BMW: ಈ ಕಾರ್ ಕ್ಷಣಕ್ಕೊಂದು ಬಣ್ಣ ಬದಲಾಯಿಸುತ್ತೆ, ಥೇಟ್ ಗೋಸುಂಬೆ ಥರಾ!

ಭವಿಷ್ಯದಲ್ಲಿ ಕಾರಿನ ಡ್ಯಾಶ್‌ಬೋರ್ಡ್ ಮೇಲಿರುವ ಗುಂಡಿ ಅಥವಾ ಹಸ್ತನಿಯಂತ್ರಣದ ಮೂಲಕವೂ ಈ ಬದಲಾವಣೆಗಳನ್ನು ಮಾಡಲು ಸಾಧ್ಯವಾಗಲಿದೆ ಎಂದು ಕ್ಲಾರ್ಕ್ ತಿಳಿಸಿದ್ದಾರೆ.

ಬಿಎಂಡಬ್ಲ್ಯೂ ಹೊಸ ಕಾರು

ಬಿಎಂಡಬ್ಲ್ಯೂ ಹೊಸ ಕಾರು

  • Share this:
ಆಟೋಮೋಟಿವ್ ಆವಿಷ್ಕಾರಕ್ಕೆ (Automotive Innovation) ಬಂದರೆ ಬಿಎಂಡಬ್ಲ್ಯೂ ಈಗಲೂ ಮುಂಚೂಣಿಯಲ್ಲಿದೆ. ಜರ್ಮನಿಯ ದೈತ್ಯ (German luxury) ಐಷಾರಾಮಿ ಕಾರುಗಳ ತಯಾರಿಕಾ ಸಂಸ್ಥೆ 2022ರಲ್ಲಿ ಆಯೋಜನೆಗೊಂಡಿರುವ ವಿದ್ಯುನ್ಮಾನ ಗ್ರಾಹಕ ಪ್ರದರ್ಶನ (Electronic Consumer Show) ಮೇಳದಲ್ಲಿ ಕಾರು ತನ್ನ ಹೊರಕವಚದ ಬಣ್ಣವನ್ನು ತನ್ನಿಂತಾನೇ ಬದಲಾಯಿಸಿಕೊಳ್ಳುವ ವಿಶಿಷ್ಟ ತಂತ್ರಜ್ಞಾನ ಹೊಂದಿರುವ ಕಾರನ್ನು ಪ್ರದರ್ಶನಕ್ಕಿಟ್ಟಿದೆ. 2021ರಲ್ಲೇ ಈ ಕುರಿತು ಪ್ರಕಟಿಸಿದ್ದ(Announcing) ಸಂಸ್ಥೆಯು ಒಂದು ಗುಂಡಿಯನ್ನು ಒತ್ತುವುದರಿಂದ ವಾಹನವು ತನ್ನ ಹೊರಕವಚದ ಬಣ್ಣ ಬದಲಾಯಿಸಿಕೊಳ್ಳಲು ಸಾಧ್ಯವಾಗುವಂತಹ ತಂತ್ರಜ್ಞಾನ ಪ್ರದರ್ಶಿಸುವುದಾಗಿ ತಿಳಿಸಿತ್ತು.

ಪ್ರದರ್ಶನ ವಿಡಿಯೋ

ಈ ಆವಿಷ್ಕಾರಕ ಬಣ್ಣ ಬದಲಾವಣೆಯ ತಂತ್ರಜ್ಞಾನ ಅಳವಡಿಸಲು ಸಂಸ್ಥೆಯು ಸಂಪೂರ್ಣ ವಿದ್ಯುತ್ ಚಾಲಿತವಾಗಿರುವ ಬಿಎಂಡಬ್ಲ್ಯೂ ಐಎಕ್ಸ್ ಮಾದರಿ ಕಾರನ್ನು ಬಳಸಿಕೊಂಡಿದೆ. ಆದರೆ, ಈ ಬಣ್ಣ ಬದಲಾವಣೆ ತಂತ್ರಜ್ಞಾನದ ಕುರಿತು ಇನ್ನಾವುದೇ ವಿವರವನ್ನು ಬಿಎಂಡಬ್ಲ್ಯೂ ಸಂಸ್ಥೆ ಬಿಡುಗಡೆ ಮಾಡಿಲ್ಲವಾದರೂ, ಟ್ವಿಟ್ಟರ್‌ ಖಾತೆಯಲ್ಲಿ ಈ ಕುರಿತ ಪ್ರದರ್ಶನ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ಕಾರಿನಲ್ಲಿ ವಿದ್ಯುನ್ಮಾನ ಶಾಯಿ ತಂತ್ರಜ್ಞಾನವನ್ನು ಬಳಸಲಾಗಿದ್ದು, ಕಾರಿನ ಹೊರಕವಚವು ಬಿಳಿ ಮತ್ತು ಬೂದು ಬಣ್ಣದಲ್ಲಿ ಹಲವಾರು ವಿನ್ಯಾಸಗಳ ಮೂಲಕ ತನ್ನ ಬಣ್ಣ ಬದಲಾಯಿಸುತ್ತದೆ.

ಇದನ್ನೂ ಓದಿ: ಬರೀ 17 ಸಾವಿರಕ್ಕೆ BMW ಬೈಕ್​ ಖರೀದಿಸಬಹುದು, ಹೀಗೆ ಮಾಡಿದ್ರೆ ಸಾಕು ನೋಡಿ

ಬಣ್ಣ ಬದಲಾವಣೆಯ ತಂತ್ರಜ್ಞಾನ

ಇದು ನಿಜವಾಗಿಯೂ ಇ-ಶಾಯಿ ಬಳಸಿಕೊಂಡು ಅನ್ವೇಷಿಸಲಾಗಿರುವ ಇಂಧನ ದಕ್ಷತೆಯುಳ್ಳ ಬಣ್ಣ ಬದಲಾವಣೆಯ ತಂತ್ರಜ್ಞಾನವಾಗಿದೆ" ಎಂದು ಬಿಎಂಡಬ್ಲ್ಯೂ ಸಂಶೋಧನಾ ಎಂಜಿನಿಯರ್ ಸ್ಟೆಲ್ಲಾ ಕ್ಲಾರ್ಕ್ ಅಭಿಪ್ರಾಯ ಪಟ್ಟಿದ್ದಾರೆ. "ಇದು ದಪ್ಪನೆಯ ಪೇಪರ್‌ ಆಗಿದ್ದು, ಹೀಗಾಗಿಯೇ ಈ ವಸ್ತುವನ್ನು ಆಯ್ದುಕೊಂಡೆವು. ನಮ್ಮ 3ಡಿ ವಸ್ತುವಿನಂತಿರುವ ಕಾರಿನ ಮೇಲೆ ಈ ದಪ್ಪನೆಯ ಪೇಪರ್ ಅಂಟಿಸುವ ಸವಾಲನ್ನು ತೆಗೆದುಕೊಂಡೆವು" ಎಂದಿದ್ದಾರೆ. ಫೋನ್ ಆ್ಯಪ್ ಮೂಲಕ ನಿಯಂತ್ರಣಕ್ಕೊಳಪಟ್ಟಿರುವ ತರಂಗಗಳನ್ನು ಪ್ರಚೋದಿಸಿದಾಗ, ಈ ದಪ್ಪನೆಯ ವಸ್ತುವು ಕಾರಿನ ಹೊರಕವಚದ ಮೇಲೆ ಬಣ್ಣವನ್ನು ಮೂಡಿಸುತ್ತದೆ. ಇದರಿಂದ ಸವಾರಿ ಗೆರೆಗಳಂತಹ ವಿವಿಧ ನೆರಳು ಹಾಗೂ ವಿನ್ಯಾಸಗಳು ಮೂಡುತ್ತವೆ.

ಗ್ರಾಫಿಕ್ ತಂತ್ರಜ್ಞಾನ

ಭವಿಷ್ಯದಲ್ಲಿ ಕಾರಿನ ಡ್ಯಾಶ್‌ಬೋರ್ಡ್ ಮೇಲಿರುವ ಗುಂಡಿ ಅಥವಾ ಹಸ್ತನಿಯಂತ್ರಣದ ಮೂಲಕವೂ ಈ ಬದಲಾವಣೆಗಳನ್ನು ಮಾಡಲು ಸಾಧ್ಯವಾಗಲಿದೆ ಎಂದು ಕ್ಲಾರ್ಕ್ ತಿಳಿಸಿದ್ದಾರೆ. "ಸೂರ್ಯನ ಕಿರಣಗಳನ್ನು ಪ್ರತಿಫಲಿಸಿ ಬಣ್ಣಗಳ ಮೇಲೆ ಪ್ರಭಾವ ಬೀರುವ ತಂತ್ರಜ್ಞಾನ ನನ್ನ ಅಚ್ಚುಮೆಚ್ಚಿನದ್ದಾಗಿದೆ. ಈಗಿನಂತಹ ಪ್ರಖರ ಸೂರ್ಯನ ಬೆಳಕಿನ ದಿನಗಳಲ್ಲಿ ಸೂರ್ಯ ಬೆಳಕನ್ನು ಪ್ರತಿಫಲಿಸಿ ಬಣ್ಣವನ್ನು ಬಿಳಿಗೆ ಬದಲಾಯಿಸಬಹುದು. ಹಾಗೆಯೇ ಚಳಿಯಿರುವ ದಿನಗಳಲ್ಲಿ ಶಾಖವನ್ನು ಹೀರಿಕೊಳ್ಳುವ ಮೂಲಕ ಕಾರಿನ ಬಣ್ಣವನ್ನು ಕಪ್ಪು ಬಣ್ಣಕ್ಕೆ ತಿರುಗಿಸಬಹುದು" ಎಂದು ವಿವರಿಸಿದ್ದಾರೆ.

ವಿಡಿಯೋ ನೋಡಿ:

ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿರುವ ದೃಶ್ಯಾವಳಿಯಲ್ಲಿ ಬಿಎಂಡಬ್ಲ್ಯೂ ಐಎಕ್ಸ್ ಕಾರು ಗಾಢ ಬೂದು ಬಣ್ಣದಲ್ಲಿ ನಿಂತಿರುತ್ತದೆ. ಆದರೆ, ಈ ವಿದ್ಯುತ್‌ ಚಾಲಿತ ಕಾರಿನ ಪಕ್ಕ ನಿಂತಿರುವ ವ್ಯಕ್ತಿಯೊಬ್ಬ ಬಣ್ಣ ಬದಲಿಸುವ ವ್ಯವಸ್ಥೆಯನ್ನು ಕ್ರಿಯಾಶೀಲಗೊಳಿಸಿದ ಕೂಡಲೇ ಅದರ ಬಣ್ಣವು ಬಿಳಿ ಬಣ್ಣಕ್ಕೆ ತಿರುಗುತ್ತದೆ. ಬಣ್ಣ ಬದಲಾವಣೆ ತಂತ್ರಜ್ಞಾನವನ್ನು ತೋರಿಸುವ ದೃಶ್ಯಾವಳಿಯು ಎಷ್ಟು ವಿಲಕ್ಷಣವಾಗಿದೆಯೆಂದರೆ, ಈ ವಿಡಿಯೋ ಸಂಪೂರ್ಣ ನಕಲಿಯಾಗಿದ್ದು, ಗ್ರಾಫಿಕ್ ತಂತ್ರಜ್ಞಾನ ಬಳಸಿ ಸೃಷ್ಟಿಸಿರಬಹುದು ಎಂದು ನೋಡುಗರು ಮೂರ್ಖರಾಗುವ ಸಾಧ್ಯತೆ ಇದೆ.

ವಿದ್ಯುನ್ಮಾನ ಗ್ರಾಹಕ ಪ್ರದರ್ಶನ ಮೇಳ

ಈ ವಿಡಿಯೊವನ್ನು ಹಂಚಿಕೊಂಡಿರುವ ಟ್ವಿಟ್ಟರ್‌ ಖಾತೆದಾರ, "ಬಿಎಂಡಬ್ಲ್ಯೂ ಐಎಕ್ಸ್‌ಗೆ ಬಳಸಿರುವ ಬಣ್ಣವು ತಾಪಮಾನ ಸೂಕ್ಷ್ಮಿಯಾಗಿದ್ದು, ಒಂದು ವೇಳೆ ಬಿಎಂಡಬ್ಲ್ಯೂ ಐಎಕ್ಸ್‌ನಲ್ಲಿ ಪ್ರದರ್ಶಿಸಲಾಗಿರುವ ವೈಶಿಷ್ಟ್ಯವು ತೀರಾ ಬಿಸಿ ಅಥವಾ ತೀರಾ ತಂಪಾದರೆ, ಅದನ್ನು ಬದಲಿಸಲು ಸಂಸ್ಥೆಯು ಬದಲಿ ಕಾರನ್ನು ತಂದಿದೆ" ಎಂದು ಅಡಿಬರಹದಲ್ಲಿ ಬರೆದಿದ್ದಾನೆ. ವಿದ್ಯುನ್ಮಾನ ಗ್ರಾಹಕ ಪ್ರದರ್ಶನ ಮೇಳವು ಸಾಂಪ್ರದಾಯಿಕ ತಂತ್ರಜ್ಞಾನ ದೈತ್ಯರ ಪ್ರಭುತ್ವಕ್ಕೆ ವೇದಿಕೆಯಾಗಿ ಬದಲಾಗಿದೆ. ಹೀಗಿದ್ದೂ, ಆಟೋಮೋಟಿವ್ ಹಾಗೂ ತಂತ್ರಜ್ಞಾನ ವಲಯಗಳ ಬೆರೆಯುವಿಕೆಯಿಂದ ಹಲವಾರು ಆಟೋ ಮತ್ತು ತಂತ್ರಜ್ಞಾನ ಸಂಸ್ಥೆಗಳು ತಮ್ಮ ಆವಿಷ್ಕಾರಗಳನ್ನು ಪ್ರದರ್ಶಿಸುವ ಅವಕಾಶವನ್ನಾಗಿ ವಿದ್ಯುನ್ಮಾನ ಗ್ರಾಹಕ ಪ್ರದರ್ಶನ ಮೇಳವನ್ನು ಬಳಸುತ್ತಿದ್ದಾರೆ.

ಇದನ್ನೂ ಓದಿ: Expensive Scooter | ಭಾರತದ ಬಹು ದುಬಾರಿ ಸ್ಕೂಟರ್ BMW C 400 GT: ಏನಿದರ ವಿಶೇಷ, ಬೆಲೆ ಎಷ್ಟು?

ಆದರೆ, ಬಿಎಂಡಬ್ಲ್ಯೂ ಸಂಸ್ಥೆಯು 2022ರ ವಿದ್ಯುನ್ಮಾನ ಗ್ರಾಹಕ ಪ್ರದರ್ಶನ ಮೇಳದಲ್ಲಿ ಪ್ರದರ್ಶನಗೊಂಡಿರುವ ಬಣ್ಣ ಬದಲಾವಣೆಯ ತಂತ್ರಜ್ಞಾನವನ್ನು ತನ್ನ ಗ್ರಾಹಕರಿಗೆ ವರ್ಗಾಯಿಸಲಿದೆಯೋ ಅಥವಾ ತಂತ್ರಜ್ಞಾನ ಪ್ರದರ್ಶನಕ್ಕಾಗಿ ಮಾತ್ರ ಇದನ್ನು ಅಭಿವೃದ್ಧಿಪಡಿಸಲಾಗಿದೆಯೋ ಎಂಬುದಿನ್ನೂ ಸ್ಪಷ್ಟವಾಗಿಲ್ಲ.
Published by:vanithasanjevani vanithasanjevani
First published: