• Home
  • »
  • News
  • »
  • business
  • »
  • Zomato Marketing: ಹಸಿದವರ ಹೊಟ್ಟೆ ತಣಿಸುವ ಜೊಮ್ಯಾಟೋ ನಷ್ಟದಲ್ಲಿದ್ಯಾ? ಮಾರುಕಟ್ಟೆ ಲಾಭದಲ್ಲಿ ಕುಸಿತ!

Zomato Marketing: ಹಸಿದವರ ಹೊಟ್ಟೆ ತಣಿಸುವ ಜೊಮ್ಯಾಟೋ ನಷ್ಟದಲ್ಲಿದ್ಯಾ? ಮಾರುಕಟ್ಟೆ ಲಾಭದಲ್ಲಿ ಕುಸಿತ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಆನ್‌ಲೈನ್‌ ಆಹಾರ ಸಪ್ಲೈ ಮಾಡುವ ಜನಪ್ರಿಯ ಆ್ಯಪ್‌ಗಳಲ್ಲಿ ಜೊಮ್ಯಾಟೋ ಕೂಡ ಒಂದು. ಇದು ಈ ವರ್ಷದ ಸಪ್ಟೆಂಬರ್‌ನ ತ್ರೈಮಾಸಿಕದ ಒಟ್ಟು ಲಾಭ ಮತ್ತು ನಷ್ಟವನ್ನು ಬಿಡುಗಡೆ ಮಾಡಿದೆ. ಇದರ ಬಗ್ಗೆ ಕಂಪ್ಲೀಟ್‌ ಮಾಹಿತಿ ಇಲ್ಲಿದೆ...

  • Share this:

    ಇತ್ತೀಚಿಗೆ ಆನ್‌ಲೈನ್‌ನಲ್ಲಿ (Online) ಹೆಚ್ಚಾಗಿ ಜನರು ತಮಗೆ ಬೇಕಾದ ಆಹಾರಗಳನ್ನು ಜೊಮ್ಯಾಟೋ (Zomato), ಸ್ವಿಗ್ಗಿ (Swiggy) ಈ ರೀತಿಯ ಆ್ಯಪ್‌ಗಳ ಮೂಲಕ ಆರ್ಡರ್‌ (Order) ಮಾಡಿಕೊಳ್ಳುತ್ತಾರೆ. ಅದರಲ್ಲೂ ಏನೋ ಶಿಕ್ಷಣದ ಉದ್ದೇಶದಿಂದ, ಕೆಲಸಕ್ಕಾಗಿ ಈಗಿನ ಕೆಲ ಜನರು ತಮ್ಮ ಮನೆಯಿಂದ ಬೇರೆ ಬೇರೆ ನಗರಗಳಿಗೆ ತೆರಳುತ್ತಾರೆ. ಆಗ ಹೆಚ್ಚಿನ ಜನರು ಅಡುಗೆ ಮಾಡಲು ಬಯಸದೆ ಇಂತಹ ಆನ್‌ಲೈನ್‌ ಮೂಲಕ ಆಹಾರವನ್ನು ಮನೆಮನೆಗೆ ತಲುಪಿಸುವ ಮಾಧ್ಯಮಗಳನ್ನು (Media) ಅವಲಂಬಿಸುತ್ತಾರೆ. ಇತ್ತೀಚಿನ ಕೆಲದಿನಗಳಲ್ಲಂತೂ ಇದಕ್ಕೆ ಬೇಡಿಕೆ ಹೆಚ್ಚೇ ಇತ್ತು. ಆದರೆ ಈಗ ಸ್ವಲ್ಪ ಮಟ್ಟಿಗೆ ಮತ್ತೆ ಜೊಮ್ಯಾಟೋ ನಷ್ಟವನ್ನು ಕಂಡಿದೆ ಎಂದು ವರದಿ ಮಾಡಿದ್ದಾರೆ. ಆದರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನಷ್ಟ (Loss) ಕಡಿಮೆಯಿದೆ.


    ಆನ್‌ಲೈನ್‌ ಆಹಾರ ಸಪ್ಲೈ ಮಾಡುವ ಜನಪ್ರಿಯ ಆನ್‌ಲೈನ್‌ ಮಾಧ್ಯಮದಲ್ಲಿ ಜೊಮ್ಯಾಟೋ ಕೂಡ ಒಂದು. ಇದು ಈ ವರ್ಷದ ಸಪ್ಟೆಂಬರ್‌ನ ತ್ರೈಮಾಸಿಕದ ಒಟ್ಟು ಲಾಭ ಮತ್ತು ನಷ್ಟವನ್ನು ಬಿಡುಗಡೆ ಮಾಡಿದೆ. ಇದರ ಬಗ್ಗೆ ಕಂಪ್ಲೀಟ್‌ ಮಾಹಿತಿ ಇಲ್ಲಿದೆ.


    ಈ ವರ್ಷ ಜೊಮ್ಯಾಟೋದ ಲಾಭ ಮತ್ತು ನಷ್ಟ:


    ಆಹಾರ ಮತ್ತು ಅಡುಗೆ ದಿನಸಿಗಳನ್ನು ವಿತರಣೆ ಮಾಡುವಂತಹ ಪ್ರಸಿದ್ಧ ಕಂಪೆನಿ ಜೊಮ್ಯಾಟೋ ಈ ವರ್ಷದ ತ್ರೈಮಾಸಿಕದಲ್ಲಿ ಸುಮಾರು 251 ಕೋಟಿ ನಷ್ಟ ಅನುಭವಿಸಿದೆ ಎಂದು ಕಂಪನಿ ತನ್ನ ವರದಿಯಲ್ಲಿ ತಿಳಿಸಿದೆ. ಸಪ್ಟೆಂಬರ್‌ 30 ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ಹಿಂದಿನ ವರ್ಷಕ್ಕಿಂತ 251 ಕೋಟಿಯಷ್ಟು ಇಳಿಕೆಯಾಗಿದೆ. ಆದರೆ ಕಳೆದ ವರ್ಷ ಈ ನಷ್ಟವು 430 ಕೋಟಿ ಆಗಿತ್ತು ಎಂದು ಕಂಪೆನಿ ಹೇಳಿದೆ.


    ಇದನ್ನೂ ಓದಿ: ಮೆಟಾದಿಂದ ವಜಾಗೊಂಡ ಭಾರತೀಯ ಉದ್ಯೋಗಿಗಳಿಗೆ ಆಪತ್ತು! ಅವರ ಮಕ್ಕಳಿಗೂ ಇಲ್ವಾ ಭವಿಷ್ಯ?

     ಹಣಕಾಸು ಮೊತ್ತ ಎಷ್ಟು ಏರಿದೆ?

    ಜೊಮ್ಯಾಟೋ ಕಂಪನಿಯ ಕಾರ್ಯನಿರ್ವಹಣಾ ಆದಾಯವು ಈ ಬಾರಿ ಶೇಕಡಾ 62% ನಷ್ಟು ಏರಿಕೆಯಾಗಿದೆ. ಕಳೆದ ವರ್ಷ ಈ ಆದಾಯವು 1024 ಕೋಟಿಯಾಗಿತ್ತು. ಆದರೆ ಈ ವರ್ಷದ ಪ್ರಸ್ತುತ ಆದಾಯವು 1661 ಕೋಟಿಯಷ್ಟು ಏರಿದೆ ಎಂದು ವರದಿ ಮಾಡಿದ್ದಾರೆ.


    Big drop in Zomato market share
    ಸಾಂಕೇತಿಕ ಚಿತ್ರ


    ಜೊಮ್ಯಾಟೋ ಹಣಕಾಸು ಅಧಿಕಾರಿಯ ಪತ್ರ


    ಈ ಎಲ್ಲಾ ಆದಾಯವನ್ನು ಗಮನದಲ್ಲಿಟ್ಟುಕೊಂಡು ಷೇರುದಾರರಿಗೆ ಪತ್ರ ಬರೆದಿರುವ ಜೊಮ್ಯಾಟೋ ದ ಮುಖ್ಯ ಹಣಕಾಸು ಅಧಿಕಾರಿ ಅಕ್ಷಾಂತ್‌ ಗೋಯಲ್‌ " ನಮ್ಮ ಆಹಾರ ವಿತರಣಾ ವ್ಯವಸ್ಥೆಯು ಬೆಳೆಯುತ್ತಿದ್ದು, ಒಂದು ರೀತಿಯಲ್ಲಿ ಲಾಭದತ್ತ ಸಾಗುತ್ತಿದೆ. ನಮ್ಮ ವ್ಯಾಪಾರವು ಪ್ರಸ್ತುತ ಟ್ರೆಂಡಿಂಗ್‌ನಲ್ಲಿ ಇನ್ನಷ್ಟು ವೇಗವಾಗಿ ಸಾಗುತ್ತದೆ ಎಂಬು ನನ್ನ ನಂಬಿಕೆ" ಎಂದಿದ್ದಾರೆ.


    ಷೇರು ಮಾರುಕಟ್ಟೆಯಲ್ಲೂ ನಷ್ಟ:


    ಇದೀಗ ಜೊಮ್ಯಾಟೋ ಷೇರು ಬೆಲೆ ಶೇಕಡಾ 2.53% ರಷ್ಟು ಕುಸಿದಿದ್ದು ಪ್ರತಿ ಷೇರು ಶೆಕಡಾ 63.65 ರಷ್ಟು ಇಳಿಕೆಯಾಗಿದೆ ಎಂದಿದ್ದಾರೆ.


    ರೆಸ್ಟೋರೆಂಟ್‌ ಪಾಲುದಾರರ ಸಂಖ್ಯೆಯಲ್ಲೂ ಇಳಿಕೆ:


    ಜೊಮ್ಯಾಟೋ ದ ರೆಸ್ಟೋರೆಂಟ್‌ ಪಾಲುದಾರರ ಸರಾಸರಿ ಸಂಖ್ಯೆಯಲ್ಲೂ ಕುಸಿತ ಕಂಡಿದೆ. ಜೂನ್‌ ತ್ರೈಮಾಸಿಕದಲ್ಲಿ ರೆಸ್ಟೋರೆಂಟ್‌ ಪಾಲುದಾರರ ಸಂಖ್ಯೆ 2 ಲಕ್ಷದ 8 ಸಾವಿರದಿಂದ 2 ಲಕ್ಷದ 7 ಸಾವಿರಕ್ಕೆ ಇಳಿಕೆಯಾಗಿದೆ ಎಂದಿದ್ದಾರೆ.


    ಇದಿಷ್ಟು ಜೊಮ್ಯಾಟೋದಲ್ಲಾಗಿರುವಂತಹ ಹಣಕಾಸಿನಲ್ಲಾದ ನಷ್ಟಗಳಾಗಿವೆ. ಇದಲ್ಲದೆ ಕಳೆದ ಕೆಲವು ತ್ರೈ,ಮಾಸಿಕಗಳಲ್ಲಿ ಹೋಲಿಸಿದರೆ ಕಳೆದ ತ್ರೈಮಾಸಿಕದಲ್ಲಿ ಆಹಾರದಿಂದ ಬರುತ್ತಿದ್ದ ಆದಾಯವು ಗಣಣಿಯವಾಗಿ ಕುಸಿದಿದೆ ಎಂದಿ ಜೊಮ್ಯಾಟೋ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ದೀಪಿಂದರ್‌ ಗೋಯಲ್‌ ಪತ್ರದಲ್ಲಿ ತಿಳಿಸಿದ್ದಾರೆ.


    ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಜೊಮ್ಯಾಟೋದ ಮುಖ್ಯ ಅಧಿಕಾರಿಗಳು ಇದರ ಬಗ್ಗೆ ಬೇಸರವನ್ನು ತಮ್ಮ ತಮ್ಮ ಪತ್ರಗಳಲ್ಲಿ ವ್ಯಕ್ತ ಪಡಿಸಿದ್ದಾರೆ. ಜೊಮ್ಯಾಟೋ ಇನ್ನು ಮುಂದಿನ ದಿನಗಳಲ್ಲಿ ಉತ್ತಮ ಆದಾಯ ಗಳಿಸುತ್ತದೆ ಎಂದು ಜೊಮ್ಯಾಟೋದ ಹಣಕಾಸು ಅಧಿಕಾರಿಯವರು ತಿಳಿಸಿದ್ದಾರೆ.

    Published by:Harshith AS
    First published: