Work Hours: ಯುವಜನತೆ 18 ಗಂಟೆಗಳ ಕಾಲ ಕೆಲಸ ಮಾಡ್ಬೇಕಂತೆ! ಹೀಗೆ ಹೇಳಿದ್ಯಾರು ಗೊತ್ತಾ?

ಬಾಂಬೆ ಶೇವಿಂಗ್ ಕಂಪನಿಯ ಸ್ಥಾಪಕ-ಸಿಇಒ ಶಾಂತನು ದೇಶಪಾಂಡೆ ಅವರ “ ಯುವ ಜನರು ಹೆಚ್ಚು ಕಾಲ ಕೆಲಸ ಮಾಡುತ್ತಿದ್ದಾರೆ. ಅದು ಒಳ್ಳೆಯದು ಕೂಡ. ಆದರೆ ಟ್ವಿಟ್ಟರ್‌ ಇದರ ಬಗ್ಗೆ ಯೋಚಿಸುವುದನ್ನು ನಿಲ್ಲಿಸಬೇಕು” ಎಂದು ಹೇಳಿದರು. “ನಿಮಗೆ 22 ವರ್ಷ ವಯಸ್ಸಾದಾಗ ನೀವು ಕೆಲಸ ಮಾಡಲು ತೆರಳುತ್ತಿರಿ. ಅಲ್ಲವೇ? ನಿಮಗೆ ಆ ಕೆಲಸದಲ್ಲಿ ಪರಿಣಿತಿ ಪಡೆಯಬೇಕೆಂದರೆ ನೀವು ಕನಿಷ್ಠ 4-5 ವರ್ಷಗಳ ಕಾಲ 18 ಗಂಟೆಗಳ ಕಾಲ ಕೆಲಸ ಮಾಡಿ ಎಂದು ಸಲಹೆ ನೀಡಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಎರಡು ವರ್ಷಗಳಿಂದ ಈ ಸಾಂಕ್ರಾಮಿಕ ಕೊರೊನಾ ಕಾರಣದಿಂದ ಹಲವರು ತಾವು ಕೆಲಸ ಮಾಡುವ ಕಚೇರಿ (Office) ಕಡೆ ಮುಖ ಮಾಡಿ ಅದೆಷ್ಟು ದಿನಗಳಾದವೋ? ಆರೋಗ್ಯ ಮುಖ್ಯ, ಅದರೊಂದಿಗೆ ಕೆಲಸವೂ (Work) ಮುಖ್ಯ. ಆ ಕೆಲಸಗಳನ್ನು ಉಳಿಸಿಕೊಳ್ಳಲು ಹೆಚ್ಚಿನ ಕಂಪನಿಗಳು (Company) ವರ್ಕ್​ ಫ್ರಂ ಹೋಂ ಅವಕಾಶ ನೀಡುವುದು ಅನಿವಾರ್ಯವಾಗಿತ್ತು. ಕೊರೊನಾ ಕಾರಣದಿಂದ ಹುಟ್ಟಿಕೊಂಡ ಈ ಹೊಸ ಪರಿಕಲ್ಪನೆ ಇಂದು ಟ್ರೆಂಡ್ (Trend)​ ಆಗಿ ಬೆಳೆದು ನಿಂತಿದೆ. ಮತ್ತೆ ತಮ್ಮ ಹಳೆಯ ಕೆಲಸದ ಶೈಲಿಯನ್ನೇ ಪ್ರಾರಂಭಿಸಬೇಕು ಎಂದುಕೊಳ್ಳುತ್ತಿರುವ ಕಂಪನಿಗಳಿಗೆ ಮತ್ತೆ ಮತ್ತೆ ಹುಟ್ಟಿಕೊಳ್ಳುತ್ತಿರುವ ಹೊಸ ರೂಪಾಂತರಿ ರೋಗಗಳು ತಡೆಯಾಗುತ್ತಿವೆ.

ತಮ್ಮ ಕೆಲಸದ ಅವಧಿಗಿಂತ ಶಕ್ತಿಯನ್ನು ಮೀರಿ ಕೆಲಸ ಮಾಡುತ್ತಿರುವುದೇಕೆ?
ಹಸ್ಲ್ ಕಲ್ಚರ್, ಬರ್ನ್‌ಔಟ್ ಕಲ್ಚರ್, ಗ್ರೈಂಡ್ ಕಲ್ಚರ್ ಹೀಗೆ ಮನೆಯಲ್ಲಿ ಕುಳಿತು ಕೆಲಸ ಮಾಡುವ ಪರಿಕಲ್ಪನೆಯನ್ನು ಇನ್ನು ಹಲವು ಹೆಸರುಗಳಲ್ಲಿ ಕರೆಯಲಾಗುತ್ತದೆ. ಇದರ ಅರ್ಥ ಒಬ್ಬ ವ್ಯಕ್ತಿ ತಮ್ಮ ಕೆಲಸದ ಅವಧಿಗಿಂತ ಮತ್ತು ತಮ್ಮ ಶಕ್ತಿಯನ್ನು ಮೀರಿ ಕೆಲಸ ಮಾಡುತ್ತಾರೆ. ಇದೇ ಇಂದಿನ ಆಧುನಿಕ ಯುಗದಲ್ಲಿ ದೊಡ್ಡ ಸಮಸ್ಯೆ ಆಗಿದೆ.

ಇದನ್ನೂ ಓದಿ: Business Startup: ತನ್ನದೇ ಆದ ಎರಡು ಮಲ್ಟಿ ಕ್ರೋರ್ ಮೆನ್ಸ್ ವೇರ್ ಬ್ರಾಂಡ್ ಅನ್ನು ನಿರ್ಮಿಸಿದ ಕೇರಳದ ಯುವಕ

ಮನುಷ್ಯ ಜಾಸ್ತಿ ಅಂದರೆ ಎರಡರಿಂದ ಮೂರು ಗಂಟೆ ನಿರಂತರವಾಗಿ ಕೂತು ಕೆಲಸ ಮಾಡಬಹುದು. ಅದಕ್ಕಿಂತ ಜಾಸ್ತಿ ಕೂತು ಕೆಲಸ ಮಾಡಿದರೆ ಆತನ ಬೆನ್ನು ಬಳಲಿ ಬೆಂಡಾಗಿ ಹೋಗುವುದು ಪಕ್ಕಾ. ಹೌದು, ಜಾಸ್ತಿ ಕೂತರೆ ಬೆನ್ನು ನೋವಿನಂತಹ ಸಮಸ್ಯೆ ಉಂಟಾಗುತ್ತದೆ.  ಆದರೆ ಆರೋಗ್ಯವನ್ನು ಮರೆತು ಉತ್ತಮ ಉದ್ಯೋಗ, ಉತ್ತಮ ಸಂಬಳ, ಉತ್ತಮ ಪೋಸ್ಟ್‌ ಹೀಗೆ ಇನ್ನಿತರ ಲಾಭಗಳಿಗೆ ಒಬ್ಬ ವ್ಯಕ್ತಿ ಬಿಡುವಿಲ್ಲದೇ ದುಡಿಯುತ್ತಿದ್ದಾನೆ. ಇದನ್ನೆ ಹಸ್ಟಲ್‌ ಎನ್ನುತ್ತಾರೆ. ಹಸ್ಟಲ್‌ನ ನಿಜವಾದ ಅರ್ಥ ಮುಗಿಯದ ಕೆಲಸ ಎಂಬುದಾಗಿದೆ.

ಈ ಬಗ್ಗೆ ಬಾಂಬೆ ಶೇವಿಂಗ್ ಕಂಪನಿಯ ಸ್ಥಾಪಕ-ಸಿಇಒ ಶಾಂತನು ದೇಶಪಾಂಡೆ ಏನು ಹೇಳಿದ್ದಾರೆ
ಇದರ ಕುರಿತು ಬಾಂಬೆ ಶೇವಿಂಗ್ ಕಂಪನಿಯ ಸ್ಥಾಪಕ-ಸಿಇಒ ಶಾಂತನು ದೇಶಪಾಂಡೆ ಅವರ “ ಯುವ ಜನರು ಹೆಚ್ಚು ಕಾಲ ಕೆಲಸ ಮಾಡುತ್ತಿದ್ದಾರೆ. ಅದು ಒಳ್ಳೆಯದು ಕೂಡ. ಆದರೆ ಟ್ವಿಟ್ಟರ್‌ ಇದರ ಬಗ್ಗೆ ಯೋಚಿಸುವುದನ್ನು ನಿಲ್ಲಿಸಬೇಕು” ಎಂದು ಹೇಳಿದರು. “ನಿಮಗೆ 22 ವರ್ಷ ವಯಸ್ಸಾದಾಗ ನೀವು ಕೆಲಸ ಮಾಡಲು ತೆರಳುತ್ತಿರಿ. ಅಲ್ಲವೇ? ನಿಮಗೆ ಆ ಕೆಲಸದಲ್ಲಿ ಪರಿಣಿತಿ ಪಡೆಯಬೇಕೆಂದರೆ ನೀವು ಕನಿಷ್ಠ 4-5 ವರ್ಷಗಳ ಕಾಲ 18 ಗಂಟೆಗಳ ಕಾಲ ಕೆಲಸ ಮಾಡಿ. ಆ ಕೆಲಸದಲ್ಲಿ ನಿಮ್ಮನ್ನು ಚೆನ್ನಾಗಿ ತೊಡಗಿಸಿಕೊಳ್ಳಿ. ಇದರ ಜೊತೆಗೆ ಉತ್ತಮ ಆಹಾರ ಸೇವಿಸಿ ಮತ್ತು ವ್ಯಾಯಾಮ ಮಾಡುತ್ತಾ ಫಿಟ್‌ ಆಗಿರಿ” ಎಂದು ದೇಶಪಾಂಡೆ ಅವರು ಪೋಸ್ಟ್‌ ಮಾಡಿದ ಲಿಂಕ್ಡ್‌ಇನ್ ಪೋಸ್ಟ್ ಈಗ ಸಕತ್‌ ವೈರಲ್‌ ಆಗುತ್ತಿದೆ.ಇದನ್ನೂ ಓದಿ:  Business: ದಿನಕ್ಕೆ 12 ಟನ್ ಕೋಕಮ್ ಶರ್ಬತ್ ತಯಾರಿಸಿ ಕೋಟಿ ಹಣ ಸಂಪಾದಿಸಿ ಯಶಸ್ಸು ಕಂಡ ಮಹಿಳೆ

ದೇಶಪಾಂಡೆ ಅವರು ತಮ್ಮ ಮಾತು ಮುಂದುವರಿಸುತ್ತಾ, “ಯುವಜನರು ಆನ್‌ಲೈನ್ ಲೇಖನಗಳಿಂದ ಸಾಕಷ್ಟು ಪ್ರಭಾವಿತರಾಗಿದ್ದಾರೆ ಮತ್ತು ಕೆಲಸ ಮತ್ತು ತಮ್ಮ ಜೀವನವನ್ನು ಸಮತೋಲನಗೊಳಿಸಿಕೊಂಡು ಜೀವನ ಸಾಗಿಸುವಲ್ಲಿ ಶ್ರಮಿಸುತ್ತಿದ್ದಾರೆ. ಆದರೆ ಯುವಜನರು ಇನ್ನು ಚಿಕ್ಕ ವಯಸ್ಸಿನವರು ಆಗಿರುವುದರಿಂದ ಇದು ಅವರ ಆದ್ಯತೆ ಆಗಿರಬಾರದು” ಎಂದು ಹೇಳುತ್ತಾರೆ.

Bombay Shaving Company CEO Shantanu Deshpande who said that youths should work 18 hours stg asp
ಬಾಂಬೆ ಶೇವಿಂಗ್ ಕಂಪನಿಯ ಸ್ಥಾಪಕ-ಸಿಇಒ ಶಾಂತನು ದೇಶಪಾಂಡೆ


ಇವರ ಈ ಪೋಸ್ಟ್ ನೋಡಿ ನೆಟ್ಟಿಗರು ಏನಂದ್ರು
ಇವರ ಪೋಸ್ಟ್‌ಗೆ ಸಾಮಾಜಿಕ ಜಾಲತಾಣವಾದ ಲಿಂಕ್ಡ್‌ಇನ್‌ ಬಳಕೆದಾರರು ಅನೇಕ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರು. ಒಬ್ಬ ಬಳಕೆದಾರರು ʼದೇಶಪಾಂಡೆ ಅವರ ಪ್ರಕಾರ 18 ಗಂಟೆಗಳ ನಿರಂತರ ಕೆಲಸ, 6 ಗಂಟೆಗಳ ನಿದ್ರೆ ಎಲ್ಲವೂ ಸರಿ. ಆದರೆ ಇದರ ಮಧ್ಯೆ ಉತ್ತಮ ಆಹಾರ ಸೇವಿಸುವುದು ಮತ್ತು ಫಿಟ್‌ ಆಗಿರುವುದು ಹೇಗೆ? ಇದರಿಂದ ನಮ್ಮ ಮುಂದಿನ ಜೀವನವು ಬಿ.ಪಿ, ಆತಂಕ ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಕೂಡಿರುತ್ತದೆ. ಈ ಮಾತು ಹೇಳುವ ಇವರು ನಿಜವಾದ ನಾಯಕರೇ? ನಮಗೆ ಇಂತಹ ಪಾಠದ ಅಗತ್ಯವಿದೆಯೇ?ʼ ಎಂದು ಪ್ರಶ್ನೆ ಮಾಡಿದ್ದಾರೆ.
Published by:Ashwini Prabhu
First published: