Mutual Fund Investment: ಹೆಚ್ಚಿನವರಿಗೆ ಈ ಮ್ಯೂಚುವಲ್ ಫಂಡ್ ಬಗ್ಗೆ ಸ್ವಲ್ಪ ಸ್ವಲ್ಪ ಜ್ಞಾನವಿದ್ದರೂ ಎಲ್ಲಿ ಹೂಡಿಕೆ (Investment) ಮಾಡಬೇಕು ಅಂತಾ ಗೊಂದಲವಿರುತ್ತದೆ. ಈ ಬಗ್ಗೆ ಆನ್‌ಲೈನ್‌ನಲ್ಲೂ ಕೆಲವರು ಹುಡುಕಾಟ (Online Searching) ನಡೆಸಿರುತ್ತಾರೆ. ಹಾಗೆಯೇ ಸ್ನೇಹಿತರು (Friends) ಅಥವಾ ಸಹೋದ್ಯೋಗಿಗಳು (Colleagues) ಅವರು ಹೂಡಿಕೆ ಮಾಡುತ್ತಿರುವ ಯೋಜನೆಗಳ (Investment Scheme) ಬಗ್ಗೆ ನೀವು ಮಾಹಿತಿ ಪಡೆದುಕೊಂಡಿರಬಹುದು. ಇಷ್ಟಾದರೂ ಎಲ್ಲೋ ಒಂದು ಕಡೆ ಸ್ಕೀಮ್‌ಗಳು ನಿಜವಾಗಿಯೂ ಸೂಕ್ತವಾಗಿವೆಯೇ ಎಂಬುದಕ್ಕೆ ನಿಮಗೆ ಗ್ಯಾರಂಟಿ ಇರುವುದೇ ಇಲ್ಲಾ.
ಚಿಂತೆ ಬಿಡಿ, ನಾವಿಲ್ಲಿ ಈ ವರ್ಷ ಅಂದರೆ 2023 ರಲ್ಲಿ ಹೂಡಿಕೆ ಮಾಡಬಹುದಾದ ಟಾಪ್ 10 ಮ್ಯೂಚುವಲ್ ಫಂಡ್‌ಗಳ ಬಗ್ಗೆ ಮಾಹಿತಿ ನೀಡುತ್ತೇವೆ. ಅದಕ್ಕೂ ಮುನ್ನ ಮ್ಯೂಚುಯಲ್ ಫಂಡ್ ಎಂದರೆ ಏನು ಅಂತಾ ಸ್ವಲ್ಪ ಕಣ್ಣಾಡಿಸಿ ಬರೋಣ.
ಮ್ಯೂಚುವಲ್ ಫಂಡ್ ಎಂದರೇನು?
ಮ್ಯೂಚುವಲ್ ಫಂಡ್ ಎನ್ನುವುದು ಶೇರು ಮಾರುಕಟ್ಟೆಯಲ್ಲಿ ಹೂಡಿಕೆಯ ಒಂದು ಮಾಧ್ಯಮ. ಇಲ್ಲಿ ಒಂದೇ ಗುರಿಯನ್ನ ಹೊಂದಿರುವ ಅನೇಕ ಹೂಡಿಕೆದಾರರ ಹಣವನ್ನ ಒಂದೆಡೆ ಸಂಗ್ರಹಿಸಲಾಗುತ್ತದೆ.
ಹೀಗೆ ಸಂಗ್ರಹವಾದ ಹಣವನ್ನ ಅನೇಕ ಸಂಸ್ಥೆಗಳಲ್ಲಿ, ಬೇರೆ ಬೇರೆ ವಲಯಗಳಲ್ಲಿ ಹೂಡಿಕೆಯನ್ನ ಮಾಡಲಾಗುತ್ತದೆ. ಹಣವನ್ನ ಸಂಸ್ಥೆಗಳ ಸ್ಟಾಕ್ಸ್, ಶೇರುಗಳು, ಬಾಂಡ್ ಹೀಗೆ ಹಲವಾರು ಇನ್ಸ್ಟ್ರುಮೆಂಟ್ ಗಳಲ್ಲಿ ಹೂಡಿಕೆಯನ್ನ ಮಾಡಲಾಗುತ್ತದೆ.
2023ರಲ್ಲಿ ಹೂಡಿಕೆ ಮಾಡಲು ಟಾಪ್ 10 ಯೋಜನೆಗಳ ಪಟ್ಟಿ
1.ಆಕ್ಸಿಸ್ ಬ್ಲೂಚಿಪ್ ಫಂಡ್
2.ಮಿರೇ ಅಸೆಟ್ ಲಾರ್ಜ್ ಕ್ಯಾಪ್ ಫಂಡ್
3.ಪರಾಗ್ ಪಾರಿಖ್ ಫ್ಲೆಕ್ಸಿ ಕ್ಯಾಪ್ ಫಂಡ್
4.ಯುಟಿಐ ಫ್ಲೆಕ್ಸಿ ಕ್ಯಾಪ್ ಫಂಡ್
5.ಆಕ್ಸಿಸ್ ಮಿಡ್‌ಕ್ಯಾಪ್ ಫಂಡ್
6.ಕೊಟಕ್ ಎಮರ್ಜಿಂಗ್ ಈಕ್ವಿಟಿ ಫಂಡ್
7.ಆಕ್ಸಿಸ್ ಸ್ಮಾಲ್ ಕ್ಯಾಪ್ ಫಂಡ್
8.SBI ಸ್ಮಾಲ್ ಕ್ಯಾಪ್ ಫಂಡ್
9.ಎಸ್‌ಬಿಐ ಈಕ್ವಿಟಿ ಹೈಬ್ರಿಡ್ ಫಂಡ್
10.ಮಿರೇ ಅಸೆಟ್ ಹೈಬ್ರಿಡ್ ಈಕ್ವಿಟಿ ಫಂಡ್
ಈ ಮೇಲಿನ ಹತ್ತು ಯೋಜನೆಗಳು ಹೂಡಿಕೆಗೆ ಈ ವರ್ಷ ಸೂಕ್ತವಾಗಿದ್ದು, ಈ ಯೋಜನೆಗಳಲ್ಲಿ ಹೂಡಿಕೆ ಮಾಡುವಾಗ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಸಲಹೆಗಳು ಇಲ್ಲಿವೆ.
ಹೂಡಿಕೆ ಮುನ್ನ ಈ ಸಲಹೆಗಳು ನೆನಪಿನಲ್ಲಿರಲಿ
1.ಮೊದಲಿಗೆ, ಪ್ರತಿಯೊಂದು ವರ್ಗದ ಬಗ್ಗೆ ಮತ್ತು ಅದು ನಿಮ್ಮ ಹೂಡಿಕೆಯ ಉದ್ದೇಶ ಮತ್ತು ಅಪಾಯದ ಪ್ರೊಫೈಲ್‌ಗೆ ಸರಿಹೊಂದುತ್ತದೆಯೇ ಎಂದು ಕಂಡುಹಿಡಿಯಿರಿ.
2.ಹೈಬ್ರಿಡ್ ಯೋಜನೆಗಳು (ಹಿಂದಿನ ಸಮತೋಲಿತ ಯೋಜನೆಗಳು ಅಥವಾ ಈಕ್ವಿಟಿ-ಆಧಾರಿತ ಹೈಬ್ರಿಡ್ ಯೋಜನೆಗಳು) ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳಿಗೆ ಹೊಸಬರಿಗೆ ಸೂಕ್ತವಾಗಿದೆ.
3.ಈ ಯೋಜನೆಗಳು ಈಕ್ವಿಟಿ (65-80%) ಮತ್ತು ಸಾಲದ (20-35) ಮಿಶ್ರಣದಲ್ಲಿ ಹೂಡಿಕೆ ಮಾಡುತ್ತವೆ. ಹೈಬ್ರಿಡ್ ಯೋಜನೆಗಳು ಹೆಚ್ಚು ಚಂಚಲತೆ ಇಲ್ಲದೆ ದೀರ್ಘಾವಧಿಯ ಸಂಪತ್ತನ್ನು ಸೃಷ್ಟಿಸಲು ಬಯಸುವ ಅತ್ಯಂತ ಸಂಪ್ರದಾಯವಾದಿ ಈಕ್ವಿಟಿ ಹೂಡಿಕೆದಾರರಿಗೆ ಅತ್ಯುತ್ತಮ ಹೂಡಿಕೆ ಸಾಧನವಾಗಿದೆ.
4.ಕೆಲವು ಈಕ್ವಿಟಿ ಹೂಡಿಕೆದಾರರು ಷೇರುಗಳಲ್ಲಿ ಹೂಡಿಕೆ ಮಾಡುವಾಗಲೂ ಸುರಕ್ಷತೆಯನ್ನು ಹೆಚ್ಚು ಪರಿಗಣಿಸುತ್ತಾರೆ. ಇಂತಹ ವ್ಯಕ್ತಿಗಳಿಗೆ ದೊಡ್ಡ ಕ್ಯಾಪ್ ಯೋಜನೆಗಳು ಸೂಕ್ತವಾಗಿರುತ್ತವೆ.
5.ಸಾಮಾನ್ಯ ಈಕ್ವಿಟಿ ಹೂಡಿಕೆದಾರರು ಸ್ಟಾಕ್ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ, ಇವರಿಗೆ ಫ್ಲೆಕ್ಸಿ ಕ್ಯಾಪ್ ಮ್ಯೂಚುಯಲ್ ಫಂಡ್ ಯೋಗ್ಯವಾಗಿರುತ್ತವೆ.
6.ನಿಯಮಿತ ಹೂಡಿಕೆದಾರರು ಈ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಯಾವುದೇ ವಲಯಗಳು, ಷೇರುಗಳ ವರ್ಗಗಳಲ್ಲಿನ ಏರಿಕೆಯಿಂದ ಲಾಭ ಪಡೆಯಬಹುದು.
7.ಹೈಬ್ರೀಡ್ ಹೂಡಿಕೆದಾರರು ರಿಸ್ಕ್ ತೆಗೆದುಕೊಂಡರೂ ಪರವಾಗಿಲ್ಲ ಆದಾಯ ಬರಬೇಕು ಎನ್ನುವ ಮನಸ್ಥಿತಿ ಹೊಂದಿರುತ್ತಾರೆ. ಅಂತಹವರು ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸ್ಕೀಮ್‌ಗಳಲ್ಲಿ ಅದೃಷ್ಟ ಪರೀಕ್ಷೆಗಿಳಿಯಬಹುದು.
8.ಮಿಡ್ ಕ್ಯಾಪ್ ಯೋಜನೆಗಳು ಹೆಚ್ಚಾಗಿ ಮಧ್ಯಮ ಗಾತ್ರದ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ ಮತ್ತು ಸಣ್ಣ ಕ್ಯಾಪ್ ಫಂಡ್‌ಗಳು ಮಾರುಕಟ್ಟೆ ಬಂಡವಾಳೀಕರಣದ ವಿಷಯದಲ್ಲಿ ಸಣ್ಣ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ.
9.ಈ ಯೋಜನೆಗಳು ದೀರ್ಘಾವಧಿಯಲ್ಲಿ ಉತ್ತಮ ಆದಾಯವನ್ನು ನೀಡುವ ಸಾಮರ್ಥ್ಯವನ್ನು ಹೊಂದಿವೆ. ನೀವು ದೀರ್ಘಾವಧಿಯ ಹೂಡಿಕೆ ಮತ್ತು ರಿಸ್ಕ್ ತೆಗೆದುಕೊಳ್ಳಲು ಸಿದ್ಧವಾಗಿದ್ದರೆ ನೀವು ಈ ಮ್ಯೂಚುವಲ್ ಫಂಡ್ ವಿಭಾಗಗಳಲ್ಲಿ ಹೂಡಿಕೆ ಮಾಡಬಹುದು
10.ಮುಖ್ಯವಾಗಿ ನಿಮ್ಮ ಹೂಡಿಕೆಯ ಉದ್ದೇಶ, ಅಪಾಯದ ಪ್ರೊಫೈಲ್‌ಗೆ ಹೊಂದಿಕೆಯಾಗುವ ಯೋಜನೆಯನ್ನು ನೀವು ಯಾವಾಗಲೂ ಆರಿಸಿಕೊಳ್ಳಬೇಕು.
ನೀವು ಮೂಲಭೂತ ಮ್ಯೂಚುವಲ್ ಫಂಡ್ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳದಿದ್ದರೆ ಅಥವಾ ಮ್ಯೂಚುವಲ್ ಫಂಡ್ಗಳು ಮತ್ತು ಹೂಡಿಕೆಗೆ ಸಂಪೂರ್ಣವಾಗಿ ಹೊಸತಾಗಿದ್ದರೆ, ನೀವು ಯಾವಾಗಲೂ ಮ್ಯೂಚುವಲ್ ಫಂಡ್ ಸಲಹೆಗಾರರ ಸಹಾಯವನ್ನು ಪಡೆಯಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ