ಷೇರು ಮಾರುಕಟ್ಟೆಗೆ ಸಂಬಂಧಿಸಿದಂತೆ ಕಳೆದ ವಾರ ಅಂದರೆ ಗುರುವಾರವನ್ನು ಬ್ಲ್ಯಾಕ್ ಥರ್ಸ್ಡೇ (Black Thursday) ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಏಕೆಂದರೆ ನಿನ್ನೆ ಮಾರುಕಟ್ಟೆಯಲ್ಲಿ ಕೆಲವು ಅಸಹಜ ಸ್ಥಿತಿಗತಿಗಳಿಂದ ಹೂಡಿಕೆದಾರರು ಹೆಚ್ಚಿನ ಹಣದ ನಷ್ಟ ಅನುಭವಿಸುವಂತಾಯಿತು. ಏನಿಲ್ಲವೆಂದರೂ ಹೂಡಿಕೆದಾರರ ಸುಮಾರು ಏಳು ಲಕ್ಷ ಕೋಟಿ ಮೌಲ್ಯ ನಷ್ಟವಾಗಿರಬಹುದೆಂದು (Investor Wealth) ತಿಳಿದುಬಂದಿದೆ. ಅಷ್ಟೆ ಅಲ್ಲದೆ ಈಗ ಮುಂಬರುವ ದಿನಗಳಲ್ಲಿಯೂ ಸಹ ಮಾರುಕಟ್ಟೆ (Share Market) ಮಂಕಾಗಿರಬಹುದೆಂದು ಅಂದಾಜಿಸಬಹುದಾದ ಸೂಚನೆಗಳು ಸಿಕ್ಕಿವೆ ಎನ್ನಲಾಗುತ್ತಿದೆ. ಸದ್ಯಕ್ಕೆ ವರದಿಯಾಗಿರುವಂತೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಗುರುವಾರದಂದು ಒಟ್ಟು 6.72 ಲಕ್ಷ ಕೋಟಿ ರೂಪಾಯಿಯ ನಷ್ಟ ಅನುಭವಿಸಿರುವುದಾಗಿ ತಿಳಿದುಬಂದಿದೆ.
ಇದಕ್ಕೆ ಪ್ರಮುಖ ಕಾರಣ ಜಾಗತಿಕ ಮಾರುಕಟ್ಟೆಗಳಾದ ಡೌ ಜೋನ್ಸ್ ಮತ್ತು ನಾಸ್ಡಾಕ್ ರಾತ್ರಿಯಿಡೀ 3.57% ಮತ್ತು ಸುಮಾರು 5% ರಷ್ಟು ಕುಸಿದಿರುವುದೇ ಎನ್ನಲಾಗಿದೆ.
ನಿಫ್ಟಿ ಮತ್ತು ಸೆನ್ಸೆಕ್ಸ್ ಕುಸಿತದ ವಿವರ ಇಲ್ಲಿದೆ
ನಿಫ್ಟಿ ಮತ್ತು ಸೆನ್ಸೆಕ್ಸ್ ತಲಾ 2.6% ರಷ್ಟು ಕುಸಿತಗೊಂಡವು, ನಿಫ್ಟಿ 431 ಅಂಕಗಳನ್ನು ಸರಿಪಡಿಸಿಕೊಳ್ಳುತ್ತ ದಿನದ ವ್ಯವಹಾರವನ್ನು 15809.4 ಕ್ಕೆ ಮುಕ್ತಾಯ ಮಾಡಿದರೆ ಸೆನ್ಸೆಕ್ಸ್ 1416.30 ಪಾಯಿಂಟ್‌ಗಳ ಮೂಲಕ ದಿನದ ಮುಕ್ತಾಯವನ್ನು 52792.23 ಕ್ಕೆ ಮಾಡಿತು.
4899.92 ಕೋಟಿ ರೂಪಾಯಿ ಮೌಲ್ಯದ ಷೇರು ಮಾರಾಟ
ನಿಫ್ಟಿಯಲ್ಲಿ ಮೊದಲ 5 ಸೋತ ಟೆಕ್ ಸ್ಟಾಕ್‌ಗಳೆಂದರೆ ವಿಪ್ರೋ , ಹೆಚ್.ಸಿ.ಎಲ್ ಟೆಕ್, ಟೆಕ್ ಎಂ, ಇನ್ಫಿ ಮತ್ತು ಟಿಸಿಎಸ್ ಗಳಾಗಿವೆ. ಇವು ನಾಸ್ಡಾಕ್‌ನಲ್ಲಿ ತೀವ್ರ ಎಂದು ಹೇಳಬಹುದಾದ 5.4-6.25% ರಷ್ಟು ಕುಸಿತಕಂಡವು. ಈ ಮಧ್ಯೆ 4899.92 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ ಎಫ್‌ಐಐಗಳು ಮಾರಾಟದ ನೇತೃತ್ವ ವಹಿಸಿದ್ದವು.
ನಿಫ್ಟಿ ಮಿಡ್‌ಕ್ಯಾಪ್ 100 ಸುಮಾರು 3% ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ 100 ಸುಮಾರು 2.7% ರಷ್ಟು ಕುಸಿದು ಕ್ರಮವಾಗಿ 27271.9 ಮತ್ತು 8912.3 ಪಾಯಿಂಟ್‌ಗಳಿಗೆ ಬಂದಾಗ ಚಿಲ್ಲರೆ ಹೂಡಿಕೆದಾರರು ಪ್ಯಾನಿಕ್ ಬಟನ್ ಒತ್ತಿದ ಕಾರಣ ರೂ. 3225.54 ಕೋಟಿ ಮೌಲ್ಯ ಖರೀದಿಯ ಡಿಐಐನಿಂದಲೂ ಸಹ ಕುಸಿತವನ್ನು ತಡೆಯಲು ಸಾಧ್ಯವಾಗಲಿಲ್ಲ.
ಈ ನಷ್ಟಕ್ಕೆ ಏನು ಕಾರಣ?
ಹೂಡಿಕೆದಾರರಿಗೆ ಈ ರೀತಿ ನಷ್ಟ ಉಂಟಾಗಲು ಮಿಡ್‌ಕ್ಯಾಪ್ ಮತ್ತು ಸ್ಮಾಲ್-ಕ್ಯಾಪ್ ಸೂಚ್ಯಂಕಗಳು ಪ್ರಮುಖ ಪಾತ್ರವಹಿಸಿರುವುದು ಕಂಡುಬಂದಿದೆ. ಏಕೆಂದರೆ, ಈ ಸೂಚ್ಯಂಕಗಳು ಮಂಚೂಣಿಯಲ್ಲಿರುವ ಸೂಚ್ಯಂಕಗಳು ಕಳಪೆ ಪ್ರದರ್ಶನ ತೋರುವಂತೆ ಮಾಡುವುದರ ಮೂಲಕ ಈ ಕೌಂಟರ್‌ಗಳಲ್ಲಿ ಒಲವು ತೋರಿ ಹೂಡಿಕೆ ಮಾಡಿದ್ದ ಚಿಲ್ಲರೆ ವ್ಯಾಪಾರಿಗಳಿಗೆ ಸಾಕಷ್ಟು ನಷ್ಟ ಉಂಟಾಗುವಂತಾಯಿತು ಎನ್ನಲಾಗಿದೆ.
ಮುಂದಿನ ದಿನಗಳಲ್ಲಿ ಏನಾಗಲಿದೆ?
ಈ ಹಿಂದೆ ಸಿಗುತ್ತಿದ್ದ ಬೆಂಬಲಗಳು ಈಗ ತದ್ವಿರುದ್ಧವಾಗಿ ಪ್ರತಿರೋಧಗಳನ್ನು ಒಡ್ಡುತ್ತಿರುವಂತಹ ಸ್ಥಿತಿ ನಿರ್ಮಾಣವಾದಂತಾಗಿದ್ದು ಮಾರುಕಟ್ಟೆಯ ದೃಷ್ಟಿಕೋನವನ್ನು ಮುಂದಿನ ದಿನಗಳಲ್ಲಿ ಅಂದಾಜಿಸಿ ನೋಡಿದರೆ ಮಂಕಾಗಿ ಕಂಡುಬರುವ ಸೂಚನೆಗಳು ಸಿಗುತ್ತಿವೆ ಎನ್ನಲಾಗಿದೆ.
ಇದನ್ನೂ ಓದಿ: Shark Tank India: ಶಾರ್ಕ್ ಟ್ಯಾಂಕ್ ಇಂಡಿಯಾದಿಂದ ಸ್ಟಾರ್ಟ್ಅಪ್ಗಳ ಆದಾಯದಲ್ಲಿ ಹೆಚ್ಚಳ! ಈ ಅದ್ಭುತ ಸಾಧ್ಯವಾಗಿದ್ದು ಹೇಗೆ?
"ನಿಫ್ಟಿ ಪ್ರಾರಂಭದ ಅಂತರದ ಹಿನ್ನಲೆಯಲ್ಲಿ ಹಿಂದಿನ ಸ್ವಿಂಗ್ನಿಂದ ಕೆಳಕ್ಕೆ ಕುಸಿಯಿತು. ನಿಫ್ಟಿ 16000 ಅಂಕಗಳಿಗಿಂತ ಕಡಿಮೆ ಪ್ರಮಾಣಕ್ಕೆ ಕುಸಿದ ಕಾರಣ ಸದ್ಯದ ಟ್ರೆಂಡ್ ಋಣಾತ್ಮಕವಾಗಿದೆ" ಎಂದು ಎಲ್‍ಕೆಪಿ ಸೆಕ್ಯೂರಿಟೀಸ್ ಸಂಸ್ಥೆಯ ಹಿರಿಯ ತಾಂತ್ರಿಕ ವಿಶ್ಲೇಷಕರಾದ ರೂಪಕ್ ಡಿ ಹೇಳಿದರು. "ತಕ್ಷಣಕ್ಕೆ ಬೆಂಬಲವು 15671 ಕ್ಕೆ ಕಂಡುಬರುತ್ತಿದ್ದು 15671 ಕ್ಕಿಂತ ಕಡಿಮೆ ಅಂದರೆ 15400 ಕಡೆಗೆ ಹೋಗುವಾಗ ಮತ್ತಷ್ಟು ತಿದ್ದುಪಡಿ ಸಾಧ್ಯವಾಗಬಹುದೆಂದು ತೋರುತ್ತಿದೆ. ಸುರಕ್ಷತೆಯ ಆಯಾಮದಿಂದ ನೋಡಿದಾಗ, ಈ ನಿಟ್ಟಿನಲ್ಲಿ ರೆಸಿಸ್ಟನ್ಸ್ ಅನ್ನು 16000 ನಲ್ಲಿ ಇರಿಸಬಹುದಾಗಿದೆ."
ಇಂಡಿಯಾ ಚಾರ್ಟ್ಸ್‌ನ ಸಂಸ್ಥಾಪಕರಾದ ಎಸ್‌ಕೆ ಶ್ರೀವಾಸ್ತವ ಅವರಂತಹ ವಿಶ್ಲೇಷಕರು, ನಿಫ್ಟಿ 15200 ಕ್ಕೆ ಇಳಿದು ಇದು ಸುಮಾರು 4% ನಷ್ಟವನ್ನು ಸೂಚಿಸಬಹುದು ಎಂದು ನಿರೀಕ್ಷಿಸುತ್ತಾರೆ. ಓಟ್ಟಿನಲ್ಲಿ ಷೇರು ಮಾರುಕಟ್ಟೆಯಲ್ಲಿ ಇದೊಂದು ನಕಾರಾತ್ಮಕ ಭಾವನೆಯ ಸೃಷ್ಟಿಗೆ ಕಾರಣವಾಗಿದೆ ಎಂದು ಹೇಳಬಹುದು.
ಇದನ್ನೂ ಓದಿ: Home Loan Interest Rates: ಮನೆ ಕಟ್ಟಲು ಸಾಲ ಬೇಕೇ? ವಿವಿಧ ಬ್ಯಾಂಕ್ಗಳ ಬಡ್ಡಿದರ ಚೆಕ್ ಮಾಡಿ
ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಇಂತಹ ನಕಾರಾತ್ಮಕತೆ ಅಥವಾ ನಿರಾಶಾವಾದಿತನದ ಭಾವನೆ ಉಂಟಾಗಲು ಅಲ್ಲಿ ನಡೆಯುವ ಕೆಲವು ಅಸಹಜ ಏರಿಕೆ/ಇಳಿಕೆಗಳು ಕಾರಣವಾಗಬಹುದು. ಈ ನಿರ್ದಿಷ್ಟ ಉದಾಹರಣೆಯಲ್ಲಿ ಇಂಡಿಯಾ ವಿಕ್ಸ್ 10% ರಷ್ಟು ಏರಿಕೆಯನ್ನು ಪ್ರತಿಫಲಿಸುವ ಮೂಲಕ 24.56 ಕ್ಕೆ ತಲುಪಿತು ಹಾಗೂ ಮಾರುಕಟ್ಟೆಯಲ್ಲಿ 20 ಕ್ಕಿಂತ ಹೆಚ್ಚಿನ ತಲುಪುವಿಕೆಯು ಸಾಮಾನ್ಯವಾಗಿ ನಕಾರಾತ್ಮಕ ಮಾರುಕಟ್ಟೆ ಭಾವನೆಯನ್ನು ಸಂಕೇತಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ