• Home
  • »
  • News
  • »
  • business
  • »
  • Aadhaar Card: ಹಳ್ಳಿಗಳಲ್ಲಿ ಆಧಾರ್‌ ತಿದ್ದುಪಡಿ ಈಗ ಇನ್ನಷ್ಟು ಸುಲಭ!  

Aadhaar Card: ಹಳ್ಳಿಗಳಲ್ಲಿ ಆಧಾರ್‌ ತಿದ್ದುಪಡಿ ಈಗ ಇನ್ನಷ್ಟು ಸುಲಭ!  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಳ್ಳಿಗಳಲ್ಲಿ ಆಧಾರ್‌ ತಿದ್ದುಪಡಿ ಮಾಡಿಕೊಳ್ಳಬೇಕು ಎನ್ನುವವರಿಗೆ ಇದು ಇನ್ನಷ್ಟು ಸುಲಭವಾಗಿದೆ. ‌

  • Share this:

ಈಗ ಎಲ್ಲದಕ್ಕೂ ಬೇಕು ಆಧಾರ್‌ ಕಾರ್ಡ್ (Aadhaar Card). ಬೇರ್ಯಾವ ಡಾಕ್ಯುಮೆಂಟ್‌ ಇಲ್ಲದೇ ಹೋದ್ರೂ ನಡೆಯುತ್ತೆ. ಆದ್ರೆ ಆಧಾರ್‌ ಕಾರ್ಡ್‌ ಮಾತ್ರ ಬೇಕೇ ಬೇಕು. ಪುಟ್ಟ ಮಕ್ಕಳನ್ನು ಶಾಲೆ (School) ಗೆ ಸೇರಿಸೋದ್ರಿಂದ ಹಿಡಿದು ಮೊಬೈಲ್‌ ಸಿಮ್‌ (Mobile Sim) ತೊಗೊಳ್ಳೋದ್ರ ವರೆಗೂ ಈ ವಿಶಿಷ್ಟ ಗುರುತಿನ ಚೀಟಿ ಕಡ್ಡಾಯ. ಆದ್ರೆ ಕೆಲವೊಮ್ಮೆ ಅದರಲ್ಲಿ ಕಾಂಟಾಕ್ಟ್‌ ನಂಬರ್‌ ಚೇಂಜ್‌ (Contact Number  Change) , ಜನ್ಮ ದಿನಾಂಕ (Date of Birth) , ವಿಳಾಸ (Address) , ಸ್ಪೆಲ್ಲಿಂಗ್‌ ಮಿಸ್ಟೇಕ್‌ (Spelling Mistake) ಹೀಗೆ ಬದಲಾವಣೆ ಮಾಡಿಸಬೇಕೆಂದರೆ ಮೊದಲು ತಲೆನೋವಾಗಿತ್ತು. ಆದ್ರೀಗ ಸಿಟಿಗಳಲ್ಲಂತೂ ಸರಿಯಾದ ದಾಖಲಾತಿ ಹೊಂದಿದ್ದರೆ ತಕ್ಷಣವೇ ಈ ತಿದ್ದುಪತಿಗಳನ್ನು ಮಾಡಿಕೊಡ್ತಾರೆ.


ಆಧಾರ್​​ ಕಾರ್ಡ್ ತಿದ್ದುಪಡಿ ಇನ್ನೂ ಸುಲಭ!


ಆದ್ರೆ ಹಳ್ಳಿಗಳಲ್ಲಿ ಮಾತ್ರ ಜನರು ಪ್ರಧಾನ ಅಂಚೆ ಕಚೇರಿಗೇ ಹೋಗಿ ಹೊಸದಾಗಿ ಆಧಾರ್‌ ಕಾರ್ಡ್‌ ಅಥವಾ ಅದರ ತಿದ್ದುಪಡಿ ಮಾಡಿಸಿಕೊಳ್ಳಬೇಕಿತ್ತು. ಆದ್ರೀಗ ಹಳ್ಳಿಗಳಲ್ಲಿ ಆಧಾರ್‌ ತಿದ್ದುಪಡಿ ಮಾಡಿಕೊಳ್ಳಬೇಕು ಎನ್ನುವವರಿಗೆ ಇದು ಇನ್ನಷ್ಟು ಸುಲಭವಾಗಿದೆ. ‌


ಹೌದು... ಇಲ್ಲಿವರೆಗೆ ಗ್ರಾಮೀಣ ಭಾಗದ ಜನರು ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಅಥವಾ ತಿದ್ದುಪಡಿ ಮಾಡಿಸಿಕೊಳ್ಳಲು ಇನ್ನು ಕಷ್ಟ ಪಡಬೇಕಿಲ್ಲ. ಅದಕ್ಕಾಗಿ ಬ್ಯಾಂಕ್, ಅಂಚೆ ಕಚೇರಿಗಳಿಗೆ ಅಲೆದು ಗಂಟೆಗಟ್ಟಲೆ ಪ್ರಯಾಣಿಸಿ ಖರ್ಚು ಮಾಡಬೇಕಿಲ್ಲ. ಏಕೆಂದರೆ ಇನ್ನು ಮುಂದೆ ಗ್ರಾಮದಲ್ಲಿಯೇ ಆ ಎಲ್ಲ ಸೌಲಭ್ಯ ಸಿಗಲಿದೆ.


ಶಾಖಾ ಅಂಚೆ ಕಚೇರಿಯಲ್ಲೇ ಸೌಲಭ್ಯ!


ಈಗ ಗ್ರಾಮದ ಜನರು ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಅಂಚೆ ಕಚೇರಿ, ಪ್ರಧಾನ ಅಂಚೆ ಕಚೇರಿಗೆ ಅಲೆಯಬೇಕಾಗಿಲ್ಲ. ಗ್ರಾಮದ ಶಾಖಾ ಅಂಚೆ ಕಚೇರಿಗಳಲ್ಲಿಯೇ ಆಧಾರ್ ಕಾರ್ಡ್ ಮಾಡಿಸಿಕೊಳ್ಳಬಹುದು. ಇದಲ್ಲದೆ, ಅವರು ಮಾಡಿದ ಆಧಾರ್ ಕಾರ್ಡ್‌ನಲ್ಲಿ ಹೆಸರು, ಜನ್ಮ ದಿನಾಂಕ ಮತ್ತು ವಿಳಾಸವನ್ನು ತಿದ್ದುಪಡಿ ಮಾಡಬಹುದು.


ಇದಕ್ಕಾಗಿ ಇಲ್ಲಿಯವರೆಗೆ ಹೆಡ್ ಪೋಸ್ಟ್ ಆಫೀಸ್, ಸಬ್ ಪೋಸ್ಟ್ ಆಫೀಸ್, ಬ್ಯಾಂಕ್ ಗಳಿಗೆ ಹೋಗಬೇಕಾಗಿತ್ತು. ಆದರೆ ಈಗ ಹಾಗೆ ಮಾಡಬೇಕಿಲ್ಲ. ಅಂಚೆ ಇಲಾಖೆಯು ಗ್ರಾಮೀಣ ಡಾಕ್ ಸೇವಕರಿಗೆ ವಹಿವಾಟು ಇತ್ಯಾದಿಗಳನ್ನು ಮಾಡಲು ಸಾಧನವನ್ನು ನೀಡಿದ್ದು, ಈ ಮೂಲಕ ಅವರು ಕೆಲಸ ಮಾಡಲು ಪ್ರಾರಂಭಿಸಿದ್ದಾರೆ.


ಇದನ್ನೂ ಓದಿ: ಪ್ರತಿ ತಿಂಗಳು ಕೇವಲ 2 ಸಾವಿರ ಉಳಿಸಿ, 48 ಲಕ್ಷ ಗಳಿಸಿ!


ಪ್ರತಾಪಗಢ ಎಂಬ ನಗರದಲ್ಲಿ ನೆಲೆಗೊಂಡಿರುವ ಪ್ರಧಾನ ಅಂಚೆ ಕಚೇರಿಯ ಹೊರತಾಗಿ ಜಿಲ್ಲೆಯಲ್ಲಿ 44 ಉಪ ಅಂಚೆ ಕಚೇರಿಗಳು ಮತ್ತು 314 ಗ್ರಾಮೀಣ ಅಂಚೆ ಕಚೇರಿಗಳಿವೆ. ಗ್ರಾಮಗಳಲ್ಲಿ ತೆರೆದಿರುವ ಗ್ರಾಮೀಣ ಅಂಚೆ ಕಚೇರಿಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ಅಂಚೆ ಇಲಾಖೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದೆ.


ಎಲ್ಲಾ ಗ್ರಾ,ಮಸ್ಥರಿಗೂ ಸಿಗುತ್ತೆ!


ಒಂದೆಡೆ ಈ ಅಂಚೆ ಕಚೇರಿಗಳಲ್ಲಿ ಗ್ರಾಮದ ಜನರು ಆರ್‌ಡಿ ಠೇವಣಿ, ಸುಕನ್ಯಾ ಸಮೃದ್ಧಿ ಯೋಜನೆ ಇತ್ಯಾದಿಗಳಿಗೆ ಹಣ ಹಾಕುತ್ತಿದ್ದರೆ, ಇನ್ನೊಂದೆಡೆ ಜಿಡಿಎಸ್ ಮೂಲಕ ಆಧಾರ್ ಕಾರ್ಡ್ ಮಾಡಿಸಿಕೊಳ್ಳಬಹುದಾಗಿದೆ. ಆದರೆ, ಮೊದಲ ಹಂತದಲ್ಲಿ ಇದುವರೆಗೆ 130 ಅಂಚೆ ಕಚೇರಿಗಳಲ್ಲಿ ಮಾತ್ರ ಈ ಸೌಲಭ್ಯ ಸಿಗುತ್ತಿದೆ. ಎರಡನೇ ಹಂತದಲ್ಲಿ ಉಳಿದ ಅಂಚೆ ಕಚೇರಿಗಳಲ್ಲೂ ಗ್ರಾಮಸ್ಥರಿಗೆ ಈ ಸೌಲಭ್ಯ ದೊರೆಯಲಿದೆ.


ಗ್ರಾಮೀಣ ಡಾಕ್ ಸೇವಕರು ಇಲಾಖೆಯಿಂದ ಪಡೆದ ಸಾಧನಗಳಿಂದ ಆಧಾರ್ ಕಾರ್ಡ್‌ನಲ್ಲಿ ಹೆಸರು, ವಿಳಾಸ ಇತ್ಯಾದಿಗಳನ್ನು ಬದಲಾಯಿಸಬಹುದು. ನೀವು ಬಯಸಿದರೆ, ಹೊಸ ಆಧಾರ್ ಕಾರ್ಡ್ ಅನ್ನು ಸಹ ಪಡೆಯಬಹುದು. ಅಂಚೆ ಇಲಾಖೆ ನಿಗದಿಪಡಿಸಿದ ಶುಲ್ಕವನ್ನು ಮಾತ್ರ ಪಾವತಿಸಬೇಕಾಗುತ್ತದೆ.


ಇದನ್ನೂ ಓದಿ: ವಾಟ್ಸಾಪ್​ನಲ್ಲಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಹೀಗೆ ಡೌನ್​ಲೋಡ್ ಮಾಡಿ!


ಈ ಬಗ್ಗೆ ಹಿರಿಯ ಅಂಚೆ ಅಧೀಕ್ಷಕ ನರಸಿಂಗ್ ಮಾತನಾಡಿ, 130 ಗ್ರಾಮೀಣ ಶಾಖಾ ಅಂಚೆ ಕಚೇರಿಗಳಲ್ಲಿ ಜನರು ಹೊಸ ಆಧಾರ್ ಕಾರ್ಡ್ ಮಾಡಿಸಿಕೊಂಡು ತಿದ್ದುಪಡಿ ಇತ್ಯಾದಿಗಳನ್ನು ಮಾಡಬಹುದಾಗಿದೆ. ಇದರಿಂದ ಜನರಿಗೆ ಸಾಕಷ್ಟು ಅನುಕೂಲವಾಗುತ್ತಿದೆ ಎಂದಿದ್ದಾರೆ.


ಸಮಯ ಮತ್ತು ಖರ್ಚು ಉಳಿತಾಯ


ಈವರೆಗೆ ಗ್ರಾಮದ ಜನರು ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಅಥವಾ ತಿದ್ದುಪಡಿ ಮಾಡಿಸಿಕೊಳ್ಳಲು ಬ್ಯಾಂಕ್, ಅಂಚೆ ಕಚೇರಿಗಳಿಗೆ ಅಲೆದು ಗಂಟೆಗಟ್ಟಲೆ ಪ್ರಯಾಣಿಸಿ ಬಾಡಿಗೆ ಖರ್ಚು ಮಾಡಬೇಕಿತ್ತು. ಆದರೆ, ಈಗ ಗ್ರಾಮದಲ್ಲಿಯೇ ಎಲ್ಲ ಸೌಲಭ್ಯ ಸಿಗಲಾರಂಭಿಸಿದೆ. ಇದರಿಂದ ಅವರ ಸಮಯವೂ ಉಳಿತಾಯವಾಗುತ್ತಿದೆ. ಕ್ಷಣಾರ್ಧದಲ್ಲಿ ಕೆಲಸವೂ ಆಗುತ್ತಿದೆ. ಇದರಿಂದ ಗ್ರಾಮೀಣ ಜನರಿಗೆ ಬಹಳಷ್ಟು ಅನುಕೂಲವೇ ಆಗಿದೆ.

Published by:ವಾಸುದೇವ್ ಎಂ
First published: