Bitcoin Legal Tender: ಬಿಟ್​ಕಾಯಿನ್​ ಲೀಗಲ್ ಟೆಂಡರ್! ಕಾನೂನು ಮುರಿದರೆ 20 ವರ್ಷ ಜೈಲು, 12.5 ಕೋಟಿ ದಂಡ!

ಹೊಸ ಕ್ರಿಪ್ಟೋ ಕಾನೂನು ಕಾನೂನುಗಳನ್ನು ಉಲ್ಲಂಘಿಸುವ ಅಪರಾಧಿಗಳಿಗೆ ಸಹ ಶಿಕ್ಷೆಗಳನ್ನು ಘೋಷಣೆ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬಿಟ್​ಕಾಯಿನ್ ಅನ್ನು ಅಧಿಕೃತಗೊಳಿಸುವತ್ತ ಮೊದಲ ಹೆಜ್ಜೆಯನ್ನು ಆಫ್ರಿಕಾದ ಖಂಡ ಇಟ್ಟಿದೆ. ಮಧ್ಯ ಆಫ್ರಿಕನ್ ರಿಪಬ್ಲಿಕ್ (Central African Republic)ಬಿಟ್ ಕಾಯಿನ್ ಕುರಿತು ಕಾನೂನು ಟೆಂಡರ್ ಅನ್ನು ಘೋಷಿಸಿದ ಮೊದಲ ಆಫ್ರಿಕನ್ ದೇಶವಾಗಿದೆ. ಹಣಕಾಸು ಮತ್ತು ಬಜೆಟ್ ಸಚಿವಾಲಯ ಮತ್ತು ಡಿಜಿಟಲ್ ಆರ್ಥಿಕತೆ, ಅಂಚೆ ಸೇವೆಗಳು ಮತ್ತು ದೂರಸಂಪರ್ಕ ಸಚಿವಾಲಯವು ಬಿಟ್​ಕಾಯಿನ್ ( Legal Bit Coin) ಅನ್ನು ಮಧ್ಯ ಆಫ್ರಿಕಾದ ಗಣರಾಜ್ಯದಲ್ಲಿ ಸ್ವೀಕಾರಾರ್ಹ ಕರೆನ್ಸಿ ಎಂದು ಗುರುತಿಸುವ ಜಂಟಿ ದಾಖಲೆಯನ್ನು ಬಿಡುಗಡೆಗೊಳಿಸಿದೆ. ಈ ಡಾಕ್ಯುಮೆಂಟ್ ದೇಶದಲ್ಲಿ ಕ್ರಿಪ್ಟೋ ( Legal Cryptocurrency)  ಅಳವಡಿಕೆಗೆ ಕಾನೂನು ಚೌಕಟ್ಟನ್ನು ವಿವರಿಸಿದೆ. ಕ್ರಿಪ್ಟೋಕರೆನ್ಸಿ ಕುರಿತು ಈ ಕಾನೂನಿನಿಂದ ದೇಶಕ್ಕೆ ಲಾಭವಾಗಬಹುದು ಎಂದು ಮಧ್ಯ ಆಫ್ರಿಕನ್ ರಿಪಬ್ಲಿಕ್ ದೇಶದ ವಿರೋಧ ಪಕ್ಷಗಳೂ ಸಹ ಬೆಂಬಲ ಘೋಷಿಸಿವೆ.

  ಹೊಸ ಬಿಟ್​ಕಾಯಿನ್ ಕಾನೂನು ಮಧ್ಯ ಆಫ್ರಿಕಾದ ಗಣರಾಜ್ಯದ ಆರ್ಥಿಕ ಚೇತರಿಕೆಗೆ ಸಹಾಯ ಮಾಡುತ್ತದೆ ಎಂದು ರಾಷ್ಟ್ರೀಯ ಅಸೆಂಬ್ಲಿ ನಂಬಿರುವುದಾಗಿ ತಿಳಿಸಿದೆ. ಫ್ರಾನ್ಸ್ನ ಸರ್ಕಾರಿ ಸ್ವಾಮ್ಯದ ಅಂತರಾಷ್ಟ್ರೀಯ ರೇಡಿಯೊ ಬ್ರಾಡ್​ಕಾಸ್ಟರ್ RFI ಯ ವರದಿಯ ಪ್ರಕಾರ ಮಧ್ಯ ಆಫ್ರಿಕಾದ ಗಣರಾಜ್ಯದಲ್ಲಿ ಬಿಟ್​ಕಾಯಿನ್ ಅನ್ನು ಕಾನೂನುಬದ್ಧ ಟೆಂಡರ್ ಮಾಡುವ ಕ್ರಮವು ರಾಷ್ಟ್ರೀಯ ಅಸೆಂಬ್ಲಿಯಿಂದ ಬಂದಿದ್ದು, ಅದು ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿತು.

  ಯಾರು ಘೋಷಿಸಿದರು?
  ಮಧ್ಯ ಆಫ್ರಿಕನ್ ರಿಪಬ್ಲಿಕ್ ದೇಶದ ಹಣಕಾಸು ಮತ್ತು ಬಜೆಟ್ ಮಂತ್ರಿ ಕ್ಯಾಲಿಕ್ಸ್ಟೆ ನ್ಗಾನೊಂಗೊ ಮತ್ತು ಡಿಜಿಟಲ್ ಎಕಾನಮಿ ಮಂತ್ರಿ ಗೌರ್ನಾ ಜಾಕೊ ಅವರು ಬಿಟ್​ಕಾಯಿನ್ ಕಾನೂನನ್ನೂ ಸಂಸತ್​ಗೆ ಪರಿಚಯಿಸಿದರು. ಮಧ್ಯ ಆಫ್ರಿಕಾದ ಗಣರಾಜ್ಯದಲ್ಲಿ ಬಿಟ್​ಕಾಯಿನ್ ಮತ್ತು ಕ್ರಿಪ್ಟೋ ನಿಯಂತ್ರಣವನ್ನು ನಿಯಂತ್ರಿಸುವ ಶಾಸನಕ್ಕೂ ಇದೇ ಸಂದರ್ಭದಲ್ಲಿ ಮಧ್ಯ ಆಫ್ರಿಕನ್ ರಿಪಬ್ಲಿಕ್ ದೇಶದಲ್ಲಿ ಪರಿಚಯಿಸಲಾಯಿತು.

  ಇದನ್ನೂ ಓದಿ: Central Government Scheme: ಕೇಂದ್ರ ಸರ್ಕಾರದ ಈ ಯೋಜನೆಗೆ ನೀವೂ ನೋಂದಣಿ ಮಾಡಿಕೊಂಡ್ರಾ?

  ಹೊಸ ಕಾನೂನು ವರದಿಯ ಪ್ರಕಾರ ವ್ಯಾಪಾರಿಗಳು ಮತ್ತು ವ್ಯವಹಾರಗಳಿಗೆ ಕ್ರಿಪ್ಟೋ ಪಾವತಿಗಳನ್ನು ಮಾಡಲು ಮತ್ತು ಅಧಿಕೃತ ಘಟಕಗಳ ಮೂಲಕ ಕ್ರಿಪ್ಟೋದಲ್ಲಿ ತೆರಿಗೆ ಪಾವತಿಗಳಿಗೆ ದಾರಿ ಮಾಡಿಕೊಡುತ್ತದೆ.

  ಭಯಂಕರ ಶಿಕ್ಷೆ
  ಹೊಸ ಕ್ರಿಪ್ಟೋ ಕಾನೂನು ಕಾನೂನುಗಳನ್ನು ಉಲ್ಲಂಘಿಸುವ ಅಪರಾಧಿಗಳಿಗೆ ಸಹ ಶಿಕ್ಷೆಗಳನ್ನು ಘೋಷಣೆ ಮಾಡಲಾಗಿದೆ. CoinTribune ನ ಪ್ರತ್ಯೇಕ ವರದಿಯ ಪ್ರಕಾರ ಅಪರಾಧಿಗಳಿಗೆ 20 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.  100,000,000 ರಿಂದ 1,000,000,000 ಸೆಂಟ್ರಲ್ ಆಫ್ರಿಕನ್ CFA ಫ್ರಾಂಕ್​ಗಳ (ಸುಮಾರು ರೂ. 1.25 ಕೋಟಿಯಿಂದ 12.5 ಕೋಟಿ) ದಂಡ ವಿಧಿಸಬಹುದು.

  ಎಲ್ ಸಾಲ್ವಡಾರ್ ಕಥೆ ಗೊತ್ತೇ ನಿಮಗೆ?
  ಸೆಪ್ಟೆಂಬರ್ 2021 ರಲ್ಲಿ, ಎಲ್ ಸಾಲ್ವಡಾರ್ ಬಿಟ್​ಕಾಯಿನ್ ಅನ್ನು ಕಾನೂನು ಟೆಂಡರ್ ಆಗಿ ಘೋಷಿಸಿದ ವಿಶ್ವದ ಮೊದಲ ದೇಶವಾಯಿತು. ಎಲ್ ಸಾಲ್ವಡಾರ್ ಅಧ್ಯಕ್ಷ ನಯೀಬ್ ಬುಕೆಲೆ ನವೆಂಬರ್ನಲ್ಲಿ ದೇಶವು "ಬಿಟ್​ಕಾಯಿನ್ ಸಿಟಿ" ಅನ್ನು ಅಭಿವೃದ್ಧಿಪಡಿಸಲು ಯೋಜಿಸುತ್ತಿದೆ ಎಂದು ಹೇಳಿದರು.

  ಇದನ್ನೂ ಓದಿ: Cryptocurrency After Death: ಸಾವಿನ ನಂತರ ನಮ್ಮ ಹೆಸರಲ್ಲಿರುವ ಕ್ರಿಪ್ಟೋ ಕರೆನ್ಸಿ, ಎನ್‍ಎಫ್‍ಟಿ ಏನಾಗುತ್ತೆ?

  ಪ್ರೊ-ಬಿಟ್​ಕಾಯಿನ್ ಅಧ್ಯಕ್ಷರ ಪ್ರಕಾರ, ಮೊದಲ ಐದು ವರ್ಷಗಳಲ್ಲಿ 6.5 ಪ್ರತಿಶತ ಕೂಪನ್ ದರದೊಂದಿಗೆ ಬಿಟ್​ಕಾಯಿನ್ ಬ್ರಾಂಡ್​ಗಳ ಮಾರಾಟವು ಬಿಟ್​ಕಾಯಿನ್ ಸಿಟಿಯ ಅಭಿವೃದ್ಧಿಗೆ ಹಣವನ್ನು ನೀಡುತ್ತದೆ.
  Published by:guruganesh bhat
  First published: