ಸಂಬಳ ಕೊಟ್ಟಿಲ್ಲ ಎಂದು ದೂರಿದ ಸಿಬ್ಬಂದಿ, ಕೊಟ್ಟಿದ್ದೇವೆ ಎಂದ ಕಂಪನಿ: ಬೀದಿಗೆ ಬಂದ BharatPe ಜಗಳ

ಭಾರತ್ ಪೇನ ಐಟಿ ಅಸೋಸಿಯೇಟ್ ಒಬ್ಬರು ಲಿಂಕ್ಡ್ಇನ್‌ನಲ್ಲಿ ಬುಧವಾರ ಪತ್ರವನ್ನು ಪೋಸ್ಟ್ ಮಾಡಿದ್ದು, ಅವರು ಮತ್ತು ಇತರ ಸಿಬ್ಬಂದಿಯವರು ಮಾರ್ಚ್ ತಿಂಗಳ ಸಂಬಳವನ್ನು ಇನ್ನೂ ಪಡೆದಿಲ್ಲ ಎಂದು ಬರೆದಿದ್ದಾರೆ.

ಭಾರತ್ ಪೇ ಜಗಳ

ಭಾರತ್ ಪೇ ಜಗಳ

  • Share this:
ಅಶ್ನೀರ್ ಗ್ರೋವರ್ ಮತ್ತು ಅವರ ಪತ್ನಿ ಮಾಧುರಿ ಜೈನ್ ಗ್ರೋವರ್ ಇವರಿಬ್ಬರ ವಿರುದ್ಧ ಆರ್ಥಿಕ ಅವ್ಯವಹಾರದ ಆರೋಪ ಮಾಡಿ, ತಮ್ಮ ಐಷಾರಾಮಿ ಜೀವನಶೈಲಿಗಾಗಿ ಕಂಪನಿಯ ವೆಚ್ಚದ ಖಾತೆಗಳನ್ನು ಸಂಪೂರ್ಣವಾಗಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಭಾರತ್ ಪೇ ಕಂಪನಿಯವರು (BharatPe vs Ashneer Grover) ಹೇಳಿದ್ದು ಇವರನ್ನು ಕೆಲಸದಿಂದ ತೆಗೆದು ಹಾಕಿದ್ದು ಗೊತ್ತಿರುವ ವಿಚಾರವೇ ಆಗಿದೆ. ಮಾಧುರಿ ಜೈನ್ ಗ್ರೋವರ್ ಅವರನ್ನು ಫೆಬ್ರವರಿಯಲ್ಲಿ ಕಂಪನಿಯಿಂದ ವಜಾಗೊಳಿಸಲಾಯಿತು. ಅಶ್ನೀರ್ ಗ್ರೋವರ್ (Ashneer Grover) ಅವರನ್ನು ಮಾರ್ಚ್ ತಿಂಗಳಲ್ಲಿ ಭಾರತ್ ಪೇ (BharatPe) ಕಂಪನಿಯಿಂದ ತೆಗೆದು ಹಾಕಲಾಯಿತು. ಭಾರತ್ ಪೇ ಮತ್ತು ಅಶ್ನೀರ್ ಗ್ರೋವರ್ ನಡುವಿನ ಭಿನ್ನಾಭಿಪ್ರಾಯವು ಕೊನೆಗೊಳ್ಳುವ ಹಾಗೆ ಕಾಣಿಸುತ್ತಿಲ್ಲ.

ಏಕೆಂದರೆ ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ನೀರ್ ಮತ್ತು ಭಾರತ್ ಪೇ ಕಂಪನಿಯವರು ಬಹಿರಂಗವಾಗಿ ಪರಸ್ಪರ ಕಹಿ ಮಾತುಗಳನ್ನು ಆಡಿರುವುದನ್ನು ನಾವು ಆಗಾಗ್ಗೆ ನೋಡಿದ್ದೇವೆ. ಅಬ್ಬಾ ಕೊನೆಗೂ ಮುಗೀತು, ಇವರ ನಡುವಿನ ಆರೋಪ ಪ್ರತ್ಯಾರೋಪಗಳು ಎನ್ನುವಾಗ ಈ ಜಗಳ ಲಿಂಕ್ಡ್‌ಇನ್‌ಗೆ ಶಿಫ್ಟ್ ಆಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಮಾರ್ಚ್ ತಿಂಗಳ ಸಂಬಳ ಇನ್ನೂ ಬಂದಿಲ್ಲ?
ಹೌದು.. ಇತ್ತೀಚೆಗೆ ವೇತನವನ್ನು ಪಾವತಿಸದ ಆರೋಪದ ಮೇಲೆ ಲಿಂಕ್ಡ್ಇನ್‌ನಲ್ಲಿ ಉದ್ಯೋಗಿಯ ಪೋಸ್ಟ್ ಬಗ್ಗೆ ವಾಗ್ವಾದ ನಡೆಯಿತು. ಭಾರತ್ ಪೇನ ಐಟಿ ಅಸೋಸಿಯೇಟ್ ಒಬ್ಬರು ಲಿಂಕ್ಡ್ಇನ್‌ನಲ್ಲಿ ಬುಧವಾರ ಪತ್ರವನ್ನು ಪೋಸ್ಟ್ ಮಾಡಿದ್ದು, ಅವರು ಮತ್ತು ಇತರ ಸಿಬ್ಬಂದಿ ಮಾರ್ಚ್ ತಿಂಗಳ ಸಂಬಳವನ್ನು ಇನ್ನೂ ಪಡೆದಿಲ್ಲ ಎಂದು ಬರೆದಿದ್ದಾರೆ.

ಉದ್ಯೋಗಿಗಳಿಗೆ ತೊಂದರೆ
ಭಾರತ್ ಪೇ ಕಂಪನಿಯ ಸಿಇಒ ಸುಹೇಲ್ ಸಮೀರ್ ಮತ್ತು ಸಹ ಸಂಸ್ಥಾಪಕರಾದ ಅಶ್ನೀರ್ ಗ್ರೋವರ್ ಮತ್ತು ಶಶ್ವತ್ ನಕ್ರಾನಿ ಅವರನ್ನು ಟ್ಯಾಗ್ ಮಾಡಿದ ಕರಣ್ ಸರ್ಕಿ, "ಕಂಪನಿ ಪ್ರಾರಂಭವಾದಾಗಿನಿಂದಲೂ ನಾವು ಭಾರತ್ ಪೇ ಜೊತೆಗಿದ್ದೆವು. ಈಗ ನಿಮ್ಮ ಆಂತರಿಕ ರಾಜಕೀಯದಿಂದಾಗಿ ನಮಗೆ ತೊಂದರೆಯಾಗುತ್ತಿದೆ" ಎಂದು ಬರೆದಿದ್ದಾರೆ. ಕಂಪನಿಯ ಸಣ್ಣ ವೆಚ್ಚಗಳಿಗಾಗಿ ಅವರು ತಮ್ಮ ಜೇಬಿನಿಂದ ಖರ್ಚು ಮಾಡಿದ ಹಣವನ್ನು ಸಹ ಭಾರತ್ ಪೇ ಕಂಪನಿ ಮರು ಪಾವತಿಸಿಲ್ಲ ಎಂದು ಸಾರಕಿ ಹೇಳಿದ್ದಾರೆ.

"ನಾವು ಬಡವರು ಮತ್ತು ನಮ್ಮ ಮನೆಗಳನ್ನು ನಡೆಸುವ, ಸಣ್ಣ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲೆ ಇದೆ" ಎಂದು ಅವರು ಹೇಳಿದರು. "ಭಾರತ್ ಪೇ ಕಂಪನಿಯ ಬಹುತೇಕ ಸಿಬ್ಬಂದಿಯವರು ಗೋವಾಕ್ಕೆ ಕಚೇರಿ ಪಾವತಿ ಪ್ರವಾಸಕ್ಕೆ ಹೋಗಿ ಆನಂದಿಸುತ್ತಿದ್ದಾರೆ . ನಾವು ಉದ್ಯೋಗಿಗಳು ಸಂಬಳ ಮತ್ತು ಉದ್ಯೋಗಕ್ಕಾಗಿ ಪರದಾಡಬೇಕಾಗಿದೆ. ನೀವು ಎಂತಹ ನಾಯಕರು" ಎಂದು ಬರೆದಿದ್ದಾರೆ.

ಬೇಗನೆ ವೇತನ ಪಾವತಿಸಿ
ಭಾರತ್ ಪೇ ಯ ಅತ್ಯಂತ ಹಳೆಯ ಆಡಳಿತ ಸಿಬ್ಬಂದಿಯನ್ನು ವಿನಾಕಾರಣ ವಜಾಗೊಳಿಸಲಾಗಿದೆ.  ಅವರ ವೇತನವನ್ನು ಪಾವತಿಸಲಾಗಿಲ್ಲ ಎಂದು ಸಾರಕಿ ಹೇಳಿದ್ದಾರೆ. ಮಾಜಿ ಅಡ್ಮಿನ್ ಉದ್ಯೋಗಿಗಳಲ್ಲಿ ಒಬ್ಬರಾದ ಧನಂಜಯ್ ಕುಮಾರ್ ಅವರು "ನನ್ನ ತಾಯಿ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ದಯವಿಟ್ಟು ನಮ್ಮ ಬಾಕಿ ಮತ್ತು ಇಎಸ್ಒಪಿಗಳನ್ನು ಕೂಡಲೇ ಹಿಂತಿರುಗಿಸಿ” ಎಂದು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: MGNREGA 2022: ಉದ್ಯೋಗ ಖಾತ್ರಿ ಯೋಜನೆಯಡಿ ನೀವು ಉದ್ಯೋಗ ಪಡೆಯಬಹುದೇ? ಇಲ್ಲಿ ಚೆಕ್ ಮಾಡಿ

ಗ್ರೋವರ್ ಸಮೀರ್ ಅವರಿಗೆ ಈ ವಿಷಯವನ್ನು ಪರಿಶೀಲಿಸಲು ಕೇಳಿದ್ದಾರೆ. ಅವರ ಹಣ ಅವರಿಗೆ ಪಾವತಿಸುವ ಪ್ರಕ್ರಿಯೆ ಇನ್ನೂ ಮುಗಿದಿಲ್ಲ ಎಂದು ಅವರು ಹೇಳಿದರು. ನಂತರ ಗ್ರೋವರ್ "ಅವರ ಸಂಬಳವನ್ನು ಮೊದಲು ಪಾವತಿಸಬೇಕು" ಎಂದು ಹೇಳಿದ್ದಾರೆ. ಅಶ್ನೀರ್ ಗ್ರೋವರ್ ಅವರ ಸಹೋದರಿ ಆಶಿಮಾ ಗ್ರೋವರ್ ಕೂಡ ಈ ಸಂಭಾಷಣೆಯಲ್ಲಿ ಪಾಲ್ಗೊಂಡು “ಭಾರತ್ ಪೇ ಯ ಉನ್ನತ ನಿರ್ವಹಣೆಯನ್ನು "ನಾಚಿಕೆಗೇಡಿನ ತಂಡ” ಎಂದು ಹೇಳಿದ್ದಾರೆ.

ಸಂಬಳ ಪಾವತಿಗೆ ಕಡಿಮೆ ಹಣವಿದೆ
ಸಮೀರ್ ಅವರ ಹೇಳಿಕೆಗೆ ತಿರುಗೇಟು ನೀಡಿ "ನಿಮ್ಮ ಸಹೋದರ ಎಲ್ಲಾ ಹಣವನ್ನು ಕದ್ದಿದ್ದಾನೆ. ಸಂಬಳವನ್ನು ಪಾವತಿಸಲು ಕಡಿಮೆ ಹಣ ಉಳಿದಿದೆ" ಎಂದು ಲಿಂಕ್ಡ್ಇನ್ ಸಂಭಾಷಣೆಯಲ್ಲಿಯೇ ಹೇಳಿದ್ದಾರೆ. ಇದನ್ನು ಅಂತರ್ಜಾಲದಲ್ಲಿ ವ್ಯಾಪಕವಾಗಿ ಹಂಚಿಕೊಂಡ ನಂತರ, ಭಾರತ್ ಪೇ ತನ್ನ ಎಲ್ಲಾ ಉದ್ಯೋಗಿಗಳಿಗೆ ಅವರ ಮಾರ್ಚ್ ವೇತನವನ್ನು ಸಂಪೂರ್ಣವಾಗಿ ಪಾವತಿಸಲಾಗಿದೆ ಎಂದು ಹೇಳಿದೆ.

"ಕಂಪನಿಯು ತನ್ನ ಉದ್ಯೋಗಿಗಳಿಗೆ ಸಂಬಳವನ್ನು ಪಾವತಿಸಿಲ್ಲ ಎಂದು ಸೂಚಿಸುವ ಯಾವುದೇ ಸಾಮಾಜಿಕ ಮಾಧ್ಯಮ ಟೀಕೆಗಳನ್ನು ಭಾರತ್ ಪೇ ಬಲವಾಗಿ ನಿರಾಕರಿಸುತ್ತದೆ. ಕಂಪನಿಯ ಎಲ್ಲಾ ಉದ್ಯೋಗಿಗಳಿಗೆ ಅವರ ಮಾರ್ಚ್ ವೇತನವನ್ನು ಸಂಪೂರ್ಣವಾಗಿ ಪಾವತಿಸಲಾಗಿದೆ" ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Online Police Complaint: ಮನೆಯಲ್ಲೇ ಕುಳಿತು ಪೊಲೀಸ್ ಕಂಪ್ಲೇಟ್ ಕೊಡೋದು ಹೇಗೆ?

"ಕಂಪನಿಯ ನಿಯಮಗಳ ಪ್ರಕಾರ, ತಮ್ಮ ನೋಟಿಸ್ ಅವಧಿಯನ್ನು ಪೂರೈಸುವ ಉದ್ಯೋಗಿಗಳು ತಮ್ಮ ಪೂರ್ಣ ಮತ್ತು ಅಂತಿಮ ಇತ್ಯರ್ಥದ ಮೊತ್ತವನ್ನು ಸೂಕ್ತ ಸಮಯದಲ್ಲಿ ಪಡೆಯುತ್ತಾರೆ" ಎಂದು ಹೇಳಿದೆ.
Published by:guruganesh bhat
First published: