Biggest Crypto Heists: 450 ಕೋಟಿಗೂ ಹೆಚ್ಚು ಮೌಲ್ಯದ ಕ್ರಿಪ್ಟೋಕರೆನ್ಸಿ ಕಳುವು! 6 ದಿನ ಆದರೂ ವಿಷಯ ಗಪ್​ಚುಪ್!

ಏನಿಲ್ಲವೆಂದರೂ ಈ ಕಳ್ಳತನದ ಮೂಲಕ ಚಾಲಾಕಿ ಸೈಬರ್ ಕಳ್ಳರು 600 ಮಿಲಿಯನ್ ಡಾಲರ್ ಮೊತ್ತವನ್ನು ಎಗರಿಸಿದ್ದಾರೆನ್ನಲಾಗಿದೆ.

ಕ್ರಿಪ್ಟೋಕರೆನ್ಸಿ

ಕ್ರಿಪ್ಟೋಕರೆನ್ಸಿ

  • Share this:
ಇಂದು ಡಿಜಿಟಲ್ ಹಾಗೂ ಸಾಫ್ಟ್‌ವೇರ್ ತಂತ್ರಜ್ಞಾನ ಹಿಂದೆಂದಿಗಿಂತಲೂ ಸಿಕ್ಕಾಪಟ್ಟೆ ಮುಂದುವರೆದಿದೆ. ಈಗೇನಿದ್ದರೂ ಕ್ರಿಪ್ಟೋ ಕರೆನ್ಸಿಗಳ ಕಾಲಮಾನ. ಈ ಕ್ರಿಪ್ಟೋಕರೆನ್ಸಿಗಳನ್ನು (Crypto Currency) ಸಾಮಾನ್ಯವಾಗಿ ಒಂದು ವಿಶೇಷವಾದ ತಂತ್ರಜ್ಞಾನ ಬಳಸಿ ನಿಯಂತ್ರಿಸಲಾಗುತ್ತದೆ. ಇದನ್ನು ಕೋಲ್ಡ್ ಚೈನ್ ತಂತ್ರಜ್ಞಾನ ಎಂದು ಕರೆಯಲಾಗುತ್ತದೆ. ಇದು ಹಲವು ಪದರುಗಳ ಸುರಕ್ಷತಾ ಕವಚವನ್ನು ಹೊಂದಿರುತ್ತದೆ. ಈಗ ಇನ್ನೊಂದು ಜನಪ್ರಿಯವಾಗುತ್ತಿರುವ NFT ಟೋಕನ್‌ಗಳೂ ಸಹ ಈ ತಂತ್ರಜ್ಞಾನದ ಅಡಿಯಲ್ಲೇ ಬರುತ್ತವೆ. ಇದು ಅತ್ಯಂತ ಸುರಕ್ಷಿತ ಎನ್ನಲಾಗಿದ್ದರೂ ಇತ್ತೀಚೆಗೆ ನಡೆದ ಒಂದು ಘಟನೆಯು (Biggest Crypto Heists) ಈ ರೀತಿಯ ಸುರಕ್ಷತೆ (Cyber Security) ನಿಜಕ್ಕೂ ಎಷ್ಟು ಸುರಕ್ಷಿತವಾಗಿದೆ (Hack) ಎಂಬ ಪ್ರಶ್ನೆ ಮೂಡಿಸಿದೆ.

ಹೌದು, ಮಾರ್ಚ್ 23 ರಂದು ಕ್ರಿಪ್ಟೋಗೆ ಸಂಬಂಧಿಸಿದಂತೆ ಒಂದು ಸೈಬರ್ ಕಳ್ಳತನ ನಡೆದಿದ್ದು, ಮಂಗಳವಾರವಷ್ಟೇ ಆ ಬಗ್ಗೆ ತಿಳಿದುಬಂದಿದೆ. ಏನಿಲ್ಲವೆಂದರೂ ಈ ಕಳ್ಳತನದ ಮೂಲಕ ಚಾಲಾಕಿ ಸೈಬರ್ ಕಳ್ಳರು 600 ಮಿಲಿಯನ್ ಡಾಲರ್ ಮೊತ್ತವನ್ನು ಎಗರಿಸಿದ್ದಾರೆನ್ನಲಾಗಿದೆ. ಭಾರತೀಯ ಕರೆನ್ಸಿಯಲ್ಲಿ ಈ ಮೊತ್ತ 450 ಕೋಟಿಗೂ ಅಧಿಕವಾಗಿದೆ ಎಂದರೆ ಒಂದು ಕ್ಷಣ ಯಾರಿಗೇ ಆಗಲಿ ತಲೆ ಸುತ್ತದೇ ಇರಲಾರದು. ಇದನ್ನು ಕ್ರಿಪ್ಟೋದ ಇಲ್ಲಿಯವರೆಗಿನ ಅತಿ ದೊಡ್ಡ ಕಳ್ಳತನ ಎಂತಲೂ ಹೇಳಲಾಗುತ್ತಿದೆ.

ಈಥರ್ಸ್ ಹಾಗೂ USDC ಟೋಕನ್​​ಗಳಿವೆ!
ಅಸಲಿಗೆ ವಿಷಯ ಏನೆಂದರೆ, ನೋಡ್ಸ್ ಎಂಬ ವಿಶೇಷವಾದ ಕಂಪ್ಯೂಟರ್‌ಗಳನ್ನು ಆಪರೇಟ್ ಮಾಡುವ ಎಕ್ಸಿ ಇನ್ಫಿನಿಟಿ ಮತ್ತು ಎಕ್ಸಿ ಡಿಎಒ, ಒಂದು ರೀತಿಯ ಬ್ರಿಡ್ಜ್ ಅನ್ನು ನಿರ್ವಹಿಸುತ್ತಿದ್ದು ಅದಕ್ಕೆ ಬೆಂಬಲ ನೀಡುತ್ತವೆ. ಈ ಬ್ರಿಡ್ಜ್ ಮೂಲಕ ಬಳಕೆದಾರರು ಟೋಕನ್‌ಗಳನ್ನು ಬೇರೆ ರೂಪಕ್ಕೆ ಪರಿವರ್ತಿಸಿ ಮತ್ತೊಂದು ನೆಟ್ವರ್ಕ್‌ಗಳಲ್ಲಿ ಅವುಗಳನ್ನು ಬಳಸಬಹುದಾಗಿದೆ.

ಈ ಬ್ರಿಡ್ಜ್ ಮೂರನೇ ಪಾರ್ಟಿಯಾಗಿದ್ದು ಇದನ್ನು ರೋನಿನ್ ಬ್ರಿಡ್ಜ್ ಎಂದು ಕರೆಯಲಾಗುತ್ತದೆ. ಇದು ಸಹ ಬಾಲ್ಕ್ ಚೈನ್ ತಂತ್ರಜ್ಞಾನ ಒಳಗೊಂಡಿದ್ದು ಇದರಲ್ಲಿ ಈಥರ್ಸ್ ಹಾಗೂ USDC ಟೋಕನ್‌ಗಳಿದ್ದವು. ಇವು ಒಂದು ಬಗೆಯ ಡಿಜಿಟಲ್ ಕರೆನ್ಸಿಗಳಾಗಿದ್ದು ಇವನ್ನು ನೈಜ ನಗದು ಪಡೆಯಲು ಬಳಸಬಹುದು.

ಏನಿಲ್ಲವೆಂದರೂ 600 ಮಿಲಿಯನ್ ಯುಎಸ್ ಡಾಲರ್
ಈ ಕಳ್ಳತನದಲ್ಲಿ ಸೈಬರ್ ಕಳ್ಳರು ಇಲ್ಲಿ ಹೇಳಲಾಗಿರುವ ರೋನಿನ್ ಬ್ರಿಡ್ಜ್ ಮೇಲೆಯೇ ದಾಳಿ ಮಾಡಿದ್ದು ಅಲ್ಲಿಂದ 173,600 ಈಥರ್ಸ್ ಹಾಗೂ 25.5 ಮಿಲಿಯನ್ USDC ಟೋಕನ್‌ಗಳನ್ನು ಕದ್ದಿದ್ದಾರೆನ್ನಲಾಗಿದೆ. ಇವುಗಳ ನಗದು ಮೊತ್ತ ಏನಿಲ್ಲವೆಂದರೂ 600 ಮಿಲಿಯನ್ ಯುಎಸ್ ಡಾಲರ್ ಆಗಿರುವುದಾಗಿ ತಿಳಿದುಬಂದಿದೆ. ಈಗಾಗಲೇ ಬ್ಲಾಕ್‌ಚೈನ್‌ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಇದರಲ್ಲಿ ಬಳಸಲಾಗುವ ಬ್ರಿಡ್ಜ್‌ಗಳು ಸಮಸ್ಯೆಗಳನ್ನು ಹೊಂದಿರುತ್ತವೆ ಎಂಬ ದೂರಿದ್ದು ಈಗ ನಡೆದಿರುವ ಪ್ರಕರಣ ಅದನ್ನು ಪುಷ್ಟಿಕರಿಸಿದಂತಾಗಿದೆ.

6 ದಿನ ಆದರೂ ಕಳುವಾಗಿದ್ದೇ ತಿಳಿದಿಲ್ಲ!
ಈ ಕಳ್ಳತನದ ನಡೆದು 6 ದಿನಗಳು ಗತಿಸಿದರೂ ಆ ಬಗ್ಗೆ ಏನೂ ಗೊತ್ತೇ ಆಗಿರುವುದಕ್ಕೆ ಆತಂಕ ವ್ಯಕ್ತಪಡಿಸುವ ಸೆಕ್ಯೂರಿಟೀಸ್ ಕ್ಯಾಪಿಟಲ್ ಸಂಸ್ಥೆಯ ಮುಖ್ಯಸ್ಥರಾದ ಅಲ್ಫ್ರೆಡ್ ಅವರು ಈ ರೀತಿ ಅನೈತಿಕವಾದ ವರ್ಗಾವಣೆಯಾಗದಂತೆ ಹಾಗೂ ಒಂದು ವೇಳೆ ಅದು ಗತಿಸಿದರೆ ಅದಕ್ಕೆ ಸಂಬಂಧಿಸಿದಂತೆ ಕೂಡಲೇ ಎಚ್ಚರಿಕೆಯ ಸಂದೇಶ ಬರುವಂತೆ ವ್ಯವಸ್ಥೆಯೊಂದನ್ನು ಅನುಷ್ಠಾನಗೊಳಿಸಬೇಕಿರುವುದು ಬಹು ಮಹತ್ವವಾಗಿದೆ ಎಂದು ನುಡಿಯುತ್ತಾರೆ.

ರೋನಿನ್ ಬ್ಲಾಕ್‌ಚೈನ್‌ನಲ್ಲಿ ರೋನ್ ಎಂಬ ಟೋಕನ್ ಅನ್ನು ಬಳಸಲಾಗುತ್ತದೆ. ಷೇರು ಮಾರುಕಟ್ಟೆಯ ರೀತಿಯಲ್ಲೇ ಈ ಟೋಕನ್‌ಗಳಿಗೂ ಇಂತಿಷ್ಟು ಬೆಲೆ ಎಂದಿರುತ್ತದೆ. ಆದರೆ ಈಗ ಹೊರಗೆ ಬಂದಿರುವ ಕಳ್ಳತನದ ಪ್ರಕರಣದಿಂದಾಗಿ ಈಗ ರೋನ್ ಬೆಲೆಯಲ್ಲಿ ಶೇ. 22 ರಷ್ಟು ಕುಸಿತ ಉಂಟಾಗಿರುವುದಾಗಿ ತಿಳಿದುಬಂದಿದೆ. ಅಷ್ಟೇ ಅಲ್ಲದೆ, ಎಕ್ಸಿ ಇನ್ಫಿನಿಟಿ ಅವರ AXS ಎಂಬ ಟೋಕನ್ ಬೆಲೆಯಲ್ಲಿ 11% ರಷ್ಟು ಕುಸಿತ ಉಂಟಾಗಿರುವುದಾಗಿ ಕಾಯಿನ್ ಮಾರ್ಕೆಟ್ ಕ್ಯಾಪ್ ಎಂಬ ಸಂಸ್ಥೆ ಹೇಳಿದೆ.

ಇದನ್ನೂ ಓದಿ: Indian Economy: 7-8 ವರ್ಷಗಳಲ್ಲಿ ಭಾರತದ ಆರ್ಥಿಕತೆ ದ್ವಿಗುಣ! ಇದು ಓದಲೇಬೇಕಾದ ಒಳ್ಳೇ ಸುದ್ದಿ

ಸದ್ಯ, ತನ್ನ ಬಹು ಮೊತ್ತದ ಟೋಕನ್ ಕಳೆದುಕೊಂಡಿರುವ ರೋನಿನ್ ಈ ಕ್ಷೇತ್ರದಲ್ಲಿರುವ ಎರಡು ದೊಡ್ಡ ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜರ್‌ಗಳೊಡನೆ ಅದು ಸಂಪರ್ಕದಲ್ಲಿರುವುದಾಗಿ ಹೇಳಿದ್ದು ತನ್ನ ಟೋಕನ್‌ಗಳು ಎಲ್ಲಿ ವರ್ಗಾವಣೆಯಾಗಿವೆ ಎಂಬುದನ್ನು ಪತ್ತೆ ಹಚ್ಚಲು ಬ್ಲಾಕ್‌ಚೈನ್‌ ವಿಶ್ಲೇಷಕ ಸಂಸ್ಥೆಯಾದ ಚೈನ್ ಅನಾಲಿಸಿಸ್ ಅವರೊಂದಿಗೂ ಸಂಪರ್ಕದಲ್ಲಿರುವುದಾಗಿ ಹೇಳಿದೆ. ಅಲ್ಲದೆ, ಈ ಬಗ್ಗೆ ಮುಂದೆ ಕಾನೂನಾತ್ಮಕವಾಗಿ ಯಾವ ಕ್ರಮ ಕೈಗೊಳ್ಳಬಹುದೆಂಬ ವಿಚಾರದಲ್ಲಿ ಕಾನೂನು ಪ್ರಾಧಿಕಾರದ ಸಂಪರ್ಕದಲ್ಲೂ ರೋನಿನ್ ಇದೆ ಎನ್ನಲಾಗಿದೆ.

ಈ ಹಿಂದೆಯೂ ಅಂದರೆ ಕಳೆದ ಫೆಬ್ರುವರಿಯಲ್ಲಿ ವರ್ಮ್ ಹೋಲ್ ಬ್ರಿಡ್ಜ್ ಮೇಲೆ ಇದೇ ರೀತಿಯ ಆಕ್ರಮಣ ನಡೆದಿದ್ದು ಸುಮಾರು 300 ಮಿಲಿಯನ್ ಯುಎಸ್ ಡಾಲರ್ ಮೊತ್ತವನ್ನು ಎಗರಿಸಲಾಗಿತ್ತೆಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಆದರೆ ಅದರ ಸ್ಪಾನ್ಸರ್ ಆಗಿದ್ದ ಜಂಪ್ ಕ್ರಿಪ್ಟೋ ಅದರ ಬಹುಭಾಗ ಹಣವನ್ನು ಮರುಪಾವತಿಸಿತ್ತು.

ಇದನ್ನೂ ಓದಿ: New IT Rules: ಏಪ್ರಿಲ್ 1ರಿಂದ ಏನೆಲ್ಲ ಬದಲಾವಣೆ ಆಗಲಿದೆ? ಬೇಗನೆ ತಿಳಿಯಿರಿ

ಆದರೆ, ಈ ಪ್ರಕರಣದಲ್ಲಿ ವ್ಯಾಲಿಡೇಟರ್ ನೋಡ್ ಅನ್ನು ಬ್ರೀಚ್ ಮಾಡಿ ಬ್ರಿಡ್ಜ್ ಅನ್ನು ಹ್ಯಾಕ್ ಮಾಡಲಾಗಿದೆ ಎನ್ನಲಾಗಿದೆ. ಈಗ ಮುಂದೆ ಈ ಸಂಸ್ಥೆಯನ್ನು ಯಾರಾದರೂ ಬೇಲ್‌ ಔಟ್ ಮಾಡಬಲ್ಲರೆ ಎಂಬುದನ್ನು ಕಾದು ನೋಡಬೇಕಾಗಿದೆ.
Published by:guruganesh bhat
First published: