• Home
  • »
  • News
  • »
  • business
  • »
  • Britain Recession: ಬ್ರಿಟನ್ ಅನುಭವಿಸುತ್ತಿರುವ ಆರ್ಥಿಕ ಬಿಕ್ಕಟ್ಟು ಜಗತ್ತಿಗೆ ಒಂದು ಎಚ್ಚರಿಕೆಯ ಗಂಟೆ ಇದ್ದಂತೆ

Britain Recession: ಬ್ರಿಟನ್ ಅನುಭವಿಸುತ್ತಿರುವ ಆರ್ಥಿಕ ಬಿಕ್ಕಟ್ಟು ಜಗತ್ತಿಗೆ ಒಂದು ಎಚ್ಚರಿಕೆಯ ಗಂಟೆ ಇದ್ದಂತೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಅದಾಗಲೇ ಆರ್ಥಿಕ ಶಾಸ್ತ್ರಜ್ಞರು ಹಾಗೂ ಹೂಡಿಕೆದಾರರು ಪ್ರಧಾನಿಯವರಿಗೆ ಎಚ್ಚರಿಸಿದ್ದರೂ ಲಿಜ್ ತೆಗೆದುಕೊಂಡ ಕ್ರಮದಿಂದಾಗಿ ಬ್ರಿಟನ್ ಈಗ ಆರ್ಥಿಕವಾಗಿ ಕುಸಿಯುತ್ತಿದೆ ಎಂಬ ಸಾರ್ವತ್ರಿಕ ಅಭಿಪ್ರಾಯ ದೇಶದಲ್ಲೀಗ ವ್ಯಕ್ತವಾಗುತ್ತಿದೆ.

  • Share this:

ಜಾಗತಿಕವಾಗಿ ಅತಿ ಶ್ರೀಮಂತ ಹಾಗೂ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಗುರುತಿಸಿಕೊಳ್ಳುವ ಬ್ರಿಟನ್ ದೇಶದ ಆರ್ಥಿಕ ಪರಿಸ್ಥಿತಿ (Britain financial Crisis) ಈಗ ಅಕ್ಷರಶಃ ನೆಲಕಚ್ಚುತ್ತಿದ್ದು ಜಗತ್ತಿನಾದ್ಯಂತ ಇತರೆ ದೇಶಗಳ ಮಾರುಕಟ್ಟೆಗಳಲ್ಲಿ ಒಂದು ರೀತಿಯ ಆತಂಕದ ಕರಿ ನೆರಳು ಗೋಚರಿಸುತ್ತಿದೆ. ಇತ್ತೀಚಿಗಷ್ಟೇ ದೇಶದಲ್ಲಿ ನಡೆದ ರಾಜಕೀಯ ಅಲ್ಲೋಲ-ಕಲ್ಲೋಲಗಳು, ಹಣದುಬ್ಬರ ಹಾಗೂ ಹೆಚ್ಚಾಗುತ್ತಿರುವ ಬಡ್ಡಿದರಗಳು ಬ್ರಿಟನ್ ಅನ್ನು ಆರ್ಥಿಕ ಅಸ್ಥಿರತೆಗೆ ವೇಗವಾಗಿ ತಳ್ಳುತ್ತಿವೆ. ಇದರಿಂದಾಗಿ ಈಗ ವಿಶ್ವದ ಎಲ್ಲೆಡೆ ಇರುವ ಆರ್ಥಿಕ ವ್ಯವಸ್ಥೆಗಳು ಮುಂದೆ ನಡೆಯಬಹುದಾದ ಪರಿಣಾಮಗಳ ಬಗ್ಗೆ ಈಗಾಗಲೇ ಆತಂಕ ಪಡುತ್ತಿವೆ.


ಆರ್ಥಿಕ ಬಿಕ್ಕಟ್ಟಿಗೆ ಏನು ಕಾರಣ?


ಇತ್ತೀಚಿಗಷ್ಟೇ ಯುಕೆಯ ನೂತನ ಪ್ರಧಾನಿಯಾಗಿ ಲೀಜ್ ಟ್ರಸ್ ಅವರು ಅಧಿಕಾರವಹಿಸಿಕೊಂಡರು. ಇವರು ಅಧಿಕಾರಕ್ಕೆ ಬರುತ್ತಿದ್ದಂತೆಯೇ ಆಶ್ಚರ್ಯ ಪಡುವಂತೆ ಸಿರಿವಂತರ ತೆರಿಗೆಗಳಲ್ಲಿ ಭಾರಿ ಕಡಿತ ಘೋಷಿಸಿದರು. ಸದ್ಯ ಈ ನಡೆಯಿಂದಾಗಿಯೇ ಯುಕೆ ಮಾರುಕಟ್ಟೆ ತನ್ನ ಸ್ಥಿರತೆಯನ್ನು ಕಳೆದುಕೊಂಡಿತಲ್ಲದೆ ದೇಶದ ಕರೆನ್ಸಿ ಪೌಂಡ್ ಅಸಾಧಾರಣವಾಗಿ ಕುಸಿಯುತ್ತಿದೆ.


ಪೌಂಡುಗಳು ಲೆಕ್ಕವಿಲ್ಲದಂತೆ ಕುಸಿಯುತ್ತಿದ್ದರೆ ದೀರ್ಘಾವಧಿಯಲ್ಲಿ ಲಾಭ ನೀಡುವ ಆರ್ಥಿಕ ಬಾಂಡ್ ಗಳು ಕಳೆದ ನಾಲ್ಕು ದಿನಗಳಲ್ಲಿ ಸಾಕಷ್ಟು ಕುಸಿದಿದ್ದು ಯುಕೆ ಸರ್ಕಾರಕ್ಕೆ ಈ ಬೆಳವಣಿಗೆ ತಲೆ ನೋವಾಗಿ ಪರಿಣಮಿಸಿದೆ ಎಂದು ಹೇಳಬಹುದು.


ಬ್ರಿಟನ್ ಪ್ರಯತ್ನ


ಇನ್ನು ತನ್ನ ದೇಶದ ಆರ್ಥಿಕ ಸ್ಥಿತಿಯು ಹೀನಾಯವಾಗುತ್ತಿರುವುದನ್ನು ಕಂಡು ಯುಕೆ ಅದನ್ನು ಹೇಗಾದರೂ ಮಾಡಿ ನಿಯಂತ್ರಿಸುವ ಪ್ರಯತ್ನದಲ್ಲಿ ಕೆಲ ಅಸಾಧಾರಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ಈ ಬೆಳವಣಿಗೆಯು ಯುಎಸ್ ಡಾಲರ್ ಅನ್ನು ಮತ್ತಷ್ಟು ಬಲಿಷ್ಠಗೊಳಿಸುವಂತಿದೆ. ಇದರಿಂದಾಗಿ ಜಗತ್ತಿನಾದ್ಯಂತ ಷೇರು ಮಾರುಕಟ್ಟೆಗಳಲ್ಲಿ ವ್ಯತಿರಿಕ್ತ ಪರಿಣಾಮಗಳು ಉಂಟಾಗುವುದರಲ್ಲಿ ಸಂಶಯವೇ ಇಲ್ಲ ಎನ್ನುತ್ತಿದ್ದಾರೆ ಆರ್ಥಿಕ ಪರಿಣಿತರು.


ಲಂಡನ್ ಮುಂಚೆಯಿಂದಲೂ ತನ್ನ ವ್ಯಾಪಾರ ವ್ಯವಹಾರಗಳನ್ನು ಯುಎಸ್ ಡಾಲರ್-ಸ್ಟರ್ಲಿಂಗ್ ಜೊತೆ ನಡೆಸುತ್ತ ಬಂದಿದೆ ಹಾಗೂ ಈ ಜೊತೆಯನ್ನು ಜಗತ್ತಿನ ಮೂರನೇ ಪ್ರಭಾವಿ ಕರೆನ್ಸಿ ಜೊತೆ ಎನ್ನಲಾಗುತ್ತದೆ. ಆದರೆ, ಈಗ ಪರಿಸ್ಥಿತಿ ಸಾಕಷ್ಟು ದುರ್ಬಲವಾಗಿದೆ. ಕೆಲವು ಪರಿಣಿತರ ಪ್ರಕಾರ, ಸದ್ಯ ಯುಕೆಯ ಪರಿಸ್ಥಿತಿ ಕಲ್ಲಿದ್ದಿಲಿನ ಗಣಿಯಲ್ಲಿ ತುಪಾಕಿ ಇದ್ದಂತಿದೆ. ಇದು ಹೇಗೆ ಎಲ್ಲರ ಮೇಲೆ ಪರಿಣಾಮ ಬೀರಬಹುದು ಎಂಬುದರ ಸಂಕೇತವಾಗಿದೆ ಎನ್ನಲಾಗುತ್ತಿದೆ.


ಯುಕೆ ಮುಂದಿರುವ ಹಾದಿ


ಹೇಗಾದರೂ ಮಾಡಿ ಪೌಂಡ್ ಕುಸಿಯುತ್ತಿರುವುದನ್ನು ಬ್ರಿಟನ್ ನಿಯಂತ್ರಿಸಲೇ ಬೇಕಾಗಿದೆ. ಅದಕ್ಕಿರುವ ಒಂದು ಮಾರ್ಗವೆಂದರೆ ದೇಶದಲ್ಲಿ ಬಡ್ಡಿ ದರಗಳನ್ನು ಮತ್ತಷ್ಟು ಹೆಚ್ಚಿಸುವುದು. ಈ ಮೂಲಕ ಡಾಲರ್ ಮುಂದೆ ಪೌಂಡ್ ಚೇತರಿಸಿಕೊಳ್ಳುವಂತೆ ಮಾಡಬಹುದು. ಆದರೆ, ಇದರ ಇನ್ನೊಂದು ನೇರ ವ್ಯತಿರಿಕ್ತ ಪರಿಣಾಮ ನಿತ್ಯ ಜನಜೀವನದ ಮೇಲ ಅಪಾರವಾಗಿ ಆಗುತ್ತದೆ.


ಇದನ್ನು ಓದಿ: ಏನಿದು 13ನೇ ಮಹಡಿ ನ್ಯೂಮರಲ್​ ರಹಸ್ಯ? ಬೆಚ್ಚಿ ಬೀಳ್ತಿರೋದ್ಯಾಕೆ ಬಿಲ್ಡರ್ಸ್​? ಕಾರಣ ಇದು


ಈ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಯುರೋಪ್ ತೆರಿಗೆ ಕಡಿಮೆ ಮಾಡುದಕ್ಕಿಂತ ಹೆಚ್ಚು ವ್ಯಯಿಸುವಂತಹ (735 ಬಿಲಿಯನ್ ಯುಎಸ್ ಡಾಲರ್) ಮಾರ್ಗದಲ್ಲಿ ನಡೆಯಲು ಆಲೋಚಿಸುತ್ತಿದ್ದು ಈ ಮೂಲಕ ನಿಯಂತ್ರಣ ಪಡೆಯುವ ಬಗ್ಗೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.


ಯುಕೆಯ ಸಾಲ ಈಗಾಗಲೇ ಹೆಚ್ಚಿದ್ದು ಅದಕ್ಕೆ ಕಾರಣ ನಿರೀಕ್ಷಿತ 150 ಬಿಲಿಯನ್ ಡಾಲರ್ ಮೌಲ್ಯದ ಸಬ್ಸಿಡಿ ಪ್ರಮಾಣವೇ ಆಗಿದೆ. ಇದು ಜಿಡಿಪಿಯ 95 ಪ್ರತಿಶತವಾಗಿದ್ದು ಯುರೋಪ್ ನಾದ್ಯಂತೆ ಯಾವುದೇ ದೇಶದಲ್ಲಿನ ಅತಿ ಹೆಚ್ಚಿನ ಮೌಲ್ಯ ಇದಾಗಿದೆ. ಆದರೆ ಮಾರುಕಟ್ಟೆ ಇದರಿಂದ ವಿಚಲಿತವಾಗಿಲ್ಲ, ಏಕೆಂದರೆ ರಷ್ಯಾದ ಉಕ್ರೇನ್ ಆಕ್ರಮಣದಿಂದ ಉಂಟಾಗಿರುವ ಎನರ್ಜಿ ಗಳಲ್ಲಿನ ಬೆಲೆ ಏರಿಕೆಯನ್ನು ಸಮರ್ಥವಾಗಿ ನಿರ್ವಹಿಸುವ ಒಂದು ಮಾರ್ಗವಾಗಿದೆ ಎನ್ನಲಾಗುತ್ತಿದೆ.


ಬ್ರಿಟನ್ ಮುಂದಿರುವ ಇನ್ನೊಂದು ಕಷ್ಟ


ಈಗಾಗಲೇ ಅಪಾರ ಸಾಲದ ಹೊರೆಯಲ್ಲಿ ತಿಣುಕಾಡುತ್ತಿರುವ ಬ್ರಿಟನ್ ತನ್ನ ಚಾಲ್ತಿ ಖಾತೆಯಲ್ಲೂ ಅಪಾರವಾಗಿ ಕುಸಿದಿದ್ದು ಅದನ್ನು ನಿರ್ವಹಿಸಲು ಅದು ವಿದೇಶಿಯರಿಂದ ಮತ್ತೆ ಸಾಲ ಪಡೆಯಲೇಬೇಕಾದ ಅನಿವಾರ್ಯ ಸ್ಥಿತಿಯಲ್ಲಿದೆ. ಆದರೆ ಅದು ತನ್ನ ಕರೆನ್ಸಿಯಲ್ಲೇ ಸಾಲ ಪಡೆಯಬೇಕಾಗಿದ್ದು ಇದು ಬಡ್ಡಿ ದರವನ್ನು ಇನ್ನಷ್ಟು ಹೆಚ್ಚಿಸಬಹುದು ಇಲ್ಲವೆ ಪೌಂಡ್ ಮತ್ತಷ್ಟು ಕುಸಿಯುವಂತೆ ಮಾಡಬಹುದು.


ಇದನ್ನು ಓದಿ2025 ರ ವೇಳೆಗೆ 22 ಲಕ್ಷ ಭಾರತೀಯ ಐಟಿ ವೃತ್ತಿಪರರು ಕೆಲ್ಸ ಬಿಡ್ತಾರಂತೆ!


ಈ ಮುಂಚೆ ಯುಕೆ ಪ್ರಧಾನಿ ಲಿಜ್ ಟ್ರಸ್ ಅವರು ಬಂಪರ್ ತೆರಿಗೆ ಕಡಿತ ನೀಡುವ ಮೂಲಕ ಹೂಡಿಕೆದಾರರು ಹೆಚ್ಚು ಹೆಚ್ಚು ಹಣ ಹೂಡುವಂತಾಗಿ ದೇಶವು ಆರ್ಥಿಕ ಪ್ರಗತಿಯತ್ತ ಸಾಗಬಹುದೆಂಬ ಪರಿಕಲ್ಪನೆಯಲ್ಲಿದ್ದರು. ಅದಾಗಲೇ ಆರ್ಥಿಕ ಶಾಸ್ತ್ರಜ್ಞರು ಹಾಗೂ ಹೂಡಿಕೆದಾರರು ಪ್ರಧಾನಿಯವರಿಗೆ ಹೀಗೆ ಮಾಡದಂತೆ ಎಚ್ಚರಿಸಿದ್ದರೂ ಲಿಜ್ ತೆಗೆದುಕೊಂಡ ಕ್ರಮದಿಂದಾಗಿ ಬ್ರಿಟನ್ ಈಗ ಆರ್ಥಿಕವಾಗಿ ಕುಸಿಯುತ್ತಿದೆ ಎಂಬ ಸಾರ್ವತ್ರಿಕ ಅಭಿಪ್ರಾಯ ದೇಶದಲ್ಲೀಗ ವ್ಯಕ್ತವಾಗುತ್ತಿದೆ.


ಲ್ಯಾರಿ ಸಮ್ಮರ್ ಅವರ ಅಭಿಪ್ರಾಯ


ಪ್ರಸಕ್ತ ಈ ಬೆಳವಣಿಗೆಯ ಕುರಿತು ಮಾಜಿ ಖಜಾನೆ ಕಾರ್ಯದರ್ಶಿ ಹಾಗೂ ಹಾರ್ವರ್ಡ್ ಸಂಸ್ಥೆಯ ಪ್ರೊಫೆಸರ್ ಆಗಿರುವ ಲ್ಯಾರಿ ಸಮ್ಮರ್ ತಮ್ಮದೆ ಆದ ನಿಲುವನ್ನು ಮಂಡಿಸುತ್ತಾರೆ. ಅವರ ಪ್ರಕಾರ, ಇದು ಈ ಹಿಂದೆ 2007 ರಲ್ಲಿ ಉಂಟಾಗಿದ್ದ ಆರ್ಥಿಕ ಹಿಂಜರಿತದ ಸಮಾನಾಂತರವಾಗಿಯೇ ಇದೆ.


ಕಂಪನಗಳಿದ್ದಾಗ ಅದು ಭೂಕಂಪವೇ ಆಗಬಹುದು ಎಂದು ಹೇಳಲು ಸಾಧ್ಯವಿಲ್ಲ, ಆದರೆ, ಅದೇ ಸಮಯದಲ್ಲಿ ಭೂಕಂಪನಗಳಿಗೆ ಆರಂಭಿಕ ಕಂಪನಗಳೇ ಆಧಾರವಾಗಿರುತ್ತವೆ. ಹಾಗಾಗಿ ಮುಂಬರುವ ಸಮಯದಲ್ಲಿ ಯುಕೆ ಒಂದು ಸಣ್ಣ ಪ್ರಮಾಣದ ಆರ್ಥಿಕ ಭೂಕಂಪನ ಹೊಂದಿದರೂ ಅದು ಅತಿಶಯೋಕ್ತಿಯೇನಲ್ಲ. ಸದ್ಯ ಬ್ರಿಟನ್ ಎದುರಿಸುತ್ತಿರುವ ಸಮಸ್ಯೆಗಳನ್ನು ಬೇರೆ ಯಾವ ದೇಶಗಳು ಎದುರಿಸುತ್ತಿಲ್ಲ. ಆದರೆ ರಿಕ್ಟರ್ ಮಾಪನದಲ್ಲಿ ಅಳೆಯುವಂತೆ ಈ ಬಿಕ್ಕಟ್ಟನ್ನು ಅಳೆಯಲು ಸಾಧ್ಯವಿಲ್ಲವಾದರೂ ಮುಂಬರುವ ಸಮಯ ನಿಜಕ್ಕೂ ಬ್ರಿಟನ್ ದೇಶಕ್ಕೆ ಕಷ್ಟಕರವಾಗಿರುವುದಲ್ಲದೆ ಒಂದು ಸವಾಲೂ ಸಹ ಆಗಿದೆ.

Published by:Seema R
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು