• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Mercedes Benz: ಇವ್ರು ಕಣ್ರೀ ನಿಜವಾದ ಬಾಸ್ ಅಂದ್ರೆ, ತನ್ನ ಉದ್ಯೋಗಿಗೆ 57 ಲಕ್ಷದ ಕಾರ್​ ಗಿಫ್ಟ್​ ಕೊಟ್ಟ ಮಾಲೀಕ!

Mercedes Benz: ಇವ್ರು ಕಣ್ರೀ ನಿಜವಾದ ಬಾಸ್ ಅಂದ್ರೆ, ತನ್ನ ಉದ್ಯೋಗಿಗೆ 57 ಲಕ್ಷದ ಕಾರ್​ ಗಿಫ್ಟ್​ ಕೊಟ್ಟ ಮಾಲೀಕ!

ಉದ್ಯೋಗಿಗೆ ಕಾರ್​ ಗಿಫ್ಟ್​

ಉದ್ಯೋಗಿಗೆ ಕಾರ್​ ಗಿಫ್ಟ್​

ನಿಜವಾಗಿಯೂ ಮಾಲೀಕರೊಬ್ಬರು ತನ್ನ ಉದ್ಯೋಗಿಗೆ (Employee) 57 ಲಕ್ಷ ರೂಪಾಯಿ ಮೌಲ್ಯದ ಮರ್ಸಿಡಿಸ್ ಕಾರನ್ನು ಉಡುಗೊರೆಯಾಗಿ (Mercedes Benz Car Gift) ನೀಡಿದ್ದಾರೆ.

  • Share this:

ರಸ್ತೆಯಲ್ಲಿ ಬಿಎಂಡಬ್ಲ್ಯು(BMW) , ಮರ್ಸಿಡಿಸ್ (Mercedes) , ಆಡಿ (AUDI) ಅಥವಾ ಅಂತಹುದೇ ಬೆಲೆಬಾಳುವ ಕಾರನ್ನು ಕಂಡರೆ ಅನೇಕರ ಕಣ್ಣುಗಳು ಅಲ್ಲೇ ಇರುತ್ತೆ. ಒಂದು ಬಾರಿಯಾದರೂ ಆ ಕಾರಿನಲ್ಲಿ ಕೂತು ಟ್ರಾವೆಲ್​ ಮಾಡಬೇಕು ಅಂದುಕೊಳ್ಳುವುದರಲ್ಲಿ ಎರಡು ಮಾತೇ ಇಲ್ಲ. ಒಂದು ಸಲವಾದರೂ ಅಂತಹ ಐಷಾರಾಮಿ ಕಾರುಗಳನ್ನು ಓಡಿಸಬೇಕೆಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಅಂತಹ ಕಾರು ಖರೀದಿಸುವುದು ಅನೇಕ ಜನರ ಕನಸು. ಲಕ್ಷಾಂತರ ಮೌಲ್ಯದ ಇದೇ ಕಾರನ್ನು ಆತ ಕೆಲಸ ಮಾಡುವ ಕಂಪನಿಯ ಮಾಲೀಕರು (Company Owner) ಉದ್ಯೋಗಿಗೆ ಉಡುಗೊರೆಯಾಗಿ ನೀಡಿದರೆ ಹೇಗೆ? ನಿಜಕ್ಕೂ ಈ ರೀತಿ ಘಟನೆ ನಡೆಯುತ್ತಾ ಅನ್ನಿಸುತ್ತೆ. ಆದರೆ ನಿಜವಾಗಿಯೂ ಮಾಲೀಕರೊಬ್ಬರು ತನ್ನ ಉದ್ಯೋಗಿಗೆ (Employee) 57 ಲಕ್ಷ ರೂಪಾಯಿ ಮೌಲ್ಯದ ಮರ್ಸಿಡಿಸ್ ಕಾರನ್ನು ಉಡುಗೊರೆಯಾಗಿ (Mercedes Benz Car Gift) ನೀಡಿದ್ದಾರೆ.


ಉದ್ಯೋಗಿಗೆ ಮರ್ಸಿಡಿಸ್​ ಕಾರು ಗಿಫ್ಟ್​!


ಮಾರ್ಚ್ ತಿಂಗಳು ಸಮೀಪಿಸುತ್ತಿದ್ದಂತೆ, ನೌಕರರು ಮೌಲ್ಯಮಾಪನಕ್ಕಾಗಿ ಎದುರು ನೋಡುತ್ತಿದ್ದಾರೆ. ಈ ಸಮಯದಲ್ಲಿ, ಬಹುತೇಕ ಎಲ್ಲಾ ಕಂಪನಿಗಳು ತಮ್ಮ ಕೆಲಸದಲ್ಲಿ ನಿರತವಾಗಿವೆ. ವರ್ಷವಿಡೀ ನೌಕರನ ಶ್ರಮಕ್ಕೆ ಏಪ್ರಿಲ್-ಮೇ ತಿಂಗಳಲ್ಲಿ ಫಲ ಖಂಡಿತ ಸಿಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಕೇರಳದ ಉದ್ಯೋಗಿ ಕ್ಲಿಂಟ್ ಆಂಟನಿ.


ಆಂಟನಿ ಅವರಿಗೆ ಅವರು ಕೆಲಸ ಮಾಡುವ ಕಂಪನಿಯ ಮಾಲೀಕರು 57 ಲಕ್ಷ ರೂಪಾಯಿ ಮೌಲ್ಯದ ಐಷಾರಾಮಿ ಸೆಡಾನ್ ಮರ್ಸಿಡಿಸ್ ಬೆಂಜ್ ಸಿ-ಕ್ಲಾಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಕಳೆದ 11 ವರ್ಷಗಳಿಂದ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಅವರಿಗೆ ಈ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ.


57 ಲಕ್ಷ ಮರ್ಸಿಡಿಸ್​ ಬೆನ್ಜ್​​​ ಸಿ ಕ್ಲಾಸ್​ ಕಾರು!


ಮರ್ಸಿಡಿಸ್ ಬೆನ್ಜ್​​​ ಸಿ-ಕ್ಲಾಸ್ ಅನ್ನು ಕ್ಲಿಂಟ್ ಆಂಟೋನಿಗೆ ಉಡುಗೊರೆಯಾಗಿ ಸುಮಾರು 57 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಈ ಐಷಾರಾಮಿ ಸೆಡಾನ್ 1496 ರಿಂದ 1993 cc ವರೆಗಿನ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಳಿಂದ ಚಾಲಿತವಾಗಿದ್ದು, 300 bhp ಶಕ್ತಿ ಮತ್ತು 550 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾರಿನ ಗರಿಷ್ಠ ವೇಗ ಗಂಟೆಗೆ 250 ಕಿ.ಮೀ.









View this post on Instagram






A post shared by Shaji Ak (@shaji_ak)





ಇದನ್ನೂ ಓದಿ: ಓದಿದ್ದು 10ನೇ ಕ್ಲಾಸ್​, ಸಂಪಾದಿಸ್ತಿರೋದು ಮಾತ್ರ ಲಕ್ಷ ಲಕ್ಷ! ಜಸ್ಟ್​ 20 ಸಾವಿರದಿಂದ ಆರಂಭವಾಗಿತ್ತು ಈ ಬ್ಯುಸಿನೆಸ್​!


ಈ ಕಂಪನಿಯ ಮೊದಲ ಉದ್ಯೋಗಿ!


ಕ್ಲಿಂಟ್ ಆಂಟೋನಿ IT ಕಂಪನಿಯಾದ Webandcraft ನಲ್ಲಿ ಕೆಲಸ ಮಾಡುತ್ತಾರೆ. 2012 ರಲ್ಲಿ ಸ್ಥಾಪನೆಯಾದ ಈ ಕಂಪನಿಯ ಮೊದಲ ಉದ್ಯೋಗಿ. ಅವರು ಕಳೆದ 11 ವರ್ಷಗಳಿಂದ ಕಂಪನಿಯ ಅತ್ಯಂತ ನಿಷ್ಠಾವಂತ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಯಾಗಿದ್ದಾರೆ. ಕಂಪನಿಯ ಯಶಸ್ಸಿನಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ.


ಕಂಪನಿಯಲ್ಲಿ ಈ ಉದ್ಯೋಗಿ ಮುಖ್ಯ ಸೃಜನಾತ್ಮಕ ಅಧಿಕಾರಿಯಾಗಿ ಕೆಲಸ ಮಾಡುತ್ತಾರೆ. ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಪ್ರಕಾರ, 'ಕ್ಲಿಂಟ್ ಅವರು ನಿಷ್ಠಾವಂತ ಉದ್ಯೋಗಿಯಾಗಿ ಕಂಪನಿಯ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ. ಅದಕ್ಕಾಗಿಯೇ ನಾವು ಅವರಿಗೆ ಐಷಾರಾಮಿ ಸೆಡಾನ್ ಕಾರನ್ನು ಉಡುಗೊರೆಯಾಗಿ ನೀಡಲು ಸಂತೋಷಪಡುತ್ತೇವೆ.


ನೀವೂ ಹಲವಾರು ವರ್ಷಗಳಿಂದ ಕಂಪನಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದರೆ, ನೀವು ಕೂಡ ಈ ರೀತಿಯಲ್ಲಿ ಪ್ರತಿಫಲವನ್ನು ಪಡೆದರೆ ಆಶ್ಚರ್ಯಪಡಬೇಡಿ. ಆದರೆ ಅದಕ್ಕಾಗಿ ಕಂಪನಿಯೊಂದಿಗೆ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ. ಆಗ ಮಾತ್ರ ನಿಮ್ಮ ಶ್ರಮಕ್ಕೆ ಫಲ ಸಿಗುವ ಸಾಧ್ಯತೆ ಹೆಚ್ಚು.

Published by:ವಾಸುದೇವ್ ಎಂ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು