Business Idea: ಮನೆಯಲ್ಲೇ ಕೂತು ಸಿಂಪಲ್ಲಾಗಿ ದುಡ್ಡು ಮಾಡ್ಬಹುದು! ಇಂಟ್ರೆಸ್ಟ್​ ಇದ್ರೆ ಇಲ್ಲಿದೆ ನೋಡಿ ಸುವರ್ಣಾವಾಕಾಶ

ನಿಮಗೂ ಮನೆಯಲ್ಲೇ ಕೂತು ಸಂಪಾದನೆ (Work From Home) ಮಾಡ್ಬೇಕು ಅನ್ನುವ ಆಸೆ ಇದೆಯಾ? ಹಾಗಿದ್ದರೆ ಇಲ್ಲಿದೆ ನೋಡಿ ಸುವರ್ಣಾವಾಕಾಶ..

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದುಡ್ಡು (Money) ಮಾಡುವುದಕ್ಕೆ ಯಾರಿಗೆ ಇಷ್ಟ ಇರೋದಿಲ್ಲ ಹೇಳಿ. ಎಲ್ಲರಿಗೂ ಸುಲಭವಾಗಿ ಹಣ ಮಾಡಬೇಕು ಅನ್ನುವ ಆಸೆ ಇರುತ್ತೆ. ಕೆಲವರು ಸಣ್ಣ ಪುಟ್ಟ ಬ್ಯುಸಿನೆಸ್ (Business)​ ಮಾಡಿ ಹಣ ಮಾಡುತ್ತಿರುತ್ತಾರೆ. ಇನ್ನೂ ಕೆಲವರು ಷೇರು ಮಾರುಕಟ್ಟೆ (Share Market) ಯಲ್ಲಿ ಹೂಡಿಕೆ (Invest) ಮಾಡಿ ಹಣ ಮಾಡುತ್ತಿರುತ್ತಾರೆ. ಮೊದಲೆಲ್ಲಾ ಮನೆಯಲ್ಲಿ ಹೆಂಗಸರು ಕುಂಕುಮ ಪ್ಯಾಕೇಟ್​, ಅಗರಬತ್ತಿ ಸುತ್ತಿ ಹಣ ಮಾಡುತ್ತಿದ್ದರು. ಕಾಲ ಬದಲಾಗಿದೆ. ಆದರೆ , ಮನೆ (Home) ಯಲ್ಲೇ ಕೂತು ನೀವು ದುಡ್ಡು ಮಾಡಬಹುದು. ಅದು ತುಂಬಾ ಸಿಂಪಲ್ಲಾಗಿ. ಈ ಕಾಲದಲ್ಲಿ ಹಲವಾರು ಯುವಕರು ಶೀಘ್ರವಾಗಿ ಹಣ ಗಳಿಸುವುದು ಹೇಗೆ ಎಂಬ ಬಗ್ಗೆ ಆಲೋಚನೆ ಮಾಡುತ್ತಾರೆ. ಇದು ಅವರನ್ನು ಸಂಪೂರ್ಣವಾಗಿ ಸ್ವತಂತ್ರರನ್ನಾಗಿ ಮಾಡುವುದು ಮಾತ್ರವಲ್ಲದೇ ಮನೆಯಿಂದ ಹೊರಗೆ ಹೋಗದೆಯೇ ದುಡಿಯಲು ಅವಕಾಶ ಕಲ್ಪಿಸಿದೆ. ನಿಮಗೂ ಮನೆಯಲ್ಲೇ ಕೂತು ಸಂಪಾದನೆ (Work From Home) ಮಾಡ್ಬೇಕು ಅನ್ನುವ ಆಸೆ ಇದೆಯಾ? ಹಾಗಿದ್ದರೆ ಇಲ್ಲಿದೆ ನೋಡಿ ಸುವರ್ಣಾವಾಕಾಶ..

ಇನ್​​ಸ್ಟಾಗ್ರಾಮ್​ ಬಳಸಿ ಸಂಪಾದನೆ ಮಾಡ್ಬಹುದು!

ನಾವೆಲ್ಲರೂ ಟೈಮ್​ ಪಾಸ್​ ಮಾಡಲು ಇನ್​ಸ್ಟಾಗ್ರಾಂ ಯೂಸ್​ ಮಾಡುತ್ತೇವೆ. ಆದರೆ, ಈ ಇನ್​ಸ್ಟಾಗ್ರಾಮ್​ನಿಂದ ಸಂಪಾದನೆ ಕೂಡ ಮಾಡಬಹುದು. ಇನ್​ಸ್ಟಾಗ್ರಾಂನಲ್ಲಿ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿ, ಇನ್‌ಸ್ಟಾದಲ್ಲೇ ಜನಪ್ರಿಯತೆ ಗಳಿಸಿರುವವರು ಒಂದು ಪೋಸ್ಟ್‌ಗೆ 5 -15 ಸಾವಿರ ಹಣವನ್ನು ಪಡೆಯಬಹುದು. ಅಧಿಕ ಜನಪ್ರಿಯತೆ ಗಳಿಸಿಕೊಂಡಿರುವವರು ಒಂದು ಪೋಸ್ಟ್‌ಗೆ ಐದು ಲಕ್ಷದವರೆಗೆ ಪಡೆಯಲು ಸಾಧ್ಯವಾಗಲಿದೆ. ಇನ್ನು ಇನ್‌ಸ್ಟಾಗ್ರಾಂನಲ್ಲೇ ಆದಾಯ ಪಡೆಯುವವರು ಸ್ಪಾನ್ಸರ್‌ ಪೋಸ್ಟ್ ಮೂಲಕವು ಹಣ ಗಳಿಸುತ್ತಾರೆ.

ಫ್ರೀಲಾನ್ಸಿಂಗ್ ಮಾಡಿ ಸಂಪಾದನೆ ಮಾಡಿ!

ಶೀಘ್ರದಲ್ಲೇ ಹಣವನ್ನು ಗಳಿಸಲು ಫ್ರೀಲಾನ್ಸಿಂಗ್ ಈಗ ಉತ್ತಮ ಆಯ್ಕೆ ಆಗಿದೆ. ನೀವು ಉತ್ತಮವಾಗಿ ಬರೆಯುವ ಕಲೆ ಹೊಂದಿದ್ದರೆ ಫ್ರೀಲಾನ್ಸಿಂಗ್ ನಿಮಗೆ ಸಹಾಯಕ. ಗ್ರಾಫಿಕ್ ಡಿಸೈನ್ ಬರವಣಿಗೆ ವಿಡಿಯೋ ಎಡಿಟಿಂಗ್ ಮೂಲಕ ಹಲವಾರು ಮಂದಿ ಈಗ ಹಣ ಗಳಿಸುತ್ತಿದ್ದಾರೆ. ಈ ಮೂಲಕ ನೀವು ಮನೆಯಲ್ಲಿ ಕುಳಿತು ಕೆಲಸ ಅಧಿಕ ಆದಾಯ ಪಡೆಯಬಹುದು.

ಇದನ್ನೂ ಓದಿ: ಜಸ್ಟ್​ 30 ಸೆಕೆಂಡುಗಳಲ್ಲಿ ಸಾಲ ನೀಡುತ್ತೆ ವಾಟ್ಸ್​ಆ್ಯಪ್​! ಅದಕ್ಕೆ ಮಾಡಬೇಕಾಗಿರೋದು ಇಷ್ಟೆ ನೋಡಿ

ಬ್ಲಾಗಿಂಗ್ ಮಾಡಿ ಹಣ ಗಳಿಸಿ

ಬ್ಲಾಗಿಂಗ್ ಮೂಲಕವೇ ಜನಪ್ರಿಯತೆ ಗಳಿಸಿದವರು ಹಲವಾರು ಮಂದಿ ಇದ್ದಾರೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ಜನರನ್ನು ಹೆಚ್ಚು ಸೆಳೆಯಬಲ್ಲ ವಿಷಯವನ್ನು ಆಯ್ಕೆ ಮಾಡಿಕೊಳ್ಳುವುದು ಆ ವಿಚಾರದ ಬಗ್ಗೆ ಬರೆದರೆ ನೀವು ಉತ್ತಮ ಬ್ಲಾಗರ್ ಆಗಲು ಸಾಧ್ಯವಾಗಲಿದೆ. ನೀವು ಈ ಕೆಲಸದ ಮೂಲಕ ತಿಂಗಳಿಗೆ ಮೂವತ್ತರಿಂದ ಎಂಬತ್ತು ಸಾವಿರ ಡಾಲರ್ ಆದಾಯ ಪಡೆಯಲು ಸಾಧ್ಯವಾಗಲಿದೆ.

ಅಮೇಜಾನ್​ನಿಂದಲೂ ಹಣ ಗಳಿಸಬಹುದು!

ಅಮೇಜಾನ್​ ಅಸೋಸಿಯೇಷನ್ ಎಂದರೆ ಸ್ಟಾರ್ಟ್‌ಅಪ್‌ ಅಥವಾ ನುರಿತ ವ್ಯಾಪಾರಿಗಳು ಈ ವೆಬ್‌ಸೈಟ್‌ನಲ್ಲಿ ತಮ್ಮ ಬ್ಲಾಗ್ ಲಿಂಕ್‌ಗಳನ್ನು ಹಾಕಿಕೊಳ್ಳಬಹುದು. ಜನರು ಅಮೇಜಾನ್​ ಮೂಲಕ ನಿಮ್ಮ ಪ್ರೊಡೆಕ್ಟ್ ಖರೀದಿ ಮಾಡಿದಾಗ ಅಥವಾ ನಿಮ್ಮ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ನಿಮಗೆ ಹಣ ಲಭ್ಯವಾಗಲಿದೆ. ನೀವು ಇದರಲ್ಲಿ ಭಾಗಿಯಾಗಲು ಯಾವುದೇ ಶುಲ್ಕವನ್ನು ಪಾವತಿ ಮಾಡಬೇಕಾಗಿಲ್ಲ. ಇದು ಬಳಕೆ ಮಾಡಲು ಸುಲಭವಾಗಿದೆ. affiliateprogramಗೆ ಭೇಟಿ ನೀಡಿ, ಅಮೆಜಾನ್ ಖಾತೆಗೆ ಲಾಗಿನ್ ಆಗಬೇಕು. ನಿಮ್ಮ ಖಾತೆಯ ಮಾಹಿತಿಯನ್ನು ನೀವು ನೀಡಬೇಕು. ಬಳಿಕ ನಿಮ್ಮ ವೆಬ್‌ಸೈಟ್‌ನ ಮಾಹಿತಿಯನ್ನು ಹಾಕಿ.

ಇದನ್ನೂ ಓದಿ: ಅಂಚೆ ಕಚೇರಿ ಖಾತೆದಾರರೇ ಗಮನಿಸಿ, ಇನ್ಮುಂದೆ ಶುಲ್ಕಗಳನ್ನು ಪಾವತಿಸಬೇಕು

ಆನ್‌ಲೈನ್ ಸಮೀಕ್ಷೆಯಿಂಗಲೂ ಹಣ ಗಳಿಸಿ!

ಆನ್‌ಲೈನ್ ಸಮೀಕ್ಷೆಯು ಈಗ ಅತೀ ಶೀಘ್ರವಾಗಿ ಹಣವನ್ನು ಸಂಪಾದನೆ ಮಾಡಿಕೊಳ್ಳಬಹುದು. ನೀವು ಮಾಡಿದ ಆನ್‌ಲೈನ್‌ ಸಮೀಕ್ಷೆಗೆ ನಿಮಗೆ ಹಣ ಲಭ್ಯವಾಗಲಿದೆ. ಇದಕ್ಕಾಗಿ Swagbucks ಆಯ್ಕೆಯನ್ನು ನೀಡುತ್ತದೆ. ಈ ವೆಬ್‌ಸೈಟ್‌ನಲ್ಲಿ ನೀವು ಸಮೀಕ್ಷೆಯನ್ನು ಮಾಡಿ ಹಣವನ್ನು ಗಳಿಸಬಹುದು. ಇದೇ ರೀತಿಯಾಗಿ ಬೇರೆ ವೆಬ್‌ಸೈಟ್‌ಗಳು ಕೂಡಾ ಇದೆ. ಎಲ್ಲಾ ವೆಬ್‌ಸೈಟ್‌ನಲ್ಲಿಯೂ ಓರ್ವ ವ್ಯಕ್ತಿ ಮಾಸಿಕವಾಗಿ ನಿಗದಿತ ಸಂಖ್ಯೆಯ ಸಮೀಕ್ಷೆಯನ್ನು ಮಾಡಬಹುದು. ಇದರಿಂದಾಗಿ ನೀವು ವಾರಕ್ಕೆ ಒಂದರಿಂದ ಎರಡು ಸಾವಿರ ಗಳಿಸಬಹುದು.
Published by:Vasudeva M
First published: