Bengaluru ಹುಡುಗನ ಸ್ಟಾರ್ಟಪ್​ ಕಥೆ ಕೇಳಿ, ಜಸ್ಟ್ ಬಿದಿರಿನಿಂದ ತಿಂಗಳಿಗೆ 2 ಕೋಟಿ ಆದಾಯ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದಿನನಿತ್ಯದ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆ ಕೂಡ ಅಪರಿಮಿತವಾದುದು. ಹಾಲಿನಿಂದ (Milk) ಹಿಡಿದು ತರಕಾರಿ, ಬಟ್ಟೆ ಬರೆ, ದಿನಸಿ ಸಾಮಾಗ್ರಿಗಳು, ಹಣ್ಣು ಹಂಪಲು ಹೀಗೆ ಇದನ್ನೆಲ್ಲಾ ಮನೆಗೆ ಬರಲು ಬಳಕೆಯಾಗುವ ಕೈಚೀಲವೆಂದರೆ ಪ್ಲಾಸ್ಟಿಕ್ ಆಗಿದೆ.

  • Trending Desk
  • 3-MIN READ
  • Last Updated :
  • Bangalore [Bangalore], India
  • Share this:

ಪ್ರಕೃತಿಗೆ (Nature) ಮಾರಕವಾಗಿರುವ ಪ್ಲಾಸ್ಟಿಕ್ (Plastic) ನಿಯಂತ್ರಣಕ್ಕೆ ಅದೆಷ್ಟು ನಿಯಮಗಳನ್ನು ರೂಪಿಸಿದರೂ, ಪರ್ಯಾಯ ವ್ಯವಸ್ಥೆಗಳನ್ನು ಜಾರಿಗೆ ತಂದರೂ ಸಾಲುವುದಿಲ್ಲ. ಏಕೆಂದರೆ ಈ ಪ್ಲಾಸ್ಟಿಕ್ ಎಂಬುದು ಪರಿಸರದೊಂದಿಗೆ ನಮ್ಮ ನಿಮ್ಮೆಲ್ಲರ ಆರೋಗ್ಯಕ್ಕೂ (Health) ಹಾನಿಕರವಾಗಿರುವ ವಸ್ತುವಾಗಿದೆ. ಸುಟ್ಟರೂ ಪರಿಸರ ಮಾಲಿನ್ಯ (Environmental Pollution) ಇನ್ನು ನೆಲದಲ್ಲಿ ಹೂತರೂ ಭೂತಾಯಿಗೂ ಸಂಕಷ್ಟ. ದಿನನಿತ್ಯದ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆ ಕೂಡ ಅಪರಿಮಿತವಾದುದು. ಹಾಲಿನಿಂದ (Milk) ಹಿಡಿದು ತರಕಾರಿ, ಬಟ್ಟೆ ಬರೆ, ದಿನಸಿ ಸಾಮಾಗ್ರಿಗಳು, ಹಣ್ಣು ಹಂಪಲು ಹೀಗೆ ಇದನ್ನೆಲ್ಲಾ ಮನೆಗೆ ಬರಲು ಬಳಕೆಯಾಗುವ ಕೈಚೀಲವೆಂದರೆ ಪ್ಲಾಸ್ಟಿಕ್ ಆಗಿದೆ.


ಪ್ಲಾಸ್ಟಿಕ್ ಬದಲಿಗೆ ಬಿದಿರಿನ ಉತ್ಪನ್ನಗಳ ಬಳಕೆ


ಇಂತಹ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೋಲ್ಕತ್ತಾದ ಇಂಜಿನಿಯರ್ ಅಗ್ನಿಮಿತ್ರ ನವೀನವಾದ ಯೋಜನೆಯೊಂದನ್ನು ರೂಪಿಸಿದರು. ಮೆಡಿಕಲ್ ಫೋಟೊನಿಕ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಜರ್ಮನಿಗೆ ತೆರಳಿದ್ದ ಅಗ್ನಿ ಮನದಲ್ಲಿ ಬಂದ ಆಲೋಚನೆಯೇ ಇಂದು ಅವರದ್ದೇ ಆದ ಸ್ವಂತ ಸಂಸ್ಥೆ ಆಂವುಡೋ ಇಕೋ ಪ್ರಾಡಕ್ಟ್ಸ್ ಪ್ರೈವೇಟ್‌ಗೆ ಅಡಿಪಾಯ ಹಾಕಿತು.


ಅಗ್ನಿಯವರು ಆರಂಭಿಸಿದ ಸಂಸ್ಥೆ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆಯ ಸುತ್ತ ಕೇಂದ್ರೀಕೃತವಾಗಿದೆ ಹಾಗೂ ಇದಕ್ಕೆ ಪರ್ಯಾಯವಾಗಿರುವ ಬಿದಿರಿನ ಕುರಿತ ವಿಷಯವನ್ನು ಬಿಚ್ಚಿಡುತ್ತದೆ. ದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕಡಿವಾಣ ಹಾಕುವುದೇ ಅಗ್ನಿಯವರು ಮಾಡಿದ ನಿರ್ಧಾರವಾಗಿತ್ತು.


ಪ್ಲಾಸ್ಟಿಕ್ ತ್ಯಾಜ್ಯವೆಂಬ ವಿಷ


2022 ರಲ್ಲಿ, ಪ್ಲಾಸ್ಟಿಕ್ ತ್ಯಾಜ್ಯದ ಬಗ್ಗೆ ಭಯಾನಕ ಅಂಕಿಅಂಶಗಳು ಭಯಗೊಳಿಸುವಂತಿತ್ತು. ಏಕೆಂದರೆ ಈ ಅಂಕಿಅಂಶಗಳನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಬಹಿರಂಗಪಡಿಸಿದ್ದು, 2019-20 ರ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯಿಂದ ಅವುಗಳನ್ನು ಉಲ್ಲೇಖಿಸಿದ್ದಾರೆ.


2019 ಮತ್ತು 2020 ರ ಅವಧಿಯಲ್ಲಿ ಭಾರತವು ವಾರ್ಷಿಕವಾಗಿ ಸುಮಾರು 34.7 ಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು (ಟಿಪಿಎ) ಉತ್ಪಾದಿಸಿದೆ ಎಂದು ದತ್ತಾಂಶವು ತಿಳಿಸಿದೆ. ಕರಾವಳಿ ಸಂಶೋಧನಾ ಕೇಂದ್ರದ ಮತ್ತೊಂದು ಅಧ್ಯಯನವು ಕಡಲ ತೀರಗಳಿಂದ ಸಂಗ್ರಹಿಸಲಾದ ಪ್ಲಾಸ್ಟಿಕ್ ತ್ಯಾಜ್ಯವು 40% ದಿಂದ 96% ಕ್ಕೆ ಏರಿಕೆಯಾಗಿದೆ ಎಂದು ಇನ್ನೊಂದು ಆತಂಕಕಾರಿ ಸುದ್ದಿಯನ್ನು ತಿಳಿಸಿತು.


ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ಭಾರತ ಮಾತ್ರವಲ್ಲದೆ ಸಂಪೂರ್ಣ ವಿಶ್ವವೇ ಎದುರಿಸುತ್ತಿರುವ ಸಂಕಷ್ಟ ಎಂಬುದನ್ನು ಮನಗಂಡರು ಹಾಗೂ ಅದಕ್ಕಾಗಿ ಏನಾದರೂ ಪರ್ಯಾಯ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂಬ ದೃಢ ಸಂಕಲ್ಪ ಹೊಂದಿದರು ಅಗ್ನಿ.


ಇದನ್ನೂ ಓದಿ: ಕೈತುಂಬಾ ಸಂಬಳ ಬರುವ ಕೆಲಸ ಬಿಟ್ಟು ಅಣಬೆ ಕೃಷಿಯಲ್ಲಿ ಸಕ್ಸಸ್​! ಲಕ್ಷಗಟ್ಟಲೆ ಸಂಪಾದಿಸುತ್ತಿರುವ ಇಂಜಿನಿಯರ್


ಯುರೋಪಿನಲ್ಲಿ, ಸುಸ್ಥಿರತೆಯೇ ಒಂದು ಜೀವನ ವಿಧಾನವಾಗಿದೆ


ಅಗ್ನಿ, 2017 ರಲ್ಲಿ ತನ್ನ ಸ್ನಾತಕೋತ್ತರ ಪದವಿಗಾಗಿ ಜರ್ಮನಿಯಲ್ಲಿ ವಾಸ್ತವ್ಯ ಹೂಡಿದ್ದಾಗ ಅಲ್ಲಿನವರು ಯಾವ ರೀತಿಯಲ್ಲಿ ನಿಯಂತ್ರಿತ ಜೀವನ ಶೈಲಿಯನ್ನು ಅಳವಡಿಸಿಕೊಂಡಿದ್ದರು ಎಂಬುದನ್ನು ಮನಗಂಡರು.


ಅಲ್ಲಿನ ನಿವಾಸಿಗಳು ದಿನ ಬಳಕೆಯ ಪ್ರತಿಯೊಂದು ವಸ್ತುವನ್ನು ಸಮರ್ಥನೀಯವಾಗಿ ಬಳಸುತ್ತಾರೆ. ಹೆಚ್ಚಾಗಿ ಬಿದಿರಿನ ವಸ್ತುಗಳನ್ನು ಜರ್ಮನ್ನರು ಬಳಸುತ್ತಾರೆ ಎಂದು ತಿಳಿಸಿರುವ ಅಗ್ನಿ ಸಾಮಾನ್ಯ ಟೂತ್‌ಬ್ರಶ್‌ನಿಂದ ಹಿಡಿದು ಅಗತ್ಯ ವಸ್ತುಗಳೆಲ್ಲವೂ ಬಿದಿರಿನಿಂದ ತಯಾರಿಸಲಾಗಿದೆ ಎಂದು ತಿಳಿಸಿದ್ದಾರೆ.


'ಲಾಕ್‌ಡೌನ್ ವೇಳೆಯಲ್ಲಿ ಭಾರತದಲ್ಲಿ ಸಿಲುಕಿಹಾಕಿಕೊಂಡಿದ್ದೆ'


ಸಾಂಕ್ರಾಮಿಕ ರೋಗವು ವಿಶ್ವದಾದ್ಯಂತ ಹಾಹಾಕರ ನಡೆಸುತ್ತಿದ್ದಾಗ ಲಾಕ್‌ಡೌನ್‌ಗೆ ವಾರಗಳ ಮೊದಲು ತಾಯ್ನಾಡಿಗೆ ಮರಳಿದವರಲ್ಲಿ ಅಗ್ನಿ ಕೂಡ ಒಬ್ಬರು. ಜರ್ಮನಿಯಲ್ಲಿ ತಮ್ಮ ಪಿಎಚ್‌ಡಿ ಆರಂಭಿಸುವ ಸಮಯದಲ್ಲಿ ದೊರಕಿದ್ದ ರಜಾದಿನದಲ್ಲೇ ಸಾಂಕ್ರಾಮಿಕ ಹಬ್ಬಿತ್ತು.


ಆದರೆ ದಿನಗಳೆದಂತೆ ಸಾಂಕ್ರಾಮಿಕ ಕೂಡ ಬಲಗೊಂಡಿತು ಜೊತೆಗೆ ಲಾಕ್‌ಡೌನ್ ಕಾರಣದಿಂದ ಅಗ್ನಿಗೆ ಮರಳಿ ಜರ್ಮನಿಗೆ ತೆರಳಲಾಗಲಿಲ್ಲ. ಇದೆಲ್ಲಾ ಸರಿಯಾಗಲು ಸುಮಾರು ಸಮಯ ತಗುಲುತ್ತದೆ ಎಂಬುದನ್ನು ಅರಿತುಕೊಂಡ ಅಗ್ನಿ ಸಮಯ ಹಾಳುಮಾಡದೇ ಏನಾದರೂ ಉಪಯುಕ್ತವಾದುದನ್ನು ಆರಂಭಿಸುವ ಯೋಚನೆ ಮಾಡತೊಡಗಿದರು. ನಮ್ಮಲ್ಲಿಯೇ ತಯಾರಾದ ಉತ್ಪನ್ನ ಎಂದು ಹೇಳಿಕೊಂಡೇ ಈ ಕಂಪನಿಗಳು ವಿದೇಶಿ ಉತ್ಪನ್ನಗಳನ್ನು ಭಾರತದಲ್ಲಿ ಮಾರುತ್ತಿದ್ದವು ಎಂದು ಅಗ್ನಿ ಹೇಳುತ್ತಾರೆ.


ಇನ್ನು ಇಂತಹ ವಸ್ತುಗಳಿಗಿದ್ದ ದುಬಾರಿ ಬೆಲೆಗಳನ್ನು ಜನಸಾಮಾನ್ಯರು ಭರಿಸಲಾಗುತ್ತಿರಲಿಲ್ಲ. ಹಾಗಾಗಿ ಇಂತಹ ಜೀವನಶೈಲಿ ಬರಿಯ ಶ್ರೀಮಂತರಿಗೆ ಮಾತ್ರ ಎಂಬ ನಿಯಮವನ್ನು ಅಗ್ನಿ ಬದಲಾಯಿಸ ಹೊರಟರು.


ಏಪ್ರಿಲ್​  2018 ರಲ್ಲಿ ತಮ್ಮದೇ ಉದ್ಯಮ ಆರಂಭಿಸಿದರು!


ಏಪ್ರಿಲ್ 2018 ರಲ್ಲಿ ತಮ್ಮದೇ ಉದ್ಯಮ ಆಂವುಡೋ ಇಕೋ ಪ್ರಾಡಕ್ಟ್ಸ್ ಅನ್ನು ಅಗ್ನಿ ಪ್ರಾರಂಭಿಸಿದರು ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಇವರ ಉತ್ಪನ್ನಗಳು ಹೆಚ್ಚಿನ ಪ್ರಗತಿಯನ್ನು ಕಂಡವು.


ಸಾಂಕ್ರಾಮಿಕ ಸಮಯದಲ್ಲಿ ಕೊಂಚ ಕಷ್ಟಪಡಬೇಕಾಯಿತು ಎಂದು ತಿಳಿಸಿರುವ ಅಗ್ನಿ, ಮಾರುಕಟ್ಟೆಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವುದೇ ಕಷ್ಟಕರವಾಗಿತ್ತು ಹಾಗು ಆ ವರ್ಷದ ಅಕ್ಟೋಬರ್‌ವರೆಗೆ ಯಾವುದೂ ಸುಲಲಿತವಾಗಿ ನಡೆದಿರಲಿಲ್ಲ ಎಂದು ಅಗ್ನಿ ತಿಳಿಸುತ್ತಾರೆ.


ಪರಿಶ್ರಮಕ್ಕೆ ಸಿಕ್ಕ ಫಲ!


2020 ರಲ್ಲಿ, ಮಾರುಕಟ್ಟೆ ಸಂಶೋಧನೆ ಮತ್ತು ಉತ್ಪನ್ನ ಲಾಂಚ್‌ಗಳ ಮೇಲೆ ಕೇಂದ್ರೀಕರಿಸಿದ ಎರಡು ವರ್ಷಗಳ ನಂತರ, ಆಂವುಡೋ (Amwoodo) ತನ್ನ ಪೂರ್ಣ ಪ್ರಮಾಣದ ಉತ್ಪಾದನೆಯನ್ನು ಪ್ರಾರಂಭಿಸಿತು.ಸಂಸ್ಥೆ ಫಸ್ಟ್ ಕ್ರೈ, ಹಿಮಾಲಯ, ಗೋದ್ರೇಜ್ ಮುಂತಾದ ದೈತ್ಯ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಿದ್ದರಿಂದ ಆಂವುಡೋ ಬಲವಾದ ಆರಂಭವನ್ನು ಪಡೆಯಿತು.


ಪ್ರಸ್ತುತ, ಭಾರತದಲ್ಲಿನ 100 ಕ್ಕೂ ಹೆಚ್ಚು ಕಾರ್ಪೊರೇಟ್‌ಗಳು ಮತ್ತು ಹೋಟೆಲ್ ಸರಪಳಿಗಳು ಆಂವುಡೋ ಹೆಮ್ಮೆಯ ಗ್ರಾಹಕರಾಗಿದ್ದು, ಸೌಂದರ್ಯವರ್ಧಕಗಳಿಂದ ಆರಂಭಿಸಿ ಸ್ವಯಂ-ಆರೈಕೆ ಮತ್ತು ಮನೆಯ ಪರಿಕರಗಳವರೆಗೆ ಸಂಸ್ಥೆಯ ಉತ್ಪನ್ನಗಳು ವ್ಯಾಪಿಸಿವೆ ಎಂದು ಅಗ್ನಿ ತಿಳಿಸುತ್ತಾರೆ.

Published by:ವಾಸುದೇವ್ ಎಂ
First published: