Business Idea: ಓದಿರಬೇಕಿಲ್ಲ, ದೊಡ್ಡ ಬಂಡವಾಳ ಬೇಕು ಅಂತಿಲ್ಲ! ತಿಂಗಳಿಗೆ 50 ಸಾವಿರ ಮಿಸ್ಸೇ ಇಲ್ಲ

ಇಂದು ನಾವು ಹೇಳುತ್ತಿರುವ ಹೊಸ ವ್ಯವಹಾರವನ್ನು (New Business) ಮಾಡುವ ಮೂಲಕ ಪ್ರತಿ ತಿಂಗಳು ನೀವೂ ಉತ್ತಮ ಆದಾಯ (Good Income) ಗಳಿಸಬಹುದಾಗಿದೆ. ಇದಕ್ಕೆ ಹೆಚ್ಚಿನ ಇನ್ವೆಸ್ಟ್​​ಮೆಂಟ್​ ಬೇಕಾಗಿಲ್ಲ. ಲಾಸ್​ ಮಾತೇ ಇಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದುಡ್ಡು (Money) ಮಾಡುವುದಕ್ಕೆ ಸಾವಿರಾರು ದಾರಿಗಳಿವೆ. ಆದರೆ ಯಾವತ್ತೂ ಒಳ್ಳೆಯ ದಾರಿಯಲ್ಲಿ ಮಾಡಿದ ಹಣವೇ ಕೊನೆವರೆಗೂ ಇರುತ್ತೆ. ಹೀಗೆ ಕೊರೋನಾ (Corona) ಬಂದು ಹೋದಮೇಲೆ ಅದೆಷ್ಟೋ ಮಂದಿ ಹಣ ಇಲ್ಲದೆ ಪರದಾಡುತ್ತಿದ್ದಾರೆ. ದೊಡ್ಡ ದೊಡ್ಡವರ ಉದ್ಯೋಗಗಳೇ ನೆಲಕಚ್ಚಿವೆ.  ಏನಾದರೂ ಬ್ಯುಸಿನೆಸ್ (Business)​​ ಮಾಡೋಣ ಎಂದು ಕೊಂಡರೇ ಎಲ್ಲಿ ಲಾಸ್ (Loss)​ ಆಗುತ್ತೋ ಅನ್ನುವ ಭಯದಲ್ಲಿದ್ದಾರೆ. ಇನ್ನು ಕೆಲವರಿಗೆ ದುಡ್ಡು ಇದ್ದರೂ ತಲೆಯಲ್ಲಿ ಐಡಿಯಾ(Idea) ಇರೋದಿಲ್ಲ. ಇನ್ನೂ ಕೆಲವರಿಗೆ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭಗಳಿಸುವ ಆಸೆಯನ್ನು ಹೊಂದಿರುತ್ತಾರೆನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ, ನಾವು ನಿಮಗೆ ವಿಶೇಷ ವ್ಯವಹಾರದ ಬಗ್ಗೆ ಹೇಳುತ್ತಿದ್ದೇವೆ.

ಇಂದು ನಾವು ಹೇಳುತ್ತಿರುವ ಹೊಸ ವ್ಯವಹಾರವನ್ನು (New Business) ಮಾಡುವ ಮೂಲಕ ಪ್ರತಿ ತಿಂಗಳು ನೀವೂ ಉತ್ತಮ ಆದಾಯ (Good Income) ಗಳಿಸಬಹುದಾಗಿದೆ. ಇದಕ್ಕೆ ಹೆಚ್ಚಿನ ಇನ್ವೆಸ್ಟ್​​ಮೆಂಟ್​ ಬೇಕಾಗಿಲ್ಲ. ಲಾಸ್​ ಮಾತೇ ಇಲ್ಲ. ಇದನ್ನು ಓದಿರುವವರೇ ಮಾಡಬೇಕು ಅಂತಿಲ್ಲ. ಓದಿದಿವರು ಈ ಕೆಲಸ ಮಾಡಲು ಹಿಂಜರಿಕೆ ಪಡವುದರಿಂದ ಯಾವುದೇ ಪ್ರಯೋಜನ ಇಲ್ಲ. ಯಾಕೆಂದರೆ ಈ ಬ್ಯುಸಿನೆಸ್​ ಆರಂಭಿಸಿ ಸಾಕಷ್ಟು ಮಂದಿ ಹೆಚ್ಚನ ಆದಾಯ ಗಳಿಸುತ್ತಿದ್ದಾರೆ.

ಲಾಂಡ್ರಿ ಬ್ಯುಸಿನೆಸ್ ಮಾಡಿ ಹೆಚ್ಚಿನ ಆದಾಯ ಗಳಿಸಿ!

ಹೌದು, ಲಾಂಡ್ರಿ ಬ್ಯುಸಿನೆಸ್​ ಮಾಡಿ ನೀವು ಹೆಚ್ಚಿನ ಆದಾಯ ಗಳಿಸಬಹುದು.  ಒಂದು ಪ್ಯಾಂಟ್​ ಒಂದು ಶರ್ಟ್​ಗೆ ಕಡಿಮೆ ಅಂದರೂ 30ರಿಂದ 40 ರೂಪಾಯಿ ಚಾರ್ಜ್ ಮಾಡಬಹುದು.  ಕ್ಲೀನಿಂಗ್​ ಪ್ಲಸ್ ಐರನ್​ ಆದರೆ 50 ರೂಪಾಯಿ ಚಾರ್ಜ್ ಮಾಡುತ್ತಾರೆ. ದಿನಕ್ಕೆ 100 ರಿಂದ 120 ಬಟ್ಟೆಗಳನ್ನು ಕ್ಲೀನ್​ ಮಾಡಿ ಐರನ್​ ಮಾಡಿದರೆ ಸಾಕು ತಿಂಗಳಿಗೆ ಕಡಿಮೆ ಅಂದರೂ 50 ಸಾವಿರದಿಂದ 60 ಸಾವಿರದವರೆಗೂ ದುಡ್ಡು ಮಾಡಬಹುದು.  ಈಗ ಬಟ್ಟೆ ಮಾರುಕಟ್ಟೆ ದೊಡ್ಡದಾಗಿದೆ. ಹೀಗಾಗಿ ಲಾಂಡ್ರಿ ಬ್ಯುಸಿನೆಸ್​ ಕೂಡ ಹೆಚ್ಚಾಗುತ್ತಿದೆ.

ಇದನ್ನೂ ಓದಿ: 1 ಕೆಜಿ ಮಾಂಸಕ್ಕೆ 1200 ರೂಪಾಯಿ! ಈ ಕೋಳಿಗಳಿಂದ ರೈತರು ಲಕ್ಷಾಧಿಪತಿಗಳಾಗಬಹುದು

ಯಾವುದೇ ವಿದ್ಯಾರ್ಹತೆ ಬೇಕಿಲ್ಲ!

ಈ ಬ್ಯುಸಿನೆಸ್ ಮಾಡಲು ಯಾವುದೇ ವಿದ್ಯಾರ್ಹತೆ ಬೇಕಿಲ್ಲ. ನಿಮಗೆ ಈ ಕೆಲಸದ ಬಗ್ಗೆ ಗೊತ್ತಿದ್ದರೆ ಸಾಕು. ಚೆನ್ನಾಗಿ ಸರ್ವಿಸ್​ ಕೊಟ್ಟರೆ ಸಾಕು ಜನ ಮತ್ತೆ ಮತ್ತೆ ನಿಮ್ಮ ಬಳಿ ಹುಡುಕಿಕೊಂಡು ಬಂದು ದುಡ್ಡು ಕೊಡುತ್ತಾರೆ. ಈ ಲಾಂಡ್ರಿ ಬ್ಯುಸಿನೆಸ್ ಮಾಡುವುದಕ್ಕೆ ಸಣ್ಣ ಅಂಗಡಿ ಅಥವಾ ಮನೆಯಿಂದಲೇ ಶುರು ಮಾಡಬಹುದು. ಅಥವಾ ಹೆಸರಾಂತ ಲಾಂಡ್ರಿ ಶಾಪ್​ಗಳ ಫ್ರಾಂಚೈಸಿ ತೆಗೆದುಕೊಳ್ಳಿ. ಈಗಾಗಲೇ ಹಲವು ಲಾಂಡ್ರಿ ಸ್ಟಾರ್ಟ್ಅಪ್​ಗಳು ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ.

ಗ್ರಾಹಕರನ್ನು ಸೆಳೆಯೋದನ್ನು ಕಲಿಯಿರಿ!

ಸಣ್ಣ ಬ್ಯುಸಿನೆಸ್​ ಆರಂಭಿಸಬೇಕೆಂದರೆ ಮೊದಲು ಗ್ರಾಹಕರನ್ನು ತನ್ನತ್ತ ಸೆಳೆಯುಯುವುನದನ್ನು ಕಲಿತುಕೊಂಡಿರಬೇಕು.  ಈ ಲಾಂಡ್ರಿ ಬ್ಯುಸಿನೆಸ್​ ಆರಂಭಿಸಬೇಕು ಅಂದರೆ, ಜನ ಹೆಚ್ಚು ವಾಸವಾಗಿರೋ ಜಾಗ ಅಥವಾ ಆಸ್ಪತ್ರೆ, ಹೋಟೆಲ್​, ಪಿಜಿ ಇರುವ ಸುತ್ತಮುತ್ತಲಿನ ಪ್ರದೇಶದಲ್ಲಿ ಆರಂಭಿಸಿದ್ದರೆ ಹೆಚ್ಚಿನ ಆದಾಯ ಗಳಿಸಬಹುದು.

ಇದನ್ನೂ ಓದಿ: ಈ ವಸ್ತು ಇಲ್ಲದೇ ಸ್ನಾನ ಆಗಲ್ಲ! ಈ ಉದ್ಯಮ ಆರಂಭಿಸಿ ತಿಂಗಳಿಗೆ 1 ಲಕ್ಷ ಲಾಭ ಗಳಿಸಿ

ಲಾಂಡ್ರಿ ಬ್ಯುಸಿನೆಸ್​ಗೆ ಬೇಕಿರುವ  ಬಂಡವಾಳ!

ಈ ಲಾಂಡ್ರಿ ಬ್ಯುಸಿನೆಸ್ ಕಾರ್ಮಿಕರ ಅಗತ್ಯತೆ ಇರುವ ಉದ್ಯಮ. ಗುಣಮಟ್ಟದ ಸರ್ವೀಸ್​, ಗ್ರಾಹಕರ ಜೊತೆ ಒಡನಾಡ, ಹೋಂ ಡೆಲಿವರಿ ಮಾಡಿದರೆ ನೀವು ಹೆಚ್ಚಿನ ಆದಾಯ ಗಳಿಸಬಹುದು. 1 ಜೊತೆ ಬಟ್ಟೆಗೆ ವಾಷ್​ ಮತ್ತು ಐರನ್ ಸೇರಿ 50 ರೂಪಾಯಿಯಂತೆ, ದಿನಕ್ಕೆ 100 ಜೊತೆ ಬಟ್ಟೆ ವಾಷ್​ ಮಾಡಬಹುದು. ಇದರಿಂದ ನೀವು ದಿನಕ್ಕೆ 5000 ಸಾವಿರ ರೂಪಾಯಿ ಗಳಿಸಬಹುದು. ಇದರಲ್ಲಿ ಶೇಕಡ 60 ಖರ್ಚು ತೆಗೆದರೂ, ಅಂದರೆ 3000 ಸಾವಿರ ರೂಪಾಯಿ ಖರ್ಚು ಎಂದರೆ ಇನ್ನೂ 2 ಸಾವಿರ ದಿನಕ್ಕೆ ಲಾಭ ಗಳಿಸಬಹುದು. ಹೀಗೆ ತಿಂಗಳಿಗೆ 1 ಲಕ್ಷ ಸಂಪಾದನೆ ಮಾಡಿದರೆ, 40 ರಿಂದ 50 ಸಾವಿರ
Published by:Vasudeva M
First published: