ ಕೋವಿಡ್‌ ಸಮಯದಲ್ಲಿ ನನ್ನ ಸಹೋದರನೊಂದಿಗೆ ಸೇರಿ ಚೂಯಿಂಗ್ ಗಮ್‌ಗಳನ್ನು ಹೇಗೆ ಪರಸರ ಸ್ನೇಹಿಯಾಗಿಬಹುದು ಎಂಬುದರ ಕುರಿತು ಆಲೋಚಿಸಿದೆವು. ನಮ್ಮ ಕೈಯಲ್ಲಿ ಸಮಯವಿದೆ ಮತ್ತು ಪ್ರಾರಂಭಿಸಲು ಇದು ಸರಿಯಾದ ಸಮಯ ಎಂದು ಭಾವಿಸಿದೆವು. ಇದಲ್ಲದೆ, ನನ್ನ ಸ್ವಂತ ವ್ಯವಹಾರವನ್ನು ಪ್ರಾರಂಭಿಸುವುದು ನನ್ನ ಗುರಿಯಾಗಿತ್ತು ಎಂಬುದಾಗಿ ಅವರು ಹೇಳುತ್ತಾರೆ.


ಇಬ್ಬರೂ ಸಹೋದರರು ಚೂಯಿಂಗ್ ಗಮ್‌ನಲ್ಲಿರುವ ಪ್ಲಾಸ್ಟಿಕ್ ಅಂಶದ ಬಗ್ಗೆ ಜನರಿಗೆ ತಿಳಿದಿದೆಯೇ ಎಂದು ಕಂಡುಹಿಡಿಯಲು 300 ಬೆಂಗಳೂರಿಗರ ಮೇಲೆ ಸಮೀಕ್ಷೆ ನಡೆಸಿದರು. "ಸಮೀಕ್ಷೆಯ ಪ್ರಕಾರ, ಅವರೆಲ್ಲರೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಚೂಯಿಂಗ್ ಗಮ್‌ಗಳನ್ನು ತಿಂದಿದ್ದರು. ಆದರೆ ಅವರಲ್ಲಿ 10 ಪ್ರತಿಶತಕ್ಕಿಂತ ಕಡಿಮೆ ಜನರು ಅದರಲ್ಲಿ ಪ್ಲಾಸ್ಟಿಕ್ ಅಂಶದ ಬಗ್ಗೆ ತಿಳಿದಿದ್ದರು” ಎಂದು ಮಯಾಂಕ್ ವಿವರಿಸುತ್ತಾರೆ.


ಸಸ್ಯ ಮೂಲದ ರಸದಿಂದ ತಯಾರಾಗುತ್ತೆ ಪರಿಸರ ಸ್ನೇಹಿ “ಗುಡ್‌ಗಮ್‌”


ಈ ಗುಡ್‌ ಗಮ್‌ಗಳನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ವಿವರಿಸುತ್ತಾ ಮಾಯಾಂಕ್ ಹೇಳುತ್ತಾರೆ, ನಮ್ಮ ಚೂಯಿಂಗ್ ಗಮ್‌ಗಳನ್ನು ಚಿಕೋರಿ ಟ್ರೀ ಗಮ್ ಬೇಸ್ ಎಂಬ ವಿಶೇಷ ಬೇಸ್‌ನಿಂದ ತಯಾರಿಸಲಾಗುತ್ತದೆ. ಅದನ್ನು ನಾವು ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತೇವೆ. ಇದು ಜೈವಿಕ ವಿಘಟನೀಯ ಸಸ್ಯ ಮೂಲದ ರಸವಾಗಿದೆ. ಜನರು ಅದನ್ನು ಉಗುಳಿದಾಗ, ಮಣ್ಣಿನಲ್ಲಿರುವ ಬ್ಯಾಕ್ಟೀರಿಯಾದ ಪ್ರಕಾರವನ್ನು ಅವಲಂಬಿಸಿ, ಅದು ಒಂದೆರಡು ತಿಂಗಳು ಅಥವಾ ವಾರಗಳಲ್ಲಿ ವಿಭಜನೆಯಾಗುತ್ತದೆ “ ಎಂದು ಅವರು ಮಯಾಂಕ್‌ ವಿವರಿಸುತ್ತಾರೆ.


“ಗುಡ್‌ಗಮ್‌ ನ ಮತ್ತೊಂದು ವಿಶೇಷವೆಂದರೆ ನಾವು ಒಸಡುಗಳಲ್ಲಿ ಯಾವುದೇ ಕೃತಕ ಬಣ್ಣ ಅಥವಾ ಪರಿಮಳವನ್ನು ಬಳಸುವುದಿಲ್ಲ. ನಾವು ಸ್ಟೀವಿಯಾ, ಸಸ್ಯ ಆಧಾರಿತ ಸಿಹಿಕಾರಕ, ಹಣ್ಣಿನ ತಿರುಳುಗಳು ಮತ್ತು ನೈಸರ್ಗಿಕ ಹಣ್ಣಿನ ಬಣ್ಣಗಳನ್ನು ಗಮ್‌ಗಳಲ್ಲಿ ಬಳಸುತ್ತೇವೆ. ಇದು ಪರಿಸರ ಮತ್ತು ಪ್ರಕೃತಿ ಎರಡಕ್ಕೂ ಆರೋಗ್ಯಕರವಾಗಿಸುತ್ತದೆ.



ಕಳೆದ ತಿಂಗಳು ಗುಡ್ ಗಮ್ ನಿಂದ 6 ಲಕ್ಷಕ್ಕೂ ಅಧಿಕ ಆದಾಯ ಬಂದಿದೆ. ಇಲ್ಲಿಯವರೆಗೆ, ಅವರು 5 ಲಕ್ಷಕ್ಕೂ ಹೆಚ್ಚು ಪೀಸ್‌ಗಳನ್ನು ಮಾರಾಟ ಮಾಡಿದ್ದಾರೆ. ತಮ್ಮ ಪ್ಯಾಕೇಜಿಂಗ್ ಅನ್ನು ಹೆಚ್ಚು ಪರಿಸರ ಸ್ನೇಹಿಯಾಗಿಸಲು ತಮ್ಮ ಉತ್ಪನ್ನಗಳನ್ನು ಪೇಪರ್ ಮತ್ತು ಟಿನ್ ಬಾಕ್ಸ್‌ಗಳಲ್ಲಿ ಪ್ಯಾಕ್ ಮಾಡಲಾಗಿದೆ ಎಂಬುದಾಗಿ ಮಯಾಂಕ್‌ ವಿವರಿಸುತ್ತಾರೆ.


ಆರೋಗ್ಯ ದೃಷ್ಟಿಯಿಂದ ಗುಡ್‌ಗಮ್‌


ಆದಾಗ್ಯೂ ಹೆಚ್ಚಿನ ಜನರು ಪ್ಲಾಸ್ಟಿಕ್ ಆಧಾರಿತ ಗಮ್‌ಗಳನ್ನು ಕೊಳ್ಳಲು ಬಯಸುತ್ತಾರೆ. ಏಕೆಂದರೆ ಇವು ಕೃತಕ ಸಿಹಿಕಾರಕಗಳನ್ನು ಹೊಂದಿರುತ್ತವೆ. ಇದು ದೀರ್ಘಾವಧಿಯ ಮಾಧುರ್ಯವನ್ನು ನೀಡುತ್ತದೆ. ಜೊತೆಗೆ ಮೃದುವಾದ ವಿನ್ಯಾಸವನ್ನು ನೀಡುತ್ತದೆ. ನಾವು ನೈಸರ್ಗಿಕ ಪದಾರ್ಥಗಳನ್ನು ಬಳಸುವುದರಿಂದ ದೀರ್ಘಕಾಲೀನ ರುಚಿಯನ್ನು ಏಕೆ ನೀಡಲು ಸಾಧ್ಯವಿಲ್ಲ ಎಂಬುದನ್ನು ಜನರಿಗೆ ಅರ್ಥಮಾಡಿಸಲು ಸಮಯ ತೆಗೆದುಕೊಂಡಿತು ಎಂದು ಮಯಾಂಕ್‌ ವಿವರಿಸುತ್ತಾರೆ.


“ನಾವು ನಮ್ಮ ಮುಖ್ಯ ಪದಾರ್ಥವನ್ನು ಆಮದು ಮಾಡಿಕೊಳ್ಳುವುದರಿಂದ ಬೆಲೆಗಳು ಸಹ ಸ್ವಲ್ಪ ಹೆಚ್ಚಿವೆ. ನಾವು ಭಾರತದಲ್ಲಿ ಬೆಳೆಯಲು ಪ್ರಯತ್ನಿಸುತ್ತಿದ್ದೇವೆ. ಅದು ಪ್ರಗತಿಯಲ್ಲಿದೆ. ಸಾಮಾನ್ಯ ಚ್ಯೂಯಿಂಗ್ ಗಮ್‌ಗೆ 1 ರೂ. ಸಿಕ್ಕರೆ ನಮ್ಮ ಉತ್ಪನ್ನ ಸುಮಾರು 6 ರೂ. ಆದರೆ, ನಾವು ಉತ್ಪನ್ನದ ಗುಣಮಟ್ಟದ ಮೇಲೆ ಕೇಂದ್ರೀಕರಿಸಲು ಬಯಸುತ್ತೇವೆ. ಗ್ರಾಹಕರು ಅದಕ್ಕಾಗಿ ಹೆಚ್ಚು ಪಾವತಿಸಲು ಸಿದ್ಧರಾಗುತ್ತಾರೆ ಎಂದು ನಮಗೆ ನಂಬಿಕೆಯಿದೆ."




ಇದನ್ನೂ ಓದಿ: Viral News: ಪರಿಸರ ಸ್ನೇಹಿ ಮನೆ ನಿರ್ಮಿಸಿಕೊಂಡ ಅತ್ತೆ-ಸೊಸೆಯ ಸಾಧನೆಗೆ ನೀವು ಚಪ್ಪಾಳೆ ತಟ್ಟಲೇಬೇಕು!


“ಇದು ಎಷ್ಟೇ ಚಿಕ್ಕದಾಗಿ ತೋರಿದರೂ, ಜಗತ್ತಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯದಲ್ಲಿ ಚೂಯಿಂಗ್ ಗಮ್‌ಗಳು ಒಂದು ದೊಡ್ಡ ಸಮಸ್ಯೆಯಾಗಿದೆ. ಚೂಯಿಂಗ್ ಗಮ್ ತ್ಯಾಜ್ಯವನ್ನು ವಿಲೇವಾರಿ ಮಾಡುವ ವಿಧಾನದಿಂದಾಗಿ ಅವುಗಳನ್ನು ಸಂಗ್ರಹಿಸುವುದು ತುಂಬಾ ಕಷ್ಟಕರವಾಗಿದೆ. ಆದರೆ ಈ ಪರಿಸರಸ್ನೇಹಿ ಗಮ್‌ ಗಳಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ಅಲ್ಲದೇ ನಾವು ಸಾಧ್ಯವಾದಷ್ಟು ಜನರಿಗೆ ಶಿಕ್ಷಣ ನೀಡಲು ಬಯಸುತ್ತೇವೆ. ಇದರಿಂದಾಗಿ ಪ್ಲಾಸ್ಟಿಕ್ ಆಧಾರಿತ ಗಮ್‌ಗಳಿಂದ ಪರಿಸರ ಸ್ನೇಹಿ ಗಮ್‌ಗಳಿಗೆ ಅವರು ಬದಲಾಗಬಹುದು. ಎಂಬುದಾಗಿ ಮಯಾಂಕ್‌ ಹೇಳುತ್ತಾರೆ.

First published: