• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • BYST: ಸ್ವಂತ ಉದ್ಯೋಗ ಆರಂಭಿಸಲು 12,000 ಉದ್ಯಮಿಗಳಿಗೆ ನೆರವು! 5 ವರ್ಷಗಳಲ್ಲಿ 50 ಮಿಲಿಯನ್ ಉದ್ಯೋಗ ಸೃಷ್ಟಿಗೆ ಸಂಸ್ಥೆ ನೆರವು

BYST: ಸ್ವಂತ ಉದ್ಯೋಗ ಆರಂಭಿಸಲು 12,000 ಉದ್ಯಮಿಗಳಿಗೆ ನೆರವು! 5 ವರ್ಷಗಳಲ್ಲಿ 50 ಮಿಲಿಯನ್ ಉದ್ಯೋಗ ಸೃಷ್ಟಿಗೆ ಸಂಸ್ಥೆ ನೆರವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತದ ಮಾಜಿ ರಾಷ್ಟ್ರಪತಿ ಆರ್ ವೆಂಕಟರಾಮನ್ (R Venkataraman) ಅವರ ಪುತ್ರಿ ಲಕ್ಷ್ಮಿ ವೆಂಕಟರಮಣ ವೆಂಕಟೇಶನ್ ಭಾರತೀಯ ಯುವ ಶಕ್ತಿ ಟ್ರಸ್ಟ್ ಸ್ಥಾಪಿಸಿದ್ದು, ಈ ಟ್ರಸ್ಟ್​ ಯಾವುದೇ ಲಾಭದ ಉದ್ದೇಶವನ್ನು ಹೊಂದಿರದೆ ಯುವಕರಿಗೆ ಉದ್ಯೋಗ ದೊರಕಿಸಿಕೊಡುವ ಕೆಲಸ ಮಾಡುತ್ತಿದೆ. ಇಲ್ಲಿಯವರೆಗೆ ಸುಮಾರು 12 ಸಾವಿರ ಉದ್ಯಮಿಗಳನ್ನು ರೂಪಿಸಿದ್ದು, ಇವರು 5000 ಕೋಟಿ ಸಂಪತ್ತನ್ನು ಸೃಷ್ಟಿಸಿದೆ.

ಮುಂದೆ ಓದಿ ...
  • Trending Desk
  • 4-MIN READ
  • Last Updated :
  • Share this:

    ಮುಂಬೈ ಮೂಲದ ಭಾರತೀಯ ಯುವ ಶಕ್ತಿ ಟ್ರಸ್ಟ್ ( Bharatiya Yuva Shakti Trust) ಆರ್ಥಿಕವಾಗಿ ಕಂಗೆಟ್ಟಿರುವ ಯುವಕರಿಗೆ ಬೆಂಬಲ ನೀಡುವ ಮೂಲಕ ಅವರಲ್ಲಿರುವ ವ್ಯಾಪಾರ ಕೌಶಲ್ಯಗಳಿಗೆ ಸೂಕ್ತ ಉದ್ಯಮಗಳನ್ನು ಒದಗಿಸುವ ಮೂಲಕ ಅವರ ಬದುಕಿನಲ್ಲಿ ಆಶಾಕಿರಣವಾಗಿ ಮೂಡಿಸುತ್ತಿದೆ. ಯಾವುದೇ ಲಾಭದ ಉದ್ದೇಶವನ್ನು ಹೊಂದಿರದೆ ಯುವಕರಿಗೆ ಉದ್ಯೋಗ ದೊರಕಿಸಿಕೊಡುವಲ್ಲಿ ಸಫಲವಾಗಿರುವ ಸಂಸ್ಥೆಯನ್ನು ಭಾರತದ ಮಾಜಿ ರಾಷ್ಟ್ರಪತಿ ಆರ್ ವೆಂಕಟರಾಮನ್ (R Venkataraman) ಅವರ ಪುತ್ರಿ ಲಕ್ಷ್ಮಿ ವೆಂಕಟರಮಣ ವೆಂಕಟೇಶನ್ (Lakshmi Venkataraman Venkatesan,) ಸ್ಥಾಪಿಸಿದರು. ಕಳೆದ 30 ವರ್ಷಗಳಲ್ಲಿ, ಸುಮಾರು 12,000 ಉದ್ಯಮಿಗಳಿಗೆ (Entrepreneur) ಬೆಂಬಲ ನೀಡಿರುವುದಾಗಿ ಹೇಳಿಕೊಂಡಿರುವ ಸಂಸ್ಥೆ 5,000 ಕೋಟಿ ಸಂಪತ್ತನ್ನು ಸೃಷ್ಟಿಸಿದ್ದು 3,50,000 ಉದ್ಯೋಗಗಳನ್ನು ಸೃಷ್ಟಿಸಲು ಸಹಾಯ ಮಾಡಿದೆ.


    ಯುವಕರಿಗೆ ಸೂಕ್ತ ಮಾರ್ಗದರ್ಶನ


    10 ಲಕ್ಷ ಸೂಕ್ಷ್ಮ ಉದ್ಯಮಿಗಳನ್ನು ಬೆಂಬಲಿಸುವ ಮತ್ತು 30 ಲಕ್ಷ ಯುವಕರಿಗೆ ಸಲಹೆ ನೀಡುವ 2 ಲಕ್ಷ ಮಾರ್ಗದರ್ಶಕರಿಗೆ ತರಬೇತಿ ನೀಡುವುದು ಸಂಸ್ಥೆಯ ದೊಡ್ಡ ಉದ್ದೇಶವಾಗಿದೆ. ಈ ಯುವಕರು 5 ವರ್ಷಗಳಲ್ಲಿ 50 ಮಿಲಿಯನ್ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತಾರೆ ಎಂಬುದು ಸ್ಥಾಪಕರಾದ ಲಕ್ಷ್ಮೀ ವೆಂಕಟೇಶನ್ ಮಾತಾಗಿದೆ.


    ಕಿಂಗ್​ ಚಾರ್ಲ್ಸ್​ 111 ಯೋಜನೆ

    BYST ಆರಂಭಿಸಲು ಕಾರಣ ಏನು ಎಂಬುದನ್ನು ಸಂಸ್ಥಾಪಕರಾದ ಲಕ್ಷ್ಮೀ ಅವರನ್ನು ಕೇಳಿದಾಗ ಅವರು ಯುಎಸ್‌ನಲ್ಲಿ ನಡೆಸುತ್ತಿದ್ದ ವೃತ್ತಿಜೀವನದ ಅಂಶಗಳನ್ನು ಹಂಚಿಕೊಂಡಿದ್ದಾರೆ.  1990 ರಲ್ಲಿ ಆಕೆ ತಮ್ಮ ತಂದೆಯೊಂದಿಗೆ ಯುಕೆ ರಾಜ್ಯ ಪ್ರವಾಸದಲ್ಲಿದ್ದಾಗ ಅವರಿಗೆ ಕಿಂಗ್ ಚಾರ್ಲ್ಸ್ III ಸನಿಹ ಕುಳಿತುಕೊಳ್ಳುವ ಅವಕಾಶ ದೊರಕಿತ್ತಂತೆ. ಆಗ ಯುಕೆಯಲ್ಲಿ ರಾಜಕುಮಾರ ಆರಂಭಿಸಬೇಕು ಎಂದು ಯೋಜಿಸಿದ್ದ ಕೆಲವೊಂದು ಕಾರ್ಯಕ್ರಮಗಳ ಬಗ್ಗೆ ಆಕೆಯಲ್ಲಿ ಚರ್ಚಿಸಿದ್ದರಂತೆ.


    ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ಆಯ್ಕೆಮಾಡಿ ಅವರನ್ನು ಯಶಸ್ವಿ ಉದ್ಯಮಿಗಳನ್ನಾಗಿ ಮಾಡುವುದು ಕೂಡ ರಾಜಕುಮಾರ ಹಂಚಿಕೊಂಡಿದ್ದ ಯೋಜನೆಗಳಲ್ಲಿ ಒಂದಾಗಿತ್ತು ಎಂದು ಲಕ್ಷ್ಮೀ ತಿಳಿಸಿದ್ದಾರೆ. ಇದುವೇ ಆಕೆಗೆ BYST ಆರಂಭಿಸಲು ನೆರವಾಯಿತು ಎಂದು ತಿಳಿಸಿದ್ದಾರೆ.


    ಇದನ್ನೂ ಓದಿ:Bill Gates: 67ರ ಇಳಿ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದ ಬಿಲ್ ಗೇಟ್ಸ್; ಮಾಜಿ ಒರೇಕಲ್ ಸಿಇಒ ಪತ್ನಿ ಜೊತೆ ಬಿಲೇನಿಯರ್ ಡೇಟಿಂಗ್!

    ಯುವಕರಿಗೆ ಸಹಾಯ ಮಾಡಿರುವ ಸಂಸ್ಥೆ


    ಸಂಸ್ಥೆಯು ಎಷ್ಟು ಉದ್ಯಮಿಗಳನ್ನು ಬೆಳೆಸಿದೆ ಎಂಬ ವಿವರವನ್ನು ಕೇಳಿದಾಗ ಲಕ್ಷ್ಮೀಯವರು ಸಂಸ್ಥೆಯ ಸಾಧನೆಗಳನ್ನು ಬಣ್ಣಿಸಿದ್ದಾರೆ. BYST ಒಂದು ಮಿಲಿಯನ್‌ಗಿಂತಲೂ ಹೆಚ್ಚು ಯುವಕರಿಗೆ ಜಾಗೃತಿ ಮೂಡಿಸಿದೆ ಮತ್ತು ಸಲಹೆ ನೀಡಿದೆ, 12,000 ಕ್ಕೂ ಹೆಚ್ಚು ಉದ್ಯಮಗಳನ್ನು ಸ್ಥಾಪಿಸಲು ಸಹಾಯ ಮಾಡಿದೆ.


    ಯಾವುದೇ ಮೇಲಾಧಾರ ಅಥವಾ ಭದ್ರತೆಯಿಲ್ಲದೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಮೂಲಕ 550 ಕೋಟಿ ರೂಪಾಯಿಗಳ ಸಾಲ ವಿತರಣೆಯನ್ನು ಸುಗಮಗೊಳಿಸಿದೆ ಎಂದು ತಿಳಿಸಿದ್ದಾರೆ. ಸಂಸ್ಥೆಯಿಂದ ರೂಪುಗೊಂಡ ಉದ್ಯಮಿಗಳು ಸುಮಾರು 4 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದ್ದಾರೆ ಮತ್ತು ಸುಮಾರು 5,000 ಕೋಟಿ ಸಂಪತ್ತನ್ನು ಸೃಷ್ಟಿಸಿದ್ದಾರೆ ಎಂಬುದು ಲಕ್ಷ್ಮೀಯವರ ಮಾತಾಗಿದೆ.



    ಎದುರಿಸಿರುವ ಸವಾಲುಗಳು


    ಸಮಾಜದ ಕೆಳಸ್ತರದಲ್ಲಿರುವ ಉದ್ಯಮಿಗಳನ್ನು ಯಶಸ್ವಿ ಪಥದಲ್ಲಿ ಮುನ್ನಡೆಸುವಾಗ ಕೆಲವೊಂದು ಪ್ರಮುಖ ಸವಾಲುಗಳನ್ನು ಎದುರಿಸಬೇಕಾಯಿತು ಎಂದು ಲಕ್ಷ್ಮೀ ಹೇಳಿಕೊಂಡಿದ್ದಾರೆ.


    ಯುವಜನರಲ್ಲಿ ಸಾಕಷ್ಟು ಅರಿವಿನ ಕೊರತೆ ಇದೆ ಎಂಬುದನ್ನು ತಿಳಿಸಿರುವ ಲಕ್ಷ್ಮೀ, ಉದ್ಯಮಶೀಲತೆಯ ಅರಿವು ಅವರಲ್ಲಿ ಸಾಕಷ್ಟಿರಲಿಲ್ಲ.  " ಉದಯೋನ್ಮುಖ ಉದ್ಯಮಿಗಳಿಗೆ ಮಾರ್ಗದರ್ಶನ ನೀಡಲು ಯಾವುದೇ ಮಾರ್ಗದರ್ಶಕರು ಇರಲಿಲ್ಲ, ಮತ್ತು ಯುವಕರು ಹೆಚ್ಚಾಗಿ ಸರ್ಕಾರಿ ಅಥವಾ ದೊಡ್ಡ ಖಾಸಗಿ ಕಂಪನಿಯಲ್ಲಿ ಸುರಕ್ಷಿತ ಉದ್ಯೋಗವನ್ನು ಬಯಸುತ್ತಾರೆ. ಈ ಸಮಯದಲ್ಲಿ ಅವರಿಗೆ ಮಾರ್ಗದರ್ಶನ ಹಾಗೂ ವಿಶ್ವಾಸ ಮೂಡಿಸುವುದು ಕೊಂಚ ಪರಿಶ್ರಮವಾಗಿತ್ತು" ಎಂದು ತಿಳಿಸಿದ್ದಾರೆ.



    Lakshmi Venkataraman
    ಲಕ್ಷ್ಮಿ ವೆಂಕಟರಮಣನ್


    ಸರ್ಕಾರದ ಬೆಂಬಲ ಬೇಕು

    ಕೆಳಸ್ತರದಲ್ಲಿರುವ ಉದ್ಯಮಿಗಳನ್ನು ಬೆಂಬಲಿಸಲು ಸರಕಾರ ಪ್ರಯತ್ನಿಸಬೇಕು ಎಂಬುದು ಲಕ್ಷ್ಮೀಯವರ ಮಾತಾಗಿದೆ. BYST ಯಂತಹ ನಿರ್ದಿಷ್ಟ ಮಾದರಿಗಳನ್ನು ಸರಕಾರ ಹುಟ್ಟುಹಾಕಬೇಕು ಹಾಗೂ ಆರ್ಥಿಕವಾಗಿ ಯುವಕರಿಗೆ ಸಹಕಾರ ನೀಡಬೇಕು ಎಂದು ತಿಳಿಸಿದ್ದಾರೆ. ಯುವ, ತಳಮಟ್ಟದ ಉದ್ಯಮಿಗಳಿಗೆ ಸಹಾಯ ಮಾಡಲು ಮಾರ್ಗದರ್ಶಕರ ರಾಷ್ಟ್ರೀಯ ಜಾಲವನ್ನು ನಿರ್ಮಿಸಬೇಕು ಎಂಬ ಸಲಹೆಯನ್ನು ಲಕ್ಷ್ಮೀ ವೆಂಕಟೇಶ್ವರನ್ ನೀಡಿದ್ದಾರೆ.

    Published by:Rajesha M B
    First published: