Blink It: ಇನ್ಮುಂದೆ ಮನೆ ಬಾಗಿಲಿಗೆ ಬರುತ್ತೆ ನಿಮ್ಗೆ ಬೇಕಾದ ಪ್ರಿಂಟ್​ಔಟ್​​! ಬ್ಲಿಂಕ್ ಇಟ್​ನಿಂದ ಹೊಸ ಸೇವೆ

ಬಹುತೇಕ ನಗರವಾಸಿಗಳು ಮಾತ್ರ ಅಲ್ಲದೆ ಗ್ರಾಮೀಣ ನಿವಾಸಿಗಳು ಸಹ ಹಸಿವಾದಾಗ ಜೊಮ್ಯಾಟೋ ಮೊರೆ ಹೋಗಿ ಅದರಲ್ಲಿ ಬೇಕಾದ ಆಹಾರವನ್ನು ಬುಕ್‌ ಮಾಡುತ್ತಾರೆ. ಇದಾದ ನಂತರ ಜೊಮ್ಯಾಟೋ ಗ್ರಾಹಕರು ಬುಕ್‌ ಮಾಡಿದ ಆಹಾರವನ್ನು ಅವರ ಮನೆಗೆ ತಲುಪಿಸುತ್ತಾರೆ. ಇದೀಗ ಈ ಕಂಪನಿ ಮತ್ತೊಂದು ಹೊಸ ವ್ಯವಹಾರವನ್ನು ಶುರು ಮಾಡಿದೆ. ಜೊಮ್ಯಾಟೋ ಮಾಲಿಕತ್ವದ ಬ್ಲಿಂಕ್‌ಇಟ್‌ ಮನೆ ಬಾಗಿಲಿಗೆ ಪ್ರಿಂಟ್‌ಔಟ್‌ ಡೆಲಿವರಿ ಸೇವೆಯನ್ನು ಆರಂಭಿಸಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಜೊಮ್ಯಾಟೋ (Zomato) ಆಹಾರವನ್ನು ಡೆಲಿವರಿ ಮಾಡುವ ಸಂಸ್ಥೆಯಾಗಿದೆ. ಈ ಸಂಸ್ಥೆಯು ಆನ್‌ಲೈನ್‌ ಗ್ರಾಹಕರು ಬಯಸುವ ಆಹಾರ ತಿನಿಸನ್ನು ಮನೆ ಮನೆಗೆ ಹೋಗಿ ಅವರಿಗಿಷ್ಟವಾದ ಆಹಾರವನ್ನು ತಲುಪಿಸಿ, ಅವರ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಿದೆ. ಬಹುತೇಕ ನಗರವಾಸಿಗಳು ಮಾತ್ರ ಅಲ್ಲದೆ ಗ್ರಾಮೀಣ ನಿವಾಸಿಗಳು ಸಹ ಹಸಿವಾದಾಗ ಜೊಮ್ಯಾಟೋ ಮೊರೆ ಹೋಗಿ ಅದರಲ್ಲಿ ಬೇಕಾದ ಆಹಾರವನ್ನು ಆರ್ಡರ್ (Food Order) ಮಾಡುತ್ತಾರೆ. ಇದಾದ ನಂತರ ಜೊಮ್ಯಾಟೋ ಒಂದು ಅಥವಾ ಅರ್ಧ ಗಂಟೆಯಲ್ಲಿ ಗ್ರಾಹಕರು ಆರ್ಡರ್ ಮಾಡಿದ ಆಹಾರವನ್ನು ಅವರ ಮನೆಗೆ ತಲುಪಿಸುತ್ತಾರೆ. ಇದೀಗ ಈ ಕಂಪನಿ ಮತ್ತೊಂದು ಹೊಸ ವ್ಯವಹಾರವನ್ನು ಶುರು ಮಾಡಿದೆ.  ಜೊಮ್ಯಾಟೋ ಮಾಲಿಕತ್ವದ ಬ್ಲಿಂಕ್‌ಇಟ್‌ (Blinkit) ಮನೆ ಬಾಗಿಲಿಗೆ ಪ್ರಿಂಟ್‌ಔಟ್‌ ಡೆಲಿವರಿ (Printout Delivery) ಸೇವೆಯನ್ನು ಆರಂಭಿಸಿದೆ.

ಮನೆ ಬಾಗಿಲಿಗೆ ಪ್ರಿಂಟ್‌ಔಟ್‌ ಡೆಲಿವರಿ
ಇದನ್ನು ಮೊದಲ ಬಾರಿಗೆ ಗುರುಗಾವ್‌ ನಗರದಲ್ಲಿ ಆರಂಭಿಸಿದೆ. ಕಪ್ಪು-ಬಿಳುಪು ಪ್ರಿಂಟ್‌ಔಟ್‌ಗಳಿಗೆ ಪ್ರತಿ ಪುಟಕ್ಕೆ ರೂ. 9 ಮತ್ತು ಬಣ್ಣದ ಪ್ರಿಂಟ್‌ಔಟ್‌ಗಳಿಗೆ ಪ್ರತಿ ಪುಟಕ್ಕೆ ರೂ.19 ಶುಲ್ಕ ವಿಧಿಸಲು ನಿರ್ಧರಿಸಿದೆ. ಪ್ರತಿ ಪ್ರಿಂಟ್‌ಔಟ್ ಆರ್ಡರ್‌ಗೆ ಡೆಲಿವರಿ ಶುಲ್ಕವಾಗಿ ಹೆಚ್ಚುವರಿ ರೂ. 25 ಗಳನ್ನು ವಿಧಿಸಲಾಗುತ್ತದೆ ಎಂಬುದನ್ನು ಮನಿಕಂಟ್ರೋಲ್ ವರದಿ ಮಾಡಿದೆ.

ಗುರ್‌ಗಾವ್‌ನ ಕೆಲವು ಸ್ಥಳಗಳಲ್ಲಿ ಸೇವೆಯನ್ನು ಪ್ರಾರಂಭಿಸಲಾಗಿದೆಯಾದರೂ, ಇನ್ನು ಈ ಸೇವೆಯನ್ನು ಗ್ರಾಹಕರು ಉತ್ತಮ ಸೇವೆಯೆಂದು ಪರಿಗಣಿಸಿಲ್ಲ. ಈ ಸೇವೆಯು ಉಪಯುಕ್ತವೆಂದು ಕಂಡುಬಂದರೆ ಅದು ಹೆಚ್ಚಿನ ಸ್ಥಳಗಳಿಗೆ ಈ ಸೇವೆಯನ್ನು ವಿಸ್ತರಿಸಲಾಗುತ್ತದೆ.

ಈ ಸೇವೆಯ ಕುರಿತು ಸಿಕ್ಕಾಪಟ್ಟೆ ಟ್ರೊಲ್
ಈ ವಿಷಯವಾಗಿ ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು, ಈ ಸೇವೆಯನ್ನು ಹಿಗ್ಗಾಮುಗ್ಗಾ ಟ್ರೊಲ್‌ ಮಾಡುತ್ತಿದ್ದಾರೆ. ಅನೇಕ ಟ್ವಿಟ್ಟರ್ ಬಳಕೆದಾರರು ಈ ಸೇವೆಯ ಕುರಿತು ಬ್ಲಿಂಕಿಟ್ ಅನ್ನು ನಿಂದಿಸುತ್ತಿದ್ದಾರೆ. ಇದೆಂಥ ದುಬಾರಿ ಸೇವೆ ಎಂದು ಟ್ರೋಲ್‌ ಮಾಡುತ್ತಿದ್ದಾರೆ. ಹೆಚ್ಚಿನ ಸ್ಥಳೀಯ ಫೋಟೊಕಾಪಿ ಅಂಗಡಿಗಳು ಪ್ರಿಂಟ್‌ಔಟ್‌ಗಳಿಗೆ ಕಡಿಮೆ ಶುಲ್ಕ ವಿಧಿಸುವುದರಿಂದ ಈ ಕಂಪನಿ ಮಕಾಡೆ ಮಲಗುತ್ತದೆ ಮತ್ತು ಇದರಿಂದ ಅವರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಹೇಳುತ್ತಿದ್ದಾರೆ.ಇದನ್ನೂ ಓದಿ: Diamond Startup: ಇನ್ಮುಂದೆ ಕೈಗೆಟಕುವ ದರದಲ್ಲೂ ಸಿಗಲಿದೆ ವಜ್ರಗಳು! ಸಿಕ್ಕಾಪಟ್ಟೆ ಸೌಂಡ್​ ಮಾಡ್ತಿದೆ ಈ ಸ್ಟಾರ್ಟ್​ಅಪ್

ಏನನ್ನೆಲ್ಲಾ ಒಳಗೊಂಡಿದೆ ಈ ಸೇವೆ
ಪ್ರಸ್ತುತವಾಗಿ ಈ ಜೊಮ್ಯಾಟೋ ಮಾಲಿಕತ್ವದ ಬ್ಲಿಂಕ್‌ಇಟ್‌ ಈ ಪ್ರಿಂಟ್‌ಔಟ್‌ ಸೇವೆಯನ್ನು ಕುಟುಂಬದ ದಾಖಲೆಗಳು, ಪಾಸ್‌ಪೋರ್ಟ್‌ಗಳು, ವೀಸಾಗಳು, ಬಾಡಿಗೆ ಒಪ್ಪಂದ ಪತ್ರಗಳ ಅಗತ್ಯವನ್ನು ಪೂರೈಸುವ ಗುರಿಯನ್ನು ಈ ಕಂಪನಿ ಹೊಂದಿದೆ. ಇದರ ಹೊರತಾಗಿ ಇವರು ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯವನ್ನು ಪೂರೈಸುವ ತನ್ನ ಇಂಗಿತವನ್ನು ಇಲ್ಲಿ ಹೇಳಿಕೊಂಡಿದೆ. ಮುಂದೆ ಭವಿಷ್ಯದಲ್ಲಿ ಹೆಚ್ಚಿನ ಗ್ರಾಹಕರು ನಮ್ಮ ಸೇವೆಯ ಕುರಿತು ಉತ್ತಮ ಪ್ರತಿಕ್ರಿಯೆ ಹೊಂದಿದಾಗ ಆಗ ಈ ಸೇವೆಯನ್ನು ಗ್ರಾಹಕ ಸ್ನೇಹಿ ಸೇವೆಯನ್ನಾಗಿ ವಿಸ್ತರಿಸುವ ತನ್ನ ಗುರಿಯನ್ನು ಹೊಂದಿದೆ ಎಂದು ಕಂಪನಿ ವಕ್ತಾರರು ಹೇಳಿದರು.

ಜಗತ್ತಿನಲ್ಲಿ ಆನ್‌ಲೈನ್ ಆಹಾರ ಪೂರೈಕೆಯಲ್ಲಿ ದೊಡ್ಡ ಕಂಪನಿ ಎಂದೇ ಗುರುತಿಸಿಕೊಂಡ ಜೊಮ್ಯಾಟೋ ಈ ವರ್ಷದ ಆರಂಭದಲ್ಲಿ ಎಲ್ಲಾ ಸ್ಟಾಕ್ ವ್ಯವಹಾರದಲ್ಲಿ ರೂ. 4,447 ಕೋಟಿ ಗಳಿಗೆ ಬ್ಲಿಂಕ್‌ಇಟ್‌ ಅನ್ನು ಸ್ವಾಧೀನಪಡಿಸಿಕೊಳ್ಳಲು ಜೊಮ್ಯಾಟೋ ಅನುಮೋದಿಸಿದೆ. ಇದರ ಕುರಿತು ಕಂಪನಿಯ ನಿಯಂತ್ರಕ ಫೈಲಿಂಗ್‌ನ ಮಂಡಳಿಯು ಈ ಹಿಂದೆ ಗ್ರೋಫರ್ಸ್ ಎಂದು ಕರೆಯಲ್ಪಡುವ ತ್ವರಿತ ವಿತರಣಾ ಇಕಾಮರ್ಸ್ ಪ್ಲಾಟ್‌ಫಾರ್ಮ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಅನುಮೋದಿಸಿದೆ ಎಂದು ಹೇಳಿದೆ. ಇದರಿಂದ ಜೊಮ್ಯಾಟೋ ಮತ್ತು ಬ್ಲಿಂಕ್‌ಇಟ್‌ ಒಪ್ಪಂದ ಅನುಮೋದನೆಯಾಗಿದೆ.

ಇದರ ಕುರಿತು ಝೊಮೊಟೊ ಸಿಇಒ ಹೇಳಿದ್ದೇನು?
ಈ ಜೊಮ್ಯಾಟೋ-ಬ್ಲಿಂಕ್‌ಇಟ್‌ ಒಪ್ಪಂದದ ಕುರಿತು ಝೊಮೊಟೊ ಸಿಇಒ ದೀಪಿಂದರ್ ಗೋಯಲ್ “ ಜೊಮ್ಯಾಟೋ ಕಂಪನಿಯು ತನ್ನ ಆಹಾರ ವ್ಯಾಪಾರದಲ್ಲಿ ಲಾಭದ ಜೊತೆ ಸ್ಥಿರತೆಯ ಗೆಲುವನ್ನು ಪಡೆಯುತ್ತಿದೆ. ಕಳೆದ 4 ವರ್ಷಗಳಲ್ಲಿ 86% ರಷ್ಟು ವಾರ್ಷಿಕ ಬೆಳವಣಿಗೆ ದರದಲ್ಲಿ ಒಟ್ಟು ರೂ. 55.4 ಶತಕೋಟಿಗಳ ಉತ್ತಮ ಆದಾಯವನ್ನು ಜೊಮ್ಯಾಟೋ ಕಂಪನಿ ಪಡೆದಿದೆ.

ಇದನ್ನೂ ಓದಿ:  Anand Mahindra: ಮತ್ತೊಬ್ಬರ ಕಲೆ ಗುರುತಿಸುವುದು ನಿಜವಾದ ಟ್ಯಾಲೆಂಟ್​! ಅದ್ರಲ್ಲಿ ಬೆಸ್ಟ್​ ಆನಂದ್ ಮಹೀಂದ್ರಾ, ಏನ್​ ಮಾಡಿದ್ದಾರೆ ನೋಡಿ

ಬ್ಲಿಂಕ್‌ಇಟ್‌ ವಿತರಣಾ ವೇದಿಕೆಯು ಈಗ ಕೆಲವು ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ವೇಗವಾಗಿ ಮನೆಬಾಗಿಲಿಗೆ ಪ್ರಿಂಟ್ಔಟ್ ತಲುಪಿಸಲಿದೆ. ಮನೆಯಲ್ಲಿ ಪ್ರಿಂಟರ್ ಅನ್ನು ಹೊಂದಿಲ್ಲವರು ಮತ್ತು ಸೈಬರ್ ಕೆಫೆ, ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಈ ಸೇವೆ ಸಹಾಯಕವಾಗಲಿದೆ. ಇದು ವಿಶೇಷವಾಗಿ ಲಭ್ಯವಿರುವ ದರಗಳಲ್ಲಿ ಕೆಲಸ ಮಾಡುತ್ತದೆ. ಗ್ರಾಹಕರು ತಮ್ಮ ಫೈಲ್ ಅನ್ನು ಅಪ್ಲೋಡ್ ಮಾಡಬೇಕು ಮತ್ತು ನಾವು ಅದನ್ನು ಕೆಲವೇ ನಿಮಿಷಗಳಲ್ಲಿ ಪ್ರಿಂಟ್‌ಔಟ್‌ ಹಾಕಿ ನಿಮಗೆ ತಲುಪಿಸುತ್ತೇವೆ. ವಿತರಣೆಯ ನಂತರ ನಾವು ಅಪ್ಲೋಡ್ ಮಾಡಿದ ಫೈಲ್ ಅನ್ನು ಅಳಿಸುತ್ತೇವೆ” ಎಂದು ಹೇಳಿದರು.
Published by:Ashwini Prabhu
First published: