British East India Company ಪ್ರಸ್ತುತ ಯಾರ ಒಡೆತನದಲ್ಲಿದೆ? ಇದರ ವ್ಯಾಪಾರ-ವಹಿವಾಟು ಏನು?

ಸಂಜೀವ ಮೆಹ್ತಾ

ಸಂಜೀವ ಮೆಹ್ತಾ

ಭಾರತಕ್ಕೆ ಬ್ರಿಟಿಷರ ಮೊದಲ ಪ್ರವೇಶವೇ ಈಸ್ಟ್ ಇಂಡಿಯಾ ಕಂಪನಿಯ ಮೂಲಕ. ಮಸಾಲೆ ವ್ಯಾಪಾರದ ಉದ್ದೇಶದಿಂದ ಭಾರತಕ್ಕೆ ಬಂದ ಇವರು ಈ ಕಂಪನಿಯನ್ನು 1600 ರಲ್ಲಿ ಸ್ಥಾಪಸಿದರು. ಹಾಗಿದ್ರೆ ಈಗ ಈ ಕಂಪನಿ ಯಾರಲ್ಲಿದೆ ಎಂಬುದನ್ನು ತಿಳಿಯಲು ಈ ಲೇಖನವನ್ನು ಓದಿ.

  • Share this:

ಬ್ರಿಟಿಷರು (British) ಭಾರತಕ್ಕೆ ಬಂದು ನಮ್ಮ ನೆಲದಲ್ಲಿ, ನಮ್ಮನ್ನೇ ಬರೋಬ್ಬರಿ 200 ವರ್ಷಗಳ ಕಾಲ ಆಳ್ವಿಕೆ ಮಾಡಿದ್ದಾರೆ ಎಂದು ನೆನೆಸಿಕೊಂಡರೆ ಈಗಲೂ ಭಾರತೀಯರ ರಕ್ತ ಕುದಿಯುತ್ತದೆ. ಭಾರತಕ್ಕೆ ಬ್ರಿಟಿಷರ ಮೊದಲ ಪ್ರವೇಶವೇ ಈಸ್ಟ್ ಇಂಡಿಯಾ ಕಂಪನಿಯ (East India Company) ಮೂಲಕ. ಮಸಾಲೆ ವ್ಯಾಪಾರದ ಉದ್ದೇಶದಿಂದ ಭಾರತಕ್ಕೆ ಬಂದ ಇವರು ಈ ಕಂಪನಿಯನ್ನು 1600 ರಲ್ಲಿ ಸ್ಥಾಪಸಿದರು. ಸ್ವಾತಂತ್ರ್ಯ ಇತಿಹಾಸದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಈ ಕಂಪನಿ. ಭಾರತದಿಂದ ಯುರೋಪ್‌ಗೆ ಮಸಾಲೆಗಳು, ಚಹಾ ಮತ್ತು ವಿದೇಶಿ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಕಂಪನಿಯನ್ನು ಸ್ಥಾಪಿಸಲಾಯಿತು. 1607ರಲ್ಲಿ, ಹೆಕ್ಟರ್ ಹೆಸರಿನ ಕಂಪನಿ ಹಡಗು 16 ಸಾವಿರ ಕಿಲೋಮೀಟರ್‌ಗಳಿಗಿಂತ ಹೆಚ್ಚು ಪ್ರಯಾಣಿಸಿ ಭಾರತವನ್ನು (India) ತಲುಪಿತು. 1690 ರಲ್ಲಿ, ಕಂಪನಿಯು ತನ್ನ ಮೊದಲ ಕಾರ್ಖಾನೆಯನ್ನು ಪಶ್ಚಿಮ ಬಂಗಾಳದ ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ್ತಾ) ಸ್ಥಾಪಿಸಿತು.


ಹೀಗೆ ಲಾಭದಿಂದ ನಡೆಯುತ್ತಿದ್ದ ಈಸ್ಟ್‌ ಇಂಡಿಯಾ ಕಂಪನಿ ಭಾರತೀಯರ ಕೆಂಗಣ್ಣಿಗೆ ಗುರಿಯಾಯಿತು, ಬ್ರಿಟಿಷರ ಕುತಂತ್ರಿ ಬುದ್ಧಿ ಬಗ್ಗೆಯೂ ಭಾರತೀಯರಿಗೆ ತಿಳಿಯುತ್ತಾ ಬಂದಿತು. 1857ರ ದಂಗೆಯ ನಂತರ, ಅದರ ಸೈನಿಕರು ಬ್ರಿಟಿಷರ ವಿರುದ್ಧ ಬಂಡಾಯವೆದ್ದ ನಂತರ 1874 ರಲ್ಲಿ ಕಂಪನಿಯನ್ನು ವಿಸರ್ಜಿಸಲಾಯಿತು. ನಂತರ ವರ್ಷಗಳವರೆಗೆ, ಈಸ್ಟ್ ಇಂಡಿಯಾ ಕಂಪನಿಯು ನಿಷ್ಕ್ರಿಯವಾಗಿತ್ತು.


ಕಂಪನಿ ಹೆಸರಲ್ಲಿ ಭಾರತಕ್ಕೆ ಬಂದ ಬ್ರಿಟಿಷರು ಸುಮಾರು 200 ವರ್ಷಗಳ ಕಾಲ ಭಾರತವನ್ನು ಆಳಿದರು. ದಂಗೆಯ ನಂತರ ಕಂಪನಿ ನಶಿಸಿಹೋಗಿತ್ತು. ಆದರೆ ನಂತರ ಈ ಕಂಪನಿ ಎಲ್ಲಿ ಹೋಯಿತು ಅಂತಾ ನಿಮಗೆ ಗೊತ್ತಾ?


ಇದನ್ನೂ ಓದಿ: ಇಂದು ಈ ರಾಶಿಯವರ ಬದುಕೇ ಬದಲಾಗುತ್ತೆ!


ಈಸ್ಟ್‌ ಇಂಡಿಯಾ ಕಂಪನಿ ಈಗ ಯಾರ ತೆಕ್ಕೆಯಲ್ಲಿದೆ?
ಕಂಪನಿಯು ಸಂಜೀವ್ ಮೆಹ್ತಾ ಎಂಬ ಭಾರತೀಯ ಉದ್ಯಮಿ ಒಡೆತನದಲ್ಲಿದೆ. ಭಾರತೀಯರು ಈಸ್ಟ್ ಇಂಡಿಯಾ ಕಂಪನಿಯನ್ನು ದಬ್ಬಾಳಿಕೆ ಮತ್ತು ಅವಮಾನದ ಸಂಕೇತವೆಂದು ಪರಿಗಣಿಸುತ್ತಾರೆ. ಸುಮಾರು 135 ವರ್ಷಗಳ ಕಾಲ ಸುಪ್ತಾವಸ್ಥೆಯಲ್ಲಿದ್ದ ನಂತರ, ಕಂಪನಿಯಲ್ಲಿ ಪಾಲನ್ನು ಹೊಂದಿದ್ದ ಷೇರುದಾರರ ಗುಂಪು ಅದನ್ನು ಚಹಾ ಮತ್ತು ಕಾಫಿ ವ್ಯಾಪಾರವಾಗಿ ಪುನರುಜ್ಜೀವನಗೊಳಿಸಲು ಪ್ರಯತ್ನಿಸಿತಾದರೂ ಅದು ಕೈಗೂಡಲಿಲ್ಲ. ನಂತರ ಸಂಜೀವ್‌ ಮೆಹ್ತಾ 2005 ರಲ್ಲಿ ಕಂಪನಿಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಅದನ್ನು ಐಷಾರಾಮಿ ಆಹಾರ, ಚಹಾ ಮತ್ತು ಕಾಫಿ ಮಾರಾಟದ ಮೇಲೆ ಕೇಂದ್ರೀಕರಿಸಿದ ಬ್ರ್ಯಾಂಡ್ ಆಗಿ ಮಾಡಿದರು.


ಸಂಜೀವ ಮೆಹ್ತಾ


ಹೌದು, ಒಂದು ಕಾಲದಲ್ಲಿ ಭಾರತೀಯರನ್ನೇ ಆಳಿದ ಕಂಪನಿ ಪ್ರಸ್ತುತ ಭಾರತೀಯ ಉದ್ಯಮಿಯ ಒಡೆತನದಲ್ಲಿದೆ. ಐಷಾರಾಮಿ ಆಹಾರ ಪದಾರ್ಥಗಳು ಮತ್ತು ಗಿಫ್ಟ್ ಹ್ಯಾಂಪರ್‌ಗಳಲ್ಲಿ ವ್ಯವಹರಿಸುವುದರ ಜೊತೆಗೆ, ಮೆಹ್ತಾ ಸೆಪ್ಟೆಂಬರ್ 8, 2020 ರಂದು ಗಮನಾರ್ಹ ಕಂಪನಿಯ ಕೋಟ್ ಆಫ್ ಆರ್ಮ್ಸ್ ಮತ್ತು ಸೀಲ್ ಅಡಿಯಲ್ಲಿ ವ್ಯಾಪಾರ ಮಾಡಲು ಪರವಾನಗಿಯನ್ನು ಗಳಿಸಿದರು. ಮೇಲಾಗಿ, ಅವರು ಮೊಹೂರ್ ಚಿನ್ನ ಸೇರಿದಂತೆ ನಾಣ್ಯಗಳನ್ನು ಮುದ್ರಿಸುವ ಆಯ್ಕೆಯನ್ನು ಸಹ ಹೊಂದಿದ್ದಾರೆ. ನಾಣ್ಯವನ್ನು 1918 ರಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತದಲ್ಲಿ ಕೊನೆಯದಾಗಿ ಮುದ್ರಿಸಲಾಯಿತು.




BBC ವರದಿಯ ಪ್ರಕಾರ, ಕಂಪನಿ ಬ್ರಿಟೀಷ್ ಉದ್ಯೋಗಿಗಳ ಮೂರನೇ ಒಂದು ಭಾಗವನ್ನು ನೇಮಿಸಿಕೊಂಡಿದೆ ಮತ್ತು ಜಾಗತಿಕ ವ್ಯಾಪಾರದ ದೊಡ್ಡ ಭಾಗಕ್ಕೆ ಕಾರಣವಾಗಿದೆ. 1600 ರಲ್ಲಿ ರಾಣಿ ಎಲಿಜಬೆತ್ I ರಿಂದ ಚಾರ್ಟರ್ ನೀಡುವ ಮೂಲಕ ಕಂಪನಿಯನ್ನು ರಚಿಸಲಾಯಿತು ಮತ್ತು ಏಷ್ಯಾಕ್ಕೆ ಇಂಗ್ಲಿಷ್ ವ್ಯಾಪಾರದ ಮೇಲೆ ಏಕಸ್ವಾಮ್ಯವನ್ನು ನೀಡಲಾಯಿತು.


ಯಾರಿದು ಸಂಜೀವ್‌ ಮೆಹ್ತಾ?
ಕಾನ್ಪುರ್‌ನಲ್ಲಿ ಜನಿಸಿದ ಸಂಜೀವ್ ಮೆಹ್ತಾ ಅವರು ಮುಂಬೈ-ನಾಗ್ಪುರ್ ನಲ್ಲಿ ವಿದ್ಯಾಭ್ಯಾಸ ಮುಗಿಸಿದರು. ಸಿಎ ಪದವಿ ಪಡೆದ ಇವರು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಅಡ್ವಾನ್ಸ್ಡ್ ಮ್ಯಾನೇಜ್ ಮೆಂಟ್ ಪ್ರೋಗ್ರಾಮ್ ಪದವಿ ಪಡೆದಿದ್ದರು. ಪದವಿ ನಂತರ 1983ರಲ್ಲಿಯೂನಿಯನ್ ಕಾರ್ಬೈಡ್ ಕಂಪನಿಯಲ್ಲಿ ವೃತ್ತಿಜೀವನ ಆರಂಭಿಸಿದ್ದರು. 2013ರಲ್ಲಿ ಭಾರತ ಮತ್ತು ದಕ್ಷಿಣ ಏಷ್ಯಾದ ಹಿಂದೂಸ್ತಾನ್ ಯೂನಿಲಿವರ್ ಸಂಸ್ಥೆಯ ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದರು.

top videos
    First published: