Swiggy - Zomato ಬಿಡಿ, ಈಗ ರೆಸ್ಟೊರೆಂಟ್​ಗಳೇ ಭಾರೀ ಡಿಸ್ಕೌಂಟ್ ಕೊಡ್ತಿವೆ!

ಆಧುನಿಕ ಕಾಲದಲ್ಲಿ ಮನುಷ್ಯನ ಆಹಾರ ಸೇವನೆ ನೂರಕ್ಕೆ ತೊಂಬತ್ತರಷ್ಟು ಹೊರಗಡೆ ತಯಾರಾಗುವ ಆಹಾರವನ್ನೆ ಅವಲಂಬಿಸಿರುತ್ತದೆ. ಇದರ ಅಗತ್ಯಕ್ಕೆ ತಕ್ಕಂತೆ ರೆಸ್ಟೊರೆಂಟ್‌ಗಳು, ಹೋಟೆಲ್‌ಗಳು ತಮ್ಮ ಯೋಜನೆಯನ್ನು ಆಗಾಗ ಬದಲಾಯಿಸುತ್ತಲೇ ಇರುತ್ತವೆ. ಈಗ ರೆಸ್ಟೋರೆಂಟ್‌ಗಳು ಯಾವ ಯೋಜನೆ ತಂದಿವೆ, ಎಷ್ಟು ಆಫರ್‌ ನೀಡುತ್ತಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಆಹಾರ (Food) ಸೇವನೆ ಪ್ರತಿ ಮನುಷ್ಯನ ಜೀವನದಲ್ಲಿ ದಿನನಿತ್ಯದ ಅತ್ಯಂತ ಮುಖ್ಯ ಕೆಲಸಗಳಲ್ಲಿ ಒಂದಾಗಿದೆ. ಆದರೆ ಈ ಆಧುನಿಕ ಕಾಲದಲ್ಲಿ ಮನುಷ್ಯನ ಆಹಾರ ಸೇವನೆ ನೂರಕ್ಕೆ ತೊಂಬತ್ತರಷ್ಟು ಹೊರಗಡೆ ತಯಾರಾಗುವ ಆಹಾರವನ್ನೆ ಅವಲಂಬಿಸಿರುತ್ತದೆ. ಇದರ ಅಗತ್ಯಕ್ಕೆ ತಕ್ಕಂತೆ ರೆಸ್ಟೊರೆಂಟ್‌ಗಳು (Restaurants), ಹೋಟೆಲ್‌ಗಳು (Hotels) ತಮ್ಮ ಯೋಜನೆಯನ್ನು ಆಗಾಗ ಬದಲಾಯಿಸುತ್ತಲೇ ಇರುತ್ತವೆ. ಈಗ ರೆಸ್ಟೋರೆಂಟ್‌ಗಳು ಯಾವ ಯೋಜನೆ ತಂದಿವೆ, ಎಷ್ಟು ಆಫರ್‌ (Offer) ನೀಡುತ್ತಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಸ್ವಿಗ್ಗಿ (Swiggy) ಮತ್ತು ಜೊಮ್ಯಾಟೊ (Zomato) ಪುಡ್‌ ಆ್ಯಪ್‌ಗಳ ರಿಯಾಯಿತಿಗಳಿಗೆ ಹೋಲಿಸಿದರೆ ದೊಡ್ಡ ರೆಸ್ಟೊರೆಂಟ್‌ಗಳು ತಮ್ಮದೇ ಆ್ಯಪ್‌ಗಳಲ್ಲಿ ರಿಯಾಯಿತಿಗಳು ಮತ್ತು ಪ್ರೊಮೊಷನಲ್‌ ಕೋಡ್‌ಗಳನ್ನು 15-20% ಹೆಚ್ಚಿಸಿವೆ.

ಆಹಾರದಲ್ಲಿ ಈ ರಿಯಾಯಿತಿ ಹೆಚ್ಚಳವೇಕೆ?
ಆಹಾರ ನೀಡುವುದರಲ್ಲಿ ಈ ರಿಯಾಯಿತಿಗಳು ಏಕೆ ಹೆಚ್ಚಳ ಆಗಿವೆ ಎಂದು ಪ್ರಶ್ನೆ ಕೇಳಿದರೆ, ಅದಕ್ಕೆ ದೊಡ್ಡ -ದೊಡ್ಡ ರೆಸ್ಟೊರೆಂಟ್‌ಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಯನಿರ್ವಾಹಕರು “ಹೆಚ್ಚು ಕಡಿತಗೊಳ್ಳುವ ಕಮಿಷನ್‌ಗಳನ್ನು ಸರಿದೂಗಿಸಲು ಮತ್ತು ಅಗ್ರಿಗೇಟರ್‌ಗಳು ವಿಧಿಸುತ್ತಿರುವ ಸರ್ಚ್ ಆಪ್ಟಿಮೈಸೇಶನ್ ಶುಲ್ಕಗಳನ್ನು ಮತ್ತು ಅವುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ಹೆಚ್ಚಿನ ರಿಯಾಯಿತಿಯನ್ನು ಗ್ರಾಹಕರಿಗೆ ವಿಧಿಸಬೇಕಾಗಿದೆ” ಎಂದು ಉದ್ಯಮದ ಅನುಭವಿ ಪರಿಣಿತರು ಹೇಳಿದ್ದಾರೆ.

ಭಾರತದ ಅತಿದೊಡ್ಡ ಶೀಘ್ರ ಸೇವಾ ಸಂಸ್ಥೆಯಾದ ಡೊಮಿನೊಸ್ ಪಿಜ್ಜಾ ಕಂಪನಿಯು,1,625 ಔಟ್‌ಲೆಟ್‌ಗಳನ್ನು ನಿರ್ವಹಿಸುವ ಹೆಗ್ಗಳಿಕೆ ಹೊಂದಿದೆ. ಕಳೆದ ವಾರಾಂತ್ಯದಲ್ಲಿ ತನ್ನದೇ ಆದ ಅಪ್ಲಿಕೇಶನ್‌ನಲ್ಲಿ ಪುಡ್‌ ಡೆಲಿವರಿ, ಟೇಕ್‌ ಅವೇ ಮತ್ತು ಡೈನ್-ಇನ್‌ಗಳಾದ್ಯಂತ ʼಫ್ರೀ ರಿವಾರ್ಡ್‌ ಆಫರ್ಸ್‌ʼ ಗಳನ್ನು ನೀಡುವುದಕ್ಕೆ ಪ್ರಾರಂಭಿಸಿದೆ.

ಯಾವ -ಯಾವ ರೆಸ್ಟೊರೆಂಟ್‌ಗಳು ಮತ್ತು ಪುಡ್‌ ಆಪ್‌ಗಳು ಎಷ್ಟೆಷ್ಟು ಕಮಿಷನ್‌ ವಿಧಿಸುತ್ತವೆ ಎಂಬುದು ಇಲ್ಲಿದೆ:
ಜೊಮ್ಯಾಟೊ ಮತ್ತು ಸ್ವಿಗಿ ಪ್ರತಿ ಆರ್ಡರ್‌ನಲ್ಲಿ 15-30% ಕಮಿಷನ್‌ಗಳನ್ನು ವಿಧಿಸಿದರೆ, ಥ್ರೈನೌ ಮತ್ತು ಗೂಗಲ್‌ ಎಂಬ ದೈತ್ಯ ಕಂಪನಿಯ ಬೆಂಬಲ ಕಂಪನಿ ಡಾಟ್‌ಪೆ ನಂತಹ ಹೊಸ ಟೆಕ್ ಪ್ಲಾಟ್‌ಫಾರ್ಮ್‌ಗಳು ಕೇವಲ 3-5% ರಷ್ಟು ಕಮಿಷನ್‌ ವಿಧಿಸುತ್ತವೆ. ಈ ಫುಡ್ ಟೆಕ್ ಪ್ಲಾಟ್‌ಫಾರ್ಮ್‌ಗಳು ರೆಸ್ಟೋರೆಂಟ್‌ಗಳಿಗೆ ತಮ್ಮದೇ ಆದ ಡಿಜಿಟಲ್ ಸೇವೆಗಳನ್ನು ಹೊಂದಿಸಲು ಅವಕಾಶ ನೀಡುತ್ತವೆ.

ಇದನ್ನೂ ಓದಿ: Walmart lays off: ಹಣದುಬ್ಬರದ ಎಫೆಕ್ಟ್: 200 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ ವಾಲ್​​ಮಾರ್ಟ್​​

ಡೊಮಿನೋಸ್, ಮೆಕ್‌ಡೊನಾಲ್ಡ್ಸ್, ಸೋಶಿಯಲ್, ಪಂಜಾಬ್ ಗ್ರಿಲ್, ಡಿಜೆಸ್ಟಿಬಸ್ ಹಾಸ್ಪಿಟಾಲಿಟಿ, ಸ್ಟ್ರೀಟ್ ಫುಡ್ಸ್ ಆಫ್ ಇಂಡಿಯಾ, ವಾಹ್!ಮೊಮೊ ಮತ್ತು ಪಿಜ್ಜಾ ಹಟ್‌ಗಳು ತಮ್ಮದೇ ಆದ ಅಪ್ಲಿಕೇಶನ್‌ಗಳಲ್ಲಿ ಹೆಚ್ಚಿನ ರಿಯಾಯಿತಿಗಳನ್ನು ನೀಡುತ್ತಿವೆ.

ಇದರ ಕುರಿತು ಕೆಲ ಆಹಾರ ಸಂಸ್ಥೆಯ ಮುಖ್ಯಸ್ಥರು ಹೇಳುವುದೇನು?
"ನಾವು ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ತ್ರೈಮಾಸಿಕದಲ್ಲಿ 40% ರಷ್ಟು ಲಾಭವನ್ನು ಗಳಿಸಿದ್ದೇವೆ. ನಮ್ಮ ಕೆಲ ಬೆಂಬಲಿತ ರೆಸ್ಟೋರೆಂಟ್‌ಗಳು ತಮ್ಮದೇ ಆದ ನೇರ ಆರ್ಡರ್ ಮಾಡುವ ವೇದಿಕೆಯನ್ನು ಹೊಂದಿಸಲು ಇದು ಅವಕಾಶ ಮಾಡಿಕೊಡುತ್ತದೆ. ಮುಂಬರುವ ಹಬ್ಬದ ಋತುವಿನಲ್ಲಿ ಬೇಡಿಕೆ ಮತ್ತಷ್ಟು ಹೆಚ್ಚಾಗುವುದನ್ನು ನಾವು ನಿರೀಕ್ಷಿಸುತ್ತೇವೆ" ಎಂದು ಥ್ರೈವ್‌ನೌ ಕಂಪನಿಯಲ್ಲಿ ಕಾರ್ಯನಿರ್ವಹಿಸುವ ಹ್ಯಾಶ್‌ಟ್ಯಾಗ್ ಲಾಯಲ್ಟಿಯ ಸಹಸಂಸ್ಥಾಪಕ ಧ್ರುವ ದಿವಾನ್ ಹೇಳಿದ್ದಾರೆ. “ಥ್ರೈವ್ 5% ಕಮಿಷನ್ ಅನ್ನು ವಿಧಿಸುತ್ತದೆ ಮತ್ತು ಪ್ರಸ್ತುತ 11,300 ರೆಸ್ಟೋರೆಂಟ್‌ಗಳಿಂದ ಅದರ ಪ್ರಮಾಣವನ್ನು ಹೆಚ್ಚಿಸಲು ಕೆಲಸ ಮಾಡುತ್ತಿದೆ” ಎಂದು ದಿವಾನ್ ಹೇಳಿದರು.

ದೊಡ್ಡ ಬ್ರಾಂಡ್‌ಗಳಿಗಾಗಿ, ತಮ್ಮದೇ ಆದ ಅಪ್ಲಿಕೇಶನ್‌ಗಳಿಂದ ಆರ್ಡರ್‌ಗಳು 10% ಮತ್ತು 25% ನಡುವೆ ಎಲ್ಲಿಯಾದರೂ ಸರಾಸರಿಯಾಗಿರುತ್ತವೆ. ಆದರೂ ಸಣ್ಣವುಗಳು ಇನ್ನೂ ವ್ಯಾಪ್ತಿ ವಿಸ್ತರಿಸಿಕೊಳ್ಳಬೇಕಾಗಿದ್ದು ಸದ್ಯ ಅಗ್ರಿಗೇಟರ್‌ಗಳ ಮೇಲೆ ಹೆಚ್ಚು ಅವಲಂಬಿತವಾಗಿವೆ ಎಂದು ಕಾರ್ಯನಿರ್ವಾಹಕರು ಹೇಳುತ್ತಾರೆ. ಕಳೆದ ವರ್ಷದ ಕೊನೆಯಲ್ಲಿ, ಜುಬಿಲೆಂಟ್ ಫುಡ್‌ವರ್ಕ್ಸ್ ಎನ್‌ಎಸ್‌ಇ 0.33 % ರಷ್ಟು ಪಡೆದರೆ ಭಾರತದಲ್ಲಿ ಡೊಮಿನೊಸ್ ಪಿಜ್ಜಾದ ಮಾಸ್ಟರ್ ಫ್ರ್ಯಾಂಚೈಸ್, ಹ್ಯಾಶ್‌ಟ್ಯಾಗ್ ಲಾಯಲ್ಟಿ 35% ರಷ್ಟು ಪಾಲನ್ನು ಪಡೆದುಕೊಂಡಿದೆ.

#OrderDirect ಚಳುವಳಿ
ಕಳೆದ ವರ್ಷದ ಮಧ್ಯದಲ್ಲಿ, ರೆಸ್ಟೋರೆಂಟ್‌ಗಳು ಮತ್ತು ಅಗ್ರಿಗೇಟರ್‌ಗಳ ನಡುವಿನ ದೀರ್ಘಕಾಲದ ಆಂತರಿಕ ಜಗಳದ ಮಧ್ಯೆ, #OrderDirect ಚಳುವಳಿಯನ್ನು ಪ್ರಾರಂಭಿಸಲು ಹನ್ನೆರಡು ದೊಡ್ಡ ರೆಸ್ಟೋರೆಂಟ್ ಗಳು ಸಹಕರಿಸಿದ್ದವು. ಆಹಾರ ಸೇವಾ ಸಂಸ್ಥೆಗಳು ಅಗ್ರಿಗೇಟರ್‌ಗಳು ಕಡಿತ ಮಾಡದ ಕಮಿಷನ್‌ಗಳನ್ನು ವಿಧಿಸಿದ್ದಾರೆ ಮತ್ತು ನಿರ್ಣಾಯಕ ಗ್ರಾಹಕರ ಡೇಟಾವನ್ನು ಮರೆಮಾಚಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Success Story: 85ರಲ್ಲಿ ಪತ್ನಿ ಜೊತೆ ಬ್ಯುಸಿನೆಸ್​ ಆರಂಭಿಸಿದ ಅಜ್ಜ! ಚಿಕ್ಕ ವಯಸ್ಸಿನ ಕನಸು ಕೊನೆಗೂ ನನಸಾಯಿತು

ನ್ಯಾಷನಲ್ ರೆಸ್ಟೊರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾದ ಅಂದಾಜಿನ ಪ್ರಕಾರ, ಭಾರತದಲ್ಲಿ ವಾರ್ಷಿಕ ಆಹಾರ ಸೇವೆಗಳ ಮಾರುಕಟ್ಟೆಯು ಸುಮಾರು 4.2 ಲಕ್ಷ ಕೋಟಿ ರೂಪಾಯಿಗಳಷ್ಟಿದೆ ಮತ್ತು 2025 ರ ವೇಳೆಗೆ 7.7 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಾಗಲಿದೆ.
Published by:Ashwini Prabhu
First published: