• Home
 • »
 • News
 • »
 • business
 • »
 • Flipkart Deepavali Offer: ದೀಪಾವಳಿ ಪ್ರಯುಕ್ತ ಬಿಗ್‌ ಆಫರ್, ಮನೆಮಂದಿಗೆ ಗಿಫ್ಟ್‌ ಖರೀದಿಸೋಕೆ ಇದೆ ಚಾನ್ಸ್!

Flipkart Deepavali Offer: ದೀಪಾವಳಿ ಪ್ರಯುಕ್ತ ಬಿಗ್‌ ಆಫರ್, ಮನೆಮಂದಿಗೆ ಗಿಫ್ಟ್‌ ಖರೀದಿಸೋಕೆ ಇದೆ ಚಾನ್ಸ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಫ್ಲಿಪ್‌ಕಾರ್ಟ್‌ನ ದೀಪಾವಳಿ ಸೇಲ್-2022ರೊಂದಿಗೆ ಅತ್ಯಾಕರ್ಷಕ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಪಡೆಯಿರಿ. ಫ್ಲಿಪ್‌ಕಾರ್ಟ್‌ನ ಬಿಗ್ ದೀಪಾವಳಿ ಮಾರಾಟವು ಬಟ್ಟೆ, ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು ಮತ್ತು ಹೆಚ್ಚಿನವುಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳನ್ನು ನೀಡುವುದರ ಮೂಲಕ ನಿಮ್ಮ ಹಬ್ಬದ ಖುಷಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಹಾಗಾದ್ರೆ ತಡ ಯಾಕೆ, ಈ ಆರ್ಟಿಕಲ್ ಓದಿ, ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಿ!

ಮುಂದೆ ಓದಿ ...
 • Share this:

  ಇನ್ನೇನು ಬೆಳಕಿನ ಹಬ್ಬ ದೀಪಾವಳಿ (Diwali) ಬಂತು. ಹಬ್ಬಕ್ಕೆ ತಯಾರಿ ಜೋರಾಗಿ ನಡೆಯುತ್ತಿದ್ದು, ಮನೆಮಂದಿ ಎಲ್ಲಾ ಶಾಪಿಂಗ್‌ (Shopping) ಮಾಡಲು ಪ್ಲ್ಯಾನ್‌ ಮಾಡುತ್ತಿರುತ್ತಾರೆ. ಬಟ್ಟೆ-ಬರೆ, ಆಭರಣ, ಮನೆಗೆ ಬೇಕಾದ ವಸ್ತುಗಳನ್ನು ಅಥವಾ ಹಬ್ಬದ ಸಮಯದಲ್ಲಿ ಏನನ್ನಾದರೂ ಹೊಸದಾಗಿ ತರಬೇಕು, ನಮ್ಮ ಪ್ರೀತಿ ಪಾತ್ರರಿಗೆ ಏನಾದರೂ ಗಿಫ್ಟ್ (gift) ಕೊಡಬೇಕು ಅಂತ ನೋಡುತ್ತಿರುತ್ತಾರೆ. ಹಾಗೇ ಹಬ್ಬದ ಸಮಯದಲ್ಲಿ ಆಫರ್‌ (Offer) ಎಲ್ಲಾದರೂ ಇದೆಯಾ ಅಂತಾನೂ ಹುಡುಕುತ್ತಿರುತ್ತಾರೆ. ನಿಮ್ಮ ಹುಡುಕಾಟಕ್ಕೆ ಇಲ್ಲಿದೆ ನೋಡಿ ಸೂಕ್ತ ಸ್ಥಳ.


  ಅಕ್ಟೋಬರ್ 19 ರಿಂದ ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್ ‌
  ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಕಾರಣ ಭರ್ಜರಿ ಆಫರ್‌ ನೀಡಲು ಇ-ಕಾಮರ್ಸ್ ದಿಗ್ಗಜ  ಫ್ಲಿಫ್‌ಕಾರ್ಟ್‌ ದೀಪಾವಳಿ ಸೇಲ್‌ ಅನ್ನು ಆರಂಭಿಸಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಹೊಸ ಬಿಗ್ ದೀಪಾವಳಿ ಸೇಲ್ ಈವೆಂಟ್ ಅಕ್ಟೋಬರ್ 19 ರಿಂದ ಅಂದರೆ ನಾಳೆಯಿಂದ ಪ್ರಾರಂಭವಾಗಲಿದ್ದು ಅಕ್ಟೋಬರ್ 23ರವರೆಗೆ ಮುಂದುವರಿಯುತ್ತದೆ.


  Big offer for Diwali Here is the information about what is on offer
  ಸಾಂದರ್ಭಿಕ ಚಿತ್ರ


  ಫ್ಲಿಪ್‌ಕಾರ್ಟ್ ಪ್ಲಸ್‌ ಸದಸ್ಯರಿಗೆ ಮುಂಚಿತ ಪ್ರವೇಶ
  ಮೊನ್ನೆ ದಸರಾ ಹಬ್ಬಕ್ಕೆ ಉತ್ತಮ ಆಫರ್‌ ನೀಡಿ ಬಿಗ್‌ ಬಿಲಿಯನ್‌ ಡೇಯನ್ನು ಫಿಪ್‌ಕಾರ್ಟ್ ನಡೆಸಿತ್ತು. ಸದ್ಯ ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ಪನ್ನಗಳನ್ನು ಪಡೆದುಕೊಳ್ಳಲು ಮತ್ತೊಂದು ಅವಕಾಶವನ್ನು ನೀಡುತ್ತಿದೆ. ಇನ್ನೂ ಫ್ಲಿಪ್‌ಕಾರ್ಟ್ ಪ್ಲಸ್‌ನ ಸದಸ್ಯರು ಒಂದು ದಿನ ಮುಂಚಿತವಾಗಿ ಅಂದರೆ ಅಕ್ಟೋಬರ್ 18ರಂದೇ ಭರ್ಜರಿ ಆಫರ್‌ ಝೋನ್‌ಗೆ ಎಂಟ್ರಿ ನೀಡಬಹುದು.


  ಇದನ್ನೂ ಓದಿ: ವಾಟ್ಸಪ್ ಬಳಕೆದಾರರೇ ಎಚ್ಚರ? ಮಿತಿ ತಪ್ಪಿದ್ರೆ ಬ್ಯಾನ್ ಆಗುತ್ತೆ ಅಕೌಂಟ್!


  ಎಸ್‌ಬಿಐ, ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಉತ್ತಮ ಆಫರ್
  ಬಿಗ್ ದೀಪಾವಳಿ ಸೇಲ್‌ನಲ್ಲಿ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನೊಂದಿಗೆ ಖರೀದಿಸುವ ಗ್ರಾಹಕರಿಗೆ 10 ಪ್ರತಿಶತದಷ್ಟು ರಿಯಾಯಿತಿಯನ್ನು ಫ್ಲಿಪ್‌ಕಾರ್ಟ್ ನೀಡುತ್ತಿದೆ. ಹೆಚ್ಚುವರಿಯಾಗಿ, ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಗ್ರಾಹಕರು ಕ್ಯಾಶ್‌ಬ್ಯಾಕ್‌ ಪಡೆಯಬಹುದು. ಜೊತೆಗೆ, ಫ್ಲಿಪ್‌ಕಾರ್ಟ್ ಪೇಟಿಎಂ ವಾಲೆಟ್ ಮತ್ತು ಯುಪಿಐ ವಹಿವಾಟಿನ ಮೇಲೆ 10% ಕ್ಯಾಶ್‌ಬ್ಯಾಕ್ ಅನ್ನು ನೀಡುತ್ತಿದೆ.


  ಯಾವೆಲ್ಲಾ ವಸ್ತುಗಳ ಮೇಲೆ ಆಫರ್‌ ಇದೆ? ‌
  ಸೆಲ್ ಫೋನ್‌, ಉಪಕರಣಗಳು, ಎಲೆಕ್ಟ್ರಾನಿಕ್ಸ್, ಪರಿಕರಗಳು ಮತ್ತು ಹೆಚ್ಚಿನವುಗಳಲ್ಲಿ ವಿನಿಮಯ ಕೊಡುಗೆಗಳಂತಹ ಮಾರಾಟದ ಡೀಲ್‌ಗಳು ಇವೆ. ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್‌ನಲ್ಲಿ ಕಂಪನಿಯು PocoX4 ಮತ್ತು ಇತರ ಹಲವು ಸಾಧನಗಳಿಗೆ ಶೇಕಡ 45%  ರಿಯಾಯಿತಿಯನ್ನು ನೀಡುತ್ತಿದೆ.


  Big offer for Diwali Here is the information about what is on offer
  ಸಾಂದರ್ಭಿಕ ಚಿತ್ರ


  ಅಷ್ಟೇ ಅಲ್ಲ, ಗ್ರಾಹಕರು ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ S22+ ಮತ್ತು ಐಫೋನ್ 13, ರಿಯಲ್‌ ಮೀ, ಒಪ್ಪೋ, ವಿವೋ, ಲಾವಾ ಸೇರಿದಂತೆ ವಿವಿಧ ಸ್ಮಾರ್ಟ್‌ಫೋನ್ ಮೇಲೂ ಉತ್ತಮ ಆಫರ್‌ ಪಡೆಯಬಹುದು. ಸ್ಮಾರ್ಟ್‌ಫೋನ್‌ ಜೊತೆಗೆ ಟಿವಿಗಳ ಮೇಲೂ ದೀಪಾವಳಿ ಬಿಗ್‌ ಸೇಲ್‌ ಸಂದರ್ಭದಲ್ಲಿ ಆಫರ್‌ ಇದೆ.


  ಇಲ್ಲಿ ಗ್ರಾಹಕರು ಶೇಕಡಾ 80 ರಷ್ಟು ಉಳಿತಾಯ ಮಾಡಬಹುದು. ಹಾಗೆಯೇ ವಾಷಿಂಗ್ ಮೆಷಿನ್‌ಗಳು, ಏರ್ ಕಂಡಿಷನರ್‌ಗಳು ಮತ್ತು ಹೆಚ್ಚಿನ ಗೃಹೋಪಯೋಗಿ ವಸ್ತುಗಳ ಮೇಲೆ 75% ವರೆಗೆ ರಿಯಾಯಿತಿ ಇದೆ.


  ಫ್ಲಿಪ್‌ಕಾರ್ಟ್‌ನ ವಿಶೇಷ ಆಫರ್


  "ಫ್ಲಿಪ್‌ಕಾರ್ಟ್‌ನ ದೀಪಾವಳಿ ಸೇಲ್ 2022 ರೊಂದಿಗೆ ಅತ್ಯಾಕರ್ಷಕ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಪಡೆಯಿರಿ. ಫ್ಲಿಪ್‌ಕಾರ್ಟ್‌ನ ಬಿಗ್ ದೀಪಾವಳಿ ಸೇಲ್ ಬಟ್ಟೆ, ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು ಮತ್ತು ಹೆಚ್ಚಿನವುಗಳ ಮೇಲೆ ಅತ್ಯಾಕರ್ಷಕ ಕೊಡುಗೆಗಳನ್ನು ನೀಡುವುದರ ಮೂಲಕ ನಿಮ್ಮ ಹಬ್ಬದ ಖುಷಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಹಬ್ಬದ ಸಮಯದಲ್ಲಿ ಹಾಲಿ ಡೇ ಹೋಗುವವರಿಗೆ ಫ್ಲೈಟ್‌ ಟಿಕೆಟ್‌ನಲ್ಲೂ ವಿನಾಯಿತಿ ನೀಡುತ್ತದೆ" ಎಂದು ಕಂಪನಿ ಪ್ರಕಟಣೆ ತಿಳಿಸಿದೆ.


  ಇದನ್ನೂ ಓದಿ: ಅಕ್ಷರಶಃ ಕಸಕ್ಕೆ ಸಮ ಆಗಲಿವೆ 5.3 ಶತಕೋಟಿ ಸ್ಮಾರ್ಟ್‌ಫೋನ್‌ಗಳು!


  ಒಟ್ಟಾರೆ ಟಾಪ್ ಬ್ರ್ಯಾಂಡ್‌ಗಳ ಮೇಲೆ ಭಾರಿ ರಿಯಾಯಿತಿ ಇದ್ದು, ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು, ಉಡುಪುಗಳು, ಪಾದರಕ್ಷೆಗಳು ಮತ್ತು ಅಡುಗೆಮನೆಗೆ ಅಗತ್ಯವಾದ ವಸ್ತುಗಳನ್ನು ನೀವು ನಿಮ್ಮ ಕಾರ್ಟಿಗೆ ಈಗಲೇ ಸೇರಿಸಕೊಳ್ಳಬಹುದು.

  Published by:Harshith AS
  First published: