Food Waste: ಆಹಾರ ತ್ಯಾಜ್ಯವನ್ನು ಕಡಿಮೆ ಮಾಡುವುದು ಹೇಗೆ? ಇಲ್ಲಿದೆ ವಿಶಿಷ್ಟ ಬ್ಯುಸಿನೆಸ್‌ ಐಡಿಯಾ

ಆಹಾರ ತ್ಯಾಜ್ಯ

ಆಹಾರ ತ್ಯಾಜ್ಯ

ಆಹಾರ ಇಷ್ಟೊಂದು ವ್ಯರ್ಥವಾಗಲು ಕೆಟ್ಟ ಹವಾಮಾನ, ದೋಷಯುಕ್ತ ಕೊಯ್ಲು ಪದ್ಧತಿಗಳು, ಅಸಮರ್ಪಕ ಕೃಷಿ ಉಪಕರಣಗಳು, ರೋಗಗಳಿಂದ ಬೆಳೆ ವಿಫಲಗೊಳ್ಳುವುದು, ಅಸಮರ್ಥವಾಗಿರುವ ಸಾರಿಗೆ ಸಂಪರ್ಕ, ಅಸಮರ್ಥ ಶೇಖರಣಾ ವಿಧಾನಗಳು, ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ತಯಾರಿಸುವುದು ಪ್ರಮುಖ ಕಾರಣಗಳಾಗಿವೆ.

ಮುಂದೆ ಓದಿ ...
  • Share this:

ಪ್ರತಿ ಮನೆಗಳಲ್ಲೂ ಮಾಡಿದ ಅಡುಗೆಯಲ್ಲಿ (Cooking) ಸ್ವಲ್ಪ ಮಟ್ಟಿಗೆ ಆಹಾರ ವೇಸ್ಟ್‌ (Food Waste) ಆಗುತ್ತದೆ. ಜಾಗತಿಕವಾಗಿ ನೋಡಿದಾಗ ಹೀಗೆ ವ್ಯರ್ಥವಾಗುವ ಆಹಾರದ (Food) ಪ್ರಮಾಣ ಹೆಚ್ಚು. ಅರ್ಥ್‌ ಡಾಟ್‌ ಒಆರ್‌ಜಿ (Earth.org) ಪ್ರಕಾರ, ಮಾನವ ಬಳಕೆಗಾಗಿ ಉತ್ಪಾದಿಸಲಾದ ಎಲ್ಲಾ ಆಹಾರದ ಸರಿಸುಮಾರು ಮೂರನೇ ಒಂದು ಭಾಗವು ವ್ಯರ್ಥವಾಗುತ್ತದೆ. ಇದು 1.3 ಶತಕೋಟಿ ಟನ್‌ಗಳಷ್ಟಾಗುತ್ತದೆ. ಅಂದರೆ ಇದು 3 ಶತಕೋಟಿ ಜನರಿಗೆ ಆಹಾರವನ್ನು ನೀಡಲು ಸಾಕು. ಇವೆಲ್ಲದರ ಹೊರತಾಗಿ ಪ್ರತಿ ಒಂಬತ್ತು ಜನರಲ್ಲಿ ಒಬ್ಬರು ಹಸಿವಿನಿಂದ (Hungry) ಹಾಗೂ ಅಪೌಷ್ಟಿಕತೆಯಿಂದ (Malnourished) ಬಳಲುತ್ತಿದ್ದಾರೆ. ಈ ಅಂಕಿಅಂಶಗಳು ದಿಗ್ಭ್ರಮೆಗೊಳಿಸುವಂತಿದ್ದರೂ ಇದು ನಿಜ.


ಆಹಾರ ವ್ಯರ್ಥವಾಗಲು ಕಾರಣಗಳು


ಆಹಾರ ಇಷ್ಟೊಂದು ವ್ಯರ್ಥವಾಗಲು ಕೆಟ್ಟ ಹವಾಮಾನ, ದೋಷಯುಕ್ತ ಕೊಯ್ಲು ಪದ್ಧತಿಗಳು, ಅಸಮರ್ಪಕ ಕೃಷಿ ಉಪಕರಣಗಳು, ರೋಗಗಳಿಂದ ಬೆಳೆ ವಿಫಲಗೊಳ್ಳುವುದು, ಅಸಮರ್ಥವಾಗಿರುವ ಸಾರಿಗೆ ಸಂಪರ್ಕ, ಅಸಮರ್ಥ ಶೇಖರಣಾ ವಿಧಾನಗಳು, ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ತಯಾರಿಸುವುದು ಪ್ರಮುಖ ಕಾರಣಗಳಾಗಿವೆ.


ಆಹಾರ ಕೆಲವೊಮ್ಮೆ ಹೆಚ್ಚಾಗಬಹುದು. ಆದರೆ ಅದು ವ್ಯರ್ಥವಾಗದಂತೆ ನೋಡಿಕೊಳ್ಳಲು ಸಾಕಷ್ಟು ದಾರಿಗಳಿವೆ. ಹಾಗೆ ಆಹಾರ ವ್ಯರ್ಥ ಮಾಡದೇ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ನೋಡೋಣ.


ಆಹಾರ ತ್ಯಾಜ್ಯವನ್ನು ಕಡಿಮೆ ಮಾಡುವ ವ್ಯಾಪಾರ ಕಲ್ಪನೆಗಳು


1. ಸಾವಯವ ಗೊಬ್ಬರ


 ನೀವು ಆಹಾರ ತ್ಯಾಜ್ಯಗಳಿಂದ ಗೊಬ್ಬರಗಳನ್ನು ತಯಾರಿಸಬಹುದು. ಈ ಉತ್ಪಾದನಾ ಪ್ರಕ್ರಿಯೆಯಲ್ಲಿ ಯಾವುದೇ ರಾಸಾಯನಿಕಗಳನ್ನು ಬಳಸದ ಕಾರಣ, ಇವು ಸಾವಯವ ಗೊಬ್ಬರಗಳಾಗುತ್ತವೆ.


ಅಲ್ಲದೇ ಮಣ್ಣಿಗೂ ಹಾನಿಯಾಗುವುದಿಲ್ಲ. ನೀವು ಆಹಾರ ತ್ಯಾಜ್ಯವನ್ನು ತಪ್ಪಿಸುವುದು ಮಾತ್ರವಲ್ಲ, ಮಣ್ಣನ್ನು ಹಾಳಾಗದಂತೆ ಉಳಿಸಬಹುದು ಕೂಡ. ಆದ್ದರಿಂದ ಸಾವಯವ ಗೊಬ್ಬರ ವ್ಯಾಪಾರವನ್ನು ಸ್ಥಾಪಿಸುವುದು ಅತ್ಯುತ್ತಮ ಆಹಾರ ತ್ಯಾಜ್ಯ ವ್ಯಾಪಾರವಾಗಿದೆ.


ಇದನ್ನೂ ಓದಿ:Unique Career Options: ಅಪರೂಪ ಎನಿಸುವ ಈ 7 ಡಿಗ್ರಿಗಳನ್ನು ಮಾಡಿದ್ರೆ ಸಂಬಳ ಲಕ್ಷಗಳಲ್ಲಿ ಇರುತ್ತೆ


2. ಫುಡ್‌ ವೇಸ್ಟ್‌ ಮ್ಯಾನೇಜ್‌ಮೆಂಟ್‌


ನಿಮಗೆ ಹೊಸ ವ್ಯಾಪಾರವನ್ನು ಸ್ಥಾಪಿಸಲು ಸಾಧ್ಯವಾಗದಿದ್ದರೆ, ನೀವು ಇನ್ನೂ ಕಡಿಮೆ ಹಣದಿಂದ ಆಹಾರ ತ್ಯಜ್ಯ ನಿರ್ವಹಣೆ ಮಾಡಬಹುದು.


ದೊಡ್ಡ ಸಮಸ್ಯೆ ಮತ್ತು ಫಲಿತಾಂಶದ ಬಗ್ಗೆ ಜನರಿಗೆ ತಿಳಿಸಲು ಆಹಾರ ತ್ಯಾಜ್ಯ ನಿರ್ವಹಣೆ ಬ್ಲಾಗ್ ಅನ್ನು ರಚಿಸಬಹುದು. ಹಿಂದುಳಿದವರಿಗೆ ಊಟವನ್ನು ಒದಗಿಸುವಂಥ ಚಾರಿಟಿಗೆ ನೀಡುವ ಮೂಲಕ ಆಹಾರ ವ್ಯರ್ಥವಾಗದಂತೆ ತಡೆಯುವುದು ಹೇಗೆ ಎಂದು ನೀವು ತೋರಿಸಬಹುದು.




3. ಫುಡ್‌ ವೇಸ್ಟ್‌ ರೆಸ್ಟೋರೆಂಟ್


ನೀವು ಊಟವನ್ನು ತಯಾರಿಸಿ ಮತ್ತು ಅವುಗಳನ್ನು ಸಮಂಜಸವಾದ ಬೆಲೆಗೆ ಮಾರಾಟ ಮಾಡುವ ಮೂಲಕ ಆಹಾರ ತ್ಯಾಜ್ಯವನ್ನು ಮರುಬಳಕೆ ಮಾಡಬಹುದು.


ಇದರಿಂದ ಕೇವಲ ಆಹಾರ ತ್ಯಾಜ್ಯವನ್ನು ತೊಡೆದುಹಾಕುವುದು ಮಾತ್ರವಲ್ಲ ಹಸಿದವರಿಗೆ ಆಹಾರ ನೀಡಬಹುದು. ಅಂಗಡಿಗಳಿಂದ ಅಥವಾ ಸೂಪರ್‌ ಮಾರ್ಕೆಟ್‌ಗಳಿಂದ ಹೆಚ್ಚುಳಿದ ತರಕಾರಿ ಹಣ್ಣುಗಳನ್ನು ನೀವು ಪಡೆಯಬಹುದು. ಅದು ಮಾರಾಟವಾಗದಿದ್ದರೆ ಹಾಳಾಗುತ್ತದೆ. ಇದೊಂದು ಅತ್ಯಂತ ಸೃಜನಶೀಲ ಮತ್ತು ಶ್ರೇಷ್ಠ ಉದ್ಯಮಗಳಲ್ಲಿ ಒಂದಾಗಿದೆ.


4. 3D ಪ್ರಿಂಟಿಂಗ್ ಫುಡ್


ಆಹಾರ 3D ಮುದ್ರಣ ತಂತ್ರಜ್ಞಾನಗಳ ಬಳಕೆ ಹೆಚ್ಚು ಸಾಮಾನ್ಯವಾಗುತ್ತಿದೆ. ಪರಿಸರ ಸ್ನೇಹಿ ಕಾರಣಕ್ಕೆ ಈ ತಂತ್ರಜ್ಞಾನವನ್ನು ಬಳಸಬಹುದು. ನೀವು ಹಣ ಮತ್ತು ಸಂಪನ್ಮೂಲಗಳನ್ನು ಹೊಂದಿದ್ದರೆ, ಆಹಾರ ತ್ಯಾಜ್ಯವನ್ನು ಬಳಸಿಕೊಂಡು 3D ಆಹಾರ ಮುದ್ರಣ ಸಂಸ್ಥೆಯನ್ನು ರಚಿಸಿ ಮತ್ತು ಅದನ್ನು ಖಾದ್ಯ ಆಹಾರವಾಗಿ ಪರಿವರ್ತಿಸಬಹುದು.


ಇದು ನಿಸ್ಸಂದೇಹವಾಗಿ ಆಹಾರ ತ್ಯಾಜ್ಯವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ಅತ್ಯಂತ ಹೊಸ ಪರಿಕಲ್ಪನೆಗಳಲ್ಲಿ ಒಂದಾಗಿದೆ.


5. ಹೆಚ್ಚುವರಿ ಆಹಾರಕ್ಕಾಗಿ ಮೊಬೈಲ್ ಅಪ್ಲಿಕೇಶನ್/ವೆಬ್‌ಸೈಟ್


ರೆಸ್ಟೋರೆಂಟ್‌ಗಳು ಹೆಚ್ಚುವರಿ ಆಹಾರವನ್ನು ಹೊಂದಿರುವಾಗ, ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಅಗತ್ಯವಿರುವ ವ್ಯಕ್ತಿಗಳಿಗೆ ಈ ಆಹಾರವನ್ನು ಕಡಿಮೆ ಬೆಲೆಗೆ ಅಥವಾ ಉಚಿತವಾಗಿ ನೀಡಲು ರೆಸ್ಟೋರೆಂಟ್‌ಗಳೊಂದಿಗೆ ಪಾಲುದಾರರಾಗಬಹುದು.


6. ಅಪೂರ್ಣ ಆಹಾರಗಳೊಂದಿಗೆ ದಿನಸಿ ಅಂಗಡಿ


ಸೂಪರ್‌ ಮಾರ್ಕೆಟ್‌ಗಳು ಮತ್ತು ಕಿರಾಣಿ ಅಂಗಡಿಗಳು ಕೆಲವು ತರಕಾರಿಗಳು ಮತ್ತು ಹಣ್ಣುಗಳನ್ನು ಆಗಾಗ್ಗೆ ತಿರಸ್ಕರಿಸುತ್ತವೆ.


ಆದರೆ ಕೆಲವು ಆಹಾರಗಳು ಸುವಾಸನೆ ಅಥವಾ ಪೌಷ್ಟಿಕಾಂಶದ ಮೌಲ್ಯವನ್ನು ಕಳೆದುಕೊಳ್ಳುವುದಿಲ್ಲ. ಇಂಥ ಆಹಾರಗಳ ಮಾರಾಟವನ್ನು ನೀವು ಜಾಹೀರಾತು ಮಾಡಬಹುದು.


ಈ ಬಗ್ಗೆ ಗ್ರಾಹಕರನ್ನು ಮನವೊಲಿಸಬಹುದು. ಹೆಚ್ಚಿನ ಜನರಿಗೆ ಹೆಚ್ಚು ಕೈಗೆಟಕುವಂತೆ ಮಾಡಲು ಈ ತರಕಾರಿಗಳು ಮತ್ತು ಹಣ್ಣುಗಳನ್ನು ರಿಯಾಯಿತಿಯಲ್ಲಿ  ಮಾರಾಟ ಮಾಡಬಹುದು.

Published by:Rajesha M B
First published: