• ಹೋಂ
  • »
  • ನ್ಯೂಸ್
  • »
  • ಬ್ಯುಸಿನೆಸ್
  • »
  • Richest Person: ವಿಶ್ವದ ಶ್ರೀಮಂತ ವ್ಯಕ್ತಿ ಸ್ಥಾನ ಪಡೆದ ಬರ್ನಾರ್ಡ್ ಅರ್ನಾಲ್ಟ್ ಆಸ್ತಿ ಎಷ್ಟು? ಈ ಪಟ್ಟಿಯಲ್ಲಿ ಎಲಾನ್ ಮಸ್ಕ್‌ಗೆ ಎಷ್ಟನೇ ಸ್ಥಾನ?

Richest Person: ವಿಶ್ವದ ಶ್ರೀಮಂತ ವ್ಯಕ್ತಿ ಸ್ಥಾನ ಪಡೆದ ಬರ್ನಾರ್ಡ್ ಅರ್ನಾಲ್ಟ್ ಆಸ್ತಿ ಎಷ್ಟು? ಈ ಪಟ್ಟಿಯಲ್ಲಿ ಎಲಾನ್ ಮಸ್ಕ್‌ಗೆ ಎಷ್ಟನೇ ಸ್ಥಾನ?

ಬರ್ನಾರ್ಡ್ ಅರ್ನಾಲ್ಟ್

ಬರ್ನಾರ್ಡ್ ಅರ್ನಾಲ್ಟ್

ಅಮೆಜಾನ್ ಸಂಸ್ಥಾಪಕ ಮತ್ತು ಅಧ್ಯಕ್ಷ ಜೆಫ್ ಬೆಜೋಸ್ $ US126.5 ಶತಕೋಟಿ ($A182.7 ಶತಕೋಟಿ) ಮೌಲ್ಯದ ಸಂಪತ್ತನ್ನು ಗಳಿಸುವ ಮೂಲಕ ಫೋರ್ಬ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

  • Share this:

ಫೋರ್ಬ್ಸ್ (Forbes) ಪ್ರಕಾರ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ (Rich Man) ಫ್ರೆಂಚ್ (French) ಬಿಲಿಯನೇರ್ ಬರ್ನಾರ್ಡ್ ಅರ್ನಾಲ್ಟ್ (Bernard Arnault) ಸ್ಥಾನ ಗಳಿಸಿದ್ದು ಅವರ ವೈಯಕ್ತಿಕ ನಿವ್ವಳ ಮೌಲ್ಯವು ಪ್ರಸ್ತುತ $US223.2 ಶತಕೋಟಿ ಎಂಬುದಾಗಿ ವರದಿ ತಿಳಿಸಿದೆ. ಫ್ರೆಂಚ್ ಐಷಾರಾಮಿ ಸರಕುಗಳ ಉದ್ಯಮಿ (Businessman) ಬರ್ನಾರ್ಡ್ ಜೀನ್ ಎಟಿಯೆನ್ನೆ ಅರ್ನಾಲ್ಟ್, ಎಲೋನ್ ಮಸ್ಕ್ (Elon Musk) ಮತ್ತು ಜೆಫ್ ಬೆಜೋಸ್ ಅವರನ್ನು ಹಿಂದಿಕ್ಕಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ.


ಯುರೋಪ್‌ನ ಅತ್ಯಂತ ಬೆಲೆಬಾಳುವ ಕಂಪನಿಯಾಗಿ LVMH ಸ್ಥಾನ ಗಳಿಸಿದೆ


ಲಂಡನ್‌ನ ಸ್ಟಾಕ್ ಮಾರುಕಟ್ಟೆಯಲ್ಲಿನ ಮೂರು ದೊಡ್ಡ ಕಂಪನಿಗಳಾದ ಶೆಲ್, ಎಚ್‌ಎಸ್‌ಬಿಸಿಯ ಅದೇ ಸಾಲಿನಲ್ಲಿ ಇದೀಗ ಅರ್ನಾಲ್ಟ್ ನಿರ್ಮಿಸಿರುವ £370 ಬಿಲಿಯನ್ ಮೌಲ್ಯದ ಯುರೋಪ್‌ನ ಅತ್ಯಂತ ಬೆಲೆಬಾಳುವ ಕಂಪನಿಯಾಗಿ ಎಲ್‌ವಿಎಂಹೆಚ್ ಸ್ಥಾನಪಡೆದಿದ್ದು 74 ರ ಹರೆಯದ ಅರ್ನಾಲ್ಟ್ ತಮ್ಮ ಇಳಿವಯಸ್ಸಿನಲ್ಲಿ ಬೃಹತ್ ಸಾಧನೆಯನ್ನು ಮಾಡಿದ್ದಾರೆ.




ಅಗ್ರಸ್ಥಾನದಲ್ಲಿರುವ ಸಂಸ್ಥೆ


LVMH ಇದೀಗ ಲೂಯಿ ವಿಟಾನ್, ಕೆಂಜೊ, ಸೆಫೊರಾ ಮತ್ತು ಟಿಫಾನಿ ಸೇರಿದಂತೆ 75 ಬ್ರ್ಯಾಂಡ್‌ಗಳನ್ನು ಹೊಂದಿರುವ ಸಂಸ್ಥೆಯಾಗಿ ಖ್ಯಾತಿ ಗಳಿಸಿದೆ. 2022 ರಲ್ಲಿ, ಅಮೆರಿಕಾ ಮತ್ತು ಯುರೋಪ್‌ನಲ್ಲಿನ ಬಲವಾದ ಬೇಡಿಕೆಯಿಂದ LVMH ನ ವಾರ್ಷಿಕ ಮಾರಾಟವು ದಾಖಲೆಯ 79.2 ಶತಕೋಟಿ ಯುರೋಗಳಷ್ಟಿದ್ದು ($A123.8 ಶತಕೋಟಿ) ಸಂಸ್ಥೆ ಅಗ್ರಸ್ಥಾನದಲ್ಲಿದೆ.


ಬಿಲಿಯಾಧಿಪತಿಯಾಗಿ ಸಾಮ್ರಾಜ್ಯ ಕಟ್ಟಿದ ಅರ್ನಾಲ್ಟ್


ಬಿಲಿಯಾಧಿಪತಿಯಾಗಿದ್ದರೂ ಸರಳ ವ್ಯಕ್ತಿತ್ವದವರಾಗಿರುವ ಅರ್ನಾಲ್ಟ್ ಪ್ರಚಾರ ಬಯಸದೇ ಇರುವ ಮಿತಭಾಷಿ ಎಂದೆನಿಸಿದ್ದಾರೆ. ಅರ್ನಾಲ್ಟ್ 1949 ರಲ್ಲಿ ಉತ್ತರ ಫ್ರೆಂಚ್ ನಗರವಾದ ರೌಬೈಕ್ಸ್‌ನಲ್ಲಿ ಜನಿಸಿದರು ಮತ್ತು 22 ನೇ ವಯಸ್ಸಿನಲ್ಲಿ ಅವರ ತಂದೆಯ ಸಾರ್ವಜನಿಕ ಕಾಮಗಾರಿ ಕಟ್ಟಡ ಕಂಪನಿಗೆ ಸೇರಿದರು. ನಿರ್ಮಾಣ ವ್ಯವಹಾರವನ್ನು ರಿಯಲ್ ಎಸ್ಟೇಟ್ ಅಭಿವೃದ್ಧಿಗೆ ಪರಿವರ್ತಿಸಲು ಅವರ ತಂದೆಗೆ ಮನವರಿಕೆ ಮಾಡಿದರು.


ವಿಶ್ವದ 10 ಸಂಸ್ಥೆಗಳಲ್ಲಿ ಒಂದು


ಅರ್ನಾಲ್ಟ್ ಈ ಮಟ್ಟವನ್ನೇರಲು ಸಾಕಷ್ಟು ಶ್ರಮಪಟ್ಟಿದ್ದಾರೆ ಹಾಗೂ ವಿಫಲತೆಗಳನ್ನೇ ಮೆಟ್ಟಿಲಾಗಿಸಿಕೊಂಡು ಮುನ್ನುಗ್ಗಿದ್ದಾರೆ. ಅವರ ಸಂಸ್ಥೆ ಲೂಯಿ ವಿಟಾನ್ ಮೊಯೆಟ್ ಹೆನ್ನೆಸ್ಸಿ $500 ಶತಕೋಟಿ ಮಾರುಕಟ್ಟೆಯನ್ನು ದಾಟಿದ ಯುರೋಪಿನ ಮೊದಲ ಕಂಪನಿಯಾಗಿ ಖ್ಯಾತಿ ಗಳಿಸಿದೆ. ವಿಶ್ವದ 10 ಸಂಸ್ಥೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.


ಎರಡನೆಯ ಶ್ರೀಮಂತ ವ್ಯಕ್ತಿಯಾಗಿ ಎಲೋನ್ ಮಸ್ಕ್


ಟೆಸ್ಲಾ, ಬಾಹ್ಯಾಕಾಶ ಸಾರಿಗೆ ಮತ್ತು ಏರೋಸ್ಪೇಸ್ ತಯಾರಕ ಸ್ಪೇಸ್‌ಎಕ್ಸ್ ಮತ್ತು ಟನೆಲಿಂಗ್ ಸ್ಟಾರ್ಟ್ಅಪ್ ಬೋರಿಂಗ್ ಕಂಪನಿ ಸೇರಿದಂತೆ ಆರು ಕಂಪನಿಗಳ ಒಡೆಯನಾಗಿರುವ ಮಸ್ಕ್ 266 ಶತಕೋಟಿ ನಿವ್ವಳ ಮೌಲ್ಯದೊಂದಿಗೆ ಎರಡನೆಯ ಶ್ರೀಮಂತ ವ್ಯಕ್ತಿ ಎಂದೆನಿಸಿದ್ದಾರೆ.


will comply with indias laws than have employees go to jail twitters elon musk
ಎಲಾನ್ ಮಾಸ್ಕ್


ಮೂರನೇ ಸ್ಥಾನದಲ್ಲಿ ಜೆಫ್ ಬೆಜೋಸ್


ಅವರ ನಂತರ ಅಮೆಜಾನ್ ಸಂಸ್ಥಾಪಕ ಮತ್ತು ಅಧ್ಯಕ್ಷ ಜೆಫ್ ಬೆಜೋಸ್ $ US126.5 ಶತಕೋಟಿ ($A182.7 ಶತಕೋಟಿ) ಮೌಲ್ಯದ ಸಂಪತ್ತನ್ನು ಗಳಿಸುವ ಮೂಲಕ ಫೋರ್ಬ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.


ಭಾರತದ ಗೌತಮ್ ಅದಾನಿಗೆ ಫೋರ್ಬ್ಸ್ ಪಟ್ಟಿಯಲ್ಲಿ 17 ನೇ ಸ್ಥಾನ


ಭಾರತೀಯ ಉದ್ಯಮಿ ಗೌತಮ್ ಅದಾನಿ ಕಳೆದ ವಾರದವರೆಗೆ US130 ಶತಕೋಟಿ ($A187.8 ಶತಕೋಟಿ) ಸಂಪತ್ತಿನೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರು, ಆದರೆ ಲೆಕ್ಕಪತ್ರ ವಂಚನೆಯ ಆರೋಪದ ನಂತರ ಅವರ ಸಾಮ್ರಾಜ್ಯವು $ US100 ಶತಕೋಟಿ ($A144 ಶತಕೋಟಿ) ಮೌಲ್ಯವನ್ನು ಹಠಾತ್ತನೆ ಕಳೆದುಕೊಂಡಿತು. $ 61.7 ಬಿಲಿಯನ್ ($89.1 ಶತಕೋಟಿ) ಸಂಪತ್ತನ್ನು ಹೊಂದಿರುವ ಅದಾನಿಯನ್ನು ವಿಶ್ವದ 17 ನೇ ಶ್ರೀಮಂತ ವ್ಯಕ್ತಿ ಎಂದು ಫೋರ್ಬ್ಸ್ ಪಟ್ಟಿ ಮಾಡಿದೆ.

top videos


    ಆಸ್ಟ್ರೇಲಿಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಗಿನಾ ರೈನ್‌ಹಾರ್ಟ್ ಪ್ರಸ್ತುತ ಫೋರ್ಬ್ಸ್‌ನ ಶ್ರೀಮಂತ ಪಟ್ಟಿಯಲ್ಲಿ 44 ನೇ ಸ್ಥಾನದಲ್ಲಿದ್ದಾರೆ.

    First published: